Blog

  • ಯುಪಿಎಸ್‌ಸಿ ಮೂಲಕ ವಿವಿಧ ಹುದ್ದೆಗಳಿಗೆ ನೇಮಕ, ಅಧಿಸೂಚನೆ ಪ್ರಕಟ

    ಯುಪಿಎಸ್‌ಸಿ ಮೂಲಕ ವಿವಿಧ ಹುದ್ದೆಗಳಿಗೆ ನೇಮಕ, ಅಧಿಸೂಚನೆ ಪ್ರಕಟ

    ಕೇಂದ್ರ ಲೋಕಸೇವಾ ಆಯೋಗವು ಇತ್ತೀಚೆಗೆ ಬಿಡುಗಡೆ ಮಾಡಿರುವ ಕೆಲವು ಅಧಿಸೂಚನೆಗಳ ಮಾಹಿತಿ ಇಲ್ಲಿದೆ. ಪ್ರಸಕ್ತ ಕೊರೊನಾ ಸಂದರ್ಭದಲ್ಲಿ ಅನಿಶ್ಚಿತ ಉದ್ಯೋಗ ಭದ್ರತೆ ಅನುಭವಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರಕಾರದ ಉದ್ಯೋಗ ಪಡೆಯಲು ಪ್ರಯತ್ನಪಡಿ. ಶುಭವಾಗಲಿ. ಸರಕಾರಿ ಜಾಬ್ಸ್‌ ಇದೀಗ ಮತ್ತೆ ಮರು ಆರಂಭಗೊಂಡಿದ್ದು, ನಿತ್ಯ ಉದ್ಯೋಗ ಮಾಹಿತಿಯನ್ನು ನೀಡಲಿದೆ. – ಸಂಪಾದಕ

    ಯುಪಿಎಸ್‌ಸಿ ಸಿಜಿಎಸ್‌ ಪ್ರಿಲೀಮ್ಸ್-೨೦೨೧ ಅಧಿಸೂಚನೆ

    ಕೇಂದ್ರ ಲೋಕಸೇವಾ ಆಯೋಗವು ಕಂಬೈನ್ಡ್‌ ಜಿಯೊ ಸೈಂಟಿಸ್ಟ್‌ ಪರೀಕ್ಷೆ ೨೦೨೧ಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಇದೇ ಅಕ್ಟೋಬರ್‌ ೨೭ರ ಮೊದಲು ಅರ್ಜಿ ಸಲ್ಲಿಸಬಹುದು. ಕೆಮಿಸ್ಟ್‌ ಗ್ರೂಪ್‌ ಎ ಮತ್ತು ಸೈಂಟಿಸ್ಟ್‌ ಎ (ಹೈಡ್ರೊಲಜಿ, ಕೆಮಿಕಲ್‌ ಮತ್ತು ಜಿಯೊಫಿಸಿಕ್ಸ್‌) ಹುದ್ದೆಗಳ ನೇಮಕಕ್ಕೆ ನಡೆಯುವ ಪರೀಕ್ಷೆ ಇದಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27.10.2020

    ಕಂಬೈನ್ಡ್‌ ಜಿಯೊ ಸೈಂಟಿಸ್ಟ್ ಪರೀಕ್ಷೆ: 2021

    ಅರ್ಜಿ ಸಲ್ಲಿಸುವುದು ಹೇಗೆ?: ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಅಂಚೆ ಅಥವಾ ಬೇರೆ ಯಾವುದೇ ವಿಧಾನದ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅರ್ಜಿ ಸಲ್ಲಿಸುವ ಸಮಯದಲ್ಲಿ ಅಭ್ಯರ್ಥಿಗಳು ಒಂದು ಫೋಟೊ ಗುರುತಿನ ಪತ್ರ ಜೊತೆಯಲ್ಲಿಟ್ಟುಕೊಳ್ಳಬೇಕು.ಅಂದರೆ, ಆಧಾರ್‌/ಮತದಾರರ ಗುರುತಿನ ಪತ್ರ/ ಪಾನ್‌ ಕಾರ್ಡ್‌/ ಪಾಸ್‌ಪೋರ್ಟ್‌/ ಡಿಎಲ್‌ ಅಥವಾ ಇತರೆ ಫೋಟೊ ಐಟಿ(ರಾಜ್ಯ ಅಥವಾ ಕೇಂದ್ರ ಸರಕಾರದ ಮಾನ್ಯತೆ ಇರುವ) ಲಗ್ಗತ್ತಿಸಬೇಕು.

    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್‌ ೨೭ರ ಸಂಜೆ ಆರು ಗಂಟೆಯವರೆಗೆ ಮಾತ್ರ ಸಮಯ ನೀಡಲಾಗುತ್ತದೆ. ಅರ್ಜಿ ಹಿಂಪಡೆಯಲು ಬಯಸುವವರಿಗೆ ನವೆಂಬರ್‌ ೪ರಿಂದ ನವೆಂಬರ್‌ ೧೦ರವರೆಗೆ ಮಾತ್ರ ಅವಕಾಶವಿರುತ್ತದೆ.

    ಆನ್‌ಲೈನ್‌ ಪರೀಕ್ಷೆಗೆ ಬರುವ ಮೊದಲು ಇ ಅಡ್ಮಿಟ್‌ ಕಾರ್ಡ್‌ ಕಡ್ಡಾಯವಾಗಿ ತರಬೇಕು. ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಇ ಅಡ್ಮಿಟ್‌ ಕಾರ್ಡ್‌ ಲಭ್ಯವಿರಲಿದೆ. ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ ನೆಗೆಟಿವ್‌ ಅಂಕ ಇರುತ್ತದೆ.

    ಹುದ್ದೆಗಳ ವಿವರ: ಗ್ರೂಪ್‌ ಎ 15 ಹುದ್ದೆಗಳಿವೆ.

    ಗ್ರೂಪ್‌ ಎಯಲ್ಲಿ ಸೈಂಟಿಸ್ಟ್‌ ಬಿ (ಹೈಡ್ರೊಲಜಿ) 16, ಸೈಂಟಿಸ್ಟ್‌ ಬಿ (ಕೆಮಿಕಲ್‌) 03 ಮತ್ತು ಸೈಂಟಿಸ್ಟ್‌ ಬಿ (ಜಿಯೋಫಿಸಿಕ್ಸ್‌) 6 ಹುದ್ದೆಗಳಿವೆ.

    ಅಧಿಸೂಚನೆ ಡೌನ್‌ಲೋಡ್‌ ಮಾಡಿಕೊಳ್ಳಲು ಕ್ಲಿಕ್‌ ಮಾಡಿ.

    ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

    ಯುಪಿಎಸ್‌ಸಿ ಅಧಿಸೂಚನೆ: ಫೋರ್‌ಮೆನ್‌,ಸೀನಿಯರ್‌ ಸೈಂಟಿಫಿಕ್‌ ಅಸಿಸ್ಟೆಂಟ್‌, ಅಸಿಸ್ಟೆಂಟ್‌ ಪ್ರೊಫೆಸರ್‌

    ಒಟ್ಟು ಹುದ್ದೆಗಳ ಸಂಖ್ಯೆ: 44

    ವಿದ್ಯಾರ್ಹತೆ: ಎಂಬಿಬಿಎಸ್‌, ಎಂಜಿನಿಯರಿಂಗ್‌ ಪದವಿ

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್‌ 29

    ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ

  • ಐಬಿಪಿಎಸ್ ಅಧಿಸೂಚನೆ ಪ್ರಕಟ; ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ 1167 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಇಲ್ಲಿದೆ ಪೂರ್ಣ ವಿವರ

    ಐಬಿಪಿಎಸ್ ಅಧಿಸೂಚನೆ ಪ್ರಕಟ; ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ 1167 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಇಲ್ಲಿದೆ ಪೂರ್ಣ ವಿವರ

    ಬ್ಯಾಂಕ್ ಸಿಬ್ಬಂದಿ ನೇಮಕ ಸಂಸ್ಥೆಯು (ಐಬಿಪಿಎಸ್) ಪ್ರೊಬೇಷನರಿ ಆಫೀಸರ್ಸ್/ಮ್ಯಾನೇಜ್ಮೆಂಟ್ ಟ್ರೇನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ ೨೬ ಕೊನೆಯ ದಿನಾಂಕವಾಗಿದೆ. ಈ ಕೋವಿಡ್ ಸಂಕಷ್ಟದ ಸಮಯದಲ್ಲಿ ಬ್ಯಾಂಕ್ ಹುದ್ದೆ ಪಡೆದು ಭವಿಷ್ಯ ರೂಪಿಸಲು ಬಯಸುವವರು ಈ ಅವಕಾಶ ಸದುಪಯೋಗಪಡಿಸಿಕೊಳ್ಳಬಹುದು.

    • ಅರ್ಜಿ ಸಲ್ಲಿಸುವುದು ಹೇಗೆ?: ಆನ್ಲೈನ್ ಮೂಲಕ
    • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಆಗಸ್ಟ್ 05, 2020
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 26, 2020
    • ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಆಗಸ್ಟ್ 26, ೨೦೨೦
    • ಪ್ರಿಲಿಮ್ಸ್ ಕಾಲ್ ಲೆಟರ್ ಡೌನ್ಲೋಡ್: ಅಕ್ಟೋಬರ್ ೨೦೨೦
    • ಆನ್ಲೈನ್ ಪರೀಕ್ಷೆ ದಿನಾಂಕ: ಪ್ರಿಲಿಮ್ಸ್: ಅಕ್ಟೋಬರ್ ೩, ೧೦ ಮತ್ತು ೧೧
    • ಆನ್ಲೈನ್ ಪರೀಕ್ಷೆ ಪ್ರಿಲಿಮ್ಸ್ ಫಲಿತಾಂಶ: ೨೦೨೦ರ ಅಕ್ಟೋಬರ್/ ನವೆಂಬರ್
    • ಆನ್ಲೈನ್ ಪರೀಕ್ಷೆ: ಮೇನ್: ನವೆಂಬರ್ ೨೮, ೨೦೨೦
    • ಮೇನ್ ಪರೀಕ್ಷೆ ಫಲಿತಾಂಶ: ಡಿಸೆಂಬರ್ ೨೦೨೦
    • ಐಬಿಪಿಎಸ್ ಸಂದರ್ಶನ ದಿನಾಂಕ: ೨೦೨೧ರ ಜನವರಿ/ ಫೆಬ್ರವರಿ
    • ಸಂಭಾವ್ಯ ಹುದ್ದೆ ಹಂಚಿಕೆ: ೨೦೨೧ರ ಏಪ್ರಿಲ್

    ಐಬಿಪಿಎಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿ

    ವಯೋಮಿತಿ: ಐಬಿಪಿಎಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ೨೦ ವರ್ಷ ಮತ್ತು ಗರಿಷ್ಠ ೩೦ ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅಂದರೆ ೧೯೯೦ರ ಆಗಸ್ಟ್ ೨ರ ಬಳಿಕ ಮತ್ತು ೨೦೦೦ರ ಆಗಸ್ಟ್ ೧ರ ಮೊದಲು ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿಯಲ್ಲಿ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ೫ ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ೩ ವರ್ಷ ಸಡಿಲಿಕೆ ನೀಡಲಾಗುತ್ತದೆ.

    ಐಬಿಪಿಎಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ

    ವಿದ್ಯಾರ್ಹತೆ ಏನು: ಐಬಿಪಿಎಸ್ ಎಗ್ಸಾಂ ಬರೆಯಲು ಪದವಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವೇಳೆ ಅಂಕಪಟ್ಟಿ/ಡಿಗ್ರಿ ಸರ್ಟಿಫಿಕೇಟ್ಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಆಗಸ್ಟ್ ೨೬, ೨೦೨೦ರ ಮೊದಲು ಅಂತಿಮ ಫಲಿತಾಂಶ ಪ್ರಕಟಗೊಂಡ ಪದವಿ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
    ಪರೀಕ್ಷಾ ಪೂರ್ವ ತರಬೇತಿ: ಕೊರೊನಾ ಹಿನ್ನೆಲೆಯಲ್ಲಿ ಎಸ್ಸಿ/ಎಸ್ಟಿ/ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಈ ಬಾರಿ ಪರೀಕ್ಷಾ ಪೂರ್ವ ತರಬೇತಿ ನಡೆಸಲಾಗುವುದಿಲ್ಲ.

    ಐಬಿಪಿಎಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

    ಆಸಕ್ತ ಅಭ್ಯರ್ಥಿಗಳು ಆಗಸ್ಟ್ ೨೬ರ ಮೊದಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧದಲ್ಲಿ ಅರ್ಜಿಸಲ್ಲಿಸಲು ಅವಕಾಶವಿಲ್ಲ. ಆನ್ಲೈನ್ ಅರ್ಜಿ ಸಲ್ಲಿಸುವ ಮೊದಲು ಭಾವಚಿತ್ರ (೪.೫ ಸೆಂ.ಮೀ. * ೩.೫ ಸೆಂ.ಮೀ.), ಸಹಿ, ಎಡ ಬೆರಳಿನ ಹೆಬ್ಬೆಟ್ಟು, ಸಹಿ (ಕ್ಯಾಪಿಟಲ್ ಅಕ್ಷರದಲ್ಲಿ ಸಹಿ ಮಾಡುವಂತೆ ಇಲ್ಲ) ಸ್ಕ್ಯಾನ್ ಮಾಡಿಟ್ಟುಕೊಳ್ಳಬೇಕು. ಜೊತೆಗೆ ಕೈ ಬರಹದಲ್ಲಿ I, _ (Name of the candidate), hereby declare that all the information submitted by me in the application form is correct, true and valid. I will present the supporting documents as and when required.” ಎಂದು ಬರೆದಿರುವುದನ್ನು ಸ್ಕ್ಯಾನ್ ಮಾಡಿಟ್ಟುಕೊಳ್ಳಬೇಕು. ಇದರೊಂದಿಗೆ ಆನ್ಲೈನ್ ಮೂಲಕ ಶುಲ್ಕ ಪಾವತಿಸಲು ಸಿದ್ಧರಾಗಿರಬೇಕು.

    ಐಬಿಪಿಎಸ್‌ ಅರ್ಜಿ ಶುಲ್ಕವೆಷ್ಟು?

    ಐಬಿಪಿಎಸ್ ಅರ್ಜಿ ಶುಲ್ಕ ಪಾವತಿಸಲು ಆಗಸ್ಟ್ ೨೬, ೨೦೨೦ ಕೊನೆಯ ದಿನಾಂಕವಾಗಿದೆ. ಎಸ್ಸಿ/ಎಸ್ಟಿ/ಪಿಡಬ್ಲ್ಯುಬಿಡಿ ಅಭ್ಯರ್ಥಿಗಳು 175 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಇತರೆ ಎಲ್ಲಾ ಅಭ್ಯರ್ಥಿಗಳು 850 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಆನ್ಲೈನ್ ಪಾವತಿಗೆ ಬ್ಯಾಂಕ್ ವಿಧಿಸುವ ಶುಲ್ಕವನ್ನು ಅಭ್ಯರ್ಥಿಗಳೇ ಪಾವತಿಸಬೇಕು.

    ಗಮನಿಸಿ: ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಇಮೇಲ್/ ಫೋನ್ ನಂಬರ್ ಸರಿಯಾಗಿ ಬರೆದಿರಬೇಕು. ಮುಂದಿನ ಎಲ್ಲಾ ಸಂವಹನಗಳು ಇವುಗಳ ಮೂಲಕವೇ ನಡೆಯಲಿದೆ.

    ಯಾವ ಬ್ಯಾಂಕ್ನಲ್ಲಿ ಎಷ್ಟು ಹುದ್ದೆಗಳಿವೆ?

    ibps recruitment

    ಕರ್ನಾಟಕದಲ್ಲಿ ಪ್ರಿಲಿಮ್ಸ್ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಬೆಳಗಾವಿ, ಬೀದರ್, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ


    ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ.


    ಇಂಗ್ಲಿಷ್ನಲ್ಲಿ ಐಬಿಪಿಎಸ್ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

  • ಯುಪಿಎಸ್‌ಸಿ ಫಲಿತಾಂಶ ಪ್ರಕಟ, ಪ್ರದೀಪ್‌ ದೇಶಕ್ಕೆ ಟಾಪ್

    ಯುಪಿಎಸ್‌ಸಿ ಫಲಿತಾಂಶ ಪ್ರಕಟ, ಪ್ರದೀಪ್‌ ದೇಶಕ್ಕೆ ಟಾಪ್

    ಕೇಂದ್ರ ಲೋಕ ಸೇವಾ ಆಯೋಗವು ೨೦೧೯ರ ಸಾಲಿನ ಫಲಿತಾಂಶವನ್ನು ಪ್ರಕಟಿಸಿದ್ದು, ಸಂಭಾವ್ಯ ಆಯ್ಕೆಪಟ್ಟಿಯನ್ನೂ ಪ್ರಕಟಿಸಿದೆ. ಈಗಾಗಲೇ ಪ್ರಿಲಿಮ್ಸ್‌, ಮೇನ್ಸ್‌, ಸಂದರ್ಶನದ ಎದುರಿಸಿ ಫಲಿತಾಂಶದ ನಿರೀಕ್ಷೆಯಲ್ಲಿರುವವರು ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.

    ೨೦೧೯ರಲ್ಲಿ ನಡೆದ ಲಿಖಿತ ಪರೀಕ್ಷೆ ಮತ್ತು ೨೦೨೦ರ ಫೆಬ್ರವರಿ-ಆಗಸ್ಟ್ ನಲ್ಲಿ ನಡೆದ ಸಂದರ್ಶನದ ಆಧಾರದಲ್ಲಿ ಈ ಫಲಿತಾಂಶವನ್ನು ಪ್ರಕಟಿಸಿದೆ. ಈ ಪರೀಕ್ಷೆಯಲ್ಲಿ ಅಗ್ರ ಸ್ಥಾನದಲ್ಲಿರುವವರಿಗೆ ಐಎಎಸ್‌, ಐಪಿಎಸ್‌ ಇತ್ಯಾದಿ ಕೇಡರ್ ಗಳು ದೊರಕಲಿವೆ.

    ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರದೀಪ್‌ ಸಿಂಗ್ ಅಗ್ರಸ್ಥಾನ ಪಡೆದಿದ್ದಾರೆ. ನಂತರದ ಸ್ಥಾನಗಳನ್ನು ಜತಿನ್‌ ಕಿಶೋರ್‌ ಮತ್ತು ಪ್ರತೀಭಾ ವರ್ಮಾ ಪಡೆದಿದ್ದಾರೆ.

    ನೀವು ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದರೆ ಫಲಿತಾಂಶ ನೋಡಲು ಈ ಲಿಂಕ್‌ಗೆ ಭೇಟಿ ನೀಡಿ

  • ಬೆಂಗಳೂರು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಬೆಂಗಳೂರು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕರ್ನಾಟಕ ಸರಕಾರವು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ೨೦೨೦-೨೧ನೇ ಸಾಲಿಗೆ ಎನ್‌ಎಚ್‌ಎಂ ಯೋಜನೆಯ ಎನ್‌ಪಿಸಿಡಿಸಿಎಸ್/‌ ಎನ್‌ವಿಬಿಡಿಸಿಪಿ ಕಾರ್ಯಕ್ರಮಗಳ ಅಡಿಯಲ್ಲಿ ಅನುಮೋದನೆಯಾಗಿರುವ ವೈದ್ಯಕೀಯ ಮ್ತತ್ತು ಅರೆವೈದ್ಯಕೀಯ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಿದೆ. ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.

    ಎಲ್ಲಿ?

    ಕರ್ನಾಟಕ ಸರಕಾರ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಅಸಾಂಕ್ರಮಿಕ ರೋಗಗಳ ನಿಯಂತ್ರಣಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ, ಹಳೇ ಟಿಬಿ ಸ್ಯಾನಿಟೋರಿಯಂ ಆಸ್ಪತ್ರೆ ಆವರಣ, ಹಳೆ ಮದ್ರಾಸ್‌ ರಸ್ತೆ, ಇಂದಿರಾನಗರ, ಬೆಂಗಳೂರು ೩೮.

    ಒಟ್ಟು ಹುದ್ದೆಗಳ ಸಂಖ್ಯೆ: ೫

    ಹುದ್ದೆಗಳ ವಿವರ

    ವೈದ್ಯಾಧಿಕಾರಿಗಳು

    ೩ ಹುದ್ದೆಗಳು

    ವಿದ್ಯಾರ್ಹತೆ: ಎಂಬಿಬಿಎಸ್‌ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.

    ಮಾಸಿಕ ವೇತನ: ೪೪,೦೦೦ ರೂಪಾಯಿ.

    ವಯೋಮಿತಿ: ೪೦ ವರ್ಷ

    ಆಪ್ತ ಸಮಲೋಚಕರು

    ಹುದ್ದೆಗಳ ಸಂಖ್ಯೆ: ೦೧

    ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಪದವಿಯಲ್ಲಿ ಸಾಮಾಜಿಕ ವಿಜ್ಞಾನ ವಿಷಯವನ್ನು ಓದಿರಬೇಕು ಅಥವಾ ಕೌನ್ಸೆಲಿಂಗ್‌ ಹೆಲ್ತ್‌ ಎಜುಕೇಷನ್‌ / ಮಾಸ್‌ ಕಮ್ಯುನಿಕೇಷನ್‌ ವಿಷಯಗಳ ಬಗ್ಗೆ ಪದವಿ/ ಡಿಪ್ಲೊಮಾ ಮಾಡಿರಬೇಕು. ಆರೋಗ್ಯ ಕ್ಷೇತ್ರದಲ್ಲಿ ಸಮಲೋಚಕರಾಗಿ ೨ ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿರಬೇಕು.

    ಮಾಸಿಕ ವೇತನ: ೧೪ ಸಾವಿರ ರೂ.

    ವಯೋಮಿತಿ: ೪೦ ವರ್ಷ

    ಕನ್ಸಲ್ಟೆಂಟ್‌ ಎಂಟೊಮೊಲಜಿಸ್ಟ್‌ (ವಲಯ ಹಂತ)

    ಹುದ್ದೆಗಳ ಸಂಖ್ಯೆ:

    ಮಾಸಿಕ ವೇತನ: ೨೫ ಸಾವಿರ ರೂಪಾಯಿ

    ವಿದ್ಯಾರ್ಹತೆ: ಝುವಾಲಜಿ/ ಜೀವವಿಜ್ಞಾನದಲ್ಲಿ ಪದವಿ ಪಡೆದಿರಬೇಕು. ಲೈಫ್‌ ಸೈನ್ಸ್‌ನಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಕಡ್ಡಾಯವಾಗಿ ಒಂದು ವಿಷಯವಾಗಿ ಝುವಾಲಜಿ ಓದಿರಬೇಕು. ಎಂಟೊಮೊಲಜಿಸ್ಟ್‌ ಕ್ಷೇತ್ರದಲ್ಲಿ ಪದವಿ ಹಂತದಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದ ಅನುಭವ ಇರಬೇಕು.

    ಸಂದರ್ಶನ ಮಾಹಿತಿ

    ಆಸಕ್ತ ಅಭ್ಯರ್ಥಿಗಳು ಜೂನ್‌ ೧೬, ೨೦೨೦ರ ಬೆಳಗ್ಗೆ ೧೧ ಗಂಟೆಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು. ಸಂದರ್ಶನಕ್ಕೆ ಬರುವಾಗ ಮೂಲ ದಾಖಲೆಯೊಂದಿಗೆ ೧ ಸೆಟ್‌ ಜೆರಾಕ್ಸ್‌ ಪ್ರತಿಗಳನ್ನು ತರಬೇಕು.

    ಸಂದರ್ಶನ ಸ್ಥಳ: ಜಿಲ್ಲಾ ಎನ್‌ಸಿಡಿ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣ, ಹಳೆ ಟಿಬಿ ಆಸ್ಪತ್ರೆ, ಇಂದಿರಾನಗರ, ಬೆಂಗಳೂರು- ೩೮.

  • ಕೆಪಿಎಸ್‌ಸಿ ಎಫ್ ಡಿಎ/ಎಸ್‌ಡಿಎ ಅಂತಿಮ ಆಯ್ಕೆ ಪಟ್ಟಿ ಪ್ರಕಟ- ಇಲ್ಲಿದೆ ಹೆಚ್ಚಿನ ಮಾಹಿತಿ

    ಕೆಪಿಎಸ್‌ಸಿ ಎಫ್ ಡಿಎ/ಎಸ್‌ಡಿಎ ಅಂತಿಮ ಆಯ್ಕೆ ಪಟ್ಟಿ ಪ್ರಕಟ- ಇಲ್ಲಿದೆ ಹೆಚ್ಚಿನ ಮಾಹಿತಿ

    ಕರ್ನಾಟಕ ಲೋಕ ಸೇವಾ ಆಯೋಗವು ೨೦೧೭ನೇ ಸಾಲಿನ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಪ್ರಥಮ ದರ್ಜೆ ಸಹಾಯಕರ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿಯ ಅಧಿಸೂಚನೆಗಳನ್ನು ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
    ಒಟ್ಟು ೯೬೦ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ಮತ್ತು ೮೫೧ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಈ ನೇಮಕ ನಡೆಯಲಿದೆ. ಕೊರೊನಾ ಸಮಯದಲ್ಲಿ ಕೆಪಿಎಸ್‌ಸಿ ಪರೀಕ್ಷೆ ಬರೆದ ಹಲವು ಅಭ್ಯರ್ಥಿಗಳಿಗೆ ಈ ಮೂಲಕ ಶುಭ ಶುದ್ದಿಯನ್ನು ಆಯೋಗ ನೀಡಿದೆ.


    ಕೆಪಿಎಸ್‌ಸಿ ವೆಬ್ಸೈಟ್‌ ಲಿಂಕ್‌

    ಅಂತಿಮ ಆಯ್ಕೆ ಪಟ್ಟಿಯ ಲಿಂಕ್‌

     851 (766+85 HK) POSTS OF SECOND DIVISION ASSISTANTS – 2017
     960(810+150 HK) POSTS OF FIRST DIVISION ASSISTANTS – 2017


    ಕೆಪಿಎಸ್‌ಸಿ ಹುದ್ದೆಗಳ ವಿವರ

  • PDO Old Question Papers in Kannada- Sarakarijobs Study Materials

    PDO Old Question Papers in Kannada- Sarakarijobs Study Materials

    Are you preparing to Karnataka Pachayat raj PDO Exam. Here is Old Question Paper. Study Mateiral in Kananda. You can view pdf in sarakarijobs.com.

    Karnataka Education Authority announces the vacancies for Panchayat Development Officer every year. Prepare every day for your dream job.

    Job seekers who belong to Karnataka can apply for the PDO vacancies online. However, the board is going to conduct the written exam for the applicants as part of a selection process.

    PDF: PDO Exam Subject – 2017

    Rural Development and Panchayath Raj – Karnataka Grama Swaraj and
    Panchayath Raj Act 1993 and Rules with Amendments

    Subject: General English- 2009

    Subject: General Knowledge, General Kannada,
    General English- 2017

    pdo 2011

    (Downloaded from inyatrust)