Blog

  • UPSC Jobs: ಕೇಂದ್ರ ಸರಕಾರಿ ಉದ್ಯೋಗಾವಕಾಶ; 312 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

    UPSC Jobs: ಕೇಂದ್ರ ಸರಕಾರಿ ಉದ್ಯೋಗಾವಕಾಶ; 312 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

    UPSC Recruitment 2024: ಕೇಂದ್ರ ಲೋಕ ಸೇವಾ ಆಯೋಗವು (UPSC) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 312 ಹುದ್ದೆಗಳು ಖಾಲಿ ಇದ್ದು, ಸಹಾಯಕ ಪ್ರಾಧ್ಯಾಪಕ, ಉಪ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಹುದ್ದೆಗಳು ಸೇರಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು 13-ಜೂನ್-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 25-5-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-06-2024

    ಹುದ್ದೆಯ ಕುರಿತ ಹೆಚ್ಚಿನ ವಿವರ ಇಲ್ಲಿದೆ;
    ಸಂಸ್ಥೆಯ ಹೆಸರು: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಇಲ್ಲಿ ಅಸಿಸ್ಟೆಂಟ್‌ ಪ್ರೊಫೆಸರ್‌, ಡೆಪ್ಯುಟಿ ಸೂಪರಿಂಟೆಂಡಿಂಗ್‌ ಆರ್ಕಿಯಾಲಜಿಸ್ಟ್‌ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಯುಪಿಎಸ್‌ಸಿ ನಿಯಮಗಳ ಪ್ರಕಾರ ವೇತನ ನಿಗದಿಪಡಿಸಲಾಗಿದೆ.

    ಹುದ್ದೆಯ ಹೆಸರು ಮತ್ತು ಪೋಸ್ಟ್ಗಳ ಸಂಖ್ಯೆ;
    ಉಪ ಅಧೀಕ್ಷಕ ಪುರಾತತ್ವ ರಸಾಯನಶಾಸ್ತ್ರಜ್ಞ 4
    ಉಪ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ 67
    ಸಿವಿಲ್ ಹೈಡ್ರೋಗ್ರಾಫಿಕ್ ಅಧಿಕಾರಿ 4
    ಸಹಾಯಕ ಪ್ರಾಧ್ಯಾಪಕರು (ಫೊರೆನ್ಸಿಕ್ ಮೆಡಿಸಿನ್) 6
    ಸಹಾಯಕ ಪ್ರಾಧ್ಯಾಪಕ (ಜನರಲ್ ಮೆಡಿಸಿನ್) 61
    ಸಹಾಯಕ ಪ್ರಾಧ್ಯಾಪಕ (ಜನರಲ್ ಸರ್ಜರಿ) 39
    ಸಹಾಯಕ ಪ್ರಾಧ್ಯಾಪಕರು (ಪೀಡಿಯಾಟ್ರಿಕ್ ನೆಫ್ರಾಲಜಿ) 3
    ಸ್ಪೆಷಲಿಸ್ಟ್ ಗ್ರೇಡ್ III ಸಹಾಯಕ ಪ್ರೊಫೆಸರ್ (ಪೀಡಿಯಾಟ್ರಿಕ್ಸ್) 23
    ಸ್ಪೆಷಲಿಸ್ಟ್ ಗ್ರೇಡ್ III (ಅರಿವಳಿಕೆಶಾಸ್ತ್ರ) 2
    ಸ್ಪೆಷಲಿಸ್ಟ್ ಗ್ರೇಡ್ III (ಡರ್ಮಟಾಲಜಿ, ವೆನೆರಿಯಾಲಜಿ & ಕುಷ್ಠರೋಗ) 2
    ಸ್ಪೆಷಲಿಸ್ಟ್ ಗ್ರೇಡ್ III (ಜನರಲ್ ಮೆಡಿಸಿನ್) 4
    ಸ್ಪೆಷಲಿಸ್ಟ್ ಗ್ರೇಡ್ III (ಸಾಮಾನ್ಯ ಶಸ್ತ್ರಚಿಕಿತ್ಸೆ) 7
    ಸ್ಪೆಷಲಿಸ್ಟ್ ಗ್ರೇಡ್ III (ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ) 5
    ಸ್ಪೆಷಲಿಸ್ಟ್ ಗ್ರೇಡ್ III (ನೇತ್ರಶಾಸ್ತ್ರ) 3
    ಸ್ಪೆಷಲಿಸ್ಟ್ ಗ್ರೇಡ್ III (ಆರ್ಥೋಪೆಡಿಕ್ಸ್) 2
    ಸ್ಪೆಷಲಿಸ್ಟ್ ಗ್ರೇಡ್-III ಒಟೊ-ರೈನೋ-ಲರಿಂಗೋಲಜಿ (ಕಿವಿ, ಮೂಗು ಮತ್ತು ಗಂಟಲು) 3
    ಸ್ಪೆಷಲಿಸ್ಟ್ ಗ್ರೇಡ್-III (ಪೀಡಿಯಾಟ್ರಿಕ್ಸ್) 2
    ಸ್ಪೆಷಲಿಸ್ಟ್ ಗ್ರೇಡ್-III (ರೋಗಶಾಸ್ತ್ರ) 4
    ಸ್ಪೆಷಲಿಸ್ಟ್ ಗ್ರೇಡ್-III (ಮನೋವೈದ್ಯಶಾಸ್ತ್ರ) 1
    ಉಪ ಕೇಂದ್ರ ಗುಪ್ತಚರ ಅಧಿಕಾರಿ (ತಾಂತ್ರಿಕ)(DCIO/Tech) 9
    ಸಹಾಯಕ ನಿರ್ದೇಶಕರು (ತೋಟಗಾರಿಕೆ) 4
    ಸಹಾಯಕ ನಿರ್ದೇಶಕ ಗ್ರೇಡ್-II (IEDS) (ರಾಸಾಯನಿಕ) 5
    ಸಹಾಯಕ ನಿರ್ದೇಶಕ ಗ್ರೇಡ್-II (IEDS) (ಆಹಾರ) 19
    ಸಹಾಯಕ ನಿರ್ದೇಶಕ ಗ್ರೇಡ್-II (IEDS) (ಹೊಸೈರಿ) 12
    ಸಹಾಯಕ ನಿರ್ದೇಶಕ ಗ್ರೇಡ್-II (ಚರ್ಮ ಮತ್ತು ಪಾದರಕ್ಷೆ) 8
    ಸಹಾಯಕ ನಿರ್ದೇಶಕ ಗ್ರೇಡ್-II (ಮೆಟಲ್ ಫಿನಿಶಿಂಗ್) 2
    ಇಂಜಿನಿಯರ್ ಮತ್ತು ಶಿಪ್ ಸರ್ವೇಯರ್/ಉಪ ನಿರ್ದೇಶಕ ಜನರಲ್ 2
    ತರಬೇತಿ ಅಧಿಕಾರಿ-ಉಡುಪು ತಯಾರಿಕೆ 5
    ತರಬೇತಿ ಅಧಿಕಾರಿ-ಎಲೆಕ್ಟ್ರಾನಿಕ್ ಮೆಕ್ಯಾನಿಕ್ 3
    ಸಹಾಯಕ ಪ್ರಾಧ್ಯಾಪಕರು (ಮೂತ್ರಶಾಸ್ತ್ರ) 1

    ವಿದ್ಯಾಭ್ಯಾಸ: ಮೇಲ್ಕಂಡ ಹುದ್ದೆಗಳಿಗೆ ತಕ್ಕಂತೆ ಅಭ್ಯರ್ಥಿಗಳು ಪದವಿ, ಸ್ನಾತಕೋತ್ತರ ಪದವಿ, ಎಂಬಿಬಿಎಸ್, M.D, Ph.D, ಎಂ.ಎಸ್, DM, M.S,B.Sc, B.E ಅಥವಾ B.Tech, M.Sc, MCA, ಎಲೆಕ್ಟ್ರಾನಿಕ್ ಮೆಕ್ಯಾನಿಕ್, M.Ch, DNB ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಮೇಲ್ಕಂಡ ಹುದ್ದೆಗೆ ಅಭ್ಯರ್ಥಿಗಳ ವಯೋಮಿತಿಯು 30-50 ವರ್ಷದೊಳಗಿರಬೇಕು. OBC ಅಭ್ಯರ್ಥಿಗಳಿಗೆ 03 ವರ್ಷ, SC/ST ಅಭ್ಯರ್ಥಿಗಳಿಗೆ 05 ವರ್ಷ, PwBD (ಸಾಮಾನ್ಯ) ಅಭ್ಯರ್ಥಿಗಳಿಗೆ 10 ವರ್ಷ, PwBD (OBC) ಅಭ್ಯರ್ಥಿಗಳಿಗೆ 13 ವರ್ಷ, PwBD (SC/ST) ಅಭ್ಯರ್ಥಿಗಳಿಗೆ 15 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: SC/ST/PwBD/ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವಂತಿಲ್ಲ. ಇತರ ಎಲ್ಲಾ ಅಭ್ಯರ್ಥಿಗಳು: ರೂ.25/- ಅರ್ಜಿ ಶುಲ್ಕ ಪಾವತಿ ಮಾಡಬೇಕು. ಅಭ್ಯರ್ಥಿಗಳು ಆನ್‌ಲೈನ್/SBI ಬ್ಯಾಂಕ್ ಮುಖಾಂತರ ಅರ್ಜಿ ಶುಲ್ಕ ಪಾವತಿ ಮಾಡಬೇಕು.

    ಆಯ್ಕೆ ಪ್ರಕ್ರಿಯೆ: ಮೇಲೆ ತಿಳಿಸಿದ ಎಲ್ಲಾ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಅಭ್ಯರ್ಥಿಗಳು ಸಂಸ್ಥೆಯ ವೆಬ್ಸೈಟ್‌ಗೆ ಭೇಟಿ ನೀಡಿ ಪಡೆದುಕೊಳ್ಳಬಹುದು.

  • EDII Jobs: ಭಾರತದ ವಾಣಿಜೋದ್ಯಮ ಅಭಿವೃದ್ಧಿ ಸಂಸ್ಥೆಯಲ್ಲಿ ಉದ್ಯೋಗ; ಮಾಸಿಕ ರೂ.30ಸಾವಿರ ಸಂಬಳ

    EDII Jobs: ಭಾರತದ ವಾಣಿಜೋದ್ಯಮ ಅಭಿವೃದ್ಧಿ ಸಂಸ್ಥೆಯಲ್ಲಿ ಉದ್ಯೋಗ; ಮಾಸಿಕ ರೂ.30ಸಾವಿರ ಸಂಬಳ

    EDII Recruitment 2024: ಭಾರತೀಯ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಸಂಖ್ಯೆಯನ್ನು ಇನ್ನೂ ನಿರ್ದಿಷ್ಟಪಡಿಸಿಲ್ಲ. ಮಾನವ ಸಂಪನ್ಮೂಲ ಕಾರ್ಯನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು – ಕರ್ನಾಟಕದಲ್ಲಿ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪೋಸ್ಟಿಂಗ್‌ ನಡೆಯಲಿದೆ. 02-Jun-2024 ರಂದು ಅಥವಾ ಮೊದಲು ಇಮೇಲ್ ಮೂಲಕ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು;
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 25-05-2024
    ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 02-ಜೂನ್-2024

    ಹುದೆಯ ಕುರಿತ ವಿವರ ಇಲ್ಲಿದೆ;
    ಸಂಸ್ಥೆಯ ಹೆಸರು: ಭಾರತದ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ (EDII) ಇಲ್ಲಿ ಮಾನವ ಸಂಪನ್ಮೂಲ ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಈ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ ರೂ.25,000-30,000 ವೇತನ ಸಿಗಲಿದೆ.

    ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಮಾನವ ಸಂಪನ್ಮೂಲ, ವ್ಯವಹಾರ ಆಡಳಿತದಲ್ಲಿ ಪದವಿ ತೇರ್ಗಡೆ ಹೊಂದಿರಬೇಕು. ಅಭ್ಯರ್ಥಿಗಳು HR ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಒಂದು ವರ್ಷ ಅಥವಾ ಹೆಚ್ಚು ಅನುಭವವನ್ನು ಹೊಂದಿರಬೇಕು.

    ವಯೋಮಿತಿ: EDII ಮಾನದಂಡಗಳ ಪ್ರಕಾರ ವಯಸ್ಸಿನ ಮಿತಿಯನ್ನು ಅಭ್ಯರ್ಥಿಗಳು ಹೊಂದಿರಬೇಕು.

    ವಯೋಮಿತಿ ಸಡಿಲಿಕೆ: ಭಾರತದ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆಯ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ಅಭ್ಯರ್ಥಿಗಳಿಗೆ ನೀಡಲಾಗಿದೆ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗವುದು.

    ಅರ್ಜಿ ಸಲ್ಲಿಸುವುದು ಹೇಗೆ?
    ಮೇಲೆ ತಿಳಿಸಿದ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್‌ ಐಡಿಗೆ ಅರ್ಜಿಯನ್ನು ಸಲ್ಲಿಸಬೇಕು. [email protected] ಗೆ 02-Jun-2024 ರಂದು ಅಥವಾ ಮೊದಲು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬೇಕು.

  • Job Alerts: ಸಬ್‌ಇನ್ಸ್‌ಪೆಕ್ಟರ್‌ ಹುದ್ದೆಗೆ ಅರ್ಜಿ ಆಹ್ವಾನ; ಪದವಿ ಪಾಸಾದವರಿಗೆ ಆದ್ಯತೆ

    Job Alerts: ಸಬ್‌ಇನ್ಸ್‌ಪೆಕ್ಟರ್‌ ಹುದ್ದೆಗೆ ಅರ್ಜಿ ಆಹ್ವಾನ; ಪದವಿ ಪಾಸಾದವರಿಗೆ ಆದ್ಯತೆ

    NCB Recruitment 2024: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 14 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಸಬ್‌ ಇನ್ಸ್‌ಪೆಕ್ಟರ್‌ ಪೋಸ್ಟ್‌ ಗೆ ಆಸಕ್ತಿ ಇರುವ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅಖಿಲ ಭಾರತ ಸರ್ಕಾರದಲ್ಲಿ ಪೋಸ್ಟಿಂಗ್‌ ನಡೆಯಲಿದೆ. ಸಬ್‌ಇನ್ಸ್‌ಪೆಕ್ಟರ್‌ ಹುದ್ದೆಗೆ ಅರ್ಜಿ ಸಲ್ಲಿಸಲು ದಿ.16-Jul-2024 ಕೊನೆಯ ದಿನಾಂಕವಾಗಿದ್ದು, ಅಭ್ಯರ್ಥಿಗಳು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 17-05-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 16-07-2024

    ಹುದ್ದೆಯ ಕುರಿತ ಹೆಚ್ಚಿನ ವಿವರ ಇಲ್ಲಿದೆ;
    ಸಂಸ್ಥೆಯ ಹೆಸರು: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಇಲ್ಲಿ ಖಾಲಿ ಇರುವ ಸಬ್‌ಇನ್ಸ್‌ಪೆಕ್ಟರ್‌ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.9300-34800/- ವೇತನ ದೊರಕಲಿದೆ. ಭಾರತದಾದ್ಯಂತ ಈ ಹುದ್ದೆಗೆ ಪೋಸ್ಟಿಂಗ್‌ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ವಿದ್ಯಾರ್ಹತೆ: ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿಯನ್ನು ತೇರ್ಗಡೆ ಹೊಂದಿರಬೇಕು. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 16-ಜುಲೈ-2024 ರಂತೆ 56 ವರ್ಷಗಳನ್ನು ಮೀರಿರಬಾರದು. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ಅಭ್ಯರ್ಥಿಗಳಿಗೆ ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ: ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗೆ ನೀಡಲಾದ ವಿಳಾಸಕ್ಕೆ ಕಳುಹಿಸಬೇಕು.
    ವಿಳಾಸ ಇಲ್ಲಿದೆ;
    Director (Admn.), Narcotics Control Bureau, 2nd Floor, August Kranti Bhawan, Bhikaji Cama Place, New Delhi-110066 ಇಲ್ಲಿಗೆ 16-07-2024 ದಿನಾಂಕದೊಳಗೆ ತಲುಪಬೇಕು.

  • RRB Recruitment 2024: ಐಟಿಐ ಪಾಸಾದವರಿಗೆ ಸುವರ್ಣಾವಕಾಶ, ರೈಲ್ವೆ ಇಲಾಖೆಯಲ್ಲಿ 1010 ವಿವಿಧ ಹುದ್ದೆಗಳು; ಈ ಕೂಡಲೇ ಅರ್ಜಿ ಸಲ್ಲಿಸಿ

    RRB Recruitment 2024: ಐಟಿಐ ಪಾಸಾದವರಿಗೆ ಸುವರ್ಣಾವಕಾಶ, ರೈಲ್ವೆ ಇಲಾಖೆಯಲ್ಲಿ 1010 ವಿವಿಧ ಹುದ್ದೆಗಳು; ಈ ಕೂಡಲೇ ಅರ್ಜಿ ಸಲ್ಲಿಸಿ

    RRB Recruitment 2024: ರೈಲ್ವೆ ಇಲಾಖೆಯ ಚೆನ್ನೈ ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 1010 ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಕ್ಟ್‌ ಅಪ್ರೆಂಟಿಸ್‌ ಹುದ್ದೆಗೆ ಭರ್ತಿ ಮಾಡಲಾಗುತ್ತಿದೆ. ತರಬೇತುದಾರರ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಚ್ಛೆ ಪಡುವ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಿ. ಈ ಹುದ್ದೆಗೆ ಅರ್ಜಿ ಹಾಕಿ ಒಂದು ವರ್ಷಗಳ ಕಾಲ ವೇತನದೊಂದಿಗೆ ತರಬೇತಿ ಕೂಡಾ ನೀವು ಪಡೆಯಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 22-05-2024 (9.30 ಪ್ರಾರಂಭವಾಗಿದೆ)
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-06-2024 (5.30 ಗಂಟೆಯವರೆಗೆ)

    ಹುದ್ದೆಯ ಹೆಚ್ಚಿನ ವಿವರಗಳನ್ನು ಇಲ್ಲಿ ನೀಡಲಾಗಿದೆ;
    ಸಂಸ್ಥೆಯ ಹೆಸರು: ರೈಲ್ವೆ ಇಲಾಖೆಯ ಚೆನ್ನೈ ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿಯಲ್ಲಿ 1010 ಹುದ್ದೆಗಳು ಖಾಲಿ ಇದ್ದು, ತರಬೇತುದಾರರ (ಆಕ್ಟ್‌ ಅಪ್ರೆಂಟಿಸ್‌) ನೇಮಕಾತಿ ನಡೆಯಲಿದೆ. ಈ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ ಸ್ಟೈಫಂಡ್‌ ರೂ.7000-9000 ವರೆಗೆ ನೀಡಲಾಗುವುದು.

    ಹುದ್ದೆಗಳ ಹೆಸರು ಮತ್ತು ಸಂಖ್ಯೆ ವಿವರ ಇಲ್ಲಿದೆ;
    ಕಾರ್ಪೆಂಟರ್ : 90 ಹುದ್ದೆಗಳು
    ಇಲೆಕ್ಟ್ರೀಷಿಯನ್ : 200 ಹುದ್ದೆಗಳು
    ಫಿಟ್ಟರ್ : 260 ಹುದ್ದೆಗಳು
    ಮಷಿನಿಸ್ಟ್‌ : 90 ಹುದ್ದೆಗಳು
    ಪೇಂಟರ್ : 90 ಹುದ್ದೆಗಳು
    ವೆಲ್ಡರ್ : 260 ಹುದ್ದೆಗಳು
    MLT-Radiology : 5 ಹುದ್ದೆಗಳು
    MLT-Pathology : 5 ಹುದ್ದೆಗಳು
    PASAA : 10 ಹುದ್ದೆಗಳು
    ಒಟ್ಟು 1010 ಹುದ್ದೆಗಳು ಖಾಲಿ ಇದೆ.

    ಶೈಕ್ಷಣಿಕ ಅರ್ಹತೆ: ಕಾರ್ಪೆಂಟರ್‌, ಇಲೆಕ್ಟ್ರೀಷಿಯನ್‌, ಫಿಟ್ಟರ್‌, ಮಷನಿಸ್ಟ್‌, ಪೇಂಟರ್‌, ವೆಲ್ಡರ್‌, ರೇಡಿಯೋಲಜಿ, ಪೆಥಾಲಜಿ, PASAA ಟ್ರೇಡ್‌ಗಳಲ್ಲಿ ಐಟಿಐ ಪಾಸ್‌ ಆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹಾಗೆನೇ ಇಂಜಿನಿಯರಿಂಗ್‌ ಪದವಿ, ಡಿಪ್ಲೋಮಾ ಪಾಸ್‌ ಮಾಡಿದವರು ಅರ್ಜಿ ಸಲ್ಲಿಸುವಂತಿಲ್ಲ.

    ಅರ್ಜಿ ಶುಲ್ಕ: ಆಕ್ಟ್‌ ಅಪ್ರೆಂಟಿಸ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ.100 ನ್ನು ಪಾವತಿ ಮಾಡಬೇಕು.

    ವಯೋಮಿತಿ: ಅಭ್ಯರ್ಥಿಗಳು ವಯೋಮಿತಿಯು ದಿ.21-06-2024 ಕ್ಕೆ 15 ವರ್ಷ ಆಗಿರಬೇಕು. ಹಾಗೂ 24 ಗರಿಷ್ಠ ವಯೋಮಿತಿಯನ್ನು ಮೀರಬಾರದು.

    ಆಯ್ಕೆ ಪ್ರಕ್ರಿಯೆ: ಐಟಿಐ ಅಂಕಗಳನ್ನು ಪರಿಗಣಿಸಿ, ಮೆರಿಟ್‌ ಮೂಲಕ ಶಾರ್ಟ್‌ ಲಿಸ್ಟ್‌ ಮಾಡಿ, ಮೆಡಿಕಲ್‌ ಟೆಸ್ಟ್‌, ದಾಖಲೆ ಪರಿಶೀಲನೆ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • Railway Recruitment 2024: ರೈಲ್ವೆಯಲ್ಲಿ ಭರ್ಜರಿ ನೇಮಕಾತಿ; ಲೋಕೋ ಪೈಲಟ್-ಟ್ರೈನ್‌ ಮ್ಯಾನೇಜರ್‌ ಹುದ್ದೆ; ಹೆಚ್ಚಿನ ವಿವರ ಇಲ್ಲಿದೆ

    Railway Recruitment 2024: ರೈಲ್ವೆಯಲ್ಲಿ ಭರ್ಜರಿ ನೇಮಕಾತಿ; ಲೋಕೋ ಪೈಲಟ್-ಟ್ರೈನ್‌ ಮ್ಯಾನೇಜರ್‌ ಹುದ್ದೆ; ಹೆಚ್ಚಿನ ವಿವರ ಇಲ್ಲಿದೆ

    RRC SER Recruitment 2024: ಆಗ್ನೇಯ ರೈಲ್ವೆಯು ಜಿಡಿಸಿಇ ಕೋಟಾದ ಅಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 1202 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಹಾಯಕ ಲೋಕೋ ಪೈಲಟ್‌ ಮತ್ತು ಟ್ರೈನ್‌ ಮ್ಯಾನೇಜರ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಜೂನ್‌ 12,2024 ಕೊನೆಯ ದಿನಾಂಕವಾಗಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಗ್ನೇಯ ರೈಲ್ವೆಯ ಸಾಮಾನ್ಯ ರೈಲ್ವೆ ಉದ್ಯೋಗಿಗಳು ಮಾತ್ರ ಜಿಡಿಸಿಇ ಕೋಟಾದ ಅಡಿಯಲ್ಲಿ ಈ ಹುದ್ದೆಗಳನ್ನು ಅರ್ಜಿ ಸಲ್ಲಿಸಬಹುದೆಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 13-05-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-06-2024

    ಹುದ್ದೆಯ ವಿವರ ಇಲ್ಲಿದೆ;
    ಸಹಾಯಕ ಲೋಕೋಪೈಲೆಟ್‌ (ಎಎಲ್‌ಪಿ)-827 ಹುದ್ದೆಗಳು ಖಾಲಿ ಇದೆ
    ಟ್ರೈನ್ ಮ್ಯಾನೇಜರ್‌ – 375 ಹುದ್ದೆಗಳು ಖಾಲಿ ಇದೆ.

    ಶೈಕ್ಷಣಿಕ ಅರ್ಹತೆ: ಸಹಾಯಕ ಲೋಕೋಪೈಲಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಹತ್ತನೇ ತರಗತಿ ತೇರ್ಗಡೆ ಹೊಂದಿರಬೇಕು. ಅಷ್ಟು ಮಾತ್ರವಲ್ಲದೇ ಸಂಬಂಧಿತ ಕ್ಷೇತ್ರಕ್ಕೆ ಕುರಿತಂತೆ ಐಟಿಐ ಪ್ರಮಾಣ ಪತ್ರವನ್ನು ಪಡೆದಿರಬೇಕು.
    ಟ್ರೈನಿ ಮ್ಯಾನೇಜರ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವೀಧರರಾಗಿರಬೇಕು.

    ವಯೋಮಿತಿ: ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ. ಗರಿಷ್ಠ 42 ವರ್ಷ ಮೀರಿರಬಾರದು. ಒಬಿಸಿ/ಎಸ್‌ಸಿ/ಎಸ್‌ಟಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಯನ್ನು ನೀಡಲಾಗಿದೆ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಸಿಬಿಟಿ/ಆಲ್ಟಿಟ್ಯೂಡ್‌ ಟೆಸ್ಟ್‌/ಡಾಕ್ಯುಮೆಂಟ್‌ ವೆರಿಫಿಕೇಶನ್‌/ ಮೆಡಿಕಲ್‌ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸುವುದು ಹೇಗೆ?
    ಮೊದಲಿಗೆ RRC/SER ವೆಬ್‌ಸೈಟ್ www.rrcser.co.in ಗೆ ಹೋಗಿ ಮತ್ತು “GDCE- 2024 ONLINE/E-ಅಪ್ಲಿಕೇಶನ್” ಗಾಗಿ ಉಲ್ಲೇಖಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡಿ.
    ನಂತರ “ಹೊಸ ನೋಂದಣಿ” ಮೇಲೆ ಕ್ಲಿಕ್ ಮಾಡಿ.
    ಮೂಲ ವಿವರಗಳನ್ನು ಭರ್ತಿ ಮಾಡಿ ಅಂದರೆ ಹೆಸರು, ಸಮುದಾಯ, DOB, ಉದ್ಯೋಗಿ ಐಡಿ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಹಾಕಿ.
    ಅನಂತರ ಅಭ್ಯರ್ಥಿಗೆ ನೋಂದಣಿ ಸಂಖ್ಯೆ ದೊರಕುತ್ತದೆ. ಮತ್ತು ಅದೇ ಸಂದೇಶವನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
    ನಂತರ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು. ಅನಂತರ ಸಬ್‌ಮಿಟ್‌ ಬಟನ್‌ ಕ್ಲಿಕ್‌ ಮಾಡಿ.

  • BPNL Recruitment 2024: ಕೇಂದ್ರ ಸರಕಾರದಿಂದ ಭರ್ಜರಿ 5250 ಹುದ್ದೆಗಳ ಭರ್ತಿ; ವೇತನ, ಅರ್ಜಿ ಸಲ್ಲಿಕೆ ವಿಧಾನ ಇಲ್ಲಿದೆ

    BPNL Recruitment 2024: ಕೇಂದ್ರ ಸರಕಾರದಿಂದ ಭರ್ಜರಿ 5250 ಹುದ್ದೆಗಳ ಭರ್ತಿ; ವೇತನ, ಅರ್ಜಿ ಸಲ್ಲಿಕೆ ವಿಧಾನ ಇಲ್ಲಿದೆ

    BPNL Recruitment 2024: ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (BPNL) ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕೃಷಿ ನಿರ್ವಹಣಾ ಅಧಿಕಾರಿ, ಕೃಷಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಒಟ್ಟು 5250 ಹುದ್ದೆಗಳು ಖಾಲಿ ಇದೆ. ಭಾರತದಾದ್ಯಂತ ಈ ಹುದ್ದೆಗೆ ಪೋಸ್ಟಿಂಗ್‌ ನಡೆಯಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು 02-Jun-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 23-05-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-06-2024


    ಹುದ್ದೆಯ ಕುರಿತ ವಿವರ ಇಲ್ಲಿದೆ;
    ಸಂಸ್ಥೆಯ ಹೆಸರು: ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (BPNL) ಇಲ್ಲಿ ಖಾಲಿ ಇರುವ 5250 ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕೃಷಿ ನಿರ್ವಹಣಾ ಅಧಿಕಾರಿ, ಕೃಷಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಮಾಸಿಕ ರೂ.22,000-31,000 ರೂ ವರೆಗೆ ವೇತನ ದೊರಕಲಿದೆ.

    ಹುದ್ದೆ ಹೆಸರು ಮತ್ತು ಸಂಖ್ಯೆ;
    ಕೃಷಿ ನಿರ್ವಹಣಾ ಅಧಿಕಾರಿ – 250 ಹುದ್ದೆಗಳು
    ಕೃಷಿ ಅಭಿವೃದ್ಧಿ ಅಧಿಕಾರಿ – 1250 ಹುದ್ದೆಗಳು
    ಕೃಷಿ ಇನ್ಸ್‌ಪಿರೇಶನ್‌ – 3750 ಹುದ್ದೆಗಳು

    ಶೈಕ್ಷಣಿಕ ಅರ್ಹತೆ; ಕೃಷಿ ನಿರ್ವಹಣಾ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಪದವಿ ಮಾಡಿರಬೇಕು.
    ಕೃಷಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವವರು 12th ಪಾಸಾಗಿರಬೇಕು.
    ಕೃಷಿ ಇನ್ಸ್‌ಪಿರೇಶನ್‌ ಹುದ್ದೆಗೆ ಅರ್ಜಿ ಸಲ್ಲಿಸುವವರು 10 ನೇ ತರಗತಿ ಪಾಸಾಗಿರಬೇಕು.

    ವಯೋಮಿತಿ;
    ಕೃಷಿ ನಿರ್ವಹಣಾ ಅಧಿಕಾರಿ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 25-45 ವರ್ಷದೊಳಗೆ ಇರಬೇಕು.
    ಕೃಷಿ ಅಭಿವೃದ್ಧಿ ಅಧಿಕಾರಿ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 21-40 ವರ್ಷದೊಳಗೆ ಇರಬೇಕು.
    ಕೃಷಿ ಇನ್ಸ್‌ಪಿರೇಶನ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 18-40 ವರ್ಷದೊಳಗೆ ಇರಬೇಕು.

    ವಯೋಮಿತಿ ಸಡಿಲಿಕೆ: ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: ಕೃಷಿ ನಿರ್ವಹಣಾ ಅಧಿಕಾರಿ ಹುದ್ದೆ- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ರೂ.944/- ಅರ್ಜಿ ಶುಲ್ಕ ಪಾವತಿ ಮಾಡಬೇಕು.
    ಕೃಷಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ರೂ.826/- ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
    ಕೃಷಿ ಇನ್ಸ್‌ಪಿರೇಶನ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು: ರೂ.708/- ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

    ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಮಾತ್ರ ಪಾವತಿ ಮಾಡಬೇಕು.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ವೇತನ: ಕೃಷಿ ನಿರ್ವಹಣಾ ಅಧಿಕಾರಿ ರೂ.31000/- ಸಂಬಳವಿರುತ್ತದೆ.
    ಕೃಷಿ ಅಭಿವೃದ್ಧಿ ಅಧಿಕಾರಿ ರೂ.28000/- ವೇತನ ನಿಗದಿಪಡಿಸಲಾಗಿದೆ.
    ಕೃಷಿ ಇನ್ಸ್‌ಪಿರೇಶನ್‌ ರೂ.22000/- ವೇತನವಿರಲಿದೆ.