NVS Recruitment 2024: 1377 ಬೋಧಕೇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ನವೋದಯ ವಿದ್ಯಾಲಯ ಸಮಿತಿಯು (NVS) ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 1377 ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳಲ್ಲಿ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ವೃತ್ತಿಯನ್ನು ತಮ್ಮದಾಗಿಸಿಕೊಳ್ಳಬಹುದು. ಅಭ್ಯರ್ಥಿಗಳು ಕೊನೆಯ ದಿನಾಂಕದಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; ಅತಿ ಶೀಘ್ರದಲ್ಲಿ ಅಪ್ಡೇಟ್ ಮಾಡಲಾಗುತ್ತದೆ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಶೀಘ್ರದಲ್ಲೇ
ಹುದ್ದೆಯ ವಿವರ ಇಲ್ಲಿದೆ
ಹುದ್ದೆಯ ಹೆಸರು: ನವೋದಯ ವಿದ್ಯಾಲಯ ಸಮಿತಿ (NVS) ಯಲ್ಲಿ 1377 ಹುದ್ದೆಗಳು ಖಾಲಿ ಇದ್ದು, ಬೋಧಕೇತನ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆಯ ಹೆಸರು ಮತ್ತು ಸಂಖ್ಯೆ:
ಮಹಿಳಾ ಸಿಬ್ಬಂದಿ ನರ್ಸ್ 121, ಸಹಾಯಕ ವಿಭಾಗ ಅಧಿಕಾರಿ (ASO) 5, ಆಡಿಟ್ ಸಹಾಯಕ 12, ಜೂನಿಯರ್ ಅನುವಾದ ಅಧಿಕಾರಿ 4, ಕಾನೂನು ಸಹಾಯಕ 1, ಸ್ಟೆನೋಗ್ರಾಫರ್ 23, ಕಂಪ್ಯೂಟರ್ ಆಪರೇಟರ್ 2, ಅಡುಗೆ ಮೇಲ್ವಿಚಾರಕ 78, ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (JSA) 381, ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ 128, ಲ್ಯಾಬ್ ಅಟೆಂಡೆಂಟ್ 161, ಮೆಸ್ ಸಹಾಯಕ 442, ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) 19 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ:
ಮಹಿಳಾ ಸ್ಟಾಫ್ ನರ್ಸ್ ಹುದ್ದೆಗೆ ಬಿ.ಎಸ್ಸಿ, ಸಹಾಯಕ ವಿಭಾಗ ಅಧಿಕಾರಿ (ASO) ಹುದ್ದೆಗೆ ಪದವಿ, ಲೆಕ್ಕ ಪರಿಶೋಧನಾ ಸಹಾಯಕ ಹುದ್ದೆಗೆ ಬಿ.ಕಾಂ, ಜೂನಿಯರ್ ಅನುವಾದ ಅಧಿಕಾರಿ ಸ್ನಾತಕೋತ್ತರ ಹುದ್ದೆಗೆ ಪದವಿ, ಕಾನೂನು ಸಹಾಯಕ ಹುದ್ದೆಗೆ LLB, ಸ್ಟೆನೋಗ್ರಾಫರ್ ಹುದ್ದೆಗೆ 12ನೇ ತರಗತಿ, ಕಂಪ್ಯೂಟರ್ ಆಪರೇಟರ್ ಹುದ್ದೆಗೆ BCA, B.Sc, B.E ಅಥವಾ B.Tech, ಅಡುಗೆ ಮೇಲ್ವಿಚಾರಕ ಹುದ್ದೆಗೆ ಪದವಿ, ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (JSA) ಹುದ್ದೆಗೆ 12th, ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗೆ 10ನೇ, ITI, ಲ್ಯಾಬ್ ಅಟೆಂಡೆಂಟ್ ಹುದ್ದೆಗೆ 10ನೇ, 12ನೇ, ಡಿಪ್ಲೊಮಾ, ಮೆಸ್ ಸಹಾಯಕ ಹುದ್ದೆಗೆ, ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) ಹುದ್ದೆಗೆ 10th ಪಾಸಾಗಿರುವವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ:
ಮಹಿಳಾ ಸಿಬ್ಬಂದಿ ನರ್ಸ್ ಹುದ್ದೆಗೆ ಗರಿಷ್ಠ 35 ವರ್ಷ, ಸಹಾಯಕ ವಿಭಾಗ ಅಧಿಕಾರಿ (ASO) ಹುದ್ದೆಗೆ ಕನಿಷ್ಠ 23 ವರ್ಷ ಗರಿಷ್ಠ 33 ವರ್ಷ, ಆಡಿಟ್ ಸಹಾಯಕ ಹುದ್ದೆಗೆ ಕನಿಷ್ಠ 18 ವರ್ಷ ಗರಿಷ್ಠ 30 ವರ್ಷ, ಜೂನಿಯರ್ ಅನುವಾದ ಅಧಿಕಾರಿ ಹುದ್ದೆಗೆ ಗರಿಷ್ಠ 32 ವರ್ಷ, ಕಾನೂನು ಸಹಾಯಕ ಕನಿಷ್ಠ23 ವರ್ಷ ಗರಿಷ್ಠ 35 ವರ್ಷ, ಸ್ಟೆನೋಗ್ರಾಫರ್ ಹುದ್ದೆಗೆ ಕನಿಷ್ಠ 18 ವರ್ಷ 27 ವರ್ಷ, ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಕನಿಷ್ಠ 18 ವರ್ಷ ಗರಿಷ್ಠ 30 ವರ್ಷ, ಅಡುಗೆ ಮೇಲ್ವಿಚಾರಕರು ಹುದ್ದೆಗೆ 35 ವರ್ಷ, ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (JSA) ಹುದ್ದೆಗೆ ಕನಿಷ್ಠ 18 ವರ್ಷ 27 ವರ್ಷ, ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗೆ ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ, ಲ್ಯಾಬ್ ಅಟೆಂಡೆಂಟ್, ಮೆಸ್ ಸಹಾಯಕ, ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಯೋಮಿತಿಯು ಕನಿಷ್ಠ 18 ವರ್ಷ ಗರಿಷ್ಠ 30 ವರ್ಷ ಆಗಿರಬೇಕು. OBC (NCL) ಅಭ್ಯರ್ಥಿಗಳಿಗೆ 03 ವರ್ಷ, SC/ST ಅಭ್ಯರ್ಥಿಗಳಿಗೆ 05 ವರ್ಷ, PwD (ಸಾಮಾನ್ಯ) ಅಭ್ಯರ್ಥಿಗಳಿಗೆ 10 ವರ್ಷ, PwD [OBC (NCL)] ಅಭ್ಯರ್ಥಿಗಳಿಗೆ 13 ವರ್ಷ, PwD (SC/ST) ಅಭ್ಯರ್ಥಿಗಳಿಗೆ 15 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಅರ್ಜಿ ಶುಲ್ಕ:
SC/ST/PwBD ಅಭ್ಯರ್ಥಿಗಳು ರೂ.500/- ಅರ್ಜಿ ಶುಲ್ಕ ಪಾವತಿ ಮಾಡಬೇಕು.
ಸಾಮಾನ್ಯ/EWS/OBC (NCL) ಅಭ್ಯರ್ಥಿಗಳು ಮಹಿಳಾ ಸಿಬ್ಬಂದಿ ನರ್ಸ್ ಹುದ್ದೆಗಳಿಗೆ ರೂ.1500/-, ಉಳಿದ ಹುದ್ದೆಗಳಿಗೆ ರೂ.1000/- ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಆನ್‌ಲೈನ್ ಮೂಲಕ ಮಾತ್ರವೇ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿ ಮಾಡಬೇಕು.
ಆಯ್ಕೆ ಪ್ರಕ್ರಿಯೆ: ಮೇಲ್ಕಂಡ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.