ವಿಶೇಷ ಭೂಸ್ವಾಧಿನಾಧಿಕಾರಿಗಳು ಹಾಗೂ ಸಕ್ಷಮ ಪ್ರಾಧಿಕಾರಿಗಳ ಕಚೇರಿ, ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ, ಹೆಬ್ಬಾಳ, ಬೆಂಗಳೂರು ಕಚೇರಿಯ ವ್ಯಾಪ್ತಿಗೆ ಒಳಪಡುವ ಹೊಸಕೋಟೆ, ಮಾಲೂರು, ಕೋಲಾರ, ಬಂಗಾರಪೇಟೆ, ಕೆ.ಜಿ.ಎಫ್ ತಾಲ್ಲೂಕುಗಳಲ್ಲಿ ವಿವಿಧ ಯೋಜನೆಗಳಿಗೆ ಕಂದಾಯ ಇಲಾಖೆ/ ಸರ್ವೇ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿರುವ ಶಿರಸ್ತೇದಾರರು, ಪ್ರಥಮ ದರ್ಜೆ ಸಹಾಯಕರು/ರಾಜಸ್ವ ನಿರೀಕ್ಷಕರು, ಗ್ರಾಮಲೆಕ್ಕಿಗರು ಮತ್ತು ಭೂಮಾಪಕರುಗಳ ಅವಶ್ಯಕತೆಯಿರುತ್ತದೆ. ಗುತ್ತಿಗೆ ಆಧಾರದ ಮೇರೆಗೆ ತಾತ್ಕಾಲಿಕವಾಗಿ ಈ ಕೆಳಕಂಡ ಹುದ್ದೆಗಳಿಗೆ ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಲಾಗುವುದು.
ಶಿರಸ್ತೇದಾರರು – 5 ಹುದ್ದೆ
ರಾಜಸ್ವ ನಿರೀಕ್ಷಕರು – 10 ಹುದ್ದೆ
ಭೂಮಾಪಕರು – 10 ಹುದ್ದೆ
ಪ್ರಥಮ ದರ್ಯ ಸಹಾಯಕರು – 10 ಹುದ್ದೆ
ಗ್ರಾಮಲೆಕ್ಕಿಗರು – 10 ಹುದ್ದೆ
ಪ್ರಾಧಿಕಾರದಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಮೇಲ್ಕಂಡ ತಾಲ್ಲೂಕುಗಳಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳ ನೌಕರರು ಎಲ್ಲಾ ಸೇವಾ ದಾಖಲೆಗಳೊಂದಿಗೆ ದಿನಾಂಕ 02-08-2021 ಮತ್ತು 07-08-2021 ರವರೆಗೆ ನಡೆಯುವ walk in interview ಗೆ ಕಚೇರಿ ವೇಳೆಯಲ್ಲಿ ಈ ಕೆಳಕಂಡ ವಿಳಾಸದಲ್ಲಿ ಖುದ್ದು ಹಾಜರಾಗತಕ್ಕದ್ದು.
ಕಚೇರಿ ವಿಳಾಸ : ವಿಶೇಷ ಭೂಸ್ವಾಧಿನಾಧಿಕಾರಿಗಳು ಹಾಗೈ ಸಕ್ಷಮ ಪ್ರಾಧಿಕಾರಿಗಳು, ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ, ನಂ.678/3, ನೀರುಬಾವಿ ಕೆಂಪಣ್ಣ ಲೇಔಟ್ ಹೆಬ್ಬಾಳ, ಬೆಂಗಳೂರು – 560024, ದೂರವಾಣಿ ಸಂಖ್ಯೆ -: 9880414634