Blog

  • ಹೆಚ್ ಎಂಟಿ ನಲ್ಲಿ ಹುದ್ದೆ

    ಹೆಚ್ ಎಂಟಿ ನಲ್ಲಿ ಹುದ್ದೆ

    ಹೆಚ್ ಎಂಟಿ ಮೆಷಿನ್ ಟೂಲ್ಸ್ ಲಿಮಿಟೆಡ್ ನಲ್ಲಿ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 23 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-03-2021

    ಹೆಚ್ ಎಂಟಿ ನಲ್ಲಿ ಎಕ್ಸಿಕ್ಯುಟಿವ್ ಟೆಕ್ನಿಕಲ್ ಬಿ ಹುದ್ದೆಗಳ ನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ‌.

    ಒಟ್ಟು ಹುದ್ದೆ- 4

    ವಿದ್ಯಾರ್ಹತೆ: ಅಂಗೀಕೃತ ಬೋರ್ಡ್ /ಸಂಸ್ಥೆ ಯಿಂದ ಬಿ.ಟೆಕ್ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು.

    ವಯೋಮಿತಿ: ಅಭ್ಯರ್ಥಿಗಳು 30 ವಯೋಮಿತಿ ಯನ್ನು ಮೀರಿರಬಾರದು.( ಮಾರ್ಚ್ 1,2021 ರ ಅನ್ವಯ)

    ವೇತನ: ಎಕ್ಸಿಕ್ಯುಟಿವ್ ಟೆಕ್ನಿಕಲ್-ಬಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.16,500/- ವೇತನವನ್ನು ನಿಗದಿಪಡಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: ಅರ್ಜಿದಾರರ ಕಿರುಪಟ್ಟಿಯನ್ನು ಮಾಡಿ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: http://www.hmtmachinetools.com

  • ಯುವಪರಿವರ್ತಕರ ಹುದ್ದೆಗೆ ಅರ್ಜಿ ಆಹ್ವಾನ

    ಯುವಪರಿವರ್ತಕರ ಹುದ್ದೆಗೆ ಅರ್ಜಿ ಆಹ್ವಾನ

    ಯಾದಗಿರಿ ಜಿಲ್ಲೆಯಲ್ಲಿ ಹುದ್ದೆಗಳಿದ್ದು ಅರ್ಜಿಯನ್ನು ಆಹ್ವಾನಿಸಲಾಗಿದೆ‌. ಆಸಕ್ತರು ಅರ್ಜಿ ಸಲ್ಲಿಸಬಹುದು.

    ಯಾದಗಿರಿ ಜಿಲ್ಲೆಯಲ್ಲಿ ಯುವ ಪರಿವರ್ತಕರ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ಅರ್ಜಿ ಸಲ್ಲಿಸಲು ಕೊನೆ ದಿನಾಂಕ 23-03-2021

    ಯುವ ಜನರ ಮಾನಸಿಕ ಆರೋಗ್ಯದ ಸರ್ವತೋಮುಖ ಬೆಳವಣಿಗೆಗೆ ಪೂರಕ ಸೇವೆಗಳನ್ನು ಒದಗಿಸುವುದಕ್ಕಾಗಿ ಯುವ ಪರಿವರ್ತಕರ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ಹುದ್ದೆ ಸ್ಥಳ : ಯಾದಗಿರಿ ಜಿಲ್ಲೆಯ ಗುರು‌ಮಠಕಲ್ ಮತ್ತು ಸುರಪುರ ತಾಲ್ಲೂಕಿನಲ್ಲಿ ಗೌರವಧನದ ಆಧಾರದ ಮೇಲೆ ಕಾರ್ಯನಿರ್ವಹಿಸುವ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ವಿದ್ಯಾರ್ಹತೆ : ಅಭ್ಯರ್ಥಿಗಳು ಪದವೀಧರರಾಗಿರಬೇಕು. ಕನ್ನಡ ಭಾಷೆ ಸ್ಪಷ್ಟವಾಗಿ ಮಾತನಾಡಲು ತಿಳಿದಿರಬೇಕು. ಸಂವಹನ ಕೌಶಲ್ಯದ ಜೊತೆಗೆ ಸಂವಾದ ಕೌಶಲ್ಯ ಹೊಂದಿರಬೇಕು. ಯುವಜನರಿಗೆ ತರಬೇತಿಯಂತಹ ಕಾರ್ಯಕ್ರಮಗಳನ್ನು ನಡೆಸಲು, ಕಂಪ್ಯೂಟರ್ ಬಳಕೆ ಜ್ಞಾನ ಹೊಂದಿರುವವರಿಗೆ ಆದ್ಯತೆ.

    ವಯೋಮಿತಿ: ಅಭ್ಯರ್ಥಿಗಳು 21 ರಿಂದ 35 ವಯೋಮಿತಿ ಯವರಾಗಿರಬೇಕು.

    ಅಭ್ಯರ್ಥಿಗಳು ತಮ್ಮ ಸ್ವ ವಿವರಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ದಿನಾಂಕ 23, ಮಾರ್ಚ್ 2021 ರೊಳಗಾಗಿ ಸಲ್ಲಿಸಬೇಕು.

    ವಿಳಾಸ: ಯುವ ಸ್ಪಂದನ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಡಾನ್ ಬಾಸ್ಕೋ ಶಾಲೆ ಎದುರುಗಡೆ, ಯಾದಗಿರಿ

    ಹೆಚ್ಚಿನ ಮಾಹಿತಿಗಾಗಿ 8618549355, 8867323635

  • ಸಾರಸ್ವತ್ ಬ್ಯಾಂಕ್‌ನಲ್ಲಿ 150 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸಾರಸ್ವತ್ ಬ್ಯಾಂಕ್‌ನಲ್ಲಿ 150 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸಾರಸ್ವತ್ ಕೋ-ಅಪರೇಟಿವ್ ಬ್ಯಾಂಕ್ ನಲ್ಲಿ ಹುದ್ದೆಗಳಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 31 ಮಾರ್ಚ್ ಕೊನೆಯ ದಿನಾಂಕವಾಗಿರುತ್ತದೆ. ಹುದ್ದೆಗಳ ವಿವರ, ಅರ್ಜಿ ಶುಲ್ಕ, ವಯೋಮಿತಿ, ವಿದ್ಯಾರ್ಹತೆಯ ಬಗ್ಗೆ ಮುಂದೆ ನೀಡಲಾಗಿದೆ.

    ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 17-03-2021
    ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-03-2021
    ಅಪ್ಲಿಕೇಶನ್ ಮಾಹಿತಿ ತಿದ್ದುಪಡಿಗೆ ಕೊನೆಯ ದಿನಾಂಕ : 31-03-2021
    ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ: 15-04-2021
    ಆನ್‌ಲೈನ್ ಪರೀಕ್ಷಾ ದಿನಾಂಕ : ಮೇ 2021

    ಸಾರಸ್ವತ್ ಕೋ ಅಪರೇಟಿವ್ ಬ್ಯಾಂಕ್ ನಲ್ಲಿ ಬ್ಯುಸಿನೆಸ್ ಡೆವಲಪ್‌ಮೆಂಟ್ ಆಫೀಸರ್ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳು ಗ್ರೇಡ್ ಬಿ ( ಕ್ಲೆರಿಕಲ್ ಕೇಡರ್‌) ಹುದ್ದೆಗಳಾಗಿವೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಬ್ಯುಸಿನೆಸ್ ಡೆವಲಪ್‌ಮೆಂಟ್ ಆಫೀಸರ್ ಹುದ್ದೆಗಳ ವಿವರ
    ಮಹಾರಾಷ್ಟ್ರ-134
    ಮಧ್ಯಪ್ರದೇಶ-2
    ಗೋವಾ -3
    ಕರ್ನಾಟಕ-6
    ಗುಜರಾತ್ -5

    ಒಟ್ಟು ಹುದ್ದೆಗಳು – 150

    ಕರ್ನಾಟಕದಲ್ಲಿ ಬೆಂಗಳೂರು, ದಾವಣಗೆರೆ, ಮೈಸೂರು, ಮಂಗಳೂರು ಶಾಖೆಗಳಲ್ಲಿ ನೇಮಕ ಮಾಡಲಾಗುತ್ತದೆ.

    ಅರ್ಜಿ ಶುಲ್ಕ : ಅಪ್ಲಿಕೇಶನ್ ಶುಲ್ಕ ರೂ. 750/- ಪಾವತಿಸಬೇಕು. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್,ಮೊಬೈಲ್ ವ್ಯಾಲೆಟ್ ಬಳಸಿ ಶುಲ್ಕ ಪಾವತಿಸಬಹುದು.

    ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ಹಾಗೂ ಗರಿಷ್ಠ 27 ವರ್ಷ ಮೀರಿರಬಾರದು.

    ವಿದ್ಯಾರ್ಹತೆ : ಯಾವುದೇ ಪದವಿಯನ್ನು ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪಡೆದುಕೊಂಡಿರಬೇಕು.

    ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ
    ನೋಟಿಫಿಕೇಶನ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • 480 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ಎಪ್ರಿಲ್ 14 ಕೊನೆಯ ದಿನಾಂಕ

    480 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ಎಪ್ರಿಲ್ 14 ಕೊನೆಯ ದಿನಾಂಕ

    ಉತ್ತರ ಕೇಂದ್ರ ರೈಲ್ವೆಯು ವಿವಿಧ ಟ್ರೇಡ್‌ಗಳ ಆಕ್ಟ್ ವಿವಿಧ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಪ್ರಕಟಿಸಿದೆ. ಅರ್ಜಿ ಸಲ್ಲಿಕೆಯು ಈಗಾಗಲೇ ಆರಂಭವಾಗಿದ್ದು ದಿನಾಂಕ 16-04-2021 ರಂದು ಕೊನೆಯ ದಿನಾಂಕವಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು.

    ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 17-03-2021
    ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-04-2021

    ಹುದ್ದೆಗಳ ವಿವರ : ಫಿಟ್ಟರ್ -286
    ವೆಲ್ಡರ್(ಗ್ಯಾಸ್ ಮತ್ತು ಎಲೆಕ್ಟ್ರಿಕಲ್)-11
    ಮೆಕಾನಿಕ್(ಡಿಎಸ್‌ಎಲ್)-84
    ಕಾರ್ಪೆಂಟರ್ -11
    ಇಲೆಕ್ಟ್ರೀಷಿಯನ್ -88

    ಅರ್ಜಿ ಶುಲ್ಕ : ಸಾಮಾನ್ಯ ಹಾಗೂ ಹಿಂದುಳಿದ ಅಭ್ಯರ್ಥಿಗಳಿಗೆ ರೂ. 100/-, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಮಹಿಳಾ ಅಭ್ಯರ್ಥಿಗಳಿಗೆ, ಅಂಗವಿಕಲ ಅಭ್ಯರ್ಥಿಗಳಿಗೆ ರೂ.70/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

    ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಫಿಟ್ಟರ್/ವೆಲ್ಡರ್/ಮೆಕಾನಿಕ್/ಕಾರ್ಪೆಂಟರ್/ಇಲೆಕ್ಟ್ರೀಷಿಯನ್ ಟ್ರೇಡ್‌ಗಳಲ್ಲಿ ಐಟಿಐ ಪಾಸ್ ಮಾಡಿರಬೇಕು.

    ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷ ಆಗಿರಬೇಕು. ಹಾಗೂ ಗರಿಷ್ಠ 24 ವಯೋಮಿತಿ ಮೀರಿರಬಾರದು

    ಹೆಚ್ಚಿನ ವಿವರಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

    ನೋಟಿಪೀಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಎಸ್ ಬಿಐ ಅಂತಿಮ ಫಲಿತಾಂಶ ಬಿಡುಗಡೆ

    ಎಸ್ ಬಿಐ ಅಂತಿಮ ಫಲಿತಾಂಶ ಬಿಡುಗಡೆ

    ಭಾರತೀಯ ಸ್ಟೇಟ್ ಬ್ಯಾಂಕ್ 2020-21 ನೇ ಸಾಲಿನ ಎಸ್ ಬಿಐ ಪಿಒ ಅಂತಿಮ ಫಲಿತಾಂಶವನ್ನು ಬಿಡುಗಡೆ ಮಾಡಿದೆ.

    ಪಿಒ ಹುದ್ದೆಯ ಮುಖ್ಯ ಪರೀಕ್ಷೆಗೆ ಹಾಜರಾದ ಮತ್ತು ಸಂದರ್ಶನಕ್ಕೆ ಹಾಜರಾದ ಎಲ್ಲಾ ಅಭ್ಯರ್ಥಿಗಳ ಅಂಕಗಳನ್ನು ವೆಬ್‌ಸೈಟ್‌ ನಲ್ಲಿ ಹಾಕಲಾಗಿದೆ.

    ಅಭ್ಯರ್ಥಿಗಳು ತಮ್ಮ ಜನ್ಮ ದಿನಾಂಕ ಮತ್ತು ರಿಜಿಸ್ಟರ್ ನಂಬರ್ ಮಾಹಿತಿ ನೀಡಿ ಲಾಗಿನ್ ಆಗಬಹುದು.

    ಎಸ್ ಬಿಐ ಪ್ರೊಬೆಷನರಿ ಆಫೀಸರ್ ಹುದ್ದೆಗೆ ಪರೀಕ್ಷೆ ಬರೆದ ಅಭ್ಯರ್ಥಿಗಳು ವೆಬ್‌ಸೈಟ್‌ sbi.co.in ಗೆ ಭೇಟಿ ನೀಡಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಮತ್ತು ಅಂಕಗಳನ್ನು ಚೆಕ್ ಮಾಡಬಹುದು

    ಭಾರತೀಯ ಸ್ಟೇಟ್ ಬ್ಯಾಂಕ್ ಅಫೀಶಿಯಲ್ ವೆಬ್‌ಸೈಟ್‌ ಗೆ ಭೇಟಿ ನೀಡಿ, career ಸೆಕ್ಷನ್ ಕ್ಲಿಕ್ ಮಾಡಿ. ಅಲ್ಲಿ SBI PO 2020-21 details of mark link ಗೆ ಕ್ಲಿಕ್ ಮಾಡಿ.ಹೊಸ ವಿಂಡೋ ಒಪನ್ ಆಗುತ್ತೆ. ಅಭ್ಯರ್ಥಿಗಳು ರಿಜಿಸ್ಟ್ರೇಶನ್ ನಂಬರ್ ಜನ್ಮ ದಿನಾಂಕ ಹಾಕಿ‌. ಅಂಕಗಳು, ಫಲಿತಾಂಶ ಚೆಕ್ ಮಾಡಿ.

  • ಆರ್ಮಿ‌ ನೇಮಕಾತಿ ರ್ಯಾಲಿ: ಈ ಕೂಡಲೇ ಅರ್ಜಿ ಸಲ್ಲಿಸಿ

    ಆರ್ಮಿ‌ ನೇಮಕಾತಿ ರ್ಯಾಲಿ: ಈ ಕೂಡಲೇ ಅರ್ಜಿ ಸಲ್ಲಿಸಿ

    ಭಾರತೀಯ ಮಿಲಿಟರಿಯು ಬೆಂಗಳೂರು ನಗರ,‌ ಬೆಂಗಳೂರು ಗ್ರಾಮಾಂತರ,ಮಂಡ್ಯ, ಬಳ್ಳಾರಿ, ಮೈಸೂರು, ತುಮಕೂರು,ಕೋಲಾರ, ರಾಮನಗರ,ಚಾಮರಾಜನಗರ, ಕೊಡಗು, ಚಿತ್ರದುರ್ಗ, ಹಾಸನ, ಚಿಕ್ಕಬಳ್ಳಾಪುರ ಜಿಲ್ಲೆಗಳ ಪುರುಷ ಅಭ್ಯರ್ಥಿಗಳಿಗಾಗಿ ಆರ್ಮಿ ನೇಮಕಾತಿ ರ್ಯಾಲಿಯನ್ನು ನಡೆಸಲಿದೆ.

    ಆನ್ಲೈನ್ ರಿಜಿಸ್ಟ್ರೇಶನ್ ಆರಂಭಿಕ ದಿನಾಂಕ : 13-03-2021

    ಆನ್ಲೈನ್ ರಿಜಿಸ್ಟ್ರೇಶನ್ ಕೊನೆಯ ದಿನಾಂಕ : 26-04-2021

    ಇಂಡಿಯನ್ ಆರ್ಮಿಯು ಸೋಲ್ಜರ್ ಜೆನೆರಲ್ ಡ್ಯೂಟಿ, ಸೋಲ್ಜರ್ ಟೆಕ್ನಿಕಲ್,ಸೋಲ್ಜರ್ ಟ್ರೇಡ್ಸ್ ಮೆನ್(10 ನೇ ತರಗತಿ ಪಾಸ್), ಸೋಲ್ಜರ್ ಟ್ರೇಡ್ಸ್ ಮೆನ್( 8 ನೇ ತರಗತಿ), ಸೋಲ್ಜರ್ ಕರ್ಕ್ ಮತ್ತು ಸ್ಟೋರ್ ಕೀಪರ್,ಟೆಕ್ನಿಕಲ್ ಅಸಿಸ್ಟೆಂಟ್,ನರ್ಸಿಂಗ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗಾಗಿ ಅಭ್ಯರ್ಥಿಗಳಿಂದ ನೇಮಕಾತಿ ರ್ಯಾಲಿಯನ್ನು ನಡೆಸಲಿದೆ.

    ನೇಮಕಾತಿ ರ್ಯಾಲಿ ನಡೆಯುವ ಸ್ಥಳ: ವಿಶ್ವೇಶ್ವರಯ್ಯ ಸ್ಟೇಡಿಯಂ, ಕೋಲಾರ, ಕರ್ನಾಟಕ

    ಆರ್ಮಿ ನೇಮಕಾತಿ ರ್ಯಾಲಿ ದಿನಾಂಕ : ಮೇ 07, 2021 ರಿಂದ ಮೇ 12,2021 ರವರೆಗೆ.

    ವಯೋಮಿತಿ : ಆರ್ಮಿ ನೇಮಕಾತಿ ರ್ಯಾಲಿಗೆ ಅರ್ಜಿ ಸಲ್ಲಿಸಲು ಆಸಕ್ತರಿರುವ ಅಭ್ಯರ್ಥಿಗಳಿಗೆ 17 ವರ್ಷ 6 ತಿಂಗಳು ಹಾಗೂ ಗರಿಷ್ಠ 23 ವರ್ಷ ಮೀರಿರಬಾರದು.

    ಆರ್ಮಿಯು ವಿವಿಧ ವಿಭಾಗಕ್ಕೆ ಸೈನಿಕ ಹುದ್ದೆಗಳನ್ನು ನೇಮಕ‌‌ ಮಾಡಿಕೊಳ್ಳಲಿದ್ದು, ದೈಹಿಕ ಅರ್ಹತೆಗಳ ಬಗ್ ತಿಳಿದುಕೊಳ್ಳಲು ಗೆ ಈ ಲಿಂಕ್ ಗೆ ಕ್ಲಿಕ್ ಮಾಡಿ.

    ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಆನ್ಲೈನ್ ಮೂಲಕ ರಿಜಿಸ್ಟ್ರೇಶನ್ ಪಡೆದ ಅಭ್ಯರ್ಥಿಗಳ ಇ-ಮೇಲ್ ವಿಳಾಸಕ್ಕೆ ಅಡ್ಮಿಟ್ ಕಾರ್ಡ್ ಕಳುಹಿಸಲಾಗುತ್ತದೆ. ಅದರಲ್ಲಿ ನಿಗದಿಪಡಿಸಿದ ದಿನಾಂಕದಂದು ಅಭ್ಯರ್ಥಿ ಅಗತ್ಯ ದಾಖಲೆಗಳೊಂದಿಗೆ ರ್ಯಾಲಿಯಲ್ಲಿ ದಾಖಲಾಗಬಹುದು.

    ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸುವ ಆಸಕ್ತ ಅಭ್ಯರ್ಥಿಗಳು ಈ ಲಿಂಕ್ ಮೂಲಕ ರಿಜಿಸ್ಟ್ರೇಶನ್ ಪಡೆಯಬೇಕು.