Blog

  • ಕೃಷಿ ವಿದ್ಯಾಲಯ ಧಾರವಾಡ : ಟೀಚರ್ ಹುದ್ದೆಗೆ ಅರ್ಜಿ ಆಹ್ವಾನ

    ಕೃಷಿ ವಿದ್ಯಾಲಯ ಧಾರವಾಡ : ಟೀಚರ್ ಹುದ್ದೆಗೆ ಅರ್ಜಿ ಆಹ್ವಾನ

    ಧಾರವಾಡ ಮತ್ತು ನಿಪ್ಪಾಣಿ ಡಿಪ್ಲೋಮಾ ( ಕೃಷಿ) ಕಾಲೇಜಿನಲ್ಲಿ ಹಾಗೂ ಎರಡನೇ ವರ್ಷದ ಎರಡನೇ ಸೆಮಿಸ್ಟರ್ ನ ಡಿಪ್ಲೋಮಾ (ಕೃಷಿ) ವಿದ್ಯಾರ್ಥಿಗಳಿಗೆ ಈ ಕೆಳಗೆ ಸೂಚಿಸಿರುವ ಕೋರ್ಸುಗಳನ್ನು ಬೋಧಿಸಲು ಈ ಕೆಳಗಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಹುದ್ದೆ: ಪಾರ್ಟ್ ಟೈಂ ಟೀಚರ್

    ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಎಸ್ಸಿ/ಎಂ.ವಿ.ಎಸ್ಸಿ/ಪಿಎಚ್ಡಿ ಇನ್ ಅನಿಮಲ್ ಸೈನ್ಸ್ / ವೆಟರ್ನರಿ ಸೈನ್ಸ್ ಸಬ್ಜೆಕ್ಟ್ ಹೊಂದಿರಬೇಕು. ಈ ಹುದ್ದೆಗೆ ಮಾಸಿಕ ರೂ.40,000/- ವೇತನವಿರುತ್ತದೆ.

    ಅರೆಕಾಲಿಕ ಉಪನ್ಯಾಸಕರನ್ನು 2020-21 ರ ಸೆಮಿಸ್ಟರ್ ಅವಧಿ‌179 ದಿವಸಗಳ ಅವಧಿಗೆ ಮೀರದಂತೆ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗುವುದು. ಸಂದರ್ಶನವು ದಿನಾಂಕ 19-05-2021 ರಂದು ಬೆಳಿಗ್ಗೆ 11.00 ಗಂಟೆಗೆ ಡೀನ್ ( ಸ್ನಾತಕೋತ್ತರ) ಕಚೇರಿ, ಕೃ.ವಿ.ವಿ. ಧಾರವಾಡದಲ್ಲಿ ಆನ್ಲೈನ್ ( ಒನ್ಲೈನ್) ಮೂಲಕ ನಡೆಯಲಿದೆ. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಬಯೋಡೇಟಾ, ತಮ್ಮ ಮೂಲ ಅಂಕಪಟ್ಟಿಗಳು ಮತ್ತು ಕೆಲಸದ ಅನುಭವ ಪ್ರಮಾಣಪತ್ರಗಳನ್ನು ಈ ಇ-ಮೇಲ್ [email protected] ವಿಳಾಸಕ್ಕೆ ದಿನಾಂಕ 18-05-2022 ಮುಂಜಾನೆ 10:00 ರ ಒಳಗಾಗಿ ಸ್ಕ್ಯಾನ್ ಪ್ರತಿ ಸಲ್ಲಿಸತಕ್ಕದ್ದು.

    ಸಂದರ್ಶನದ ಆನ್ಲೈನ್ (ONLINE) -zoom link I’d ಮತ್ತು password ನ್ನು ದಿನಾಂಕ 18-05-2021 ರ ಸಾಯಂಕಾಲ 5:00 ರ ಒಳಗಾಗಿ ತಿಳಿಸಲಾಗುವುದು.

  • BSCL : ಹುದ್ದೆ

    BSCL : ಹುದ್ದೆ

    ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ (ಬಿಎಸ್ ಸಿಎಲ್) ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಕಂಪನಿ ಕಾರ್ಯದರ್ಶಿ -01 ಹುದ್ದೆ

    ನೇರ ಸಂದರ್ಶನ ವಿಳಾಸ : ವ್ಯವಸ್ಥಾಪಕ ನಿರ್ದೇಶಕರು, ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಬೆಳಗಾವಿ ಕಚೇರಿ.

    ದಿನಾಂಕ 18-05-2021 ಬೆಳಿಗ್ಗೆ 10-30 ಕ್ಕೆ (ವಿಡಿಯೋ ಕಾನ್ಫರೆಯ ಮೂಲಕ) ಸಂದರ್ಶನದಲ್ಲಿ ಭಾಗಿಯಾಗಬಹುದು.

  • ಜಿಲ್ಲಾಧಿಕಾರಿಗಳ ಕಾರ್ಯಾಲಯ ಕೊಡಗು: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಜಿಲ್ಲಾಧಿಕಾರಿಗಳ ಕಾರ್ಯಾಲಯ ಕೊಡಗು: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಲು ವಿವಿಧ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ 6 ತಿಂಗಳವರೆಗೆ ಅಥವಾ ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗೆ ಯಾವುದು ಮೊದಲೇ ಅಲ್ಲಿಯವರೆಗೆ ನೇಮಕಾತಿಯನ್ನು ಮಾಡಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನೇರ ಸಂದರ್ಶನಕ್ಕೆ ಅಗತ್ಯ ಅನುಭವದ ಮೂಲ‌ ದಾಖಲಾತಿಗಳು ಮತ್ತು ಎರಡು ನಕಲು ಪ್ರತಿ, ಭಾವಚಿತ್ರ (3) ಗಳೊಂದಿಗೆ ಹಾಜರಾಗಲು ಪ್ರಕಟಣೆ ಹೊರಡಿಸಿದೆ.
    ಫಿಸಿಶಿಯನ್- 6 ಪುಲನ್ಮೋನೊಲೊಜಿಸ್ಟ್-3 ಕಾರ್ಡಿಯೋಲಜಿಸ್ಟ್-1 ನೆಪೊಲಾಜಿಸ್ಟಿಸ್-1 ಅನಸ್ತೇಶಿಯಲಜಿಸ್ಟ್-10 ಬಯೊಮೆಡಿಕಲ್ ಇಂಜಿನಿಯರ್-1, ನರ್ಸಿಂಗ್ ಆಫೀಸರ್-100, ಫಾರ್ಮಾಸಿಸ್ಟ್-4, ಜ್ಯೂನಿಯರ್/ಸೀನಿಯರ್ ಲ್ಯಾಬ್ ಟೆಕ್ನಿಶಿಯನ್-12 ಎಮರ್ಜೆನ್ಸಿ ಮೆಡಿಸಿನ್/ ಇಂಟೆನ್ಸಿವಿಸ್ಟ್-4, ರೆಸ್ಪಿರೇಟರಿ ಕೇರ್ ಟೆಕ್ನಿಶಿಯನ್-4, ವೆಂಟಿಲೇರ್ ಟೆಕ್ನಿಶಿಯನ್-4 ಐಸಿಯು ಟೆಕ್ನಿಶಿಯನ್/ಒಟಿ ಟೆಕ್ನಿಶಿಯನ್-8, ಒಕ್ಸಿಜನ್ ಪ್ಲಾಂಟ್ ಮತ್ತು ಇತರೆ ಮೆಡಿಕಲ್ ಇಕ್ಯುಪ್ಮೆಂಟ್ಸ್-4, ಸ್ವಾಬ್ ಕಲೆಕ್ಟರ್ಸ್-6, ಪಿಸಿಯೋಥೆರಪಿಸ್ಟಿಸ್-3, ಡಯಾಲಿಸಿಸ್ ಟೆಕ್ನಿಶಿಯನ್-3, ಇಕೋ ಟೆಕ್ನಿಶಿಯನ್-2, ಡಾಟಾ ಎಂಟ್ರಿ ಒಪರೇಟರ್ -8
    ಸದರಿ ಹುದ್ದೆಯು ಖಾಯಂ‌ ನೌಕರಿ ಅಲ್ಲ.

    ಸಂದರ್ಶನದ ಸ್ಥಳ : ಕೊಡಗು ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ, ಮಡಿಕೇರಿ. ಸಮಯ ದಿ.10-05-2021ರಿಂದ 15-05-2021 ರವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 01 ಗಂಟೆಯವರೆಗೆ (ರಜಾ ದಿನ ಹೊರತು ಪಡಿಸಿ)
    ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08272-298220 ಕಛೇರಿ ಕರ್ತವ್ಯದ ಅವಧಿಯಲ್ಲಿ ಸಂಪರ್ಕಿಸಬಹುದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಮೈಸೂರು ವೈದ್ಯಕೀಯ ಕಾಲೇಜು : 276 ಹುದ್ದೆ

    ಮೈಸೂರು ವೈದ್ಯಕೀಯ ಕಾಲೇಜು : 276 ಹುದ್ದೆ

    ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಇಲ್ಲಿ ಕೋವಿಡ್ – 19 ಚಿಕಿತ್ಸಾ ಆಸ್ಪತ್ರೆಗಳಲ್ಲಿ ‌ತಾತ್ಕಾಲಿಕವಾಗಿ 6 ತಿಂಗಳ ಅವಧಿಗೆ ಕೋವಿಡ್ ‌ಪರಿಸ್ಥಿತಿ ಸುಧಾರಿಸುವವರೆಗೆ ( ಯಾವುದೇ ಮೊದಲೊ ಅಲ್ಲಿಯವರೆಗೆ) ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ನೇರ ಸಂದರ್ಶನ ಮೂಲಕ ನೇಮಕಾತಿ ಪ್ರಕ್ರಿಯೆಯನ್ನು ಕೆಳಕಂಡಂತೆ ನಿರ್ದೇಶಕರು ಮತ್ತು ಡೀನ್, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಮೈಸೂರು ಈ ಕಛೇರಿಯನ್ನು ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.

    1. ಸೀನಿಯರ್ ರೆಸಿಡೆಂಟ್ಸ್ (ಮೆಡಿಸಿನ್)-18
    2. ಸೀನಿಯರ್ ರೆಸಿಡೆಂಟ್ಸ್ (ಪುಲ್ಮೋ)-14
    3. ಸೀನಿಯರ್ ರೆಸಿಡೆಂಟ್ಸ್ ( ಅನಸ್ತೇಶಿಯ)-22
    4. ಜ್ಯೂನಿಯರ್ ರೆಸಿಡೆಂಟ್ – 35
    5. ಸ್ಟಾಫ್ ನರ್ಸಸ್ – 276

    ಸಂದರ್ಶನ ದಿನಾಂಕ ಮತ್ತು ಸಮಯ: 13-05-2021 ರಂದು ಬೆಳಿಗ್ಗೆ 10.30ಕ್ಕೆ.

    ಈ ಮೇಲ್ಕಂಡ ಹುದ್ದೆಗಳಿಗೆ ಎಲ್ಲಾ ಪ್ರಮಾಣ ಪತ್ರಗಳು, ವಿಳಾಸ ಪುರಾವೆ ಮತ್ತು ಗುರುತಿನ ಪುರಾವೆಗಳೊಂದಿಗೆ‌ ಹಾಗೂ ಇವುಗಳ 02 ಜೆರಾಕ್ಸ್ ಪ್ರತಿಗಳೊಂದಿಗೆ ತಿಳಿಸಿರುವ ದಿನಾಂಕದಂದು ನಿಗದಿತ ಸಮಯದೊಳಗೆ ಸಂದರ್ಶನಕ್ಕೆ ಬರತಕ್ಕದ್ದು.

  • ಕರ್ನಾಟಕ ವಿಶ್ವವಿದ್ಯಾಲಯ: ಹಲವು ಉದ್ಯೋಗವಕಾಶ

    ಕರ್ನಾಟಕ ವಿಶ್ವವಿದ್ಯಾಲಯ: ಹಲವು ಉದ್ಯೋಗವಕಾಶ

    ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆಗಳ ವಿವರ : ಸಹಾಯಕ ನಿರ್ದೇಶಕರು (ಕವಿವಿ ಮುದ್ರಣಾಲಯ) – 01 (ಸಾಮಾನ್ಯ)
    ಕಾರ್ಯಗಾರ ಅಧಿಕಾರಿಗಳು/ವ್ಯವಸ್ಥಾಪಕರು -01 ( ಸಾಮಾನ್ಯ)
    ಕಿರಿಯ ಇಂಜಿನಿಯರ್ (ಸಿವಿಲ್) -02 ( 01 – ಪರಿಶಿಷ್ಟ ಜಾತಿ, 01- ಸಾಮಾನ್ಯ)
    ವರ್ಕ್ ಸುಪರ್ ವೈಸರ್ – 02 ( ಪರಿಶಿಷ್ಟ ಜಾತಿ -01, ಸಾಮಾನ್ಯ – 01)

    ಎಲೆಕ್ಟ್ರಿಶಿಯನ್ : 3 ಹುದ್ದೆ ( ಪರಿಶಿಷ್ಟ ಜಾತಿ -1, ಸಾಮಾನ್ಯ -1, ಪರಿಶಿಷ್ಟ ಪಂಗಡ -1)

    ಫಿಟ್ಟರ್ – 1 ( ಸಾಮಾನ್ಯ)

    ಸಹಾಯಕ ತೋಟಗಾರಿಕೆ – 1 ( ಸಾಮಾನ್ಯ )

    ಸಹಾಯಕ – 1 ( ಸಾಮಾನ್ಯ )

    ಪ್ಲೇಸ್ ಮೆಂಟ್ ಅಧಿಕಾರಿ – 1 ( ಸಾಮಾನ್ಯ )

    ಆಯ್ಕೆ ಮಾಡುವ ವಿಧಾನ : ಪೂರ್ಣ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಿದ ಮತ್ತು ಎಲ್ಲಾ ಅರ್ಹತೆಗಳನ್ನು ಪೂರೈಸುವ ಅಭ್ಯರ್ಥಿಗಳಿಗೆ ವಿಶ್ವವಿದ್ಯಾಲಯದ ವತಿಯಿಂದ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

    ವಯೋಮಿತಿ: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 40 ವಯೋಮಿತಿ ಹೊಂದಿರಬೇಕು.

    ಪ್ರವರ್ಗ 2a, 2b, 3a,3b ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 38 ವಯೋಮಿತಿ ಇರಬೇಕು.

    ಸಾಮಾನ್ಯ ವರ್ಗದ ಅಭ್ಯರ್ಥಿಗಳು ಕನಿಷ್ಠ 18 ಹಾಗೂ 35 ವಯೋಮಿತಿ ಹೊಂದಿರಬೇಕು.

    ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿಗಳನ್ನು ವಿಶ್ವವಿದ್ಯಾಲಯದ ಅಂತರ್ಜಾಲ www.kud.ac.in ರ ನೋಟಿಫಿಕೇಶನ್ ಕಾಲಂ ನಿಂದ ಪಡೆದುಕೊಂಡು ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ದಿನಾಂಕ 05-06-2021 ಅಥವಾ ಸದರಿ ದಿನಾಂಕ ಮತ್ತು ನಂತರದಲ್ಲಿಯೂ ಸಹ ಲಾಕ್ ಡೌನ್ ಇದ್ದಲ್ಲಿ ಲಾಕ್ ಡೌನ್ ಮುಗಿದ ದಿನಾಂಕದಿಂದ ಮುಂದಿನ 10 ಕರ್ತವ್ಯದ ದಿನಗಳೊಳಗಾಗಿ ‌ಕಚೇರಿ ವೇಳೆಯಲ್ಲಿ ವಿಶ್ವವಿದ್ಯಾಲಯದ ಅವಕ ವಿಭಾಗದಲ್ಲಿ ಸಲ್ಲಿಸುವುದು.

  • ಕೃಷಿ ಇಲಾಖೆಯಲ್ಲಿ ವಿವಿಧ ಹುದ್ದೆ

    ಕೃಷಿ ಇಲಾಖೆಯಲ್ಲಿ ವಿವಿಧ ಹುದ್ದೆ

    ಕೃಷಿ ಇಲಾಖೆಯ ಬೆಳೆ ವಿಮಾ ಯೋಜನೆಯಡಿ ಅನುಷ್ಠಾನಗೊಳಿಸಿರುವ ರಾಜ್ಯಮಟ್ಟದ ತಾಂತ್ರಿಕ ಉತ್ತೇಜನ ಘಟಕದಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿರುವ ಬಗ್ಗೆ ಮಾಹಿತಿ ಇಲ್ಲಿದೆ :

    ಹುದ್ದೆ : ರಾಜ್ಯ ತಾಂತ್ರಿಕ ಘಟಕದ ಮುಖ್ಯಸ್ಥರು – 1 ಹುದ್ದೆ
    ಕಾರ್ಯಕ್ರಮ ಸಂಯೋಜಕರು – 1 ಹುದ್ದೆ
    ಸಂವಹನ ಅಧಿಕಾರಿ – 1 ಹುದ್ದೆ
    ಸಾಮರ್ಥ್ಯ ವೃದ್ಧಿ ಅಧಿಕಾರಿ – 1 ಹುದ್ದೆ
    ಮಾಹಿತಿ ತಂತ್ರಜ್ಞಾನ ಮತ್ತು ನಿರ್ವಹಣಾ ವ್ಯವಸ್ಥೆ ತಜ್ಞರು -1 ಹುದ್ದೆ
    ದತ್ತಾಂಶ ವಿಜೇತರು – 1 ಹುದ್ದೆ
    ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ತಜ್ಞರು – 1 ಹುದ್ದೆ
    ತೋಟಗಾರಿಕಾ ತಜ್ಞರು – 1 ಹುದ್ದೆ
    ಗುಮಾಸ್ತ – 1 ಹುದ್ದೆ
    ಡೇಟಾ ಎಂಟ್ರಿ ಅಪರೇಟರ್ – 1 ಹುದ್ದೆ

    ಹುದ್ದೆಗಳಿಗೆ ತತ್ಸಮಾನ ವಿದ್ಯಾರ್ಹತೆ ಹಾಗೂ ಅನುಭವವುಳ್ಳ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ನಿಗದಿತ ಅರ್ಜಿ ನಮೂನೆಯಲ್ಲಿ ನೇರವಾಗಿ ಅಥವಾ ಅಂಚೆಯ ಮೂಲಕ ಅರ್ಜಿಯ‌ನ್ನೊಳಗೊಂಡ ಲಕೋಟೆಯ ಮೇಲೆ ಹುದ್ದೆಯ ವಿವರಗಳನ್ನು ನಮೂದಿಸಿ ಕೃಷಿ ಆಯುಕ್ತರು, ಕೃಣಿ ಆಯುಕ್ತಾಲಯ, ಶೇಷಾದ್ರಿ ರಸ್ತೆ, ಬೆಂಗಳೂರು – 560001 ರವರಿಗೆ ಅಥವಾ ಭರ್ತಿ ಮಾಡಿದ ಅರ್ಜಿಯೊಂದಿಗೆ ಎಲ್ಲಾ ಮೂಲ ಪ್ರಮಾಣ ಪತ್ರಗಳು ಮತ್ತು ಅನುಭವ

    ಕುರಿತು ಸ್ಕ್ಯಾನ್ ಮಾಡಿ ಇ-ಮೇಲ್ ಗೆ ದಿನಾಂಕ 17-05-2021 ಸಮಯ ಸಂಜೆ 4-00 ಗಂಟೆಯೊಳಗೆ ತಲುಪಿಸುವುದು.

    ಇ-ಮೇಲ್ ವಿಳಾಸ – [email protected]