Blog

  • ಆದಿಚುಂಚನಗಿರಿ ವಿದ್ಯಾಲಯ: ಬೋಧಕ ಹುದ್ದೆಗೆ ಅರ್ಜಿ ಆಹ್ವಾನ

    ಆದಿಚುಂಚನಗಿರಿ ವಿದ್ಯಾಲಯ: ಬೋಧಕ ಹುದ್ದೆಗೆ ಅರ್ಜಿ ಆಹ್ವಾನ

    ಆದಿಚುಂಚನಗಿರಿ ವಿದ್ಯಾಲಯವು ಅಗತ್ಯ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯ ಆಹ್ವಾನಿಸಲಾಗಿದೆ. ಕೆಳಗಿನ ವಿವರಗಳನ್ನು ಓದಿ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಅನಾಟಮಿ – ಸಹಾಯಕ ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕ
    ಫಿಸಿಯೋಲಜಿ – ಸಹಾಯಕ ಪ್ರಾಧ್ಯಾಪಕ
    ಕಂಮ್ಯೂನಿಟಿ‌ ಮೆಡಿಷಿನ್ – ಸಹಾಯಕ ಪ್ರಾಧ್ಯಾಪಕ
    ಜೆನರಲ್ ಮೆಡಿಷನ್ – ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ, ಸೀನಿಯರ್ ರೆಸಿಡೆಂಟ್
    ಎಮರ್ಜೆನ್ಸಿ ಮೆಡಿಸಿನ್ – ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ, ಹಿರಿಯ ರೆಸಿಡೆಂಟ್
    ಪೀಡಿಯಾಟ್ರಿಕ್ಸ್ – ಸಹಾಯಕ ಮತ್ತು ಸಹ ಪ್ರಾಧ್ಯಾಪಕ
    ಮನಃಶಾಸ್ತ್ರಜ್ಞ – ಪ್ರಾಧ್ಯಾಪಕ ಮತ್ತು ಜ್ಯೂನಿಯರ್ ರೆಸಿಡೆಂಟ್
    ರೆಸ್ಪಿರೇಟರಿ ಮೆಡಿಷಿನ್ – ಪ್ರಾಧ್ಯಾಪಕ, ಸಹಾಯಕ ಸಹ ಪ್ರಾಧ್ಯಾಪಕ, ಹಿರಿಯ ರೆಸಿಡೆಂಟ್
    ಜೆನರಲ್ ಸರ್ಜರಿ-ಸಹಾಯಕ- ಸಹ ಪ್ರಾಧ್ಯಾಪಕ- ಸೀನಿಯರ್ ರೆಸಿಡೆಂಟ್
    ಆರ್ಥೋಪೆಡಿಕ್ಸ್ – ಸಹ ಪ್ರಾಧ್ಯಾಪಕ , ಸೀನಿಯರ್ ರೆಸಿಡೆಂಟ್
    ಆಪ್ಥಲ್ಮೋಲಜಿ – ಸಹ ಪ್ರಾಧ್ಯಾಪಕ, ಸೀನಿಯರ್ ರೆಸಿಡೆಂಟ್
    ಅನಸ್ಥೇಸಿಯಾಲಜಿ – ಸಹ ಪ್ರಾಧ್ಯಾಪಕ
    ರೇಡಿಯೋ ಡಯಾಗ್ನಸಿಸ್ -ಸಹಾಯಕ, ಸಹ ಪ್ರಾಧ್ಯಾಪಕ ಮತ್ತು ಸೀನಿಯರ್ ರೆಸಿಡೆಂಟ್
    ಒಬಸ್ಟೆರಿಕ್ಸ್, ಗೈನಕಾಲಜಿ-ಸಹಾಯಕ- ಸಹ ಪ್ರಾಧ್ಯಾಪಕ, ಹಿರಿಯ ರೆಸಿಡೆಂಟ್್

    ಪ್ರೀ ಮತ್ತು ಪ್ಯಾರಾ ಕ್ಲಿನಿಕಲ್ ವಿಷಯಗಳಿಗೆ ಟ್ಯೂಟರ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಅಭ್ಯರ್ಥಿಗಳು ನ್ಯಾಷನಲ್ ಮೆಡಿಕಲ್ ಕಮಿಷನ್ ನಿಯಮಗಳ ಪ್ರಕಾರ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. AICTE ನಿಯಮಾನುಸಾರ ವೇತನ‌ ನೀಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-05-2021

    ಅಭ್ಯರ್ಥಿಗಳು ತಮ್ಮ ಎಲ್ಲಾ ವಿವರಗಳ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.
    HR Head, Adichunchanagiri, Institute of medical sciences, B.G.Nagara

    ಅಥವಾ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಸಲ್ಲಿಸಬೇಕು : [email protected] ಗೆ ಕಳುಹಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಕರ್ನಾಟಕ ಗ್ರಾಮೀಣ ಬ್ಯಾಂಕ್ : ವಿವಿಧ ಹುದ್ದೆ

    ಕರ್ನಾಟಕ ಗ್ರಾಮೀಣ ಬ್ಯಾಂಕ್ : ವಿವಿಧ ಹುದ್ದೆ

    ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರವರ್ತಿತ “ಆರ್ಥಿಕ ಸಲಹಾ ಕೇಂದ್ರಗಳಿಗೆ” ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಆರ್ಥಿಕ ಸಲಹೆಗಾರ ನೇಮಕಕ್ಕೆ ಉದ್ಯೋಗ ಪ್ರಕಟಣೆ ಬಿಡುಗಡೆ ಮಾಡಿದೆ. ಒಟ್ಟು ಹುದ್ದೆಗಳ ಸಂಖ್ಯೆ 5. ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೆಳಗೆ ನೀಡಲಾಗಿರುವ ಸ್ಥಳಗಳಲ್ಲಿ ಆರ್ಥಿಕ ಸಲಹೆಗಾರರನ್ನು ನೇಮಕ ಮಾಡಲಿದೆ.
    ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ಚಾಮರಾಜನಗರ ಜಿಲ್ಲೆಯ ಎಳಂದೂರು, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಯಾದಗಿರಿ, ಕಲಬುರಗಿ ಜಿಲ್ಲೆಯ ಅಳಂದ.
    ಈ ಉದ್ಯೋಗವು 3 ವರ್ಷಗಳ ಗುತ್ತಿಗೆ ಆಧಾರದ ತಾತ್ಕಾಲಿಕ ಹುದ್ದೆಯಾಗಿರುತ್ತದೆ.

    ಸಾಮಾಜಿಕ ಭದ್ರತಾ ಯೋಜನೆಗಳ ತಿಳುವಳಿಕೆ, ಬ್ಯಾಂಕಿಂಗ್ ಜ್ಞಾನ, ಹಣಕಾಸಿನ ಸೇವೆಗಳ ತಿಳುವಳಿಕೆ ಇರಬೇಕು.

    ವಯೋಮಿತಿ : 62 ವರ್ಷದೊಳಗಿನ ನಿವೃತ್ತ ಬ್ಯಾಂಕ್ ಅಧಿಕಾರಿಗಳು, ಪದವೀಧರರು ಅರ್ಜಿ ಸಲ್ಲಿಕೆಗೆ ಅರ್ಹರಾಗಿರುತ್ತಾರೆ.

    ಹುದ್ದೆ ಸಂಖ್ಯೆ : 05

    ವೇತನ : 17,000+ 3000( ಪ್ರಯಾಣ ಭತ್ಯೆ) ನೀಡಲಾಗುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ಲೆಕ್ಕಸಹಾಯಕರು ಹುದ್ದೆಗಳ ನೇಮಕಕ್ಕೆ ಆದೇಶ

    ಲೆಕ್ಕಸಹಾಯಕರು ಹುದ್ದೆಗಳ ನೇಮಕಕ್ಕೆ ಆದೇಶ

    ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಗೆ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಾಗಿತ್ತು.

    ಹುದ್ದೆ : 124 ಲೆಕ್ಕ ಸಹಾಯಕರು ಮತ್ತು 33 ಕಿರಿಯ ಲೆಕ್ಕ ಸಹಾಯಕರುಗಳ ಹುದ್ದೆಗಳನ್ನು ಕೆಪಿಎಸ್‌ಸಿ ಮೂಲಕ ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಿತ್ತು.ಇದರ ನೇಮಕಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ಗ್ರೀನ್ ಸಿಗ್ನಲ್ ನೀಡಿದೆ.

    ಈ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಇದು ಸಿಹಿ ಸುದ್ದಿ ಆಗಲಿದ್ದು, ಶೀಘ್ರದಲ್ಲೇ ನೇಮಕ ಆದೇಶ ಸಿಗಲಿದೆ.

  • ಕರ್ನಾಟಕ ಉಚ್ಛ  ನ್ಯಾಯಲಯದಲ್ಲಿ ವಿವಿಧ ಹುದ್ದೆ

    ಕರ್ನಾಟಕ ಉಚ್ಛ ನ್ಯಾಯಲಯದಲ್ಲಿ ವಿವಿಧ ಹುದ್ದೆ

    ಕರ್ನಾಟಕ ಹೈ ಕೋರ್ಟ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ದಿನಾಂಕ 29 ಮೇ 2021 ಕೊನೆಯ ದಿನವಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 28-04-2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29-05-2021

    ಒಟ್ಟು ಹುದ್ದೆ : 19
    ಹುದ್ದೆ ಸ್ಥಳ : ಬೆಂಗಳೂರು – ಕರ್ನಾಟಕ
    ಹುದ್ದೆ : ಲಾ ಕ್ಲರ್ಕ್ ಕಂ ರಿಸರ್ಚ್ ಅಸಿಸ್ಟೆಂಟ್ಸ್
    ವೇತನ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ. 20,000/- ನಿಗದಿಪಡಿಸಲಾಗಿದೆ.
    ವಿದ್ಯಾರ್ಹತೆ : ಲಾ ಡಿಗ್ರಿಯನ್ನು ಅಭ್ಯರ್ಥಿಗಳು ಅಂಗೀಕೃತ ಬೋರ್ಡ್ ಅಥವಾ ಯುನಿವರ್ಸಿಟಿಯಿಂದ ಪಡೆದುಕೊಂಡಿರಬೇಕು.
    ಅರ್ಜಿ ಶುಲ್ಕ : ಅಭ್ಯರ್ಥಿಯ ವಯೋಮಿತಿಯು 30 ವರ್ಷ ಮೀರಿರಬಾರದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • 200 ಗೃಹ ರಕ್ಷಕರ ನೇಮಕ

    200 ಗೃಹ ರಕ್ಷಕರ ನೇಮಕ

    ಸ್ವಯಂ ಸೇವಕ ಗೃಹ ರಕ್ಷಕ ಹುದ್ದೆಯಲ್ಲಿ ಆಸಕ್ತಿಯುಳ್ಳ ಅಭ್ಯರ್ಥಿಗಳಿಗೆ ಸದಾವಕಾಶ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿಗೆ ಭೇಟಿ ನೀಡಿ ಸಂಪರ್ಕಿಸಬಹುದು.

    ಅರ್ಜಿ ಸಲ್ಲಿಸಲು ನಿಗದಿಪಡಸಿಲಾದ ವಿದ್ಯಾರ್ಹತೆ ದಾಖಲೆ ಜೊತೆಗೆ ಆಧಾರ್ ಕಾರ್ಡ್, ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

    ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಸೇವೆಗಳ ( ಕರ್ತವ್ಯ ನಿರ್ವಹಿಸಿದ ದಿನ) ಆಧಾರದ ಮೇಲೆ ವೇತನ/ ಗೌರವಧನ ನೀಡಲಾಗುವುದು.

    ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಲ್ಲೂಕು ಹಾಗೂ ಉಪ ಘಟಕಗಳಲ್ಲಿ ಖಾಲಿ ಇರುವ ಸ್ವಯಂ ಸೇವಕ ಗೃಹ ರಕ್ಷಕ ಸದಸ್ಯರನ್ನು ನೇಮಕ ಮಾಡಲು ಪ್ರಕಟಣೆಯನ್ನು ಹೊರಡಿಲಾಗಿದೆ,

    ಒಟ್ಟು ಹುದ್ದೆಗಳ ಸಂಖ್ಯೆ : 200

    ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

    ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳು 2021 ರ ಮೇ 30 ರೊಳಗೆ ಜಿಲ್ಲಾ ಗೃಹರಕ್ಷಕ ದಳ, ಸಮಾದೇಷ್ಟರವರ ಕಛೇರಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಗೃಹ ರಕ್ಷಕ ದಳದ ಸಮಿತಿಯ ಸಮಾದೇಷ್ಟಕರು ಹಾಗೂ ಸದಸ್ಯ ಕಾರ್ಯದರ್ಶಿಗಳ ಪ್ರಕಟಣೆಯು ತಿಳಿಸಿದೆ.

  • PSCB : ಭರ್ಜರಿ ಉದ್ಯೋಗವಕಾಶ

    PSCB : ಭರ್ಜರಿ ಉದ್ಯೋಗವಕಾಶ

    ಪಂಜಾಬ್ ಸ್ಟೇಟ್ ಕೋಅಪರೇಟಿವ್ ಬ್ಯಾಂಕ್ ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ಮೇ, 20, 2021 ಕೊನೆಯ ದಿನಾಂಕವಾಗಿದೆ. ಅರ್ಜಿ ಶುಲ್ಕ, ಅರ್ಜಿ ವಿವರ, ಹುದ್ದೆ ಇತ್ಯಾದಿಗಳನ್ನು ಕೆಳಗೆ ನೀಡಲಾಗಿದೆ.ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 29-04-2021
    ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-05-2021

    ಹುದ್ದೆ: ಸೀನಿಯರ್ ಮ್ಯಾನೇಜರ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಆಸಕ್ತರಿರುವ ಅಭ್ಯರ್ಥಿಗಳು ಡಿಗ್ರಿ/ಪಿಜಿಎಂಎಫ್ ಸಿ/ಎಂಬಿಎ/ಸಿಎ ವಿದ್ಯಾರ್ಹತೆಯನ್ನು ಹೊಂದಿರಬೇಕು. ಒಟ್ಟು 40 ಹುದ್ದೆಗಳಿವೆ.
    ಮ್ಯಾನೇಜರ್ ಹುದ್ದೆಗೆ ಯಾವುದೇ ಪದವಿ/ ಎಂಎಫ್ ಸಿ/ ಎಂಬಿಎ/ಸಿಎ ವಿದ್ಯಾರ್ಹತೆಯನ್ನು ಹೊಂದಿರಬೇಕು. ಒಟ್ಟು ಹುದ್ದೆಗಳ ಸಂಖ್ಯೆ 60.
    ಮಾಹಿತಿ ತಂತ್ರಜ್ಞಾನ ಅಧಿಕಾರಿ ಹುದ್ದೆಗೆ ಬಿಇ/ಬಿಟೆಕ್/ಬಿಎಸ್ಸಿ(ಇಂಜಿನಿಯರಿಂಗ್) ಎಂಸಿಎ/ಎಂ.ಎಸ್ಸಿ (ಐಟಿ) ವಿದ್ಯಾರ್ಹತೆ ಹೊಂದಿರಬೇಕು. ಒಟ್ಟು ಹುದ್ದೆ 07.
    ಕ್ಲರ್ಕ್ ಕಮ್ ಡಿಇಒ ಹುದ್ದೆಗೆ ಅರ್ಜಿ ಸಲ್ಲಿಸುವವರು ಡಿಪ್ಲೋಮಾ (ಕಂಪ್ಯೂಟರ್)/ಯಾವುದೇ ಡಿಗ್ರಿ/ ಪಿಜಿ ವಿದ್ಯಾರ್ಹತೆ ಯನ್ನು ಹೊಂದಿರಬೇಕು. ಒಟ್ಟು ಹುದ್ದೆ 739.
    ಸ್ಟೆನೋ ಟೈಪಿಸ್ಟ್ ಈ ಹುದ್ದೆಗೆ ಡಿಪ್ಲೋಮಾ (ಕಂಪ್ಯೂಟರ್) ಯಾವುದೇ ಪದವಿ/ಪಿಜಿ/ಟೈಪಿಂಗ್ ಜ್ಞಾನ ಹೊಂದಿರಬೇಕು. ಒಟ್ಟು ಹುದ್ದೆ 10.

    ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 37 ವರ್ಷ ಮೀರಿರಬಾರದು.

    ಅರ್ಜಿಯನ್ನು ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರವೇ ಸಲ್ಲಿಸಬೇಕು.

    ಅರ್ಜಿ ಶುಲ್ಕ : ಎಸ್ ಸಿ / ಎಸ್ ಟಿ ಅಭ್ಯರ್ಥಿಗಳಿಗೆ ರೂ. 700/- ಹಾಗೂ ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳು ರೂ. 1400/- ನ್ನು ಪಾವತಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ