Blog

  • ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ ವಿವಿಧ ಹುದ್ದೆ, ಈ ಕೂಡಲೇ ಅರ್ಜಿ ಸಲ್ಲಿಸಿ

    ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಿಂದ ಅನುಷ್ಠಾನಗೊಳ್ಳುತ್ತಿರುವ ಸಂಜೀವಿನಿ‌ – ಎನ್ ಆರ್ ಎಲ್ ಎಂ ಯೋಜನೆಯ ಜಿಲ್ಲಾ ಹಾಗೂ ತಾಲೂಕು ಅಭಿಯಾನ ನಿರ್ವಹಣಾ ಘಟಕಗಳಿಗೆ ಹೊರಗುತ್ತಿಗೆ ಸಂಸ್ಥೆ ಮೆ||ಪನ್ನಗ ಎಂಟರ್ಪ್ರೈಸ್ ಮೈಸೂರು ಮೂಲಕ ಈ ಕೆಳಗಿನ ಹುದ್ದೆಗಳನ್ನು ಭರ್ತಿ ಮಾಡಲು ದಿನಾಂಕ : 14-07-2021 ರಿಂದ 29-07-2021 ರವರೆಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅಭ್ಯರ್ಥಿಗಳು ಅರ್ಜಿಯನ್ನು https://jobsksrlps.karnataka.gov.in ಮೂಲಕ ಮಾತ್ರ ಸ್ವೀಕರಿಸಲಾಗುವುದು.

    ವಯೋಮಿತಿ : 45 ವರ್ಷಗಳ ಒಳಗಿರಬೇಕು.

    ಆಯ್ಕೆ ವಿಧಾನ‌: ನಿಯಮಾನುಸಾರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಪ್ರಸ್ತುತ ದಾಖಲೆಗಳ ಆಧಾರದಲ್ಲಿ ಹೆಚ್ಚು ಅಂಕ ಗಳಿಸಿದ 3 ಜನರನ್ನು ( ಖಾಲಿ ಹುದ್ದೆಗೆ 1: 3 ಅನುಪಾತದಲ್ಲಿ) ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

    ಹುದ್ದೆ : ಜಿಲ್ಲಾ ವ್ಯವಸ್ಥಾಪಕರು‌– ಜಿಲ್ಲಾ ಪಂಚಾಯತ್ ಮಂಗಳೂರು ( 2 ಹುದ್ದೆ). ಈ ಹುದ್ದೆಗೆ ಪೂರ್ಣಕಾಲಿಕ ಸ್ನಾತಕೋತ್ತರ ಪದವಿ ಪಡೆದಿರಬೇಕು. ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕು. ಈ ಹುದ್ದೆಗೆ ಮಾಸಿಕ ರೂ.30,000/- ವೇತನವಿರುತ್ತದೆ.

    ಜಿಲ್ಲಾ ಎಂಐಎಸ್ ಅಸಿಸ್ಟೆಂಟ್ / ಡಾಟಾ ಎಂಟ್ರಿ ಅಪರೇಟರ್ ‌- ಜಿಲ್ಲಾ ಪಂಚಾಯತ್ ಮಂಗಳೂರು ( 1 ಹುದ್ದೆ). ಈ ಹುದ್ದೆಗೆ ಪೂರ್ಣಕಾಲಿಕ ಪದವಿ ಪಡೆದಿರಬೇಕು. ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು. ಈ ಹುದ್ದೆಗೆ ಮಾಸಿಕ ರೂ.20,500/- ವೇತನವಿರುತ್ತದೆ.

    ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು‌– ತಾಲೂಕು ಪಂಚಾಯತ್ ಮಂಗಳೂರು ( 1 ಹುದ್ದೆ). ಬಂಟ್ವಾಳ – 1 ಹುದ್ದೆ, ಪುತ್ತೂರು – 1 ಹುದ್ದೆ, ಬೆಳ್ತಂಗಡಿ -1 ಹುದ್ದೆ, ಸುಳ್ಯ – 1 ಹುದ್ದೆ. ಈ ಹುದ್ದೆಗೆ ಸ್ನಾತಕೋತ್ತರ ಪದವಿ ಪಡೆದಿರಬೇಕು. ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕು. ಈ ಹುದ್ದೆಗೆ ಮಾಸಿಕ ರೂ.28,000/- ವೇತನವಿರುತ್ತದೆ.

    ವಲಯ ಮೇಲ್ವಿಚಾರಕರು ‌-ತಾಲೂಕು ಪಂಚಾಯತ್ ಮಂಗಳೂರು ( 1 ಹುದ್ದೆ). ಬಂಟ್ವಾಳ – 1 ಹುದ್ದೆ, ಪುತ್ತೂರು – 1 ಹುದ್ದೆ, ಬೆಳ್ತಂಗಡಿ -1 ಹುದ್ದೆ, ಸುಳ್ಯ – 1 ಹುದ್ದೆ. ಈ ಹುದ್ದೆಗೆ ಪೂರ್ಣಕಾಲಿಕ ಪದವಿ ಪಡೆದಿರಬೇಕು. ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು. ಈ ಹುದ್ದೆಗೆ ಮಾಸಿಕ ರೂ.18,000/- ವೇತನವಿರುತ್ತದೆ.

  • ಉಡುಪಿ ಅಂಚೆ ಇಲಾಖೆಯಲ್ಲಿ ಹುದ್ದೆ, ನೇರ ಸಂದರ್ಶನಕ್ಕೆ ಆಹ್ವಾನ : ಎಸ್ ಎಸ್ ಎಲ್ ಸಿ ಪಾಸಾದವರಿಗೆ ಆದ್ಯತೆ

    ಭಾರತೀಯ ಅಂಚೆ ಇಲಾಖೆಯ ವತಿಯಿಂದ ಉಡುಪಿ ನಗರ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮಾ ಏಜೆಂಟ್ ಆಗಿ ಕಾರ್ಯನಿರ್ವಹಿಸಲು ಆಸಕ್ತರನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಿದೆ.

    ಕನಿಷ್ಠ ಎಸ್ ಎಸ್ ಎಲ್ ಸಿ ತೇರ್ಗಡೆಗೊಂಡ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    18 ರಿಂದ 50 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಆಸಕ್ತ ಅಭ್ಯರ್ಥಿಗಳು ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಸ್ ಎಸ್ ಎಲ್ ಸಿ‌ ಅಂಕಪಟ್ಟಿಯ ಮೂಲ ಪ್ರತಿ, ಝೆರಾಕ್ಸ್ ಪ್ರತಿ, ಎರಡು ಪಾಸ್ ಪೋರ್ಟ್ ಸೈಜಿನ ಫೊಟೋ ಜೊತೆಗೆ ಉಡುಪಿ ಪ್ರಧಾನ ಅಂಚೆ ಕಚೇರಿಯಲ್ಲಿ ಜುಲೈ 30 ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು.

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0820-2520471 ಅಥವಾ ಮೊಬೈಲ್ ನಂಬರ್ 9448291071 ನ್ನು ಸಂಪರ್ಕಿಸುವಂತೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

  • ಮಂಗಳೂರು ಯುನಿವರ್ಸಿಟಿಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ‌ ಆಹ್ವಾನ

    ವಿಶ್ವವಿದ್ಯಾಲಯದ ಮಂಗಳಗಂಗೋತ್ರಿ ಮತ್ತು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಕೋರ್ಸ್ ಗಳಿಗೆ 2020-21 ನೇ ಸಾಲಿನ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಅಂತರ್ಜಾಲ ತಾಣ www.mangaloreuniversity.ac.in ಪಡೆದು ದಾಖಲೆಗಳ ಸಹಿತ ಕುಲಸಚಿವರ ಇ – ಮೇಲ್ [email protected] ಮೂಲಕ ಸಲ್ಲಿಸಬೇಕು.

    ಅರ್ಜಿಯಲ್ಲಿ ಇ-ಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.

    ಅರ್ಜಿ ಸಲ್ಲಿಸಲು ಜು.20 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ಕುಲಸಚಿವರ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

  • RDPR ಕೊಪ್ಪಳ : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕೊಪ್ಪಳ ಜಿಲ್ಲೆಯ ಗ್ರಾ.ಕು.ನಿ&ನೈ ಇಲಾಖೆಯ ಪ್ರಯೋಗಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಹಿರಿಯ ವಿಶ್ಲೇಷಣಗಾರರು , ಕಿರಿಯ ವಿಶ್ಲೇಷಣಗಾರರು ಮತ್ತು ಸಂಗ್ರಹಣಾಕೋಶ ಉಸ್ತುವಾರಿ ಹುದ್ದೆಗೆ ತಾತ್ಕಾಲಿಕವಾಗಿ ಹೊರಗುತ್ತಿಗೆ ಆಧಾರದಲ್ಲಿ ಸೇವೆಯನ್ನು ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಹಿರಿಯ ವಿಶ್ಲೇಷಣಗಾರರು ( ಸೀನಿಯರ್ ಅನಾಲಿಸ್ಟ್ ) ( 1ಹುದ್ದೆ) ಹುದ್ದೆಗೆ ಅಭ್ಯರ್ಥಿಗಳು ಎಂ.ಎಸ್ಸಿ ಕೆಮಿಸ್ಟ್ರಿ ತೇರ್ಗಡೆ ಹೊಂದಿರಬೇಕು. ಕನಿಷ್ಠ ಮೂರು ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.30,000/- ವೇತನ ನಿಗದಿಪಡಿಸಲಾಗಿದೆ. ( ವಾರ್ಷಿಕ ರೂ.3,60,000/-)

    ಕಿರಿಯ ವಿಶ್ಲೇಷಕ ಹುದ್ದೆಗೆ (ಜ್ಯೂನಿಯರ್ ಅನಾಲಿಸ್ಟ್) (1 ಹುದ್ದೆ) ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎಸ್ಸಿಯನ್ನು ಕನಿಷ್ಠ 60% ( ಕೆಮಿಸ್ಟ್ರಿ) ಅಂಕಗಳೊಂದಿಗೆ ಪಾಸಾಗಿರಬೇಕು. ಕನಿಷ್ಠ 3 ವರ್ಷ ಪ್ರಯೋಗಾಲಯದಲ್ಲಿ ಕೆಲಸ ಮಾಡಿರುವ ಅನುಭವ ಇರಬೇಕು. ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ ಮೀರಿರಬಾರದು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.15,000/- ರಿಂದ ರೂ.22,000/- ವೇತನ ನಿಗದಿಪಡಿಸಲಾಗಿದೆ.

    ಸಂಗ್ರಹಣಾಕೋಶದ ಉಸ್ತುವಾರಿ ( sample cell In charge) ( 1) : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎಸ್ಸಿ ( ಕೆಮಿಸ್ಟ್ರಿ) ಪಾಸಾಗಿರಬೇಕು. ಪ್ರಯೋಗಾಲಯದಲ್ಲಿ ಕೆಲಸ ಮಾಡಿರುವ ಅನುಭವ ಇರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ ಮೀರಿರಬಾರದು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.17,000/-ವೇತನ ನಿಗದಿಪಡಿಸಲಾಗಿದೆ.

    ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಮತ್ತು ವಿಳಾಸ : 26-07-2021 ರವರೆಗೆ ಸಂಜೆ 5 ಗಂಟೆಗೆ

  • ಕಾರ್ಮಿಕ ಮಕ್ಕಳಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

    ಕಾರ್ಖಾನೆ ಅಂಗಡಿ ಮತ್ತು ವಾಣಿಜ್ಯ ಸಂಘಟಿತ ವಾಣಿಜ್ಯ ಮಕ್ಕಳಿಗೆ 2021-22ನೇ ಸಾಲಿನ ಶೈಕ್ಷಣಿಕ ಪ್ರೋತ್ಸಾಹ ಧನ ನೀಡಲು ಕರ್ನಾಟಕ ಕಲ್ಯಾಣ ಕಾರ್ಮಿಕ ಮಂಡಳಿ ಆನ್ಲೈನ್ ನಲ್ಲಿ ಅರ್ಜಿ ಆಹ್ವಾನಿಸಿದೆ.

    ಪ್ರೌಢ, ಸ್ನಾತಕೋತ್ತರ, ವೈದ್ಯಕೀಯ ಮತ್ತು ಬಿಇ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಅವಕಾಶವಿದೆ.

    ಮಾಸಿಕ ವೇತನ ರೂ.21,000/- ಮೀರದ ಕಾರ್ಮಿಕ ಕುಟುಂಬದ ಸದಸ್ಯರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

    ಆಸಕ್ತರು www.klwbapps.karnataka.gov.in ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು.

    ವಿಳಾಸ : 48, 1 ನೇ ಮತ್ತು 2 ನೇ ಮಹಡಿ, ಮತ್ತೀಕೆರೆ ಮುಖ್ಯ ರಸ್ತೆ, ಯಶವಂತಪುರ, ಬೆಂಗಳೂರು-22

    ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08023475188, 8277291175, 8277120505

  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿವಮೊಗ್ಗದಲ್ಲಿ 147 ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆ

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಮೊಗ್ಗ ಜಿಲ್ಲೆಯ 7 ತಾಲ್ಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : 46 ಅಂಗನವಾಡಿ ಕಾರ್ಯಕರ್ತೆ ಮತ್ತು 101 ಅಂಗನವಾಡಿ ಸಹಾಯಕಿಯರ ಗೌರವಸೇವೆಯ ಹುದ್ದೆಗಳಿಗೆ ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

    ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಾರಂಭದ ದಿನಾಂಕ : 13/07/2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12/08/2021

    ಅಂಗನವಾಡಿ ಕಾರ್ಯಕರ್ತೆ / ಸಹಾಯಕಿಯರಿಗೆ ಗೌರವ ಸೇವೆ ಸಲ್ಲಿಸಲು 18 ರಿಂದ 35 ವರ್ಷದೊಳಗಿನ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ( ಕಾರ್ಯಕರ್ತೆ ಹುದ್ದೆಗೆ ಮಾತ್ರ) 45 ವರ್ಷದೊಳಗಿನ ಸ್ಥಳೀಯ ( ಅದೇ ಗ್ರಾಮ/ವಾರ್ಡ್) ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಅಂಗನವಾಡಿ ಕಾರ್ಯಕರ್ತೆಯಾಗಲು ಎಸ್.ಎಸ್.ಎಲ್.ಸಿ ತೇರ್ಗಡೆಯಾಗಿರಬೇಕು. ಅಂಗನವಾಡಿ ಸಹಾಯಕಿಯಾಗಲು ಕನಿಷ್ಠ 4 ನೇ ತರಗತಿ ತೇರ್ಗಡೆಯಾಗಿದ್ದು, ಗರಿಷ್ಠ 9 ನೇ ತರಗತಿ ತೇರ್ಗಡೆಯಾಗಿರಬೇಕು.

    ಅರ್ಹ ಮಹಿಳಾ ಅಭ್ಯರ್ಥಿಗಳು ತಮ್ಮ ಎಲ್ಲಾ ದಾಖಲಾತಿಗಳೊಂದಿಗೆ ದಿನಾಂಕ 13/07/2021 ರಿಂದ ದಿನಾಂಕ 12/08/2021 ರ‌ ಸಂಜೆ‌ 5.30 ಗಂಟೆಯೊಳಗಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.