Blog

  • ಯಂಗ್ ಪ್ರೊಫೆಷನಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಯಂಗ್ ಪ್ರೊಫೆಷನಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸ್ಪೋರ್ಟ್ಸ್ ಅಥಾರಟಿ ಆಫ್ ಇಂಡಿಯಾ, ಪ್ರಾದೇಶಿಕ ಕೇಂದ್ರ,ಬೆಂಗಳೂರು ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 28 ಮಾರ್ಚ್ ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಕ್ವಿಕ್ ಲುಕ್
    ಅರ್ಜಿ ಸಲ್ಲಿಸುವುದು ಹೇಗೆ?: ಆನ್ಲೈನ್ ಮೂಲಕ
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 13-03-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-03-2021

    ಹುದ್ದೆಗಳ ವಿವರ: ಯಂಗ್ ಪ್ರೊಫೆಷನಲ್(ಪ್ರೊಜೆಕ್ಟ್ ಮತ್ತು ಅಡ್ಮಿನಿಸ್ಟ್ರೇಶನ್)-2
    ಯಂಗ್ ಪ್ರೊಫೆಷನಲ್ ( ಅಥ್ಲೆಟ್ ರಿಲೇಷನ್ ಮ್ಯಾನೇಜರ್)-6
    ಯಂಗ್ ಪ್ರೊಫೆಷನಲ್ (ಲೀಗಲ್)-1

    ಒಟ್ಟು ಹುದ್ದೆ: 9

    ವಯೋಮಿತಿ: ಅಭ್ಯರ್ಥಿಗಳ ವಯೋಮಿತಿ 35 ವರ್ಷ ಮೀರಿರಬಾರದು.

    ವೇತನ: ಹುದ್ದೆಗಳಿಗನುಸಾರವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.40,000/- ರಿಂದ ರೂ. 60,000/- ರವರೆಗೆ ವೇತನ ನಿಗದಿಪಡಿಸಲಾಗಿದೆ.

    ವಿದ್ಯಾರ್ಹತೆ: ಯಂಗ್ ಪ್ರೊಫೆಷನಲ್(ಪ್ರೊಜೆಕ್ಟ್ ಮತ್ತು ಅಡ್ಮಿನಿಸ್ಟ್ರೇಶನ್) ಹಾಗೂ
    ಯಂಗ್ ಪ್ರೊಫೆಷನಲ್ ( ಅಥ್ಲೆಟ್ ರಿಲೇಷನ್ ಮ್ಯಾನೇಜರ್) ಹುದ್ದೆಗೆ ಬಿಟೆಕ್, ಎಂಬಿಎ,ಪಿಜಿಡಿಎಂ ಪದವಿ(ಎರಡು ವರ್ಷ) ಮಾಡಿರಬೇಕು.
    ಯಂಗ್ ಪ್ರೊಫೆಷನಲ್ (ಲೀಗಲ್)- ಕಾನೂನು ಪದವಿ ಪಡೆದಿರಬೇಕು.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಅರ್ಜಿ ಡೌನ್‌ಲೋಡ್ ಮಾಡಿ ಸಾಫ್ಟ್ ಕಾಪಿ ಮಾದರಿಯಲ್ಲಿ ಈ ಕೆಳಗೆ ನೀಡಿರುವ ಇ-ಮೇಲ್ ಗೆ ದಿನಾಂಕ 28-03-2021 ರೊಳಗಾಗಿ ಸಲ್ಲಿಸಬೇಕು.

    ಇ- ಮೇಲ್ ವಿಳಾಸ:

    [email protected]

    ಅಧಿಕೃತ ವೆಬ್‌ಸೈಟ್‌: https://saisouthbengaluru.org/

    https://sportsauthorityofindia.nic.in/

  • ಪಿಯೋನ್ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಪಿಯೋನ್ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    ವಿಜಯಪುರ ಡಿಸ್ಟ್ರಿಕ್ಟ್‌ ಚೈಲ್ಡ್ ಲೇಬರ್ ಪ್ಲಾನಿಂಗ್ ಅಸೋಸಿಯೇಷನ್ ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 12, ಎಪ್ರಿಲ್ ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಕ್ವಿಕ್ ಲುಕ್
    ಅರ್ಜಿ ಸಲ್ಲಿಸುವುದು ಹೇಗೆ?: ಆಫ್ಲೈನ್ ಮೂಲಕ
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 12-03-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-04-2021(5pm)
    ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

    ವಯೋಮಿತಿ: ಅಭ್ಯರ್ಥಿಗಳ ವಯೋಮಿತಿ 40 ವರ್ಷಕ್ಕಿಂತ ಮೇಲ್ಪಟ್ಟಿರಬಾರದು.

    ಹುದ್ದೆ ಸ್ಥಳ : ವಿಜಯಪುರ- ಕರ್ನಾಟಕ

    ಒಟ್ಟು ಹುದ್ದೆ: 3

    ಹುದ್ದೆಗಳ ವಿವರ: ಪಿಯೋನ್, ಕ್ಲರ್ಕ್, ಡೈರೆಕ್ಟರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ : ಪ್ರಾಜೆಕ್ಟ್ ಡೈರೆಕ್ಟರ್-1 – ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾಸ್ಟರ್ಸ್ ಡಿಗ್ರಿ, ಎಂಎಸ್ ಡಬ್ಲ್ಯೂ ಮಾಡಿರಬೇಕು.
    ಕ್ಲರ್ಕ್ ಕಮ್ ಅಕೌಂಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಬಿ.ಕಾಂ ಪಾಸಾಗಿರಬೇಕು.
    ಆಫೀಸ್ ಪಿಯೋನ್ ಹುದ್ದೆಗೆ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ತೇರ್ಗಡೆಯಾಗಿರಬೇಕು.

    ಅಭ್ಯರ್ಥಿಗಳು ಅರ್ಜಿ ಡೌನ್‌ಲೋಡ್ ಮಾಡಿ, ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ದಿನಾಂಕ 12-04-2021(5pm) ರೊಳಗೆ ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಮೂಲಕ ಸಲ್ಲಿಸಬೇಕು.
    ವಿಳಾಸ: District Child Labour Planning Office, Labour Department, Allapura Oni, Sindagi Naka, Vijayapura

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • SSC ಜೆಇ ಅಡ್ಮಿಟ್ ಕಾರ್ಡ್ ಬಿಡುಗಡೆ

    SSC ಜೆಇ ಅಡ್ಮಿಟ್ ಕಾರ್ಡ್ ಬಿಡುಗಡೆ

    ಸಿಬ್ಬಂದಿ ನೇಮಕಾತಿ ಸಂಸ್ಥೆಯು 2019 ನೇ ಸಾಲಿನ ಜ್ಯೂನಿಯರ್ ಇಂಜಿನಿಯರ್(ಎಸ್‌ಎಸ್‌ಸಿ ಜೆಇ) ಹುದ್ದೆಗಳ ಪರೀಕ್ಷೆಗೆ ಸಂಬಂಧಿಸಿದಂತೆ, ಪ್ರಸ್ತುತ ಎಸ್‌ಎಸ್‌ಸಿ ಜೆಇ ಪೇಪರ್ 2 ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ ಮಾಡಿದೆ.
    ಎಸ್‌ಎಸ್‌ಸಿ ಜೆಇ ಪೇಪರ್ 2 ಪರೀಕ್ಷೆಯನ್ನು ಮಾರ್ಚ್ 21,2021 ರಂದು ನಡೆಸಲಾಗುತ್ತದೆ.

    ಕೇರಳ, ನಾರ್ಥ್ ವೆಸ್ಟ್‌, ವೆಸ್ಟರ್ನ್ ಮತ್ತು ಸೆಂಟ್ರಲ್ ರೀಜನ್‌, ಕರ್ನಾಟಕ ಪ್ರವೇಶ ಪತ್ರ ಬಿಡುಗಡೆ ಮಾಡಿದೆ. ಎಸ್‌ಎಸ್‌ಸಿ ಜೆಇ ಪೇಪರ್ ಅಡ್ಮಿಟ್ ಕಾರ್ಡ್ 2019 ಸಂಸ್ಥೆಯ ಅಫೀಶಿಯಲ್ ವೆಬ್‌ಸೈಟ್ ಗೆ ಭೇಟಿ ನೀಡಬಹುದು. ನಾರ್ಥನ್ ರೀಜನ್ ಎಸ್‌ಎಸ್‌ಸಿ ಜೆಇ ಪೇಪರ್ 2 ಅಡ್ಮಿಟ್ ಕಾರ್ಡ್‌ ನ್ನು ಮಾರ್ಡ್ 17 , 2021 ರಂದು ಬಿಡುಗಡೆ ಮಾಡಲಿದೆ.

    ssckkr.kar.nic.i, sscwr.org, ssc-cr.org, sscmpr.org, sscwr.net

  • ಇಂಡಿಯನ್ ಆರ್ಮಿ ಟೆಕ್ನಿಕಲ್ ಎಂಟ್ರಿ ಸ್ಕೀಮ್ ಕೋರ್ಸ್ ಪ್ರಕಟ

    ಇಂಡಿಯನ್ ಆರ್ಮಿ ಟೆಕ್ನಿಕಲ್ ಎಂಟ್ರಿ ಸ್ಕೀಮ್ ಕೋರ್ಸ್ ಪ್ರಕಟ

    ಭಾರತೀಯ ಮಿಲಿಟರಿಯು 2022 ರ ಜನವರಿ ತಿಂಗಳಲ್ಲಿ ಆರಂಭವಾಗಲಿರುವ ಟೆಕ್ನಿಕಲ್ ಎಂಟ್ರಿ ಸ್ಕೀಮ್ (10+2)-46 ನೆ ಬ್ಯಾಚ್ ಕೋರ್ಸ್ ಪ್ರವೇಶಾತಿಗೆ ಸಂಬಂಧಿಸಿದಂತೆ ಶಾರ್ಟ್ ನೋಟಿಪಿಕೇಶನ್ ನ್ನು ಬಿಡುಗಡೆ ಮಾಡಿದೆ.

    ವಿದ್ಯಾರ್ಹತೆ : ಅಭ್ಯರ್ಥಿಗಳು 10+2 ವಿದ್ಯಾರ್ಹತೆ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಶೇ.7೦ ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.( ಭೌತಶಾಸ್ತ್ರ, ರಸಾಯನಶಾಸ್ತ್ರ,ಗಣಿತ) ಇದರ ಜೊತೆಗೆ ಜೆಇಇ ಮೇನ್ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ.

    ಟೆಕ್ನಿಕಲ್ ಎಂಟ್ರಿ ಸ್ಕೀಮ್ ಕೋರ್ಸ್ ಪ್ರವೇಶಕ್ಕೆ ಮಿಲಿಟರಿ ನೇಮಕ ವಿಭಾಗವು ನಿಗದಿಪಡಿಸಿರುವ ಹಲವು ಹಂತದ ಪರೀಕ್ಷೆಗಳನ್ನು ತೇರ್ಗಡೆ ಮಾಡಬೇಕಾಗುತ್ತದೆ. ನಂತರ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

    ಭಾರತೀಯ ಮಿಲಿಟರಿ ಟೆಕ್ನಿಕಲ್ ಎಂಟ್ರಿ ಸ್ಕೀಮ್ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಇತರೆ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ

  • ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಹುದ್ದೆ

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಹುದ್ದೆ

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 10-03-2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26-03-2021( 5pm)

    ಹುದ್ದೆ: ತಾಂತ್ರಿಕ ಸಂಯೋಜಕರು- 03
    ತಾಲೂಕು ಐಇಸಿ ಸಂಯೋಜಕರು-04
    ತಾಂತ್ರಿಕ ಸಹಾಯಕರು(ತೋಟಗಾರಿಕೆ) – 01
    ತಾಂತ್ರಿಕ ಸಹಾಯಕರು(ಕೃಷಿ)-1

    ವಿದ್ಯಾರ್ಹತೆ :ಅಭ್ಯರ್ಥಿಗಳು ಹುದ್ದೆಗಳಿಗನುಸಾರವಾಗಿ ಬಿಇ/ಎಂಟೆಕ್,ಯುಜಿ/ಪಿಜಿ/ಸಮೂಹ ಸಂವಹನ, ಬಿ.ಎಸ್ಸಿ/ಎಂ.ಎಸ್ಸಿ ಇನ್ ಅಗ್ರಿಕಲ್ಚರ್,ಬಿ.ಎಸ್ಸಿ/ಎಂ.ಎಸ್ಸಿ ಇನ್ ಹಾರ್ಟಿಕಲ್ಚರ್ ಹೊಂದಿರಬೇಕು.

    ವಯೋಮಿತಿ : ಅಭ್ಯರ್ಥಿಗಳಿಗೆ ಕನಿಷ್ಠ 21 ಹಾಗೂ ಗರಿಷ್ಠ 40 ವಯೋಮಿತಿಯವರು ಅರ್ಜಿ ಸಲ್ಲಿಸಬಹುದು.

    ವೇತನ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.24,000/- ರಿಂದ ರೂ.29,000/- ರವರೆಗೆ ವೇತನ ವಿರುತ್ತದೆ.

    ಅಭ್ಯರ್ಥಿಗಳು ಅರ್ಜಿಯನ್ನು ಪೋಸ್ಟ್ ಮೂಲಕ ಅಥವಾ ಖುದ್ದಾಗಿ ಈ ವಿಳಾಸಕ್ಕೆ ಸಲ್ಲಿಸಬೇಕು:

    ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಭವನ, ಬೀರಸಂದ್ರ(ಚಪ್ಪರದ ಕಲ್ಲು)ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು-562110

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

    https://bangalorerural.nic.in/

  • ಯುಎಎಸ್ ಧಾರವಾಡ ಹುದ್ದೆಗಳಿಗೆ ನೇಮಕ

    ಯುಎಎಸ್ ಧಾರವಾಡ ಹುದ್ದೆಗಳಿಗೆ ನೇಮಕ

    ಯುಎಎಸ್ ಧಾರವಾಡ ( ಯುನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್) ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಆಸಕ್ತರಿರುವ ಅಭ್ಯರ್ಥಿಗಳು ದಿನಾಂಕ 22-03-2021 ರಂದು (11.00am) ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಯುಎಎಸ್ ಧಾರವಾಡ ನಲ್ಲಿ ಯೋಗ ಟೀಚರ್-01 ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ನೋಟಿಫಿಕೇಶನ್ ರಿಲೀಸ್ ಆದ ದಿನಾಂಕ : 08-03-2021

    ಹುದ್ದೆ ಸ್ಥಳ : ಧಾರವಾಡ – ಕರ್ನಾಟಕ

    ವೇತನ : ಯೋಗ ಟೀಚರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ ರೂ.20,000/- ವೇತನವನ್ನು ನೀಡಲಾಗುತ್ತದೆ.

    ಅರ್ಜಿ ಶುಲ್ಕ : ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ವಯೋಮಿತಿ : ಯುಎಎಸ್ ನೇಮಕಾತಿ ನಿಯಮಾನುಸಾರ ವಯೋಮಿತಿ ಹೊಂದಿರಬೇಕು.

    ವಿದ್ಯಾರ್ಹತೆ : ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆ/ಬೋರ್ಡ್/ಯುನಿವರ್ಸಿಟಿ ಯಿಂದ ಎಂ.ಎಸ್ಸಿ ತೇರ್ಗಡೆ ಹೊಂದಿರಬೇಕು.

    ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ದಿನಾಂಕ 22-03-2021(11.00am) ,ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು.

    ವಿಳಾಸ :
    Office of Dean (Agriculture), Agricultural University, Dharwad – 580005, Karnataka.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ