ಕರ್ನಾಟಕ ಲೋಕ ಸೇವಾ ಆಯೋಗವು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸಹಾಯಕರು/ ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ಹುದ್ದೆಗಳ ನೇಮಕಕ್ಕೆ ನಡೆಸುವ ಲಿಖಿತ ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನು ಪ್ರಕಟಿಸಿದೆ.
ದಿನಾಂಕ 31 ಜನವರಿ 2020 ರಂದು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗವು ಅಧಿ ಸೂಚನೆ ಹೊರಡಿಸಿತ್ತು. ಲಿಖಿತ ಪರೀಕ್ಷೆ ಯು ಜನವರಿ 24, 2021 ರಂದು ನಿಗದಿಪಡಿಸಿ ಕಾರಣಾಂತರಗಳಿಂದ ಮುಂದೂಡಲಾಗಿತ್ತು.
ಆಯೋಗವು ಈ ಸ್ಪರ್ಧಾತ್ಮಕ ಪರೀಕ್ಷೆ ಯನ್ನು ದಿನಾಂಕ 28 ಫೆಬ್ರವರಿ 2021 (ಭಾನುವಾರ) ರಂದು ನಡೆಸಲಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜೂನಿಯರ್ ಇಂಜಿನಿಯರ್ ( ಸಿವಿಲ್/ಎಲೆಕ್ಟ್ರಿಕಲ್) ಹುದ್ದೆಯ ನೇಮಕಾತಿ ಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ಹಾಗೂ ಗರಿಷ್ಠ 30 ವರ್ಷ ವಯಸ್ಸಾಗಿರಬೇಕು.( ಅಭ್ಯರ್ಥಿಗಳು 02/02/1991 ನಂತರ ಮತ್ತು 01/02/2001 ರ ಒಳಗೆ ಜನಿಸಿರಬೇಕು)
ಆರ್ ಬಿ ಐ ಎಕ್ಸಾಮ್ 2021 ಮಾರ್ಚ್ 8 ರಂದು ನಡೆಯಲಿದೆ.
ವಿದ್ಯಾಭ್ಯಾಸ
ಜೂನಿಯರ್ ಇಂಜಿನಿಯರ್ ಅಭ್ಯರ್ಥಿಗಳಿಗೆ (civil)
ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಮೂರು ವರ್ಷಗಳ ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಶೇ.65% ಅಂಕದಲ್ಲಿ ಪಾಸಾಗಿರಬೇಕು. (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪಿಡ್ಬ್ಲೂಡಿ 55%)
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್): ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ನ್ನು 65% ನಲ್ಲಿ ಪಾಸಾಗಿರಬೇಕು. (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪಿಡ್ಬ್ಲೂಡಿ 55%)
ಅರ್ಜಿ ಶುಲ್ಕ
ಒಬಿಸಿ / ಜನರಲ್ / ಇಡಬ್ಲ್ಯೂಎಸ್ ಅಭ್ಯರ್ಥಿಗಳು: ರೂ. 450 / – (ಪರೀಕ್ಷಾ ಶುಲ್ಕ + ಮಾಹಿತಿ ಶುಲ್ಕಗಳು) ನ್ನು ಪಾವತಿಸಬೇಕು.
ಸಿಬ್ಬಂದಿ ಅಭ್ಯರ್ಥಿಗಳಿಗೆ: ಇಲ್ಲ ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಈ ಮುಖಾಂತರ ಪಾವತಿಸ ಬಹುದು.ಡೆಬಿಟ್ ಕಾರ್ಡ್‌ಗಳು (ರುಪೇ / ವೀಸಾ / ಮಾಸ್ಟರ್ ಕಾರ್ಡ್ / ಮೆಸ್ಟ್ರೋ), ಕ್ರೆಡಿಟ್ ಕಾರ್ಡ್‌ಗಳು, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್‌ಗಳು / ಮೊಬೈಲ್ ವ್ಯಾಲೆಟ್‌ಗಳು.
ಆಸಕ್ತ ಅಭ್ಯರ್ಥಿಗಳು ಆರ್ ಬಿ ಐ ಇಂಜಿನಿಯರ್ 2021 ಹುದ್ದೆ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ.
ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಯ ಹೆಸರು
ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆ
ಹುದ್ದೆಯ ಸಂಖ್ಯೆ
19 ಅಂಗನವಾಡಿ ಕಾರ್ಯಕರ್ತೆ 110 ಅಂಗನವಾಡಿ ಸಹಾಯಕಿ
ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ 27-01-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26-02-2021
ಅರ್ಜಿ ಸಲ್ಲಿಸುವುದು ಹೇಗೆ
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳನ್ನು ಆನ್ ಲೈನ್ ನಲ್ಲಿ ಸಲ್ಲಿಸಬೇಕಾಗುತ್ತದೆ.
ನೇಮಕಾತಿ ಮಾರ್ಗಸೂಚಿ/ ನಿಬಂಧನೆಗಳನ್ನು ಓದಿಕೊಂಡು ಅಗತ್ಯ ದಾಖಲೆಗಳೊಂದಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಎಲ್ಲಾ ದಾಖಲಾತಿಗಳನ್ನು ಆನ್ ಲೈನ್ ಮೂಲಕ . ಅಂಚೆ ಅಥವಾ ಕೊರಿಯರ್ ಮೂಲಕ ಸಲ್ಲಿಸುವ ದಾಖಲಾತಿಗಳನ್ನು ಪರಿಗಣಿಸಲಾಗುವುದಿಲ್ಲ.
ಇತರೆ ಅರ್ಹತೆಗಳು
ವಯೋಮಿತಿ
ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸಲು 18- 35 ವರ್ಷ ವಯೋಮಿತಿಯೊಳಗಿರಬೇಕು.
ವಿದ್ಯಾರ್ಹತೆ
ಅಂಗನವಾಡಿ ಕಾರ್ಯಕರ್ತೆ: ಎಸ್ ಎಸ್ ಎಲ್ ಸಿ ತೇರ್ಗಡೆ. ಹೆಚ್ಚಿನ ವಿದ್ಯಾರ್ಹತೆ ಯನ್ನು ಪರಿಗಣಿಸುವುದಿಲ್ಲ.
ಅಂಗನವಾಡಿ ಸಹಾಯಕಿ: ಕನಿಷ್ಠ 4 ನೇ ತರಗತಿ.ಗರಿಷ್ಠ 9 ನೇ ತರಗತಿ. ಇದರಲ್ಲಿ ಹೆಚ್ಚಿನ ವಿದ್ಯಾರ್ಹತೆಯನ್ನು ಪರಿಗಣಿಸುವುದು. 9ನೇ ತರಗತಿಗಿಂತ ಹೆಚ್ಚಿನ ವಿದ್ಯಾಭ್ಯಾಸವನ್ನು ಪರಿಗಣಿಸುವುದಿಲ್ಲ
2020-21ಸಾಲಿನ ಆರ್ಯುವೇದ, ಹೋಮಿಯೋಪತಿ, ಯುನಾನಿ ಕೋರ್ಸುಗಳ ಪ್ರವೇಶಾತಿಗೆ UGNEET -2020 ರಲ್ಲಿ ಅರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಪ್ರಾಧಿಕಾರವು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈಗಾಗಲೇ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ ದಾಖಲಾತಿ ಪರಿಶೀಲನೆ ಮಾಡಿಕೊಂಡಿರುವವರು ಮತ್ತೊಮ್ಮೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸದೆ ಇರುವವರು ಅಥವಾ ದಾಖಲಾತಿ ಪರಿಶೀಲನೆಯನ್ನು ಮಾಡಿಕೊಳ್ಳದೇ ಇರುವ ಅರ್ಹ ಕರ್ನಾಟಕ ಅಭ್ಯರ್ಥಿಗಳು ಆಯುಷ್ ಕೋರ್ಸುಗಳ ಪ್ರವೇಶಾತಿಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸು ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು.
2020-21ನೇ ಸಾಲಿಗೆ ಆಯುರ್ವೇದ, ಯುನಾನಿ, ಹೋಮಿಯೋಪತಿ ಸೀಟುಗಳಿಗೆ ಸರ್ಕಾರವು ನೀಡಿದ ಸೀಟ್ ಮ್ಯಾಟ್ರಿಕ್ಸ್ ಅನ್ವಯ ಮತ್ತು ಆದೇಶದಂತೆ ಸದರಿ ಸೀಟುಗಳನ್ನು ಈ ಕೆಳಗಿನ ವೇಳಾಪಟ್ಟಿಯಂತೆ ಯುಜಿನೀಟ್-2020 ರ ಅರ್ಹ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಲಾಗುವುದು. ಕಾಲೇಜುವಾರು, ಪ್ರವರ್ಗ ವಾರಯ ಮತ್ತು ಕೋರ್ಸುವಾರು ಲಭ್ಯವಿರುವ ಸೀಟುಗಳನ್ನು ಪ್ರಾಧಿಕಾರದ ವೆಬ್ ಸೈಟಿನಲ್ಲಿ ಪ್ರಕಟಿಸಲಾಗುವುದು. ಯುಜಿನೀಟ್-2020 ರ ಅರ್ಹ ಅಭ್ಯರ್ಥಿಗಳು ಕರ್ನಾಟಕದ ಎರಡನೇ ಪಿಯುಸಿ/ 12 ನೇ ತರಗತಿ / ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲೀಷನ್ನು ಒಂದು ಭಾಷಾ ವಿಷಯವನ್ನಾಗಿ ಲಭ್ಯಸಿಸಿರಬೇಕು. ಹಾಗೂ ಭೌತಶಾಸ್ತ್ರ , ರಸಾಯನಶಾಸ್ತ್ರ, ಜೀವಶಾಸ್ತ್ರ, ಐಚ್ಛಿಕ ವಿಷಯಗಳಲ್ಲಿ ಒಟ್ಟಾರೆ ಕನಿಷ್ಠ ಶೇಕಡ 50 ರಷ್ಟು ಅಂಕಗಳನ್ನು ಪಡೆದು ತೇರ್ಗಡೆ ಹೊಂದಿರಬೇಕು. (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಂದ ಪ್ರವರ್ಗ-1, 2ಎ, 2ಬಿ, 3ಎ, ಮತ್ತು3ಬಿ ಗಳಿಗೆ ಸೇರಿರುವ ಅಭ್ಯರ್ಥಿಗಳು ಶೇ. 40) ಇಚ್ಚೆ ಇರುವ ಅಭ್ಯರ್ಥಿಗಳು ನೊಂದಣಿ ಮಾಡುವ ಮೂಲಕ ಈ ಸುತ್ತಿನಲ್ಲಿ ಭಾಗವಹಿಸಬಹುದಾಗಿದೆ. ( ನೊಂದಣಿ ವಿಧಾನವನ್ನು ಕೆಳಗೆ ವಿವರಿಸಲಾಗಿದೆ)
ಕೇಂದ್ರ ಸರಕಾರವು ನೀಟ್ 2020ರ ಆಯುಷ್ ಕೋರ್ಸುಗಳಿಗೆ ನಿಗದಿಪಡಿಸಲಾದ ನೀಟ್ ಪರ್ಸಂಟೈಲ್ ಅನ್ನು ಸಡಿಲಗೊಳಿಸಿರುವ ಜನನ ಕಾರಣದಿಂದ ಆಯುಷ್ ಕೋರ್ಸುಗಳಿಗೆ ಅರ್ಹತೆಯನ್ನು ಪಡೆಯುವ ಅಭ್ಯರ್ಥಿಗಳು ಇಲ್ಲಿಯವರೆಗೆ ಪ್ರಾಧಿಕಾರದಲ್ಲಿಅರ್ಜಿಯನ್ನು ಸಲ್ಲಿಸದೇ ಇರುವ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗೂ ಶುಲ್ಕ ಪಾವತಿಸಿ. ಎಲ್ಲಾ ದಾಖಲೆಗಳೊಂದಿಗೆ ದಾಖಲಾತಿ ಪರಿಶೀಲನೆಗೆ ಹಾಜರಾಗಬಹುದಾಗಿದೆ. ( ನೀಟ್ ಪರ್ಸಂಟೈಲ್ ಅನ್ನು ಸಡಿಲಗೊಳಿಸಿರುವ ವಿವರಗಳನ್ನು ಪ್ರಾಧಿಕಾರದ ವೆಬ್ ಸೈಟಿ ನಲ್ಲಿ ಪ್ರಕಟಿಸಲಾಗಿದೆ)
ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಪತ್ರ ಸಂಖ್ಯೆ L-11011/2/2020-E-P(1) part-2 ದಿನಾಂಕ 10-12-2020 ರ ಅನ್ವಯ ಖಾಸಗಿ ಆಯುರ್ವೇದ, ಯುನಾನಿ ಮತ್ತು ಹೋಮಿಯೋಪತಿ ಕಾಲೇಜುಗಳಲ್ಲಿ15% ಅಖಿಲ ಭಾರತ ಕೋಟದ ಸೀಟುಗಳನ್ನು ಸಹ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಮೆರಿಟ್ ಆಧಾರದ ಮೇಲೆ ಹಂಚಿಕೆ ಮಾಡಲಾಗುವುದು. ಸದರಿ ಸೀಟುಗಳು ಮುಕ್ತ ಸೀಟುಗಳಾಗಿರುತ್ತದೆ. ಅರ್ಹ ಯುಜಿನೆಟ್ -2020 ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಸೂಚನೆ
ವೈದ್ಯಕೀಯ /ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದವರು ಈ ಸುತ್ತಿನಲ್ಲಿ ಭಾಗವಹಿಸಲು ಅರ್ಹರಿರುವುದಿಲ್ಲ.
ಸಿಇಟಿ -2006 ನಿಯಮಗಳ ಅನ್ವಯ ಇತರೆ ವೃತ್ತಿಪರ ಕೋರ್ಸುಗಳಿಗೆ ಕಾಲೇಜುಗಳಲ್ಲಿ ಪ್ರವೇಶ ಪಡೆದ ಅಭ್ಯರ್ಥಿಗಳಿಗೆ, ಆಯುರ್ವೇದ, ಯುನಾನಿ, ಹೋಮಿಯೋಪತಿ ಸೀಟುಗಳ ಪ್ರವೇಶಾತಿಯ ಅರ್ಹತೆಯ Karnataka Selection of Candidates for admission to government Seats in professional educational institutions ( Amendment) Rules, 2020ರ ನಿಯಮಗಳಿಗೆ ಒಳಪಟ್ಟಿರುತ್ತದೆ.
ಕ್ರಮಗಳು
ನೀಟ್ ರೋಲ್ ನಂಬರನ್ನು ನಮೂದಿಸಿ, ಇಂಜಿನಿಯರಿಂಗ್, ಕೃಷಿ, ವಿಜ್ಞಾನ ಇತರೆ ಕೋರ್ಸಿಗೆ/ಅಥವಾ ವೈದ್ಯಕೀಯ/ದಂತವೈದ್ಯಕೀಯ ಕೋರ್ಸಿಗೆ ದಾಖಲಾತಿ ಪರಿಶೀಲನೆ ಮಾಡಿಕೊಂಡಿರುವವರು ಆಯುಷ್ ಕೋರ್ಸುಗಳಿಗೆ ಮತ್ತೊಮ್ಮೆ ದಾಖಲಾತಿ ಪರಿಶೀಲನೆಗೆ ಹಾಜರಾಗುವ ಅಗತ್ಯವಿರುವುದಿಲ್ಲ.
ನೀಟ್ ರೋಲ್ ನಂಬರ್ ನಮೂದಾಗಿರುವ verification slip ಅನ್ನು ಡೌನ್‌ಲೋಡ್ ಮಾಡಿಕೊಂಡಿರುವವರೂ ಸಹ ಮತ್ತೊಮ್ಮೆ ಡೌನ್‌ಲೋಡ್ ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ. Verification slip ಅನ್ನು ಡೌನ್‌ಲೋಡ್ ಮಾಡಿಕೊಳ್ಳದಿರುವ ಅಭ್ಯರ್ಥಿಗಳು ಮಾತ್ರ ಆಯುಷ್ ಕೋರ್ಸುಗಳಿಗೆ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಹೊಸದಾಗಿ ಅರ್ಜಿಯನ್ನು ನೊಂದಣಿ ಮಾಡುತ್ತಿರುವವರು ನೀಟ್ ಸ್ಕೋರ್ ಕಾರ್ಡ್ ಹಾಗೂ ಇತರೆ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಆಯುಷ್ ಕೋರ್ಸ್‌ಗಳ ಪ್ರವೇಶಾತಿಗೆ ಪರಿಶೀಲನೆಗೆ ಹಾಜರಾಗಬೇಕು.
ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ ನೀಟ್ ರೋಲ್ ನಂಬರ್ ಅನ್ನು ದಾಖಲಿಸದೇ ಇರುವವರು, ನೀಟ್ ರೋಲ್ ನಂಬರನ್ನು ದಾಖಲಿಸಿ, ನೀಟ್ ಸ್ಕೋರ್ ಕಾರ್ಡ್ ಹಾಗೂ ಇತರೆ ಎಲ್ಲಾ ಮೂಲ ದಾಖಲಾತಿಯೊಂದಿಗೆ ಆಯುಷ್ ಕೋರ್ಸ್‌ಗಳ ಪ್ರವೇಶಾತಿಗೆ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು.
ನೀಟ್ ರೋಲ್ ನಂಬರನ್ನು ದಾಖಲಿಸಿ ಪರಿಶೀಲನೆಯನ್ನು ಮಾಡಿಕೊಳ್ಳದೇ ಇರುವ ಅರ್ಹ ಕರ್ನಾಟಕ ಅಭ್ಯರ್ಥಿಗಳು ನೀಟ್ ಸ್ಕೋರ್ ಕಾರ್ಡ್ ಹಾಗೂ ಇತರೆ ಎಲ್ಲಾ ಮೂಲ ದಾಖಲಾತಿಯೊಂದಿಗೆ ಆಯುಷ್ ಕೋರ್ಸುಗಳ ಪ್ರವೇಶಾತಿಗೆ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು.
ನೊಂದಣಿ, ದಾಖಲಾತಿ ಪರಿಶೀಲನೆ, ಸೀಟು ಹಂಚಿಕೆ ಇನ್ನಿತರ ವೇಳಾಪಟ್ಟಿಯನ್ನು ಪ್ರತ್ಯೇಕವಾಗಿ ಅಭ್ಯರ್ಥಿಗಳ ಮಾಹಿತಿಗಾಗಿ ನೀಡಲಾಗಿದೆ.