Advertisements
ನೆಹರು ಯುವ ಕೇಂದ್ರ ಸಂಘಟನೆಯಲ್ಲಿ ಖಾಲಿ ಇರುವ ರಾಷ್ಟ್ರೀಯ ಸ್ವಯಂಸೇವಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳು ಈ ಕೆಳಗಿನಂತಿವೆ:
ಹುದ್ದೆ
ರಾಷ್ಟ್ರೀಯ ಸ್ವಯಂಸೇವಕ
ಹುದ್ದೆಯ ಸಂಖ್ಯೆ
13,206
ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20,ಫೆಬ್ರವರಿ 2021.
ಸಂದರ್ಶನದ ದಿನಾಂಕ : 25, ಫೆಬ್ರವರಿ 2021 ರಿಂದ 08,ಮಾರ್ಚ್ 2021ರ ವರೆಗೆ ನಡೆಯಲಿದೆ.
ಫಲಿತಾಂಶ ಪ್ರಕಟವಾಗುವ ದಿನಾಂಕ : 15-03-2021
ವಯೋಮಿತಿ
ರಾಷ್ಟ್ರೀಯ ಸ್ವಯಂಸೇವಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18 ಹಾಗೂ ಗರಿಷ್ಠ 29 ವರ್ಷ ಆಗಿರಬೇಕು.
ವಿದ್ಯಾರ್ಹತೆ
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಎಸ್ ಎಸ್ ಎಲ್ ಸಿ ತೇರ್ಗಡೆಯಾಗಿರಬೇಕು.
ರಾಷ್ಟ್ರೀಯ ಸ್ವಯಂಸೇವಕ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಯ ಆಯ್ಕೆಯು ಸಂದರ್ಶನದ ಮೂಲಕ ಹಾಗೂ ಆಯ್ಕೆ ಪಟ್ಟಿಯ ಮೂಲಕ ಮಾಡಲಾಗುವುದು.
ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್‌ಸೈಟ್ nyks.nic.in ನಲ್ಲಿ ಪಡೆಯಬಹುದು.