Blog

  • ಸಶಸ್ತ್ರ ಮೀಸಲು ಸಬ್ ಇನ್ಸ್ ಪೆಕ್ಟರ್ : ಆಯ್ಕೆಪಟ್ಟಿ ಪ್ರಕಟ

    ಸಶಸ್ತ್ರ ಮೀಸಲು ಸಬ್ ಇನ್ಸ್ ಪೆಕ್ಟರ್ : ಆಯ್ಕೆಪಟ್ಟಿ ಪ್ರಕಟ

    ಕರ್ನಾಟಕ ಪೊಲೀಸ್ ಇಲಾಖೆಯು 45 ಸಶಸ್ತ್ರ ಮೀಸಲು ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

    ಅಭ್ಯರ್ಥಿಗಳು ಕೆಎಸ್ ಪಿ ವೆಬ್‌ಸೈಟ್‌ ಗೆ ಭೇಟಿ ನೀಡಿ ಲಿಸ್ಟ್ ನ್ನು ಚೆಕ್ ಮಾಡಲು ಅವಕಾಶವಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಜನವರಿ 03, 2021 ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು. ದೈಹಿಕ ಸಾಮಾರ್ಥ್ಯ ಪರೀಕ್ಷೆ, ಸಹಿಷ್ಣುತಾ ಪರೀಕ್ಷೆಯನ್ನು ನಡೆಸಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಮೆರಿಟ್ ಹಾಗೂ ಮೀಸಲಾತಿ ಗೆ ಅನುಗುಣವಾಗಿ ಸಿದ್ಧಪಡಿಸಿ ಪ್ರಸ್ತುತ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿದೆ. ತಾತ್ಕಾಲಿಕ ಪಟ್ಟಿಗೆ ಆಯ್ಕೆಯಾದ ಅಭ್ಯರ್ಥಿಗಳು ಕಾನೂನಾತ್ಮಕವಾಗಿ ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ. ಮೂಲ ದಾಖಲೆಗಳ ಪರಿಶೀಲನೆ ಹಾಗೂ ಮೆಡಿಕಲ್ ಟೆಸ್ಟ್ ಗೆ ಅಭ್ಯರ್ಥಿಗಳು ಹಾಜರಾಗಬೇಕು.

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಕರ್ನಾಟಕ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಆರ್ಬಿಐ ಗ್ರೇಡ್ ಬಿ ಪ್ರವೇಶ ಪತ್ರ ಲಭ್ಯ!ಈಗಲೇ ಡೌನ್ಲೋಡ್ ಮಾಡಿ

    ಆರ್ಬಿಐ ಗ್ರೇಡ್ ಬಿ ಪ್ರವೇಶ ಪತ್ರ ಲಭ್ಯ!ಈಗಲೇ ಡೌನ್ಲೋಡ್ ಮಾಡಿ

    ಆರ್ ಬಿಐ ಅಧಿಕಾರಿ ಗ್ರೇಡ್ ಬಿ ಹುದ್ದೆಗಳ ಫೇಸ್ 1 ಆನ್ಲೈನ್ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟಿಸಲಾಗಿದೆ.
    322 ಹುದ್ದೆಗಳನ್ನು ಭರ್ತಿ ಮಾಡಲು ಆರ್ ಬಿಐ ಅರ್ಜಿಗಳನ್ನು ಆಹ್ಬಾನಿಸಲಾಗಿತ್ತು. ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ ಎನ್ನುವುದನ್ನು ಮುಂದೆ ಓದಿ

    ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್‌ https://www.rbi.org.in/ ಗೆ ಭೇಟಿ ನೀಡಿ, ಅಲ್ಲಿ career ನ ಕೆಳಗಿರುವ call Letter ಮೇಲೆ ಕ್ಲಿಕ್ ಮಾಡಿ. ನಂತರ ಫೇಸ್-1 ಪರೀಕ್ಷೆಯ ಪ್ರವೇಶ ಪತ್ರದ ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಮೇಲೆ ರಿಜಿಸ್ಟ್ರೇಶನ್ ನಂಬರ್/ರೋಲ್ ನಂಬರ್ ಮತ್ತು ಜನ್ಮದಿನಾಂಕ/ಪಾಸ್ವರ್ಡ್ ನಮೂದಿಸಿ ನಿಮ್ಮ ಪ್ರವೇಶ ಪತ್ರವು ಸ್ಕ್ರೀನ್‌ ಮೇಲೆ ಬರುತ್ತದೆ. ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ.

  • ಇಸಿಐಎಲ್ ನಲ್ಲಿ ಉದ್ಯೋಗವಕಾಶ : ಆಸಕ್ತರು ಅರ್ಜಿ ಸಲ್ಲಿಸಿ

    ಇಸಿಐಎಲ್ ನಲ್ಲಿ ಉದ್ಯೋಗವಕಾಶ : ಆಸಕ್ತರು ಅರ್ಜಿ ಸಲ್ಲಿಸಿ

    ಇಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್)ನಲ್ಲಿ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 6 ಮತ್ತು 9 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 25-02-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 6 ಮತ್ತು 9 , 2021 ಬೆಳಗ್ಗೆ 9.30ರ ನೇರ ಸಂದರ್ಶನದಲ್ಲಿ ಅಭ್ಯರ್ಥಿಗಳು ಭಾಗಿಯಾಗಬಹುದು.

    ಇಸಿಐಎಲ್ ನಲ್ಲಿ ತಾಂತ್ರಿಕ ಅಧಿಕಾರಿ ಹಾಗೂ ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ತಾಂತ್ರಿಕ ಅಧಿಕಾರಿ ( ಟೆಕ್ನಿಕಲ್ ಆಫೀಸರ್ ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 06-03-2021ರ(9.30a.m ರಿಂದ 12pm) ಸಂದರ್ಭದಲ್ಲಿ ಭಾಗಿಯಾಗಬಹುದು.

    ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 09-03-2021 (9.30a.m ರಿಂದ 12pm) ಸಂದರ್ಶನದಲ್ಲಿ ಭಾಗಿಯಾಗಬಹುದು.

    ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

    ವಿದ್ಯಾರ್ಹತೆ : ಇಂಜಿನಿಯರಿಂಗ್ ನಲ್ಲಿ ಪದವಿ ಮತ್ತು ಡಿಪ್ಲೋಮಾ ಪದವಿ ಹೊಂದಿರೋ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗಿಯಾಗಬಹುದು.

    ವಯೋಮಿತಿ : ತಾಂತ್ರಿಕ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಗರಿಷ್ಠ 30, ಹಾಗೂ ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 25 ವಯೋಮಿತಿ ಹೊಂದಿರಬೇಕು.

    ಅಂಗವಿಕಲ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ವೇತನ : ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.22,202/- ವೇತನವಿರುತ್ತದೆ. ತಾಂತ್ರಿಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.23,000/- ವೇತನವಿರುತ್ತದೆ.

    ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ನೇರಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ, ಅರ್ಜಿ ಡೌನ್‌ಲೋಡ್ ಮಾಡಿ, ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸದಲ್ಲಿ ಮಾರ್ಚ್ 6 ಮತ್ತು ಮಾರ್ಚ್ 9 ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗಿಯಾಗಬೇಕು.

    ತಾಂತ್ರಿಕ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ವಿಳಾಸದಲ್ಲಿ ಸಂದರ್ಶನದಲ್ಲಿ ಭಾಗಿಯಾಗಬಹುದು.

    ECIL Zonal Office, D-15,DDA Local Shopping Complex,A-Block, Ring Road,Naraina(Near Naraina Vihar Metro Station Gate no-1 New Delhi -110028

    ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ವಿಳಾಸದಲ್ಲಿ ಸಂದರ್ಶನದಲ್ಲಿ ಭಾಗಿಯಾಗಬಹುದು.

    ECIL Zonal Office,#1207,Veer Savarkar Marg, Dadar(Prabhadevi)Mumbai- 400028

    ಸಂಸ್ಥೆ ಯ ಅಧಿಕೃತ ವೆಬ್‌ಸೈಟ್‌ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ವಿಐಟಿಎಂ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ವಿಐಟಿಎಂ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಟೆಕ್ನಾಲಜಿಕಲ್ ಮ್ಯೂಸಿಯಂ (ವಿಐಟಿಎಂ) ನಲ್ಲಿ ವಿವಿಧ ಟ್ರೈನಿ ಫಿಟ್ಟರ್ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 19 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 26-02-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-03-2021
    ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ವಯೋಮಿತಿ : ವಿಐಟಿಎಂ ನೇಮಕಾತಿ ನಿಯಮಾನುಸಾರ ಅಭ್ಯರ್ಥಿಗಳು ವಯೋಮಿತಿ ಹೊಂದಿರಬೇಕು.

    ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆ ಅಥವಾ ಬೋರ್ಡ್ ನಿಂದ ಎಸ್ ಎಸ್ ಎಲ್ ಸಿ/ಮೆಟ್ರಿಕ್ಯುಲೇಶನ್ /ಐಟಿಐ ತೇರ್ಗಡೆಹೊಂದಿರಬೇಕು.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ, ಅರ್ಜಿ ಡೌನ್‌ಲೋಡ್ ಮಾಡಿ, ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಕಂಡ ವಿಳಾಸಕ್ಕೆ ದಿನಾಂಕ 18-03-2021 ರೊಳಗಾಗಿ ಸ್ಪೀಡ್ ಪೋಸ್ಟ್ ಅಥವಾ ರಿಜಿಯ ಪೋಸ್ಟ್ ಮೂಲಕ ಸಲ್ಲಿಸಬೇಕು.

    ವಿಳಾಸ:

    Visveswarayya Industrial and Technological Musuem(National council of Science Museum), Kasturba Road, Bangalore-560001

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ವಕೀಲರ ಹುದ್ದೆಗೆ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ

    ವಕೀಲರ ಹುದ್ದೆಗೆ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ

    ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆಯ ಸಹಾಯಕ ಸರಕಾರಿ ಅಭಿಯೋಜಕರು ಕಮ್ ಸಹಾಯಕ ಸರಕಾರಿ ವಕೀಲರ ಹುದ್ದೆಗಳಿಗೆ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಕೆಇಎ ಪ್ರಕಟಿಸಿದೆ.

    ಪ್ರಾಥಮಿಕ ಪರೀಕ್ಷೆಯನ್ನು ನಡೆಸಲು ಈ ಹಿಂದೆ ಎರಡು ಬಾರಿ ದಿನಾಂಕಗಳನ್ನು ನಿಗದಿಪಡಿಸಲಾಗಿತ್ತು. (28-03-2020, 21-06-2020)
    ಕೊರೊನಾ ಕಾರಣದಿಂದ ಪರೀಕ್ಷೆಯ ದಿನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.

    ಇಲಾಖೆಯ ಆದೇಶದಂತೆ ಪ್ರಾಥಮಿಕ ಪರೀಕ್ಷೆ ಯನ್ನು 28-03-2021 ಬೆಂಗಳೂರು, ಕಲಬುರ್ಗಿ,ಮೈಸೂರು ನಲ್ಲಿ ನಡೆಸಲು ನಿರ್ಧರಿಸಲಾಗಿದೆ.

    ಪೇಪರ್-1 ಪರೀಕ್ಷೆ 100 ಅಂಕಗಳಿಗೆ- ಸಮಯ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ.
    ಪೇಪರ್-2 ಪರೀಕ್ಷೆ 100 ಅಂಕಗಳಿಗೆ- ಸಮಯ ಮಧ್ಯಾಹ್ನ 2ಗಂಟೆಯಿಂದ ಮಧ್ಯಾಹ್ನ 5 ಗಂಟೆಯವರೆಗೆ.

  • ಗುವಿಕಂ (GESCOM)ಅಪ್ರೈಂಟಿಸ್ ಟ್ರೈನಿ ಹುದ್ದೆ: ಆಸಕ್ತರು ಅರ್ಜಿ ಸಲ್ಲಿಸಿ

    ಗುವಿಕಂ (GESCOM)ಅಪ್ರೈಂಟಿಸ್ ಟ್ರೈನಿ ಹುದ್ದೆ: ಆಸಕ್ತರು ಅರ್ಜಿ ಸಲ್ಲಿಸಿ

    ಜೆಸ್ಕಾಂ (ಗುಲ್ಬರ್ಗಾ ವಿದ್ಯುಚ್ಛಕ್ತಿ  ಸರಬರಾಜು ಕಂಪನಿ ನಿಯಮಿತ ) ನಲ್ಲಿ ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 18 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಅರ್ಜಿ ಸಲ್ಲಿಸುವುದು ಹೇಗೆ?: ಆಫ್ ಲೈನ್
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 26-02-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-03-2021
    ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

    ಹುದ್ದೆ ಸಂಖ್ಯೆ : 205

    ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 7,000/- ವೇತನವಿರುತ್ತದೆ.

    ಹೈದರಾಬಾದ್ ಕರ್ನಾಟಕ ರೀಜನ್ ಅಭ್ಯರ್ಥಿಗಳಿಗೆ ಒಟ್ಟು 164 ಹುದ್ದೆಗಳಿವೆ.

    ನಾನ್ ಹೈದರಾಬಾದ್ ಕರ್ನಾಟಕ ರೀಜನ್ ಅಭ್ಯರ್ಥಿಗಳಿಗೆ 41 ಹುದ್ದೆಗಳಿವೆ.

    ವಯೋಮಿತಿ:  ಗುಲ್ಬರ್ಗಾ ಎಲೆಕ್ಟ್ರಿಕಲ್ ಕಂಪನಿ ಲಿಮಿಟೆಡ್ (ಜೆಸ್ಕಾಂ) ನೇಮಕಾತಿ ನಿಯಮಾನುಸಾರ ವಯೋಮಿತಿ ಹೊಂದಿರಬೇಕು.

    ವಿದ್ಯಾರ್ಹತೆ : ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆ/ ಬೋರ್ಡ್ ನಿಂದ ಐಟಿಐ ತೇರ್ಗಡೆ ಹೊಂದಿರಬೇಕು.

    ಅಭ್ಯರ್ಥಿಗಳು ಜೆಸ್ಕಾಂ ನ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ, ಅರ್ಜಿ ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಕಂಡ ವಿಳಾಸಕ್ಕೆ ದಿನಾಂಕ‌ 18-03-2021 ರೊಳಗೆ ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟರ್ ಪೋಸ್ಟ್ ಮೂಲಕ ಸಲ್ಲಿಸಬೇಕು.

    ಕಚೇರಿ ವಿಳಾಸ:
    Chief Manager,GESCOM, Corporation office, Kalaburagi,Karnataka

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಾಡಿ.