Northern Railway Sports: ರೈಲ್ವೆ ನೇಮಕಾತಿ ಮಂಡಳಿ, ಉತ್ತರ ರೈಲ್ವೆ, ಕ್ರೀಡಾ ಕೋಟಾದಡಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರೂಪ್ ಡಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಒಟ್ಟು 38 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕೇಂದ್ರ ಸರಕಾರದಲ್ಲಿ ಉದ್ಯೋಗ ಮಾಡಲಿಚ್ಛಿಸುವ ಕ್ರೀಡಾ ಸಾಧಕ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ. ಹುದ್ದೆಗೆ ಅರ್ಜಿ ಸಲ್ಲಿಸಲು 16-05-2024 ಕೊನೆಯ ದಿನಾಂಕವಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆಯ ಕುರಿತು ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಪ್ರಮುಖ ದಿನಾಂಕಗಳು;
ಅಧಿಸೂಚನೆ ಬಿಡುಗಡೆಗೊಂಡ ದಿನಾಂಕ: 15-04-2024
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 16-04-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-05-2024
ಹುದ್ದೆಯ ಮಾಹಿತಿ ಇಲ್ಲಿದೆ;
ಹುದ್ದೆಯ ಹೆಸರು: ಉತ್ತರ ರೈಲ್ವೆ ಆರ್‌ಆರ್‌ಸಿ ಯಲ್ಲಿ ಕ್ರೀಡಾ ಕೋಟಾದಡಿಯ ಗ್ರೂಪ್ ಡಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 38 ಹುದ್ದೆಗಳು ಖಾಲಿ ಇದೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಕುಸ್ತಿ (ಪುರುಷ) ಫ್ರೀ ಸ್ಟೈಲ್
ಶೂಟಿಂಗ್
ಕಬ್ಬಡಿ
ಹಾಕಿ
ತೂಕ ಎತ್ತುವಿಕೆ
ಪವರ್‌ಲಿಫ್ಟಿಂಗ್ (ಪುರುಷ)
ಪವರ್‌ಲಿಫ್ಟಿಂಗ್ (ಮಹಿಳೆ)
ಜಿಮ್ನಾಸ್ಟಿಕ್ (ಪುರುಷ)
ಕ್ರಿಕೆಟ್ (ಪುರುಷ)
ಕ್ರಿಕೆಟ್ (ಮಹಿಳೆ)
ಬಾಲ್ ಬ್ಯಾಡ್ಮಿಂಟನ್ (ಪುರುಷ)
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ/ಸೆಕೆಂಡರಿ ಎಜುಕೇಷನ್ ಅಥವಾ ತತ್ಸಮಾನ ಶೈಕ್ಷಣಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ವಯೋಮಿತಿ: ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಹಾಗೂ ಗರಿಷ್ಠ 25 ವರ್ಷ ಮೀರಿರಬಾರದು. ಹಾಗೂ ಮುಖ್ಯವಾದ ವಿಷಯವೇನೆಂದರೆ ಕ್ರೀಡಾ ಕೋಟಾದಡಿಯ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗುವುದಿಲ್ಲ.
ಅರ್ಜಿ ಶುಲ್ಕ:
ಎಸ್‌ಸಿ/ಎಸ್‌ಟಿ/ಮಹಿಳಾ/ ಇತರೆ ಹಿಂದುಳಿದ/ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು ರೂ.250 ಅರ್ಜಿ ಶುಲ್ಕ ಪಾವತಿ ಮಾಡಬೇಕು. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಪಾವತಿ ಮಾಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ, ಆನ್‌ಲೈನ್ ಅಪ್ಲಿಕೇಶನ್ ಎಂದಿರುವಲ್ಲಿ ಕ್ಲಿಕ್ ಮಾಡಿ, ನಂತರ ಅಲ್ಲಿರುವ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬೇಕು.
ವಿಶೇಷ ಸೂಚನೆ; ಈ ವಿಧಾನ ಹೊರತು ಪಡಿಸಿ ಅಭ್ಯರ್ಥಿಗಳು ಇನ್ನುಳಿದ ಯಾವುದೇ ಮಾದರಿಯಲ್ಲಿ ಅರ್ಜಿ ಸಲ್ಲಿಸುವಂತಿಲ್ಲ.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ರಾಜ್ಯ, ರಾಷ್ಟ್ರ, ವಿಶ್ವವಿದ್ಯಾಲಯಗಳು, ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿದ್ದಲ್ಲಿ ಅಂತವರು ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ.