Blog

  • BMS ಎಜುಕೇಶನಲ್ ಟ್ರಸ್ಟ್  : ಹುದ್ದೆಗಳ ನೇಮಕಾತಿ

    BMS ಎಜುಕೇಶನಲ್ ಟ್ರಸ್ಟ್ : ಹುದ್ದೆಗಳ ನೇಮಕಾತಿ

    ಬಿಎಂಎಸ್ ಎಜುಕೇಶನಲ್ ಟ್ರಸ್ಟ್ ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಶುಲ್ಕ, ವಿದ್ಯಾರ್ಹತೆ, ಹುದ್ದೆ ವಿವರಗಳು ಈ ಕೆಳಗೆ ನೀಡಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, 28 ಎಪ್ರಿಲ್ 2021 ಕೊನೆಯ ದಿನಾಂಕವಾಗಿದೆ.

    ಹುದ್ದೆ : ಆಫೀಸ್ ಅಸಿಸ್ಟೆಂಟ್ ಟೈಪಿಸ್ಟ್‌, ಅಸಿಸ್ಟೆಂಟ್ ಇನ್ಸ್ಟ್ರಕ್ಟರ್, ಫಾರ್‌ಮ್ಯಾನ್, ವಿಡಿಯೋ ಎಡಿಟರ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28-04-2021

    ಆಫೀಸ್ ಅಸಿಸ್ಟೆಂಟ್ ಟೈಪಿಸ್ಟ್ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ಯುನಿವರ್ಸಿಟಿಯಿಂದ ಡಿಗ್ರಿಯನ್ನು ಪಡೆದಿರಬೇಕು. ಸೀನಿಯರ್ ಗ್ರೇಡ್ ಟೈಪಿಸ್ಟ್ ನ್ನು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಪಾಸಾಗಿರಬೇಕು. ಎಂಎಸ್ ಆಫೀಸ್ ತಿಳಿದಿರಬೇಕು.

    ಅಸಿಸ್ಟೆಂಟ್ ಇನ್ಸ್ಟ್ರಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಇ ಅಥವಾ ಡಿಪ್ಲೋಮಾ ವನ್ನು ಸಿಎಸ್ಇ/ಐಎಸ್‌ಇ ನ್ನು ತೇರ್ಗಡೆ ಹೊಂದಿರಬೇಕು. ಹಾಗೂ ಸದರಿ ಹುದ್ದೆಯಲ್ಲಿ ಮೂರು ವರ್ಷಗಳ ಅನುಭವ ಹೊಂದಿರಬೇಕು.
    ಫಾರ್‌ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಬಿಇ/ಡಿಪ್ಲೋಮಾ ಇನ್‌ ಸಿವಿಲ್ ಇಂಜಿನಿಯರಿಂಗ್ ಮತ್ತು ಮೂರು ವರ್ಷಗಳ ಫಾರ್ಮ್ಯಾನ್‌/ಇನ್ಸ್ಟ್ರಕ್ಟರ್ ಹುದ್ದೆಯಲ್ಲಿ ಪರಿಣಿತಿ ಹೊಂದಿರಬೇಕು.
    ವಿಡಿಯೋ ಎಡಿಟರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿಎಸ್ಸಿ ಕಂಪ್ಯೂಟರ್/ಬಿಸಿಎ ತೇರ್ಗಡೆ ಹೊಂದಿರಬೇಕು. ಅಭ್ಯರ್ಥಿಗಳು ವಿಡಿಯೋ ಎಡಿಟಿಂಗ್ ಮತ್ತು ಕ್ಯಾಮೆರ ಮ್ಯಾನ್ ಹುದ್ದೆಯಲ್ಲಿ ಮೂರು ವರ್ಷಗಳ ಅನುಭವ ಹೊಂದಿರಬೇಕು.

    ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಅಪ್ಲಿಕೇಶನ್‌ ನ್ನು ಈ ಲಿಂಕ್ ಕ್ಲಿಕ್ ಮಾಡಿ ಓದಿ ಅರ್ಜಿ ಸಲ್ಲಿಸಬಹುದು.

  • ITI Ltd : ವಿವಿಧ ಹುದ್ದೆಗಳಿಗೆ ನೇಮಕಾತಿ

    ITI Ltd : ವಿವಿಧ ಹುದ್ದೆಗಳಿಗೆ ನೇಮಕಾತಿ

    ಐಟಿಐ ಲಿಮಿಟೆಡ್‌ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಗಳನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ :

    ಹುದ್ದೆ : ಚೀಫ್ ಮ್ಯಾನೇಜರ್/ಮ್ಯಾನೇಜರ್/ಡೆಪ್ಯುಟಿ ಮ್ಯಾನೇಜರ್/ಪಬ್ಲಿಕ್ ರಿಲೇಷನ್ ಆಫೀಸರ್ಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11-05-2021

    ಅರ್ಜಿ ಶುಲ್ಕ : ಚೀಫ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ ಮೀರಿರಬಾರದು. ಮ್ಯಾನೇಜರ್ ಹುದ್ದೆಗೆ 42 ವರ್ಷ ಮೀರಿರಬಾರದು. ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ 40 ವರ್ಷ ಮೀರಿರಬಾರದು. ಪಬ್ಲಿಕ್ ರಿಲೇಸನ್ ಆಫೀಸರ್ ಹುದ್ದೆಗೆ ಗರಿಷ್ಠ 30 ವರ್ಷ ಆಗಿರಬೇಕು.
    ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ/ ಎಕ್ಸ್‌ ಡಿಫೆನ್ಸ್ ಸರ್ವಿಸ್ ಪರ್ಸನಲ್ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ : ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವಂತಿಲ್ಲ.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಮಾಹಿತಿಯನ್ನು ತಿಳಿದು, ಅರ್ಜಿಯನ್ನು ಸಲ್ಲಿಸಬಹುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • IDBI Bank : ವಿವಿಧ ಹುದ್ದೆ

    IDBI Bank : ವಿವಿಧ ಹುದ್ದೆ

    ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿ ಗುರುತಿಸಿಕೊಂಡಿರುವ ಐಡಿಬಿಐ ಬ್ಯಾಂಕ್‌ ಮುಂಬಯಿ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಚೀಫ್ ಡಾಟಾ ಆಫೀಸರ್-1, ಹೆಡ್ ಪ್ರಾಗಾಮಿಂಗ್ ಮ್ಯಾನೇಜರ್ -1, ಡೆಪ್ಯುಟಿ ಚೀಫ್ ಟೆಕ್ನಾಲಜಿ ಆಫೀಸರ್( ಚಾನೆಲ್), ಡೆಪ್ಯುಟಿ ಚೀಫ್ ಟೆಕ್ನಾಲಜಿ ಆಫೀಸರ್( ಡಿಜಿಟಲ್)-1, ಹೆಡ್-ಡಿಜಿಟಲ್ ಬ್ಯಾಂಕಿಂಗ್ & ಎಮರ್ಜಿಂಗ್ ಪೇಮೆಂಟ್ಸ್-1, ಚೀಫ್ ಇನ್ಫಾರ್ಮೇಶನ್ ಸೆಕ್ಯುರಿಟಿ ಆಫೀಸರ್-1 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ಚೀಫ್ ಡೇಟಾ ಆಫೀಸರ್, ಪ್ರೊಗ್ರಾಂ ಮ್ಯಾನೇಜ್‌ಮೆಂಟ್ ಮತ್ತು ಇನ್ಫಾರ್ಮೇಷನ್ (ಐಟಿ) ಕಾಂಪ್ಲಿಯೆನ್ಸ್‌ ಹೆಡ್, ಡೆಪ್ಯೂಟಿ ಚೀಫ್ ಟೆಕ್ನಾಲಜಿ ಆಫೀಸರ್ ಹಾಗೂ ಡೆಪ್ಲಯೂಟಿ ಚೀಫ್ ಟೆಕ್ನಾಲಜಿ ಆಫೀಸರ್ (ಡಿಜಿಟಲ್ ) ಹುದ್ದೆಗಳಿಗೆ ವಾರ್ಷಿಕ 40 ರಿಂದ 45 ವರ್ಷ ರೂಪಾಯಿ ಪ್ಯಾಕೇಜ್ ಸಿಗಲಿದೆ.

    ಚೀಫ್ ಇನ್ಫಾರ್ಮೇಷನ್ ಸೆಕ್ಯೂರಿಟಿ ಆಫೀಸರ್ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಹುದ್ದೆಗೆ ವಾರ್ಷಿಕ 50 ರಿಂದ 60 ಲಕ್ಷ ರೂಪಾಯಿ ವೇತನ ನಿಗದಿ ಪಡಿಸಲಾಗಿದೆ.

    ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಐಟಿ ವಲಯ, ಅದರಲ್ಲೂ ಬ್ಯಾಂಕ್ ಕ್ಷೇತ್ರ ಸೇರಿದಂತೆ ಒಟ್ಟು 18 ರಿಂದ 20 ವರ್ಷ ಕೆಲಸ ಮಾಡಿದ ಅನುಭವ ಇರುವವರಾಗಿರಬೇಕು.

    ಡಿಜಿಟಲ್ ಬ್ಯಾಂಕಿಂಗ್ ಹಾಗೂ ಸಿಐಎಸ್‌ಒ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿಯು ಕನಿಷ್ಠ 45 ವರ್ಷ ಹಾಗೂ ಗರಿಷ್ಠ 55 ವರ್ಷಗಳಾಗಿರಬೇಕು. ಉಳಿದ ಹುದ್ದೆಗಳಿಗೆ ಗರಿಷ್ಠ 45 ವರ್ಷಗಳಾಗಿರಬೇಕು.

    ಪ್ರಾಥಮಿಕ ತಪಾಸಣೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಜಿ ಜೊತೆಗೆ ಸಲ್ಲಿಸಿರುವ ಅರ್ಹತಾ ಮಾನದಂಡ, ಅಭ್ಯರ್ಥಿಯ ಅರ್ಹತೆಗಳು, ಸೂಕ್ತತೆ / ಅನುಭವ ಇತ್ಯಾದಿಗಳನ್ನು ಆಧರಿಸಿ ಶಾರ್ಟ್ ಲಿಸ್ಟ್ ಮಾಡಿರುವ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುವುದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-05-2021

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.idbibank.in ಗೆ ಭೇಟಿ‌ ನೀಡಿ.

    ನೋಟಿಫಿಕೇಶನ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

    ಅಪ್ಲಿಕೇಶನ್ ಫಾರ್ಮಾಟ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಕೆ-ರೈಡ್ : ವಿವಿಧ ಹುದ್ದೆಗಳು: ಈ ಕೂಡಲೇ ಅರ್ಜಿ ಸಲ್ಲಿಸಿ

    ಕೆ-ರೈಡ್ : ವಿವಿಧ ಹುದ್ದೆಗಳು: ಈ ಕೂಡಲೇ ಅರ್ಜಿ ಸಲ್ಲಿಸಿ

    ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ನಿಯಮಿತ ದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಕರ್ನಾಟಕ ಸರಕಾರ ಮತ್ತು ರೈಲ್ವೆ ಸಚಿವಾಲಯದ ಜಂಟಿ ಉದ್ಯಮವಾದ ಕೆ-ರೈಡ್ ಸಂಸ್ಥೆಯು ಈ ಕೆಳಗಿನ ಹುದ್ದೆಗಳಿಗೆ ನಿಯೋಜನೆ/ ಒಪ್ಪಂದದ ಆಧಾರದ ಮೇಲೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಹುದ್ದೆ ವಿವರ : ಪ್ರಧಾನ ವ್ಯವಸ್ಥಾಪಕರು, ಸೀನಿಯರ್ ಡಿಜಿಯಂ/ಜಿಜಿಎಂ/ಎಜಿಎಂ ಡಿಸೈನ್ (ಸಿವಿಲ್), ವ್ಯವಸ್ಥಾಪಕರು, ಸಹಾಯಕ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಮ್ಯಾನೇಜರ್, ಕಾರ್ಯನಿರ್ವಾಹಕ, ನಿರ್ದೇಶಕ ಬಿಡಿ& ಎಫ್ ರವರಿಗೆ ಕಾರ್ಯ ನಿರ್ವಾಹಕ ಸಹಾಯಕರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.

    ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 21-05-2021

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.kride.in ಗೆ ಭೇಟಿ ನೀಡಬಹುದು

  • ಸಹಾಯಕ ಹುದ್ದೆ, ಲೆಕ್ಕಿಗ ಹುದ್ದೆಗೆ ಅರ್ಜಿ ಆಹ್ವಾನ

    ಸಹಾಯಕ ಹುದ್ದೆ, ಲೆಕ್ಕಿಗ ಹುದ್ದೆಗೆ ಅರ್ಜಿ ಆಹ್ವಾನ

    ಮೈಸೂರಿನ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಮತ್ತು ಸಹಾಯಕ ಆಯುಕ್ತರ ಕಚೇರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ.

    ಹುದ್ದೆ : ಸಹಾಯಕ ಆಯುಕ್ತರ ಕಚೇರಿಯಲ್ಲಿ ಲೆಕ್ಕಿಗರು, ಕಚೇರಿ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಆಸಕ್ತ ಅಭ್ಯರ್ಥಿಗಳು ಈ ಪ್ರಕಟಣೆ ಹೊರಡಿಸಿದ 7 ದಿನದೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.

    ವಿದ್ಯಾರ್ಹತೆ : ಬಿ.ಕಾಂ, ಬಿಬಿಎಂ ಪದವಿ ಪಡೆದ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅಭ್ಯರ್ಥಿಗಳು ಕನ್ನಡ ಮತ್ತು ಇಂಗ್ಲೀಷ್ ಮಾತನಾಡುವ ಮತ್ತು ಬರೆಯುವ ಕೌಶಲ್ಯ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ, ಟ್ಯಾಲಿ ತಂತ್ರಾಂಶ ಉಪಯೋಗಿಸುವ ಜ್ಞಾನ ಇತ್ಯಾದಿ ಕೌಶಲ್ಯ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳ ರೂ.16,000/- ಗೌರವಧನ ನಿಗದಿಪಡಿಸಲಾಗಿದೆ.

    ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು. ಲೆಕ್ಕ ಪತ್ರಗಳನ್ನು ನಿರ್ವಹಿಸುವಲ್ಲಿ ಮತ್ತು ಅಕೌಂಟೆಂಟ್ ಹುದ್ದೆಯಲ್ಲಿ ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕು.

    ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕುವೆಂಪು ನಗರದ ಅಕ್ಷಯ ಭಂಡಾರ ವೃತ್ತದ ಬಳಿ ಇರುವ ಸಹಾಯಕ ಕಾರ್ಮಿಕರ ಆಯುಕ್ತರ ಕಚೇರಿ ಮತ್ತು ಬಾಲಕಾರ್ಮಿಕ ಯೋಜನಾ ಸೊಸೈಟಿ ಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

    ಆಸಕ್ತರು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ : 0821-2541942

  • ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 34 ಜವಾನ ಹುದ್ದೆಗಳಿಗೆ ನೇಮಕ : ಎಸ್ ಎಸ್ ಎಲ್ ಸಿ ಪಾಸಾದವರಿಗೆ ಆದ್ಯತೆ

    ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 34 ಜವಾನ ಹುದ್ದೆಗಳಿಗೆ ನೇಮಕ : ಎಸ್ ಎಸ್ ಎಲ್ ಸಿ ಪಾಸಾದವರಿಗೆ ಆದ್ಯತೆ

    ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಜವಾನ( Peon) ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಒಟ್ಟು ಹುದ್ದೆ : 34 ಹುದ್ದೆಗಳು.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 19-04-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-05-2021(11.59 ರಾತ್ರಿ)

    ವಿದ್ಯಾರ್ಹತೆ : ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

    ಕನ್ನಡ ಓದಲು ಬರೆಯಲು ತಿಳಿದಿರಬೇಕು.

    ವಯೋಮಿತಿ: ಅಭ್ಯರ್ಥಿಗಳು ಕನಿಷ್ಠ 18 ವಯೋಮಿತಿಯವರಾಗಿರಬೇಕು.

    ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಪ್ರವರ್ಗ-I ರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಸಂಬಂಧಿಸಿದ ಪ್ರಾಧಿಕಾರ ನೀಡುವ ಜಾತಿ ಧೃಢೀಕರಣ ಪತ್ರ ಹೊಂದಿದ್ದಲ್ಲಿ‌ ಗರಿಷ್ಠ 40 ವರ್ಷ.

    ಪ್ರವರ್ಗ 2 ಎ, 2 ಬಿ, 3 ಎ, 3 ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ಸಂಬಂಧಿಸಿದ ಪ್ರಾಧಿಕಾರ ನೀಡುವ ಜಾತಿ ಪ್ರಮಾಣ ಪತ್ರ ಹೊಂದಿದ್ದಲ್ಲಿ ಗರಿಷ್ಠ 38 ವರ್ಷ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ.

    ಅರ್ಜಿ ಶುಲ್ಕ : ಸಾಮಾನ್ಯ ವರ್ಗ, 2ಎ, 2 ಬಿ, 3 ಎ, 3 ಬಿ ಸೇರಿದ ಅಭ್ಯರ್ಥಿಗಳಿಗೆ ರೂ. 200/-, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ 1 ಹಾಗೂ ಎಲ್ಲಾ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.

    ಆನ್ಲೈನ್ ಹೊರತು ಪಡಿಸಿ ಬೇರೆ ಯಾವುದೇ ಬೇರೆ ಯಾವುದೇ ವಿಧಾನದಲ್ಲಿ ಸಲ್ಲಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ