NWDA : ಉದ್ಯೋಗವಕಾಶ

Advertisements

ನ್ಯಾಷನಲ್ ವಾಟರ್ ಡೆವಲಪ್ಮೆಂಟ್ ಏಜೆನ್ಸಿ (NWDA) ಯು ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ದಿನಾಂಕ 25-06-2021 ಕೊನೆಯ ದಿನಾಂಕವಾಗಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ತಿಳಿದು ಅರ್ಜಿಯನ್ನು ಸಲ್ಲಿಸಬಹುದು

ಹುದ್ದೆ : ಜೂನಿಯರ್ ಸಿವಿಲ್ ಇಂಜಿನಿಯರ್- 16, ಹಿಂದಿ ಟ್ರಾನ್ಸ್ ಲೇಟರ್-01, ಜ್ಯೂನಿಯರ್ ಅಕೌಂಟ್ಸ್ ಆಫೀಸರ್- 05,
ಅಪ್ಪರ್ ಡಿವಿಶನ್ ಕ್ಲರ್ಕ್-12, ಸ್ಟೆನೋಗ್ರಾಫರ್ ಗ್ರೇಡ್ 2 – 05 , ಲೋವರ್ ಡಿವಿಶನ್ ಕ್ಲರ್ಕ್- 23 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಿದೆ.

ಜೂನಿಯರ್ ಸಿವಿಲ್ ಇಂಜಿನಿಯರ್– ಡಿಪ್ಲೋಮಾ ಸಿವಿಲ್ ಇಂಜಿನಿಯರ್ ‌ಹೊಂದಿರಬೇಕು. ಹಿಂದಿ ಟ್ರಾನ್ಸ್ ಲೇಟರ್- ಪಿಜಿ ಡಿಗ್ರಿ (ಹಿಂದಿ), ಇಂಗ್ಲೀಷ್ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಜ್ಯೂನಿಯರ್ ಅಕೌಂಟ್ಸ್ ಆಫೀಸರ್– ಕಾಮರ್ಸ್ ಪದವಿ ಜೊತೆ ಕಾರ್ಯಾನುಭವ ಇರಬೇಕು.
ಅಪ್ಪರ್ ಡಿವಿಶನ್ ಕ್ಲರ್ಕ್– ಯಾವುದೇ ಪದವಿ ಹೊಂದಿರಬೇಕು. ಸ್ಟೆನೋಗ್ರಾಫರ್ ಗ್ರೇಡ್ 2 -ದ್ವಿತೀಯ ಪಿಯು ಜೊತೆಗೆ ಟೈಪಿಂಗ್ ಜ್ಞಾನ ಇರಬೇಕು. ಲೋವರ್ ಡಿವಿಶನ್ ಕ್ಲರ್ಕ್-ದ್ವಿತೀಯ ಪಿಯು ಜೊತೆಗೆ ಟೈಪಿಂಗ್ ಜ್ಞಾನ ಇರಬೇಕು.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 10-05-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 25-06-2021
ಕಂಪ್ಯೂಟರ್ ಆಧಾರಿತ ಪರೀಕ್ಷೆ : ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.

ಅರ್ಜಿ ಶುಲ್ಕ : ಜನರಲ್/ ಒಬಿಸಿ ಅಭ್ಯರ್ಥಿಗಳಿಗೆ ರೂ.840/-, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪಿಡ್ಬ್ಯುಡಿ ಅಭ್ಯರ್ಥಿಗಳಿಗೆ ರೂ. 500/- ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು.

ವಯೋಮಿತಿ : ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯೋಮಿತಿ ಆಗಿರಬೇಕು. ಮತ್ತು ಹುದ್ದೆಗಳಿಗನುಸಾರವಾಗಿ ಅಭ್ಯರ್ಥಿಗಳಿಗೆ 27/30/27 ವರ್ಷ ವಯೋಮಿತಿ ಇರಬೇಕು. ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

Leave a Comment