Blog

  • ಅಂಚೆ ವಿಭಾಗದಲ್ಲಿ ನೇರ ಸಂದರ್ಶನ

    ಅಂಚೆ ವಿಭಾಗದಲ್ಲಿ ನೇರ ಸಂದರ್ಶನ

    ಬಳ್ಳಾರಿ ಅಂಚೆ ವಿಭಾಗದಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ ಆಯ್ಕೆ ಮಾಡಲಾಗುತ್ತದೆ.
    ಮಾರ್ಚ್‌ 25 ರಂದು ಬೆಳಗ್ಗೆ 11 ಕ್ಕೆ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ.

    ಕೋಟೆ ಪ್ರದೇಶದಲ್ಲಿರುವ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದ್ದು ಆಸಕ್ತ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗಿಯಾಗಬಹುದು.

    ವಿದ್ಯಾರ್ಹತೆ: ಅಭ್ಯರ್ಥಿಗಳು ಖಡ್ಡಾಯವಾಗಿ 10 ನೇ ತರಗತಿ ಪಾಸಾಗಿರಬೇಕು.

    ವಯೋಮಿತಿ: ಅಭ್ಯರ್ಥಿಗಳಿಗೆ ಕನಿಷ್ಠ 18. ಹಾಗೂ ಗರಿಷ್ಠ 50 ವಯಸ್ಸಾಗಿರಬೇಕು

    ಯಾರು ಅರ್ಜಿ ಸಲ್ಲಿಸಬಹುದು?
    ನಿರುದ್ಯೋಗಿ ಹಾಗೂ ಸ್ವಯಂ ಉದ್ಯೋಗ ನಿರತ ಯುವಕರು, ವಿಮಾ ಕಂಪನಿಗಳ ಮಾಜಿ ಏಜೆಂಟರು ಹಾಗೂ ಮಾಜಿ ಸಲಹೆಗಾರರು, ಮಾಜಿ ಸೈನಿಕರು, ಅಂಗನವಾಡಿ ಕಾರ್ಯಕರ್ತೆ ಯರು,ಮಹಿಳಾ ಮಂಡಲದ ಕಾರ್ಯಕರ್ತೆ ಯರು,ನಿವೃತ್ತ ಪ್ರಧಾನ ಮತ್ತು ಗ್ರಾಮ ಪಂಚಾಯತಿಯ ಸದಸ್ಯರು,ಅಂಚೆವಿಭಾಗದ ಮುಖ್ಯಸ್ಥರು

    ನುರಿತ ಸಂವಹನ ಕಲೆ ವಿಮಾ ಮಾರಾಟ ಕ್ಷೇತ್ರದಲ್ಲಿ ಅನುಭವ ಹೊಂದಿರುವವರಿಗೆ ಮೊದಲ ಆದ್ಯತೆ. ಆಯ್ಕೆಯಾದ ಅಭ್ಯರ್ಥಿಗಳು 5 ಸಾವಿರ ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ಕಿಸಾನ್ ವಿಕಾಸ್ ಪತ್ರದ ರೂಪದಲ್ಲಿ ಠೇವಣಿ ಇರಬೇಕಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವ್ಯವಹಾರಕ್ಕೆ ತಕ್ಕಂತೆ ಸೂಕ್ತ ಕಮಿಶನ್ ನೀಡಲಾಗುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು 08392-266037/266768 ಸಂಖ್ಯೆ ಗೆ ಕರೆ ಮಾಡಬಹುದು.

  • ಬಿಇಡಿ ಕೋರ್ಸ್ ದಾಖಲಾತಿ ದಿನಾಂಕ ವಿಸ್ತರಣೆ

    ಬಿಇಡಿ ಕೋರ್ಸ್ ದಾಖಲಾತಿ ದಿನಾಂಕ ವಿಸ್ತರಣೆ

    2020-21 ನೇ ಸಾಲಿನ ಬಿ‌ಇಡಿ ಕೋರ್ಸಿನ ದಾಖಲಾತಿಗಾಗಿ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ದಿನಾಂಕ : 04-03-2021ರಂದು ಇಲಾಖಾ ವೆಬ್‌ಸೈಟ್‌ ನಲ್ಲಿ ಪ್ರಕಟಿಸಲಾಗಿದೆ. ಸದರಿ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ನಿಗದಿತ ಶುಲ್ಕ ಪಾವತಿಸಿ ಹಂಚಿಕೆಯಾದ ಕಾಲೇಜಿಗೆ ದಾಖಲಾತಿ ಪಡೆಯಲು ದಿನಾಂಕ ವ10-03-2021 ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಅಭ್ಯರ್ಥಿಗಳ ಹಿತದೃಷ್ಟಿಯಿಂದ ದಾಖಲಾತಿಗೆ ನಿಗದಿಪಡಿಸಿದ್ದ ಅಂತಿಮ ದಿನಾಂಕವನ್ನು 20-03-2021ರವರೆಗೆ ವಿಸ್ತರಿಸಲಾಗಿದೆ.

  • ಪ್ರೊಜೆಕ್ಟ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಆಹ್ವಾನ

    ಪ್ರೊಜೆಕ್ಟ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಆಹ್ವಾನ

    ಭಾರತೀಯ ವಿಜ್ಞಾನ ಸಂಸ್ಥೆ ಯಲ್ಲಿ ಪ್ರೊಜೆಕ್ಟ್ ಅಸೋಸಿಯೇಟ್ -1 ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹೆಚ್ಚಿನ ವಿವರಗಳು ಈ ಕೆಳಗಿನಂತಿವೆ:

    ವಿದ್ಯಾರ್ಹತೆ : ವಿಶ್ವವಿದ್ಯಾನಿಲಯವು ಘೋಷಿಸಿದಂತೆ ಪ್ರಥಮ ದರ್ಜೆಯಲ್ಲಿ ಎಂಸಿಎ/ಬಿಇ/ಬಿಟೆಕ್/(ಸಿಎಸ್/ಐಟಿ) ಅಥವಾ ಸಮಾನಾಂತರ ಶಿಕ್ಷಣ ಹೊಂದಿರಬೇಕು.

    ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದರೂ ಸಾಕು.

    ಅನುಭವ: ಒಂದು ಅಥವಾ ಹೆಚ್ಚಿನ ಕ್ಷೇತ್ರದಲ್ಲಿ ನಿರ್ದಿಷ್ಟ ಡೊಮೇನ್ ಪರಿಣಿತಿಯೊಂದಿಗೆ ಲಿನಕ್ಸ್ ಸಿಸ್ಟಮ್ ಅಡ್ಮಿನಿಸ್ಟ್ರೇಶನ್ ನಲ್ಲಿ 1 ವರ್ಷದ ಅನುಭವ, ಆರ್ ಹೆಚ್ ಸಿಇ ಪ್ರಮಾಣೀಕರಣದೊಂದಿಗೆ ಲಿನಕ್ಸ್ ಅಥವಾ ಹೆಚ್ ಪಿಸಿ ಸಿಸ್ ಅಡ್ಮಿನ್ ಅನುಭವಗಳೊಂದಿಗೆ ಲಿನಕ್ಸ್ (ಕಂಪ್ಯೂಟರ್ ಸಿಸ್ಟಮ್ಸ್ ನ ಹೆಚ್ಚಿನ ಕಾರ್ಯಕ್ಷಮತೆ, ಬೃಹತ್ ಪ್ರಮಾಣದ ವಿತರಿತ ಶೇಖರಣಾ ಸರ್ವರ್ ಗಳು ಅಥವಾ ಸಮಾನಾಂತರ ಫೈಲ್ ವ್ಯವಸ್ಥೆಗಳು)

    ಹುದ್ದೆಗಳ ಸಂಖ್ಯೆ : 7
    ಸಾಮಾನ್ಯ -4,
    ಇಡ್ಬ್ಯುಎಸ್ -1, ಒಬಿಸಿ-1, ಪ‌.ಪಂ& 1, ವಿಕಲಚೇತನ -1

    ವಯೋಮಿತಿ : 30 ವರ್ಷಗಳು.
    ಒಬಿಸಿ, ಪ.ಪಂ ಮತ್ತು ಪಿಹೆಚ್ ಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ ‌

    ವೇತನ : ರೂ.25,000/- + ಹೆಚ್ ಆರ್ ಎ, 1 ನೇ ಮತ್ತು 2ನೇ ವರ್ಷಕ್ಕೆ ರೂ. ‌28,000/-, + ಹೆಚ್ ಆರ್ ಎ 3 ನೇ ಮತ್ತು 4 ನೇ ವರ್ಷಕ್ಕೆ ಮತ್ತು ರೂ.42,000/- + ಹೆಚ್ ಆರ್ ಎ 5 ನೇ ವರ್ಷದಲ್ಲಿ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-04-2021

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
    https://www.serc.iisc.ac.in/opportunities/

  • ನೇರ ಸಂದರ್ಶನ ದಿನಾಂಕ ಮರುನಿಗದಿ

    ನೇರ ಸಂದರ್ಶನ ದಿನಾಂಕ ಮರುನಿಗದಿ

    ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಚಿಕ್ಕಬಳ್ಳಾಪುರ ಇಲ್ಲಿಗೆ ಪ್ರಾಧ್ಯಾಪಕರು/ಸಹ ಪ್ರಾಧ್ಯಾಪಕರು/ಸಹಾಯಕ ಪ್ರಾಧ್ಯಾಪಕರು/ಬೋಧಕರು/ ಹಿರಿಯ ಮತ್ತು ಕಿರಿಯ ರೆಸಿಡೆಂಟ್ಸ್, ಹುದ್ದೆಗಳಿಗೆ ಉದ್ದೇಶಿತ ನೇಮಕಾತಿಗೆ ಸಂಬಂಧಿಸಿದಂತೆ ಕನ್ನಡ ಭಾಷಾ ಪರೀಕ್ಷೆ, ದಾಖಲೆ ಪತ್ರಗಳ ಪರಿಶೀಲನೆ ಮತ್ತು ನೇರ ಸಂದರ್ಶನವನ್ನು ದಿನಾಂಕ 05-03-2021 ರಿಂದ 09-03-2021 ನಡೆಸಲು ನಿಗದಿಪಡಿಸಿದ್ದನ್ನು ಮುಂದೂಡಲಾಗಿದ್ದು, ಕನ್ನಡ ಭಾಷ ಪರೀಕ್ಷೆ, ದಾಖಲೆ ಪತ್ರಗಳ ಪರಿಶೀಲನೆ ಮತ್ತು ಸಂದರ್ಶನವನ್ನು ದಿನಾಂಕ 15-03-2021 ರಿಂದ 19-03-2021 ರವರೆಗೆ ನಡೆಸಲು ಮರು ನಿಗದಿಪಡಿಸಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.karunadu.gov.in/dmekarnataka ಅಥವಾ https://medicaleducation.kar.nic.in ಗೆ ಭೇಟಿ ನೀಡಬಹುದು.

  • ಕರ್ನಾಟಕ  ರೇರಾ ಹುದ್ದೆಗೆ ಅರ್ಜಿ ಆಹ್ವಾನ

    ಕರ್ನಾಟಕ ರೇರಾ ಹುದ್ದೆಗೆ ಅರ್ಜಿ ಆಹ್ವಾನ

    ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಅಧ್ಯಕ್ಷ ರು ಮತ್ತು ಸದಸ್ಯರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ‌. ಆಸಕ್ತರು ಅರ್ಜಿ ಸಲ್ಲಿಸಬಹುದು.

    ಅಭ್ಯರ್ಥಿಗಳು ಓನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :09-04-2021(5pm)

    ಅಭ್ಯರ್ಥಿಗಳು ಓನ್ ಲೈನ್ ಮೂಲಕ ಅಥವಾ ರಿಜಿಸ್ಟರ್ ಪೋಸ್ಟ್ ಅಥವಾ ಮುಖತಃ ಅರ್ಜಿ ಸಲ್ಲಿಸಬಹುದು.

    ಇ-ಮೈಲ್ – [email protected]/[email protected]

    ವಿಳಾಸ : The Member Secretary, Selection Committee and Secretary to government,housing department,Government of Karnataka,Karnataka government Secretariat, Room no.211,2nd Floor, Vikasa Soudha,Bengaluru-560001

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ಎಸ್ ಎಸ್ ಸಿ ಜೆ ಇ ಅಂತಿಮ ಉತ್ತರಗಳು ಪ್ರಕಟ

    ಎಸ್ ಎಸ್ ಸಿ ಜೆ ಇ ಅಂತಿಮ ಉತ್ತರಗಳು ಪ್ರಕಟ

    ಸ್ಟಾಫ್ ಸೆಲೆಕ್ಷನ್ ಕಮಿಶನ್ ಎಸ್ ಎಸ್ ಸಿ ಜೆ ಇ 2019 ನೇ ಸಾಲಿನ‌ ಪರೀಕ್ಷೆಯ ಅಂತಿಮ ಸರಿಯುತ್ತರಗಳನ್ನು ಪ್ರಕಟಿಸಿದೆ. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ಕೀ ಉತ್ತರಗಳು ಮತ್ತು ಪ್ರಶ್ನೆ ಪತ್ರಿಕೆಗಳನ್ನು ssc.nic.in ಗೆ ಭೇಟಿ ನೀಡಿ ಪಡೆಯಬಹುದು.

    ಎಸ್ ಎಸ್ ಸಿ ಜೆಇ 2019, ಪರೀಕ್ಷೆ 1 ಅಂತಿಮ‌ ಕೀ ಉತ್ತರಗಳನ್ನು ಮಾರ್ಚ್ 19,2021 ರ ವರೆಗೆ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

    ಪೇಪರ್ -1 ಪರೀಕ್ಷೆಯು ಸಿವಿಲ್, ಕ್ವಾಂಟಿಟಿ, ಸರ್ವೇಯಿಂಗ್, ಕ್ರಾಂಟ್ರ್ಯಾಕ್ಟ್, ಮೆಕ್ಯಾನಿಕಲ್,ಎಲೆಕ್ಟ್ರಿಕಲ್ ಹುದ್ದೆಗಳಿಗೆ ನಡೆಸಿತ್ತು.

    ಒಟ್ಟು 5661 ಅಭ್ಯರ್ಥಿಗಳು ಎಸ್ ಎಸ್ ಸಿ ಜೆಇ ವಿವರಣಾತ್ಮಕ ಪೇಪರ್ -2 ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಈ ಪರೀಕ್ಷೆಯು ಮಾರ್ಚ್ 21, 2021 ರಂದು ನಡೆಸಲು ತೀರ್ಮಾನಿಸಿದೆ.