ONGC ಯಲ್ಲಿ ವಿವಿಧ 313 ಹುದ್ದೆಗಳಿಗೆ ಅರ್ಜಿ ಆಹ್ವಾನ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ತೈಲ ಮತ್ತು ನೈಸರ್ಗಿಕ ಅನಿಲ‌ ಆಯೋಗ ( ಒಎನ್ ಜಿಸಿ) 2021 ರ ನೇಮಕಾತಿ ಅಧಿಸೂಚನೆ ನ್ನು ಬಿಡುಗಡೆ ಮಾಡಿದೆ. ಒಎನ್ ಜಿಸಿ 313 ಪದವೀಧರ ತರಬೇತಿ ( ಎಂಜಿನಿಯರಿಂಗ್ ಮತ್ತು ಜಿಯೋ ಸೈನ್ಸ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗ ನೋಂದಣಿ ಕಮ್ ಅರ್ಜಿ ಪ್ರಕ್ರಿಯೆಯು ಸೆ.22, 2021 ರಂದು ಪ್ರಾರಂಭವಾಗಿದೆ. ಹಾಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅಕ್ಟೋಬರ್ 12, 2021 ರಂದು ಕೊನೆಗೊಳ್ಳಲಿದೆ.

ಅರ್ಹತೆ ; ಒಎನ್ ಜಿಸಿ ನೇಮಕಾತಿಯ ವಿವಿಧ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗೆ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ/ಎಂ.ಎಸ್ಸಿ/ಎಂ.ಟೆಕ್ ನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಹೊಂದಿರಬೇಕು. ಜೊತೆಗೆ ಗೇಟ್ 2020 ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದಿರಬೇಕು.

ವಯೋಮಿತಿ : ಅಭ್ಯರ್ಥಿಗಳು ಜುಲೈ 31,2020 ರ ಅನ್ವಯ ‌28 ವರ್ಷ,( AEE ಗಾಗಿ) ಮತ್ತು 30 ವರ್ಷ ವಯೋಮಿತಿ ಯನ್ನು (AEE ಹೊರತು ಪಡಿಸಿ ಇತರ ಎಲ್ಲ ಹುದ್ದೆಗಳನ್ನು) ಹೊಂದಿರಬೇಕು. 3 ವರ್ಷಗಳು ( ಒಬಿಸಿ) ಮತ್ತು 5 ವರ್ಷಗಳ ( ಎಸ್ ಸಿ/ಎಸ್ ಟಿ) ವರೆಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ವೇತನ : ನೇಮಕಾತಿಯ ವಿವಿಧ ಉದ್ಯೋಗಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವಂತೆ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ : ಒಎನ್ ಜಿಸಿ ನೇಮಕಾತಿಯ ವಿವಿಧ ಉದ್ಯೋಗಗಳಿಗರ ಅಭ್ಯರ್ಥಿಗಳ ಆಯ್ಕೆಯನ್ನು ಅವರ ಶೈಕ್ಷಣಿಕ ಅರ್ಹತೆ, ಸಂಬಂಧಿತ ವಿಭಾಗದಲ್ಲಿ ಗೇಟ್ 2020 ಸ್ಕೋರ್ ಆಧರಿಸಿ ಕಿರು ಪಟ್ಟಿಯನ್ನು ಮಾಡಿ ತದನಂತರ ಸಂದರ್ಶನ ದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ : ಒಎನ್ ಜಿಸಿ ನೇಮಕಾತಿಯ ವಿವಿಧ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನೋಂದಣಿ ಶುಲ್ಕವಾಗಿ 300/- ರೂ. ಅನ್ನು ಆನ್ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಎಸ್ ಸಿ / ಎಸ್ ಟಿ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು ಲೇಖನದ ಕೊನೆಯಲ್ಲಿ ನೀಡಿರುವ ಅಧಿಕೃತ ಒಎನ್ ಜಿಸಿ ಜಿಟಿ ಅಧಿಸೂಚನೆ 2021 ರಲ್ಲಿ ಉಲ್ಲೇಖಿಸಿರುವಂತೆ ನೋಂದಣಿ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ.

ನೇಮಕಾತಿ ಅರ್ಜಿ ಸಲ್ಲಿಕೆ : ಒಎನ್ ಜಿಸಿ ನೇಮಕಾತಿಯ ವಿವಿಧ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಬಹುದು.

ನೋಟಿಫಿಕೇಶನ್ ಈ ಕೆಳಗೆ ನೀಡಲಾಗಿದೆ.

Leave a Comment