ಆರೋಗ್ಯ ವಲಯದಲ್ಲಿ ಕೊರೊನಾ ನಿಯಂತ್ರಿಸುವ ಸಲುವಾಗಿ ಹೆಚ್ಚಿನ ಪರಿಣಿತ ಸಹಾಯಕ ತಾಂತ್ರಿಕ ಸಿಬ್ಬಂದಿಯ ಅವಶ್ಯಕತೆ ಇದೆ. ಇದಕ್ಕಾಗಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿಯಲ್ಲಿ ತರಬೇತಿಯನ್ನು ನೀಡುತ್ತಿದ್ದು, ಆಸಕ್ತರು ಅರ್ಜಿಯನ್ನು ಹಾಕಬಹುದು.
ಜನರಲ್ ಡ್ಯೂಟಿ ಅಸಿಸ್ಟೆಂಟ್ (ಜಿಡಿಎ), ಜನರಲ್ ಡ್ಯೂಟಿ ಅಸಿಸ್ಟೆಂಟ್ ಅಡ್ವಾನ್ಸಡ್ ( ಕ್ರಿಟಿಕಲ್ ಕೇರ್) ಹಾಗೂ ಹೋಮ್ ಹೆಲ್ತ್ ಏಡ್ ತರಬೇತಿ ನೀಡಲಾಗುತ್ತದೆ. ಈ ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ತೇರ್ಗಡೆ ಹೊಂದಿರಬೇಕು.
ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಶಿಯನ್ ಬೇಸಿಕ್, ಫ್ಲೆಬೊಟೊಮಿಸ್ಟ್ ಹಾಗೂ ಮೆಡಿಕಲ್ ರೆಕಾರ್ಡ್ ಅಸಿಸ್ಟೆಂಟ್ ತರಬೇತಿಗೆ ಪಿಯುಸಿ ತೇರ್ಗಡೆಯಾಗಿರಬೇಕು ಮತ್ತು ಮೆಡಿಕಲ್ ಇಕ್ವಿಪ್ ಮೆಂಟ್ ಟೆಕ್ನಾಲಜಿ ಅಸಿಸ್ಟೆಂಟ್ ತರಬೇತಿಗೆ ಎಸ್ ಎಸ್ ಎಲ್ ಸಿ/ಐಟಿಐ/ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.
ಆಸಕ್ತ ಅಭ್ಯರ್ಥಿಗಳು ಈ ವಿವಧ ಕೋರ್ಸ್‌ಗಳ ತರಬೇತಿಗೆ ಸಂಬಂಧಿಸಿದ ವಿವರಗಳಿಗಾಗಿ ಫಾರ್ಮ್ ಲಿಂಕ್ www.koppal.nic.in ನಲ್ಲಿ ಪಡೆಯಬಹುದು.