ದಕ್ಷಿಣ ಮಧ್ಯ ರೈಲ್ವೆ : 3322 ಅಪ್ರೆಂಟಿಸ್ ಹುದ್ದೆ

Advertisements

ದಕ್ಷಿಣ ರೈಲ್ವೆಯ ನೇಮಕಾತಿ ಸೆಲ್, ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಒಟ್ಟು ಹುದ್ದೆ : 3322 ಹುದ್ದೆ

ಹುದ್ದೆಗಳ ವಿವರ : ಕ್ಯಾರೇಜ್ ವರ್ಕ್ಸ್, ಪೆರಂಬೂರು, ಸೆಂಟ್ರಲ್ ವರ್ಕ್ ಶಾಪ್, ಗೋಲ್ಡನ್ ರಾಕ್ ಮತ್ತು ಸಿಗ್ನಲ್ ಹಾಗೂ ದೂರಸಂಪರ್ಕ ಕಾರ್ಯಾಗಾರ, ಪೆಡನೂರಿಗಾಗಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.

ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಲು ಮಾತ್ರ
ಅವಕಾಶವಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜೂನ್ 30, 2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ವಿದ್ಯಾರ್ಹತೆ : ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10 ನೇ ತರಗತಿ ( 10+2 ಸಿಸ್ಟಮ್ ನಡಿ) ತೇರ್ಗಡೆ ಹೊಂದಿರಬೇಕು. ಅಥವಾ ಶೇ.50 ಅಂಕಗಳೊಂದಿಗೆ ತತ್ಸಮಾನ ಅರ್ಹತೆಯನ್ನು ಪಡೆದು ಕೊಂಡಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಐಟಿಐ ಕೋರ್ಸ್ ಮಾಡಿರಬೇಕು. ಎನ್ ಸಿವಿಟಿ/ಎಸ್ ಸಿವಿಟಿ ಮಾನ್ಯತೆ ಪಡೆದ ಸಂಸ್ಥೆಯಿಂದ ಐಟಿಐ ಕೋರ್ಸ್ ನಲ್ಲಿ ಪಾಸಾಗಿರಬೇಕು. ಉನ್ನತ ಶಿಕ್ಷಣ ಹೊಂದಿರುವ ಅಭ್ಯರ್ಥಿಯು ಅರ್ಜಿ ಸಲ್ಲಿಸುವಂತಿಲ್ಲ.

ವಯೋಮಿತಿ : ಅಭ್ಯರ್ಥಿಗಳು ಕನಿಷ್ಠ 15 ಹಾಗೂ ಗರಿಷ್ಠ 24 ವರ್ಷ ವಯಸ್ಸಿನವರಾಗಿರಬೇಕು. ಸರಕಾರದ ಮಾನದಂಡಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿದೆ.

ತಮಿಳುನಾಡು, ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ, ಕೇರಳ, ಅಂಡಮಾನ್ ನಿಕೋಬಾರ್ ಹಾಗೂ ಲಕ್ಷದ್ವೀಪ ಪ್ರದೇಶಗಳು, ಆಂಧ್ರಪ್ರದೇಶದ ನೆಲ್ಲೋರ್ ಹಾಗೂ ಚಿತ್ತೂರ್ ಜಿಲ್ಲೆಗಳು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯವರು ಮಾತ್ರ ಈ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

ಕ್ಯಾರೇಜ್ ವರ್ಕ್ಸ್, ಪೆರಂಬೂರು – 936 ಹುದ್ದೆಗಳು, ಗೋಲ್ಡನ್ ರಾಕ್ ಕಾರ್ಯಾಗಾರ – 756 ಹುದ್ದೆಗಳು, ಸಿಗ್ನಲ್ ಮತ್ತು ಟೆಲಿಕಾಂ ಕಾರ್ಯಾಗಾರ, ಪೆಡನೂರ್ – 1686 ಹುದ್ದೆಗಳಿಗೆ ನೇಮಿಸಿಕೊಳ್ಳಲಾಗುವುದು.

ತಿರುವನಂತಪುರ, ಪಾಲ್ಗಾಟ್, ಸೇಲಂ, ಪೆರಂಬೂರು ಮತ್ತು ಚೆನ್ನೈ ವಿಭಾಗಗಳಲ್ಲಿನ ರೈಲ್ವೆ ಆಸ್ಪತ್ರೆ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.

ವಿದ್ಯಾರ್ಹತೆ : ಮೆಟ್ರಿಕ್ಯುಲೇಷನ್ ಮತ್ತು ಐಟಿಐ ಪರೀಕ್ಷೆಯಲ್ಲಿ ಪಡೆದಿರುವ ಸರಾಸರಿ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.100/- ಅರ್ಜಿ ಶುಲ್ಕವನ್ನು ಪಾವತಿಸಬೇಕು. ಎಸ್ ಸಿ/ಎಸ್ ಟಿ / ಪಿಡ್ಬ್ಯುಬಿಡಿ ಹಾಗೂ ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆ ಅಥವಾ ಸಂದರ್ಶನವಿರುವುದಿಲ್ಲ.

ಆಸಕ್ತ ಅಭ್ಯರ್ಥಿಗಳು iroams.com ನಲ್ಲಿ ಅಪ್ರೆಂಟಿಸ್ ಹುದ್ದೆಯ ಅರ್ಹತೆಯನ್ನು ಪರಿಶೀಲಿಸಬಹುದು. ದಕ್ಷಿಣ ರೈಲ್ವೆಯ ಅಧಿಕೃತ ವೆಬ್‌ಸೈಟ್‌ https://sr.indianrailways.gov.in ನಲ್ಲಿ ಅರ್ಜಿ ನಮೂನೆಗಳು ಲಭ್ಯವಿದ್ದು, ಅಭ್ಯರ್ಥಿಗಳು ಪರಿಶೀಲಿಸಬಹುದು.

Leave a Comment