Blog

  • ಎನ್ ಐವಿಇಡಿಐ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಎನ್ ಐವಿಇಡಿಐ ಹುದ್ದೆಗಳಿಗೆ ಅರ್ಜಿ ಆಹ್ವಾನ

    ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೆಟರ್ನರಿ ಎಪಿಡಿಮಯೋಲಜಿ ಆಂಡ್ ಡಿಸೀಸಸ್ ಇನ್ ಫಾರ್ಮಟಿಕ್ಸ್ (NIVEDI) ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 11 ಮಾರ್ಚ್ ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಕ್ವಿಕ್ ಲುಕ್
    ಅರ್ಜಿ ಸಲ್ಲಿಸುವುದು ಹೇಗೆ?: ಒನ್ಲೈನ್
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 26-02-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-03-2021
    ಆನ್ಲೈನ್ ಸಂದರ್ಶನ ದಿನಾಂಕ : 15 -03-2021( 10.30 am)

    ಅರ್ಜಿ ಸಲ್ಲಿಕೆ:
    ಎನ್ ಐವಿಇಡಿಐ ಹುದ್ದೆಗಳಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿ ಸಲ್ಲಿಸುವಂತೆ ಇಲ್ಲ.

    ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೆಟರ್ನರಿ ಎಪಿಡಿಮಯೋಲಜಿ (NIVEDI) ಎಸ್ ಆರ್ ಎಫ್, ಜೆ ಆರ್ ಎಫ್ , ಯಂಗ್ ಪ್ರೊಫೆಷನಲ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಒಟ್ಟು 7 ಹುದ್ದೆಗಳಿವೆ.

    ವಿದ್ಯಾರ್ಹತೆ: ಸೀನಿಯರ್ ರಿಸರ್ಚ್ ಫೆಲೋ-2 – ಬ್ಯಾಚುಲರ್ ಡಿಗ್ರಿ, ಪೋಸ್ಟ್ ಗ್ರಾಜ್ಯುಯೇಟ್,ಎಂಟೆಕ್, ಎಂಸಿಎ,ಎನ್ ಇಟಿ, ಜಿಎಟಿಇ ವಿದ್ಯಾರ್ಹತೆ ಹೊಂದಿರಬೇಕು.

    ಯಂಗ್ ಪ್ರೊಫೆಷನಲ್ -3- ಗ್ರಾಜ್ಯುಯೇಟ್ ಮಾಸ್ಟರ್ಸ್ ಡಿಗ್ರಿ, ಪೋಸ್ಟ್ ಗ್ರಾಜ್ಯುಯೇಟ್ ವಿದ್ಯಾರ್ಹತೆ ಪಡೆದಿರಬೇಕು‌.

    ಜ್ಯೂನಿಯರ್ ರಿಸರ್ಚ್ ಫೆಲೋ(ಜೆಆರ್ ಎಫ್)- 1- ,ಮಾಸ್ಟರ್ಸ್ ಡಿಗ್ರಿ, ಎನ್ ಇಟಿ, ಜಿಎಟಿಇ ವಿದ್ಯಾರ್ಹತೆ ಹೊಂದಿರಬೇಕು.

    ಯಂಗ್ ಪ್ರೊಫೆಷನಲ್ -1 – ಬಿಕಾಂ,ಬಿಬಿಎ,ಬಿಬಿಎಸ್ ವಿದ್ಯಾರ್ಹತೆ ಪಡೆದಿರಬೇಕು.

    ವಯೋಮಿತಿ:

    ಸೀನಿಯರ್ ರಿಸರ್ಚ್ ಫೆಲೋ-2 ಹಾಗೂ ಜ್ಯೂನಿಯರ್ ರಿಸರ್ಚ್ ಫೆಲೋ -1 ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 35 ವರ್ಷ( ಪುರುಷ ಅಭ್ಯರ್ಥಿ) 40ವರ್ಷ ( ಮಹಿಳಾ ಅಭ್ಯರ್ಥಿ)

    ಯಂಗ್ ಪ್ರೊಫೆಷನಲ್ -4 ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ರಿಂದ ಗರಿಷ್ಠ 45 ವಯೋಮಿತಿ ಹೊಂದಿರಬೇಕು.

    ವೇತನ: ಸೀನಿಯರ್ ರಿಸರ್ಚ್ ಫೆಲೋ ಹಾಗೂ ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.31,000/- ರಿಂದ ರೂ.35,000/- ವೇತನ ನಿಗದಿಪಡಿಸಲಾಗಿದೆ.

    ಯಂಗ್ ಪ್ರೊಫೆಷನಲ್ 11, ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.35,000/- ಹಾಗೂ ಯಂಗ್ ಪ್ರೊಫೆಷನಲ್ (1)ಹುದ್ದೆಗೆ ರೂ.25,000/- ವೇತನ ನಿಗದಿಪಡಿಸಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

    ಆನ್ ಲೈನ್ ಅಪ್ಲಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಮಂಗಳೂರು ವಿವಿಯಲ್ಲಿ ಅತಿಥಿ ಉಪನ್ಯಾಸಕರ ನೇಮಕ,ಅರ್ಜಿ ಸಲ್ಲಿಸಲು ನಾಳೆ ಕೊನೆ ದಿನ

    ಮಂಗಳೂರು ವಿವಿಯಲ್ಲಿ ಅತಿಥಿ ಉಪನ್ಯಾಸಕರ ನೇಮಕ,ಅರ್ಜಿ ಸಲ್ಲಿಸಲು ನಾಳೆ ಕೊನೆ ದಿನ

    ಮಂಗಳೂರು ಯುನಿವರ್ಸಿಟಿ ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 03-03-2021 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಅರ್ಜಿ ಸಲ್ಲಿಸುವುದು ಹೇಗೆ?: ಆನ್ಲೈನ್ ಮೂಲಕ
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 25-02-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-03-2021
    ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ

    ಅರ್ಜಿ ಸಲ್ಲಿಕೆಯ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿ ಸಲ್ಲಿಸುವಂತೆ ಇಲ್ಲ.

    ಮಂಗಳೂರು ಯುನಿವರ್ಸಿಟಿ ಯಲ್ಲಿ ಗೆಸ್ಟ್ ಫೆಕ್ಯುಲಿಟಿ(ಯುಜಿ ಹಿಂದಿ) (ಸ್ನಾತಕೋತ್ತರ ಹಿಂದಿ ಪದವಿ) ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಯೋಮಿತಿ : ಅಭ್ಯರ್ಥಿಗಳು ಮಂಗಳೂರು ಯುನಿವರ್ಸಿಟಿ ನೇಮಕಾತಿ ನಿಯಮಾನುಸಾರ ವಯೋಮಿತಿ ಹೊಂದಿರಬೇಕು

    ವಿದ್ಯಾರ್ಹತೆ : ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಮಾಸ್ಟರ್ಸ್ ಡಿಗ್ರಿ,ಎಂಫಿಲ್,ಪಿಎಚ್ ಡಿ,ಯುಜಿಸಿ ನೆಟ್,ಎಸ್ ಎಲ್ ಇ ಟಿ ಹೊಂದಿರಬೇಕು.

    ಅಭ್ಯರ್ಥಿಗಳು ಮಂಗಳೂರು ಯುನಿವರ್ಸಿಟಿ ಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಅರ್ಜಿ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ದಿನಾಂಕ 03-03-2021 ಸಂಜೆ 5.30ರೊಳಗೆ ಇ-ಮೈಲ್ ಮೂಲಕ ಸಲ್ಲಿಸಬೇಕು.
    ಇ-ಮೈಲ್ ಐಡಿ- [email protected]

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

  • ಎಂಎಸ್ ಎಂ ಇ ಟೆಕ್ನಾಲಜಿ ಸೆಂಟರ್ ಬೆಂಗಳೂರು ಉದ್ಯೋಗವಕಾಶ

    ಎಂಎಸ್ ಎಂ ಇ ಟೆಕ್ನಾಲಜಿ ಸೆಂಟರ್ ಬೆಂಗಳೂರು ಉದ್ಯೋಗವಕಾಶ

    ಹುದ್ದೆ : ಟ್ರೈನಿ ಇಂಜಿನಿಯರ್ ಸಿಎಡಿ- ಸಿಎಎಂ (ad hoc basis)

    ಹುದ್ದೆ ಸಂಖ್ಯೆ : 02

    ವಯೋಮಿತಿ : ಗರಿಷ್ಠ 30

    ಅನುಭವ : ಒಂದು – ಎರಡು ವರ್ಷಗಳ ಅನುಭವ

    ವಿದ್ಯಾರ್ಹತೆ : ಬಿ.ಇ ಅಥವಾ ಡಿಪ್ಲೋಮಾ( ಮೆಕ್ಯಾನಿಕಲ್/ ಪ್ರೊಡಕ್ಷನ/ಮೆಕಾಟ್ರಾನಿಕ್ಸ್) ವಿದ್ಯಾರ್ಹತೆಯ ಜೊತೆಗೆ ಸಿಎಡಿ/ಸಿಎಎಂ/ಸಿಎಇ ಸಾಫ್ಟ್‌ವೇರ್‌ ಅನುಭವ ಇರಬೇಕು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10-03-2021

    ಅಭ್ಯರ್ಥಿಗಳು ತಮ್ಮ ಎಲ್ಲಾ ದಾಖಲೆಗಳ ಜೊತೆ ಆಧಾರ್ ಕಾರ್ಡ್ ಜೊತೆಗೆ ಈ ಕೆಳಕಂಡ ಇ- ಮೈಲ್ ಗೆ ದಿನಾಂಕ 10-03-2021 ರೊಳಗೆ ಸಲ್ಲಿಸಬೇಕು.

    [email protected]

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ: www.msmetcblr.org

    ವಿಳಾಸ: MSME Technology centre,c/o. MSME DI Rajajinagara, Industrial Estate,West of chord Road,Bengaluru,Karnataka-India-560010

  • ನಮ್ಮ ಮೆಟ್ರೋ ವಿವಿಧ ಹುದ್ದೆ : ಕೂಡಲೇ ಅರ್ಜಿ ಸಲ್ಲಿಸಿ

    ನಮ್ಮ ಮೆಟ್ರೋ ವಿವಿಧ ಹುದ್ದೆ : ಕೂಡಲೇ ಅರ್ಜಿ ಸಲ್ಲಿಸಿ

    ಬಿಎಂಆರ್ ಸಿಎಲ್, ಯೋಜನಾ ಘಟಕದಲ್ಲಿನ ಈ ಕೆಳಕಂಡ ಹುದ್ದೆಗಳ ನೇಮಕಾತಿಗೆ ಅರ್ಹ ಮತ್ತು ಅನುಭವ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ

    ಹುದ್ದೆ :ಮುಖ್ಯ ಪ್ರಧಾನ ವ್ಯವಸ್ಥಾಪಕರು: ( ಯೋಜನೆ ಮತ್ತು ವಿನ್ಯಾಸ)-1

    ಮುಖ್ಯ ಸುರಕ್ಷತೆ, ಆರೋಗ್ಯ ಮತ್ತು ಪರಿಸರ ತಜ್ಞ( ಉಪ ಮುಖ್ಯ ಅಭಿಯಂತರರ ದರ್ಜೆ)-1

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-03-2021 ( 5pm)

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ : www.bmrc.co.in/career Section

  • ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

    ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

    ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಮೆಟ್ರಿಕ್ ಪೂರ್ವ ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನಕ್ಕಾಗಿ ಎಸ್ಎಸ್ ಪಿ ಅಡಿಯಲ್ಲಿ ಅರ್ಜಿ ಸಲ್ಲಿಸುವಾಗ ಎನ್ ಎಸ್ ಪಿ ID ಸಂಖ್ಯೆ ನಮೂದಿಸುವುದು ಕಡ್ಡಾಯವಾಗಿರುತ್ತದೆ‌. ನಿಯಮ ನಿಬಂಧನೆಗಳ ಕುರಿತಾದ ಹೆಚ್ಚಿನ ವಿವರ ಮತ್ತು ಪ್ರಕ್ರಿಯೆಯ ಕುರಿತಾಗಿ ತಿಳಿಯಲು ಅಲ್ಪಸಂಖ್ಯಾತರ ನಿರ್ದೇಶನಾಲಯದ ಕಚೇರಿ ಜಾಲತಾಣ https://dom.Karnataka.gov.in ಅಥವಾ ಎಸ್ ಎಸ್ ಪಿ ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ https:/ssp.Karnataka.gov.in/ ಗೆ ಭೇಟಿ ನೀಡಬಹುದು.

    ತಾಂತ್ರಿಕ ಸಮಸ್ಯೆ ಗಳೇನಾದರೂ ಇದ್ದಲ್ಲಿ [email protected] ಇ ಮೇಲ್ ಮಾಡಿ‌ ಅಥವಾ ದೂರವಾಣಿ ಸಂಖ್ಯೆ 080-35254757 10.00am -5.30pm ವರೆಗೆ ಕಚೇರಿಯ ಕಾಲಾವಧಿ ಸಮಯದಲ್ಲಿ ಸಂಪರ್ಕಿಸಬಹುದು. ಅಥವಾ ಹತ್ತಿರದ ಅಲ್ಪಸಂಖ್ಯಾತರ ಕಚೇರಿಯನ್ನು ಸಂಪರ್ಕಿಸಿ.

  • ಜೆಸ್ಕಾಂ ಅಪ್ರೆಂಟಿಸ್ ತರಬೇತಿ: ಆಸಕ್ತರು ಅರ್ಜಿ ಸಲ್ಲಿಸಿ

    ಜೆಸ್ಕಾಂ ಅಪ್ರೆಂಟಿಸ್ ತರಬೇತಿ: ಆಸಕ್ತರು ಅರ್ಜಿ ಸಲ್ಲಿಸಿ

    ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -18-03-2021

    ಎನ್ ಸಿವಿಟಿ ಪ್ರಮಾಣ ಪತ್ರ ಪಡೆದವರಿಗೆ ಒಂದು ವರ್ಷದ ಎಲೆಕ್ಟ್ರೀಷಿಯನ್ ವೃತ್ತಿಯಲ್ಲಿ ತರಬೇತಿ ನೀಡಲಾಗುತ್ತದೆ.

    ಎಸ್ ಎಸ್ ಎಲ್ ಸಿ ನಂತರ ಐಟಿಐ ತರಬೇತಿ ಹೊಂದಿ, ಕುಶಲಕರ್ಮಿ ಯೋಜನೆಯಡಿ ನಡೆಯುವ ವೃತ್ತಿ ಪರೀಕ್ಷೆಯ ಎಲೆಕ್ಟ್ರೀಶಿಯನ್ ವೃತ್ತಿಯಲ್ಲಿ ತೇರ್ಗಡೆಯಾಗಿ ರಾಜ್ಯ ವೃತ್ತಿ ಪ್ರಮಾಣ ಪತ್ರ, ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ ಪಡೆದಿರುವ ಅಭ್ಯರ್ಥಿಗಳು ಈ ತರಬೇತಿಗೆ ಅರ್ಹರು.

    ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ತರಬೇತಿಗೆ ಅವಧಿಯಲ್ಲಿ ರೂ.7000/- ತಿಂಗಳ ವೇತನ ನೀಡಲಾಗುತ್ತದೆ.

    ಕರ್ನಾಟಕದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ. ಅಂಗವಿಕಲ ಅಭ್ಯರ್ಥಿಗಳ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಅಭ್ಯರ್ಥಿಗೆ ಕನ್ನಡ ಓದಲು ಬರೆಯಲು ಬರಬೇಕು.

    ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 16 ವರ್ಷ( 26-02-2021ಕ್ಕೆ) ಗರಿಷ್ಠ 25 ( 18-03-2021ಕ್ಕೆ) ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ದ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ (18-03-2021ಕ್ಕೆ) ಆಗಿರಬೇಕು. ಹಿಂದುಳಿದ ಹಾಗೂ ಸಾಮಾನ್ಯ ಅಭ್ಯರ್ಥಿಗಳ ವಯಸ್ಸು ಗರಿಷ್ಠ 25 ಮೀರಿರಬಾರದು. ಅಭ್ಯರ್ಥಿಗಳು ಪೂರ್ವ ವಿವರವಿರುವ ಸ್ವಯಂ ಲಿಖಿತ ಅಥವಾ ಬೆರಳಚ್ಚು ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಅರ್ಜಿ ಕಳುಹಿಸುವಾಗ ಲಕೋಟೆ ಮೇಲೆ 2021-22 ನೇ ಸಾಲಿನ‌ ಶಿಶಿಕ್ಷು ಆಯ್ಕೆಗೆ ಅರ್ಜಿ ಎಂದು ಸ್ಪಷ್ಟವಾಗಿ ಬರೆಯಬೇಕು.

    ಅರ್ಜಿಗಳನ್ನು ಸಲ್ಲಿಸುವ ವಿಳಾಸ : ಪ್ರಧಾನ ವ್ಯವಸ್ಥಾಪಕರು(ಆ ಮತ್ತು ಮಾ.ಸಂ.ಅ) ನಿಗಮ ಕಚೇರಿ,ಗು.ವಿ.ಸ.ಕಂ.ನಿ, ಸ್ಟೇಷನ್ ರೋಡ್, ಕಲಬುರಗಿ 585102

    ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

    https://gescom.Karnataka.gov.in/