ONGC Recruitment 2024: ONGC ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಟ್ಟು 25 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಜಿಯೋಫಿಸಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು ಭರ್ತಿ ಮಾಡಲು ಆಹ್ವಾನಿಸಿದ ಖಾಲಿ ಹುದ್ದೆಗಳಿಗೆ ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಮಾಡುವವರು ಈ ಹುದ್ದೆಯನ್ನು ತಮ್ಮದಾಗಿಸಿಕೊಳ್ಳಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು 06-Mar-2024 ರಂದು ಅಥವಾ ಮೊದಲು ಆನ್‌ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು;
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 29-02-2024
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-03-2024
ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಸಂದರ್ಶನಕ್ಕಾಗಿ ಪ್ರವೇಶ ಕಾರ್ಡ್‌ನ ವಿತರಣೆಯ ದಿನಾಂಕ: 07-ಮಾರ್ಚ್-2024
ಸಂದರ್ಶನದ ದಿನಾಂಕ: 10ನೇ ಮತ್ತು 11ನೇ ಮಾರ್ಚ್ 2024
ಫಲಿತಾಂಶಗಳ ಘೋಷಣೆಯ ತಾತ್ಕಾಲಿಕ ದಿನಾಂಕ: 13-ಮಾರ್ಚ್-2024
ಹುದ್ದೆಗಳ ವಿವರ:
ಹುದ್ದೆ : ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ -22 ಪೋಸ್ಟ್, ಜಿಯೋಫಿಸಿಸ್ಟ್-3 ಪೋಸ್ಟ್‌ಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ ಸಂಖ್ಯೆ: ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC)ವು ಒಟ್ಟು 25 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ವೇತನ: ಮೇಲೆ ತಿಳಿಸಿದ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.60000-180000/- ರವರೆಗೆ ವೇತನ ದೊರಕಲಿದೆ.
ವಿದ್ಯಾರ್ಹತೆ: ಜಿಯೋಫಿಸಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂ.ಟೆಕ್, ಸ್ನಾತಕೋತ್ತರ ಪದವಿ ಮಾಡಿಬೇಕು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್: ಬಿ.ಇ ಅಥವಾ ಬಿ.ಟೆಕ್ ಇನ್ EEE/ಇನ್‌ಸ್ಟ್ರುಮೆಂಟೇಶನ್/ಮೆಕ್ಯಾನಿಕಲ್/ಪೆಟ್ರೋಲಿಯಂ
ವಯಸ್ಸಿನ ಮಿತಿ: ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಯ ಗರಿಷ್ಠ ವಯಸ್ಸು 30 ವರ್ಷ. ಈ ವಯಸ್ಸನ್ನು ಮೀರಿರಬಾರದು. OBC (NCL) ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, PwBD ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಅರ್ಜಿ ಶುಲ್ಕ: ಎಸ್‌ಸಿ/ಎಸ್‌ಟಿ/PwBD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. GEN/EWS/OBC ಅಭ್ಯರ್ಥಿಗಳಿಗೆ ರೂ.1000 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಅಭ್ಯರ್ತೀಗಳು ಆನ್‌ಲೈನ್ ಮೂಲಕ ಮಾತ್ರವೇ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
ಆಯ್ಕೆ ಪ್ರಕ್ರಿಯೆ: GATE 2023ಯ ಮಾರ್ಕ್ಸ್, ಕ್ವಾಲಿಫಿಕೇಶನ್, ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ.