Blog

  • ECIL: ಮೈಸೂರಿನಲ್ಲಿ 111 ವಿವಿಧ ಹುದ್ದೆಗಳಿಗೆ ನೇಮಕ

    ECIL: ಮೈಸೂರಿನಲ್ಲಿ 111 ವಿವಿಧ ಹುದ್ದೆಗಳಿಗೆ ನೇಮಕ

    ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ( ಇಸಿಐಎಲ್) ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, 17 ಹಾಗೂ 18 ಎಪ್ರಿಲ್ ದಿನಾಂಕದಂದು ನಡೆಯಿವ ಸಂದರ್ಶನದಲ್ಲಿ ಭಾಗವಹಿಸಬಹುದು. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಹುದ್ದೆ: ಜ್ಯೂನಿಯರ್ ಆರ್ಟಿಸನ್, ಆಫೀಸ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ಹುದ್ದೆಗಳ ವಿವರ : ಸೈಂಟಿಫಿಕ್ ಅಸಿಸ್ಟೆಂಟ್ – 24
    ಜ್ಯೂನಿಯರ್ ಅರ್ಟಿಸನ್ – 86
    ಆಫೀಸ್ ಅಸಿಸ್ಟೆಂಟ್ -1

    ಹುದ್ದೆ ಸ್ಥಳ : ಮೈಸೂರು – ಕರ್ನಾಟಕ

    ನೋಟಿಫಿಕೇಶನ್ ರಿಲೀಸ್ ಆದ ದಿನಾಂಕ : 16-04-2021

    ಸಂದರ್ಶನ ದಿನಾಂಕ:
    ಸೈಂಟಿಫಿಕ್ ಅಸಿಸ್ಟೆಂಟ್ – 18-04-2021
    ಜ್ಯೂನಿಯರ್ ಅರ್ಟಿಸನ್ – 17-04-2021
    ಆಫೀಸ್ ಅಸಿಸ್ಟೆಂಟ್ -18-04-2021

    ವಿದ್ಯಾರ್ಹತೆ: ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ 12th, ಡಿಪ್ಲೋಮಾ, ಬಿಎಸ್ಸಿ ವಿದ್ಯಾರ್ಹತೆ ಹೊಂದಿರಬೇಕು.
    ಜ್ಯೂನಿಯರ್ ಅರ್ಟಿಸನ್ ಹುದ್ದೆಗೆ 10th, 12th, ಐಟಿಐ ತೇರ್ಗಡೆ ಹೊಂದಿರಬೇಕು.
    ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಬಿಎಸ್ಸಿ, ಬಿಎ,ಬಿಕಾಂ ವಿದ್ಯಾರ್ಹತೆಯನ್ನು ಹೊಂದಿರಬೇಕು.

    ವೇತನ : ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ ರೂ.20,802/-, ಜ್ಯೂನಿಯರ್ ಅರ್ಟಿಸನ್ ರೂ.18,882/- ,
    ಆಫೀಸ್ ಅಸಿಸ್ಟೆಂಟ್ ಹುದ್ದೆಗೆ 20,802/- ಮಾಸಿಕ ವೇತನವಿರುತ್ತದೆ.

    ಅರ್ಜಿ ಶುಲ್ಕ :ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 25 ವರ್ಷ ಮೀರಿರಬಾರದು.

    ಒಬಿಸಿ – 3 ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ -5 ವರ್ಷ, ಪಿಡ್ಬ್ಯುಡಿ -10 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಸಂದರ್ಶನ ವಿಳಾಸ: Atomic Energy Central School, RMP Yelwal Colony, Hunsur Road, Yelwal Post, Mysore – 571130 on 17th & 18th April 2021.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ಕ್ಯಾಪ್‌ಜೆಮಿನಿಯಲ್ಲಿ ಉದ್ಯೋಗವಕಾಶ

    ಕ್ಯಾಪ್‌ಜೆಮಿನಿಯಲ್ಲಿ ಉದ್ಯೋಗವಕಾಶ

    ವೃತ್ತಿಪರ ಸೇವೆಗಳನ್ನು ಒದಗಿಸುವ ವಿಶ್ವದ ಅಗ್ರಗಣ್ಯ ಪೂರೈಕೆದಾರರಲ್ಲಿ ಒಂದಾಗಿರುವ ಕ್ಯಾಪ್‌ಜೆಮಿನಿ ಕಂಪನಿಯು ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.

    ಉದ್ಯೋಗ ಸ್ಥಳ : ಪುಣೆ

    ಹುದ್ದೆ : ಎಂಬಿಎ ಇಂಟರ್ನ್‌ಗಳನ್ನು ನೇಮಕಮಾಡಿಕೊಳ್ಳುತ್ತಿದೆ.

    ವೇತನ : ಕಂಪನಿಯು ನೇಮಕಗೊಂಡ ಎಂಬಿಎ ಇಂಟರ್ನ್‌ಗಳಿಗೆ ರೂ. 8500/- ಮಾಸಿಕ ಸ್ಟೈಫಂಡ್ ನೀಡುತ್ತದೆ. ಈ ಹುದ್ದೆಯು ವರ್ಕ್‌ ಫ್ರಂ ಹೋಮ್ ಆಗಿರುತ್ತದೆ.

    ವಿದ್ಯಾರ್ಹತೆ : ಎಂಬಿಎ ಇನ್ ಹೆಚ್‌ಆರ್‌

    ವೆಬ್‌ಕ್ಯಾಮ್ ಫೀಚರ್‌ವುಳ್ಳ ಲ್ಯಾಪ್‌ಟಾಪ್‌ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

    ಆಸಕ್ತ ಅಭ್ಯರ್ಥಿಗಳು ತಮ್ಮ ಇತ್ತೀಚೆಗಿನ ಬಯೋಡಾಟಾವನ್ನು ಇ-ಮೇಲ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

    ಇ-ಮೇಲ್ ವಿಳಾಸ :
    [email protected]

  • ಪಂಜಾಬ್ ನ್ಯಾಷನಲ್‌ ಬ್ಯಾಂಕ್ ನಲ್ಲಿ ವಿವಿಧ ಹುದ್ದೆ

    ಪಂಜಾಬ್ ನ್ಯಾಷನಲ್‌ ಬ್ಯಾಂಕ್ ನಲ್ಲಿ ವಿವಿಧ ಹುದ್ದೆ

    ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಆದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಸ್ವೀಪರ್ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
    ಹುದ್ದೆಗಳ ಸಂಖ್ಯೆ : 23
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17-04-2021
    ವಯೋಮಿತಿ : ದಿನಾಂಕ 01-01-2021ಕ್ಕೆ ಕನಿಷ್ಠ 18 ಹಾಗೂ ಗರಿಷ್ಠ 24 ವರ್ಷ ಮೀರದ ಅಭ್ಯರ್ಥಿಗಳ ಅರ್ಜಿಯನ್ನು ಸಲ್ಲಿಸಬಹುದು.
    ವಯೋಮಿತಿ ಸಡಿಲಿಕೆಯನ್ನು ನೇಮಕಾತಿ ನಿಯಮಾನುಸಾರ ನೀಡಲಾಗುತ್ತದೆ.

    ವಿದ್ಯಾರ್ಹತೆ : ಗರಿಷ್ಠ10 ನೇ ತರಗತಿ ಪಾಸ್ ಆಗದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಅಭ್ಯರ್ಥಿಗಳು ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.
    ವಿಳಾಸ :
    Dy.Circle Head, HRD Department, Punjab National Bank, Circle officd,Trivndrum, Vyshnavi Tower,By Pass Road Ambalathara, Thiruvanantapuram – 695026

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • KSCDRC ನಲ್ಲಿ ವಿವಿಧ ಹುದ್ದೆ

    KSCDRC ನಲ್ಲಿ ವಿವಿಧ ಹುದ್ದೆ

    ಕರ್ನಾಟಕ ರಾಜ್ಯದ ವಿವಿಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳಲ್ಲಿನ ಅಧ್ಯಕ್ಷರು, ಸದಸ್ಯರು ಹಾಗೂ ಮಹಿಳಾ ಸದಸ್ಯರ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ, ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ್ಕೆ ಅರ್ಹರಿರುವಂತಹ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ದಿನಾಂಕ 31-04-2021 ರಾತ್ರಿ 11.59 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಗಿರುತ್ತದೆ.

    ಹುದ್ದೆಗಳ ವಿವರ : ಅಧ್ಯಕ್ಷರು, ಸದಸ್ಯರು, ಮಹಿಳಾ ಸದಸ್ಯರು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ನೇಮಕಾತಿ ವಿಧಾನ : ಗ್ರಾಹಕ ಸಂರಕ್ಷಣಾ ( ರಾಜ್ಯ ಆಯೋಗಗಳ ಹಾಗೂ ಜಿಲ್ಲಾ ಆಯೋಗಗಳ ಅಧ್ಯಕ್ಷರ ಹಾಗೂ ಸದಸ್ಯರ ನೇಮಕಾತಿಗೆ ವಿದ್ಯಾರ್ಹತೆ, ನೇಮಕಾತಿ ಕ್ರಮ, ನೇಮಕಾತಿ ವಿಧಾನ, ಕಛೇರಿ ಸೇವಾವಧಿ, ರಾಜೀನಾಮೆ ಹಾಗೂ ವಜಾಗೊಳಿಸುವಿಕೆ ) ನಿಯಮಗಳು , 2020 ಅನುಸಾರ ಅಧ್ಯಕ್ಷರ ಹಾಗೂ ಸದಸ್ಯರುಗಳ ಆಯ್ಕೆಯನ್ನು ಮಾಡಲಾಗುವುದು.

    ಸೇವಾವಧಿ : 4 ವರ್ಷಗಳು ಅಥವಾ 65 ವರ್ಷಗಳ ವಯೋಮಾನದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ.

    ಅರ್ಜಿ ಶುಲ್ಕ : ಅಭ್ಯರ್ಥಿಗಳು ರೂ.250/-ಗಳ ಅರ್ಜಿ ಶುಲ್ಕವನ್ನು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಕಲ್ಪಿಸಿರುವಂತಹ ವಿಧಾನದಲ್ಲಿ ಪಾವತಿಸತಕ್ಕದ್ದು.

    ಅರ್ಜಿ ಸಲ್ಲಿಸುವ ವಿಧಾನ : ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಈ ಕೆಳಕಂಡ ಜಾಲತಾಣಗಳ ಮೂಲಕ ಸಲ್ಲಿಸಬಹುದಾಗಿರುತ್ತದೆ. https://aaharasachivalaya.karnataka.gov.in/
    https://kscdrc.karnataka.gov.in
    https://sevasindhu.karnataka.gov.in

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ಸಂಶೋಧನಾ ಸಹಾಯಕರ ನೇಮಕಾತಿಗಾಗಿ ಪ್ರಕಟಣೆ

    ಸಂಶೋಧನಾ ಸಹಾಯಕರ ನೇಮಕಾತಿಗಾಗಿ ಪ್ರಕಟಣೆ

    ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ನವನಗರ, ಹುಬ್ಬಳ್ಳಿ ಇಲ್ಲಿನ ವಿಜ್ಞಾನೇಶ್ವರ ಅಧ್ಯಯನ ಪೀಠಕ್ಕೆ ಮಾಸಿಕ ಸಂಚಿತ ವೇತನದ ಆಧಾರದ ಮೇಲೆ ಸಂಶೋಧನಾ ‌ಸಹಾಯಕ ಹುದ್ದೆಯ ನೇಮಕಾತಿಗಾಗಿ ‌ಅರ್ಜಿಯನ್ನು ಆಹ್ವಾನಿದ್ದು, ವಿವರಗಳು ಈ ಕೆಳಗಿನಂತಿವೆ.

    ಹುದ್ದೆ : ಸಂಶೋಧನಾ ಸಹಾಯಕ – 01

    ಮಾಸಿಕ ವೇತನ : ರೂ. 20,000/-

    ವಿದ್ಯಾರ್ಹತೆ : ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ.
    ಸಂಶೋಧನಾ ಪ್ರಾಜೆಕ್ಟ್ ಗ/ ಸಂಶೋಧನಾ ಲೇಖನಗಳ ಪ್ರಕಟಣೆಯ ಮೂಲಕ ಗುರುತಿಸಬಹುದಾದ ಸಂಶೋಧನಾ ಸಾಮರ್ಥ್ಯವಿರುವ ಅಭ್ಯರ್ಥಿಗಳಿಗೆ ಆದ್ಯತೆ.

    ಆಸಕ್ತಿಯುಳ್ಳ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಜಾಲತಾಣದಲ್ಲಿ (www.kslu.karnataka.gov.in) ಲಭ್ಯವಿರುವ ಅರ್ಜಿ ನಮೂನೆಗಳನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಲಾದ ಅರ್ಜಿಗಳ ಹಾರ್ಡ್ ಪ್ರತಿಗಳನ್ನು ಕುಲಸಚಿವರು,‌ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ನವನಗರ, ಹುಬ್ಬಳ್ಳಿ- 580025.

    ಹೆಚ್ಚಿನ ವಿವರಗಳಿಗಾಗಿ ವಿಶ್ವವಿದ್ಯಾಲಯದ ಜಾಲತಾಣವನ್ನು ವೀಕ್ಷಿಸಬಹುದು.

  • SAI : 21 ಯಂಗ್ ಪ್ರೊಫೆಷನಲ್ ಹುದ್ದೆಗೆ ನೇಮಕ

    SAI : 21 ಯಂಗ್ ಪ್ರೊಫೆಷನಲ್ ಹುದ್ದೆಗೆ ನೇಮಕ

    ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ( ಎಸ್ಎಐ)ದಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಎಪ್ರಿಲ್ 16,2021 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 06-04-2021( 5.00pm)
    ಆನ್ಲೈನ್ ಅರ್ಜಿ ಸಲ್ಲಿಸಲು ಕೊ‌ನೆಯ ದಿನಾಂಕ 16-04-2021 (5.00 pm ವರೆಗೆ)

    ಹುದ್ದೆ : ಯಂಗ್ ಪ್ರೊಫೆಷನಲ್ (ಎಆರ್ ಎಂ) (ಅಥ್ಲೇಟ್ ರಿಲೇಷನ್ ಮ್ಯಾನೇಜರ್ ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ಈ ಮೇಲ್ಕಂಡ ಹುದ್ದೆಗಳಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿ ಸಲ್ಲಿಸುವಂತೆ ಇಲ್ಲ.

    ಒಟ್ಟು ಹುದ್ದೆ : 21

    ವಿದ್ಯಾರ್ಹತೆ : ಅಭ್ಯರ್ಥಿಗಳು ಪದವಿ, ಎಂಬಿಎ/ಪಿಜಿಡಿಎಂ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ ಸಂಸ್ಥೆ/ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.

    ವಯೋಮಿತಿ : ಗರಿಷ್ಠ 35 ವರ್ಷದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ವೇತನ : ಯಂಗ್ ಪ್ರೊಫೆಷನಲ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.40,000 ರಿಂದ ರೂ.60,000/- ವರೆಗೆ ವೇತನವಿರುತ್ತದೆ.

    ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಕಿರುಪಟ್ಟಿಯನ್ನು ಮಾಡಿ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ದಿನಾಂಕ 16, 2011 ಸಂಜೆ 5 ರೊಳಗಾಗಿ ಸಲ್ಲಿಸಬೇಕು.

    ನೋಟಿಫಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ