Blog

  • RDPR : ವಿವಿಧ ಹುದ್ದೆ

    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಜಿಲ್ಲಾ ಪಂಚಾಯತಿಗಳಲ್ಲಿ ಖಾಲಿ ಇರುವ ತಾತ್ಕಾಲಿಕ ಹುದ್ದೆಗಳಿಗೆ ಗುತ್ತಿಗೆ/ ಹೊರಗುತ್ತಿಗೆ ಆಧಾರದ ಮೇಲೆ ಸಮಾಲೋಚಕರನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರಗಳು, ಕಾರ್ಯಾನುಭವ, ವಿದ್ಯಾರ್ಹತೆಗಳನ್ನು ಈ ಕೆಳಗೆ ನೀಡಲಾಗಿದೆ.

    ಜಿಲ್ಲಾ ಪಂಚಾಯತಿ ಕಚೇರಿ – ಜಲ ಜೀವನ ಮಿಷನ್
    ಹುದ್ದೆ : ಜಿಲ್ಲಾ MIS ಸಮಾಲೋಚಕರು – 05 ಹುದ್ದೆಗಳು

    ಜಿಲ್ಲಾ ಪಂಚಾಯತಿ ಕಚೇರಿ – ಸ್ವಚ್ಛ ಭಾರತ್ ಮಿಷನ್
    ಮಾಹಿತಿ ಶಿಕ್ಷಣ ಹಾಗೂ ಸಂವಹನ ಸಮಾಲೋಚಕರು – 01
    ನೈರ್ಮಲ್ಯ ಹಾಗೂ ಶುಚಿತ್ವ ಸಮಾಲೋಚಕರು – 01

    ವಯೋಮಿತಿ : ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ 45 ವರ್ಷ ಮೀರಿರಬಾರದು.

    ಹುದ್ದೆ ಸ್ಥಳ : ಬೆಂಗಳೂರು-ಚಿಕ್ಕಬಳ್ಳಾಪುರ-ಹರಪನಹಳ್ಳಿ- ಕೊಡಗು

    ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ತುಂಬಿ, ಅರ್ಜಿ ಜೊತೆಗೆ ವಯಸ್ಸಿನ ದೃಢೀಕರಣ, ವಿದ್ಯಾರ್ಹತೆ, ಪ್ರಮುಖ ಸಾಮರ್ಥ್ಯ ಗಳು, ಅನುಭವ ಮತ್ತು resume ನ್ನು ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, 2 ನೇ ಮಹಡಿ, ಕೆ.ಹೆಚ್.ಬಿ ಕಟ್ಟಡ, ಕಾವೇರಿ ಭವನ, ಕೆ.ಜಿ.ರಸ್ತೆ ಬೆಂಗಳೂರು- 5600- 009 ಈ ವಿಳಾಸಕ್ಕೆ ಅರ್ಜಿಯ ಹಾರ್ಡ್ ಪ್ರತಿಯನ್ನು ದಿನಾಂಕ 05-07-2021 ರ ಸಂಜೆ 5:30 ರೊಳಗೆ ಸಲ್ಲಿಸಬೇಕು. ನಂತರ ಬಂದ ಯಾವುದೇ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

    ಹೆಚ್ಚಿನ ಮಾಹಿತಿಗಾಗಿ https://rdpr.karnataka.gov.in ಮತ್ತು https://swachhamevajayate.org ಗೆ ಭೇಟಿ ನೀಡಬಹುದು.

  • ಆಯುಷ್ ಇಲಾಖೆಯಲ್ಲಿನ ಆಯುಷ್ ಕ್ಷೇಮ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಆಯುಷ್ ನಿರ್ದೇಶನಾಲಯದ ಜಿಲ್ಲಾ ಆಯುಷ್ ಅಧಿಕಾರಿಗಳ‌ ಕಾರ್ಯಾಲಯ ಧಾರವಾಡ ಇಲ್ಲಿ ಅಗತ್ಯವಿರುವ ಸಂಪೂರ್ಣ ತಾತ್ಕಾಲಿಕ ಗ ಹುದ್ದೆಯಾಗಿರುವ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ( DPM) -01 ಹುದ್ದೆಯನ್ನು ನೇಮಕ ಮಾಡಲು ಮಾನ್ಯ ಜಿಲ್ಲಾಧಿಕಾರಿಗಳು, ಧಾರವಾಡರವರ ಅನುಮೋದನೆ ಅನ್ವಯ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆಯ ಹೆಸರು : ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ( DPM )

    ವಿದ್ಯಾರ್ಹತೆ : ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು. ಆಯುಷ್ ಸೇರಿದಂತೆ & ಪಿ.ಜಿ.-ಎಂ.ಬಿ.ಎ/ ಪೋಸ್ಟ್ ಗ್ರಾಜ್ಯುಯೇಶನ್ ಡಿಪ್ಲೋಮಾ ಎ.ಆಯ್.ಸಿ.ಟಿ.ಇ ಅಂಗೀಕೃತ ‌ಸಂಸ್ಥೆಯಿಂದ

    ಮಾಸಿಕ ವೇತನ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.30,000/- ವೇತನ ನಿಗದಿಪಡಿಸಲಾಗಿದೆ.

    ವಯೋಮಿತಿ : ದಿನಾಂಕ 01-04-2021 ಕ್ಕೆ ಎಲ್ಲಾ ವರ್ಗದವರಿಗೆ ಕನಿಷ್ಠ 18 ಹಾಗೂ ‌ಗರಿಷ್ಠ 45 ವರ್ಷ ವಯೋಮಿತಿಯನ್ನು ಹೊಂದಿರಬೇಕು.

    ಅರ್ಜಿದಾರರು ನಿಗದಿತ ಅರ್ಜಿ ನಮೂನೆಯನ್ನು ಈ ಕಚೇರಿಯಿಂದ ಪಡೆದು ಅವಶ್ಯವಿರುವ ಎಲ್ಲಾ ವಿದ್ಯಾರ್ಹತೆ ಹಾಗೂ ಅನುಭವಗಳ ಬಗ್ಗೆ ದಾಖಲಾತಿಗಳೊಂದಿಗೆ ದಿನಾಂಕ 05-07-2021 ಸಂಜೆ 5.30 ರೊಳಗಾಗಿ ಜಿಲ್ಲಾ ಆಯುಷ್ ಅಧಿಕಾರಿಗಳು, ಸಿವಿಲ್ ಆಸ್ಪತ್ರೆ ಹತ್ತಿರ, ಕಿಲ್ಲಾ ರಸ್ತೆ, ಧಾರವಾಡ- 580008 ರವರಿಗರ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವುದು.

  • ಬೆಂಗಳೂರಿನಲ್ಲಿ ಆಶಾ ಮೇಲ್ವಿಚಾರಕರ ಹುದ್ದೆಗೆ ನೇರ ಸಂದರ್ಶನ

    ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿಯಲ್ಲಿ ಬೆಂಗಳೂರು ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ( ರಿ) ದ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ: ಆಶಾ ಮೇಲ್ವಿಚಾರಕ ಹುದ್ದೆಗಳನ್ನು ಮೆರಿಟ್ ಆಧಾರದ ಮೇಲೆ 01 ವರ್ಷದ ಅವಧಿಗೆ ಸಂಪೂರ್ಣ ಗುತ್ತಿಗೆ ಆಧಾರದ ಮೇಲೆ ವಾಕ್ ಇನ್ ಪ್ರಕ್ರಿಯೆ ಮೂಲಕ ನೇಮಕಾತಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ವೇತನ : ಮಾಸಿಕ ರೂ.15,600/- ವೇತನ ನಿಗದಿಪಡಿಸಲಾಗಿದೆ.

    ಹುದ್ದೆ ಸಂಖ್ಯೆ : 04

    ಸಂದರ್ಶನ ದಿನಾಂಕ ಹಾಗೂ ಸಮಯ: 25-06-2021 ರಂದು Naukara Bhavana, BBMP Head Office, N.R. Square, Bengaluru. ಸಮಯ 11-00 ಗಂಟೆ ಬೆಳಿಗ್ಗೆ ಯಿಂದ 04-00 ಗಂಟೆ ಸಾಯಂಕಾಲ ರವರೆಗೆ.

    ವಯೋಮಿತಿ : ಅರ್ಜಿ ಸಲ್ಲಿಸುವ ಕೊನೆ ದಿನಾಂಕಕ್ಕೆ ಕನಿಷ್ಠ 20 ವರ್ಷಗಳು ಆಗಿರಬೇಕು. ಸಾಮಾನ್ಯ ವರ್ಗ – 35 ವರ್ಷ( ಬಿ), 2ಎ, 2ಬಿ, 3 ಎ, 3ಬಿ – 38 ವರ್ಷ, ಪ.ಜಾತಿ/ ಪ.ಪಂಗಡ, ವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿಯನ್ನು ಮೀರಿರಬಾರದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು 08022110445 ಗೆ ಸಂಪರ್ಕಿಸಬಹುದು.

  • KIMS ಹುಬ್ಬಳ್ಳಿ: ವಿವಿಧ ಹುದ್ದೆ, ನೇರ ಸಂದರ್ಶನಕ್ಕೆ ಆಹ್ವಾನ

    ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಹುಬ್ಳಿ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಎಲ್ಲಾ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗತಕ್ಕದ್ದು.

    ಸಂದರ್ಶನ ದಿನಾಂಕ ಹಾಗೂ ಸಮಯ : 24-06-2021 ಸಮಯ 10.30 ಬೆಳಿಗ್ಗೆ

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು KIMS ಅಡ್ಮಿನ್ ಆಫೀಸ್ 0836-2370057 ಗೆ ಸಂಪರ್ಕಿಸಬಹುದು.

    ವೆಬ್‌ಸೈಟ್‌ www.kimshubballi.org

  • ದೈಹಿಕ ಶಿಕ್ಷಣ ಶಿಕ್ಷಕರಿಗೆ ಪರಿವೀಕ್ಷಕರ ಹುದ್ದೆಗೆ ಭಡ್ತಿ : ಎಸ್.ಸುರೇಶ್ ಕುಮಾರ್ ಹೇಳಿಕೆ

    ಸರಕಾರಿ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್ -1 ಹುದ್ದೆಯಿಂದ ಗ್ರೂಪ್ ಬಿ ವೃಂದದ 148 ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗಳಿಗೆ ಮುಂಬಡ್ತಿಯನ್ನು ನೀಡಿದೆ. ಈ ರೀತಿಯಾಗಿ ಕರ್ನಾಟಕ ರಾಜ್ಯ ಸರಕಾರಿ ಪ್ರೌಢ ಶಾಲಾ ದೈಹಿಕ ಸಂಘದ ಬಹುದಿನಗಳ ಬೇಡಿಕೆಯನ್ನು ಪೂರೈಸಿದೆ.

    ದೈಹಿಕ ಶಿಕ್ಷಣ ಶಿಕ್ಷಕರ ಪದೋನ್ನತಿ ಪ್ರಕ್ರಿಯೆಯು 2016 ರಲ್ಲಿ ನಡೆದಿತ್ತು. ಈ ಬಡ್ತಿ ಪ್ರಕ್ರಿಯೆಯು 5 ವರ್ಷಗಳ ಬಳಿಕ ನಡೆದಿದ್ದು , ಆಡಳಿತಾತ್ಮಕ ಸಮಸ್ಯೆಯನ್ನು ಬಗೆಹರಿಸಿದೆ ಎಂದಿದ್ದಾರೆ.

    ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗಳಿಗೆ ಜೂನ್ 21 ರಂದು ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಲಾಗುತ್ತಿದ್ದು, ಕೋವಿಡ್ ನಿಯಮಗಳನ್ನು ಅನುಸರಿಸಿ ದೈಹಿಕ ಶಿಕ್ಷಕರು ಕೌನ್ಸಿಲಿಂಗ್ ನಲ್ಲಿ ಭಾಗವಹಿಸಿದರು ಮತ್ತು ಆಸಕ್ತಿಯುಳ್ಳ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

  • KSP : ಆಂಗ್ಲ ಹಾಗೂ ಕರ್ನಾಟಕ ವಾದ್ಯಗಾರರ ಹುದ್ದೆಗಳ ನೇಮಕಾತಿ

    ಕೆ.ಎ.ಆರ್.ಪಿ ಮೌಂಟೆಡ್ ಮೈಸೂರು ಇಲ್ಲಿ‌ ಆಂಗ್ಲ ಮತ್ತು ಕರ್ನಾಟಕ ವಾದ್ಯಗಾರರ ಹುದ್ದೆಗಳಿಗೆ ನೇಮಕಾತಿಗಾಗಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳು ಲಿಪಿಕ ವೃಂದ ಸೇರಿದಂತೆ (ನೇಮಕಾತಿ) ನಿಯಮಗಳು 2004 ರ ಹಾಗೂ ಸರಕಾರದ ಅಧಿಸೂಚನೆ ಅನ್ವಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 01-06-2021 ಬೆಳಗ್ಗೆ 10 ಗಂಟೆಯಿಂದ
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-06-2021 ಸಂಜೆ 5.00 ಗಂಟೆಯವರೆಗೆ

    ಹುದ್ದೆ : ಆಂಗ್ಲ ವಾದ್ಯವೃಂದದ ವಾದ್ಯಗಾರರ ಹುದ್ದೆ

    ಹುದ್ದೆಗಳ ಸಂಖ್ಯೆ :17
    ಹುದ್ದೆ ಸ್ಥಳ : ಕರ್ನಾಟಕ
    ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 23,500/- ರಿಂದ ರೂ.47, 650/- ವೇತನ ನಿಗದಿಪಡಿಸಲಾಗಿದೆ.

    ವಯೋಮಿತಿ: ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಹಾಗೂ 30 ವರ್ಷಗಳನ್ನು ಮೀರಿರಬಾರದು.

    ಅರ್ಜಿ ಶುಲ್ಕ : ಸಾಮಾನ್ಯ ವರ್ಗ, 2( ಎ), 2 ( ಬಿ) , 3 ( ಎ) , 3 ( ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ.250/-, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ,ಪ್ರವರ್ಗ -1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.100/-

    ಅರ್ಜಿಗಳನ್ನು ಕಮಾಂಡೆಂಟ್ , ಕೆ.ಆರ್.ಪಿ ಮೌಂಟೆಡ್ ಕಂಪನಿ, ಲಲಿತಮಹಲ್ ರಸ್ತೆ, ಮೈಸೂರು – 570011 ರವರ ಕಚೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಕೊನೆಯ ದಿನಾಂಕದೊಳಗೆ ಕಚೇರಿಗೆ ತಲುಪುವಂತೆ ತಲುಪಿಸುವುದು.

    ನಿಗದಿತ ಶುಲ್ಕಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನ ಅಧಿಕೃತ ಶಾಖೆಯಿಂದ ಡಿಡಿಯನ್ನು ” ಕಮಾಂಡೆಂಟ್, ಕೆಎಆರ್ ಪಿ, ಮೌಂಟೆಡ್ ಕಂಪನಿ, ಮೈಸೂರು ರವರ ಹೆಸರಲ್ಲಿ ಪಡೆದು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸುವುದು.

    ನಿಗದಿತ ಮಾಹಿತಿ/ ಸೂಚನೆಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ www.ksp.gov.in ನಲ್ಲಿ ಪ್ರಕಟಿಸಲಾಗಿದೆ.

    ಅರ್ಜಿ ನಮೂನೆಯನ್ನು ಅಭ್ಯರ್ಥಿಗಳು ತಮ್ನ ವೈಯಕ್ತಿಕ ಖರ್ಚಿನಲ್ಲಿ ಬೆರಳಚ್ಚು ಮಾಡಿಸಿ, ಇತ್ತೀಚಿನ ಪಾಸ್ ಪೋರ್ಟ್ ಅಳತೆತ ಬಣ್ಣದ ಭಾವಚಿತ್ರ ಹಾಗೂ ಸಹಿಯೊಂದಿಗೆ ಅರ್ಜಿಯಲ್ಲಿರುವ ಎಲ್ಲಾ ವಿವರಗಳನ್ನು ಸಮರ್ಪಕವಾಗಿ ಭರ್ತಿ ಮಾಡಿ ಕೆ.ಎ. ಆರ್.ಪಿ ಮೌಂಟೆಡ್ ಕಂಪನಿ ಮೈಸೂರು ಇವರಿಗೆ ಸಲ್ಲಿಸುವುದು.

    ನೋಟಿಫಿಕೇಶನ್