Blog

  • ಜಿಲ್ಲಾ ಆಯುಷ್ ಸೊಸೈಟಿಯಲ್ಲಿ ಉದ್ಯೋಗ

    ಜಿಲ್ಲಾ ಆಯುಷ್ ಸೊಸೈಟಿಯಲ್ಲಿ ಉದ್ಯೋಗ

    ಆಯುಷ್ ನಿರ್ದೇಶನಾಲಯದ ಆಯುಷ್ ಇಲಾಖೆಯ ರಾಷ್ಟ್ರೀಯ ಆಯುಷ್ ಅಭಿಯಾನದಡಿಯಲ್ಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ: ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು

    ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.30,000/- ವೇತನವಿರುತ್ತದೆ.

    ವಿದ್ಯಾರ್ಹತೆ :ಗ್ರಾಜ್ಯುಯೇಶನ್ ಡಿಗ್ರಿ ಯನ್ನು ಯಾವುದೇ ಆಯುಷ್ ಪಿಜಿ. ಎಂಬಿಎ/ ಪೋಸ್ಟ್ ಗ್ರಾಜ್ಯುಯೇಶನ್ ಡಿಪ್ಲೋಮಾ AICTE ನಿಂದ ಪಡೆದುಕೊಂಡಿರಬೇಕು.

    ಗರಿಷ್ಠ 45 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ನೇರ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆಯು ನಡೆಯುತ್ತದೆ. ರೂ. 200 ಅರ್ಜಿ ಶುಲ್ಕವನ್ನು ಪಾವತಿಸಬೇಕು.

    ದಿನಾಂಕ 15-05-2021 ರಂದು ಸಮಯ ಸಂಜೆ 4.30 ಘಂಟೆಯೊಳಗಾಗಿ ಅರ್ಜಿಯನ್ನು ಕಚೇರಿಯಿಂದ ಪಡೆದುಕೊಳ್ಳುವುದು.
    ದಿನಾಂಕ 17-05-2021 ರಂದು ಸಮಯ ಸಂಜೆ 4.30 ಘಂಟೆಯೊಳಗಾಗಿ ತಲುಪುವಂತೆ ಅರ್ಜಿಗಳನ್ನು ಸಲ್ಲಿಸುವುದು.

  • BIMS : ಹುದ್ದೆಗೆ ನೇಮಕ : ಈ ಕೂಡಲೇ ಅರ್ಜಿ ಸಲ್ಲಿಸಿ

    BIMS : ಹುದ್ದೆಗೆ ನೇಮಕ : ಈ ಕೂಡಲೇ ಅರ್ಜಿ ಸಲ್ಲಿಸಿ

    ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೆಳಗಾವಿಯಲ್ಲಿ ಕೋವಿಡ್ 19 , ಎರಡನೇ ಅಲೆಯ ನಿಯಂತ್ರಣಕ್ಕಾಗಿ ಮೂರು ತಿಂಗಳ ಅವಧಿಗೆ / ಈ ಕಚೇರಿ ಮುಂದಿನ ಆದೇಶದವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮಾತ್ರ ಗುತ್ತಿಗೆ ಒಪ್ಪಂದದ ಮೇಲೆ ಈ ಕೆಳಗೆ ಕಾಣಿಸಿದ ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು. ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ದಿನಾಂಕ 05-05-2021 ರ 5.00 ಗಂಟೆಯೊಳಗೆ ಇ-ಮೇಲ್ ಮೂಲಕ ಸಲ್ಲಿಸಬೇಕು : [email protected] ಗೆ ಸಲ್ಲಿಸತಕ್ಕದ್ದು.

    ಎಂಬಿಬಿಎಸ್ ಡಾಕ್ಟರ್, ಸ್ಟಾಫ್ ನರ್ಸ್, ರಿಸರ್ಚ್ಸ ಸೈಂಟಿಸ್ಟ್‌, ಲ್ಯಾಬ್ ಟೆಕ್ನಿಶಿಯನ್, ಅನಸ್ತೇಶಿಯ ಟೆಕ್ನಿಶಿಯನ್, ಡಾಟಾ ಎಂಟ್ರಿ ಅಪರೇಟರ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • TRAI : ಉದ್ಯೋಗವಕಾಶ

    TRAI : ಉದ್ಯೋಗವಕಾಶ

    ಭಾರತೀಯ ದೂರಸಂವೇದಿ ನಿಯಂತ್ರಣಾ ಪ್ರಾಧಿಕಾರವು ( ಟೆಲಿಕಾಂ ರೆಗ್ಯುಲೇಟರಿ ಅಥಾರಟಿ ) ಬೆಂಗಳೂರಿನ ಟ್ರಾಯ್ ಪ್ರಾದೇಶಿಕ ಕಛೇರಿಯಲ್ಲಿ ನಿಯೋಜನೆಯ ಮೇರೆಗೆ ವಿದೇಶಿ ಸೇವಾ ಕರಾರುಗಳನ್ವಯ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಿದೆ.

    ಹುದ್ದೆಯ ಹೆಸರು : ಜಂಟಿ ಸಲಹೆಗಾರರು/ ಉಪ ಸಲಹೆಗಾರರು

    ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ : 17-05-2021
    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್ ಮಾಡಿ

  • ಡಿ.ಸಿ.ಹೆಚ್.ಸಿ ಮತ್ತು ಸಿ.ಸಿ.ಸಿ. ಆಸ್ಪತ್ರೆಗಳಲ್ಲಿ ಹುದ್ದೆ

    ಡಿ.ಸಿ.ಹೆಚ್.ಸಿ ಮತ್ತು ಸಿ.ಸಿ.ಸಿ. ಆಸ್ಪತ್ರೆಗಳಲ್ಲಿ ಹುದ್ದೆ

    ರಾಜ್ಯಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ಎರಡನೇ ಅಲೆಯಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ – 19 ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸಲು ಡಿ.ಸಿ.ಹೆಚ್.ಸಿ ಮತ್ತುಸಿ.ಸಿ.ಸಿ. ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಲು 11 ತಜ್ಞ ವೈದ್ಯರು ಮತ್ತು 33 ಸಾಮಾನ್ಯ ಕರ್ತವ್ಯ ವೈದ್ಯರನ್ನು ಗರಿಷ್ಠ ಆರು ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಲು ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರದುರ್ಗ ಇವರು ಮಂಜೂರಾತಿ ನೀಡಿದ ಪ್ರಯುಕ್ತ ಅರ್ಹ ತಜ್ಞ/ ಎಂಬಿಬಿಎಸ್ ವೈದ್ಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-05-2021 ರ ಬೆಳಿಗ್ಗೆ 11.00 ಗಂಟೆಗೆ ನೇರ ಸಂದರ್ಶನದಲ್ಲಿ ಭಾಗವಹಿಸಲು ಸೂಚಿಸಿದೆ.

    ಅಭ್ಯರ್ಥಿಗಳು 50 ವರ್ಷಗಳ ವಯೋಮಿತಿಯೊಳಗೆ ಇರತಕ್ಕದ್ದು.

  • ಗದಗ ಜಿಲ್ಲಾ ಪಂಚಾಯತಿ : ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಗದಗ ಜಿಲ್ಲಾ ಪಂಚಾಯತಿ : ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಗದಗ ಜಿಲ್ಲಾ ಪಂಚಾಯತ್ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ವಿವಿಧ ಹುದ್ದೆಗಳನ್ನು ಆಹ್ವಾನಿಸಲಾಗಿದೆ.

    ಹುದ್ದೆ : ರೀಜಿನಲ್ ಪ್ಲಾನಿಂಗ್ ಸ್ಪೆಷಲಿಸ್ಟ್ ಈ ಹುದ್ದೆಗೆ ಮಾಸಿಕ 30,000/- ರೂ. ಮಾಸಿಕ ವೇತನವಿರುತ್ತದೆ. ಈ ಹುದ್ದೆಗೆ 25 ವರ್ಷದಿಂದ 45 ವರ್ಷ ವಯೋಮಿತಿಯವರು ಅರ್ಜಿಯನ್ನು ಸಲ್ಲಿಸಬಹುದು.

    ರೂರಲ್ ಡೆವಲ್ಪೆಂಟ್ ಮತ್ತು ಮ್ಯಾನೇಜ್‌ಮೆಂಟ್ ಸ್ಪೆಷಲಿಸ್ಟ್‌ ಈ ಹುದ್ದೆಗೆ ಮಾಸಿಕ 25,000/- ರೂ. ಮಾಸಿಕ ವೇತನವಿರುತ್ತದೆ. ಈ ಹುದ್ದೆಗೆ 25 ವರ್ಷದಿಂದ 45 ವರ್ಷ ವಯೋಮಿತಿಯವರು ಅರ್ಜಿಯನ್ನು ಸಲ್ಲಿಸಬಹುದು.

    ಇಂಜಿನಿಯರಿಂಗ್ ಸ್ಪೆಷಲಿಸ್ಟ್‌ ಈ ಹುದ್ದೆಗೆ ಮಾಸಿಕ 25,000/- ರೂ. ಮಾಸಿಕ ವೇತನವಿರುತ್ತದೆ. ಈ ಹುದ್ದೆಗೆ 25 ವರ್ಷದಿಂದ 45 ವರ್ಷ ವಯೋಮಿತಿಯವರು ಅರ್ಜಿಯನ್ನು ಸಲ್ಲಿಸಬಹುದು.

    ಸ್ಪೇಷಿಯಲ್ ಪ್ಲಾನಿಂಗ್ ಪ್ರೊಫೆಷನಲ್ ಈ ಹುದ್ದೆಗೆ ಮಾಸಿಕ 20,000/- ರೂ. ಮಾಸಿಕ ವೇತನವಿರುತ್ತದೆ. ಈ ಹುದ್ದೆಗೆ 25 ವರ್ಷದಿಂದ 45 ವರ್ಷ ವಯೋಮಿತಿಯವರು ಅರ್ಜಿಯನ್ನು ಸಲ್ಲಿಸಬಹುದು.

    ರೂರಲ್ ಮ್ಯಾನೇಜ್‌ಮೆಂಟ್ ಪ್ರಾಫೆಷನಲ್ ಈ ಹುದ್ದೆಗೆ ಮಾಸಿಕ 20,000/- ರೂ. ಮಾಸಿಕ ವೇತನವಿರುತ್ತದೆ. ಈ ಹುದ್ದೆಗೆ 25 ವರ್ಷದಿಂದ 45 ವರ್ಷ ವಯೋಮಿತಿಯವರು ಅರ್ಜಿಯನ್ನು ಸಲ್ಲಿಸಬಹುದು.

    Resumeಗಳನ್ನು ಹಾಗೂ ವಿದ್ಯಾರ್ಹತೆ, ಅನುಭವ, ಪ್ರಮುಖ ಸಾಮರ್ಥ್ಯಗಳು ( ಏನಾದರೂ ಇದ್ದಲ್ಲಿ ) ಮಾಹಿತಿಯನ್ನು ತುಂಬಿ, ಅರ್ಜಿಯನ್ನು ಇ-ಮೇಲ್ ಮೂಲಕ [email protected] ಗೆ pdfನಲ್ಲಿ ಸಲ್ಲಿಸುವುದು. ಅಥವಾ ಹಾರ್ಡ್‌ ಪ್ರತಿಗಳನ್ನು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ ಗದಗ (ಡಿ.ಆರ್‌.ಡಿ.ಎ ಶಾಖೆ) ಜಿಲ್ಲಾಡಳಿತ ಭವನ ಹುಬ್ಬಳ್ಳಿ ರಸ್ತೆ ಗದಗ ರವರಿಗೆ ದಿನಾಂಕ 07-05-2021 ರ ಸಂಜೆ 5.00 ಗಂಟೆಯೊಳಗೆ ಅರ್ಜಿಯನ್ನು ಖುದ್ದಾಗಿ ಸಲ್ಲಿಸಬಹುದು. ತದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

    ಹೆಚ್ಚಿನ ಮಾಹಿತಿಗಾಗಿ 9164505757, 8970165300 ಸಂಪರ್ಕಿಸಬಹುದು

  • ಬೆಳ್ತಂಗಡಿ ಗ್ರಾಮ ಪಂಚಾಯತಿಯಲ್ಲಿ ಹುದ್ದೆ

    ಬೆಳ್ತಂಗಡಿ ಗ್ರಾಮ ಪಂಚಾಯತಿಯಲ್ಲಿ ಹುದ್ದೆ

    ಬೆಳ್ತಂಗಡಿ ತಾಲೂಕಿನ 25 ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ: ವಿಕಲಚೇತನ ಪುನರ್ವಸತಿ ಕಾರ್ಯಕರ್ತರು

    ಒಟ್ಟು ಹುದ್ದೆ: 25

    ಬೆಳ್ತಂಗಡಿ ತಾಲೂಕಿನ ಆಯಾ ಗ್ರಾಮಪಂಚಾಯತಿ ವ್ಯಾಪ್ತಿಯ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ‌ 18 ಹಾಗೂ ಗರಿಷ್ಠ 45 ವರ್ಷ ಮೀರಿರಬಾರದು.

    ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಉತ್ತೀರ್ಣ/ ಅನುತ್ತೀರ್ಣ ವಿಕಲಚೇತನರು ಅರ್ಜಿಯನ್ನು ಸಲ್ಲಿಸಬಹುದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 03,2021

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಭೇಟಿ ನೀಡಬಹುದು.