ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೆಟರ್ನರಿ ಎಪಿಡಿಮಯೋಲಜಿ ಆಂಡ್ ಡಿಸೀಸಸ್ ಇನ್ ಫಾರ್ಮಟಿಕ್ಸ್ (NIVEDI) ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 11 ಮಾರ್ಚ್ ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.
ಕ್ವಿಕ್ ಲುಕ್
ಅರ್ಜಿ ಸಲ್ಲಿಸುವುದು ಹೇಗೆ?: ಒನ್ಲೈನ್
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 26-02-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-03-2021
ಆನ್ಲೈನ್ ಸಂದರ್ಶನ ದಿನಾಂಕ : 15 -03-2021( 10.30 am)
ಅರ್ಜಿ ಸಲ್ಲಿಕೆ:
ಎನ್ ಐವಿಇಡಿಐ ಹುದ್ದೆಗಳಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿ ಸಲ್ಲಿಸುವಂತೆ ಇಲ್ಲ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೆಟರ್ನರಿ ಎಪಿಡಿಮಯೋಲಜಿ (NIVEDI) ಎಸ್ ಆರ್ ಎಫ್, ಜೆ ಆರ್ ಎಫ್ , ಯಂಗ್ ಪ್ರೊಫೆಷನಲ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಒಟ್ಟು 7 ಹುದ್ದೆಗಳಿವೆ.
ವಿದ್ಯಾರ್ಹತೆ: ಸೀನಿಯರ್ ರಿಸರ್ಚ್ ಫೆಲೋ-2 – ಬ್ಯಾಚುಲರ್ ಡಿಗ್ರಿ, ಪೋಸ್ಟ್ ಗ್ರಾಜ್ಯುಯೇಟ್,ಎಂಟೆಕ್, ಎಂಸಿಎ,ಎನ್ ಇಟಿ, ಜಿಎಟಿಇ ವಿದ್ಯಾರ್ಹತೆ ಹೊಂದಿರಬೇಕು.
ಯಂಗ್ ಪ್ರೊಫೆಷನಲ್ -3- ಗ್ರಾಜ್ಯುಯೇಟ್ ಮಾಸ್ಟರ್ಸ್ ಡಿಗ್ರಿ, ಪೋಸ್ಟ್ ಗ್ರಾಜ್ಯುಯೇಟ್ ವಿದ್ಯಾರ್ಹತೆ ಪಡೆದಿರಬೇಕು.
ಜ್ಯೂನಿಯರ್ ರಿಸರ್ಚ್ ಫೆಲೋ(ಜೆಆರ್ ಎಫ್)- 1- ,ಮಾಸ್ಟರ್ಸ್ ಡಿಗ್ರಿ, ಎನ್ ಇಟಿ, ಜಿಎಟಿಇ ವಿದ್ಯಾರ್ಹತೆ ಹೊಂದಿರಬೇಕು.
ಯಂಗ್ ಪ್ರೊಫೆಷನಲ್ -1 – ಬಿಕಾಂ,ಬಿಬಿಎ,ಬಿಬಿಎಸ್ ವಿದ್ಯಾರ್ಹತೆ ಪಡೆದಿರಬೇಕು.
ವಯೋಮಿತಿ:
ಸೀನಿಯರ್ ರಿಸರ್ಚ್ ಫೆಲೋ-2 ಹಾಗೂ ಜ್ಯೂನಿಯರ್ ರಿಸರ್ಚ್ ಫೆಲೋ -1 ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 35 ವರ್ಷ( ಪುರುಷ ಅಭ್ಯರ್ಥಿ) 40ವರ್ಷ ( ಮಹಿಳಾ ಅಭ್ಯರ್ಥಿ)
ಯಂಗ್ ಪ್ರೊಫೆಷನಲ್ -4 ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ರಿಂದ ಗರಿಷ್ಠ 45 ವಯೋಮಿತಿ ಹೊಂದಿರಬೇಕು.
ವೇತನ: ಸೀನಿಯರ್ ರಿಸರ್ಚ್ ಫೆಲೋ ಹಾಗೂ ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.31,000/- ರಿಂದ ರೂ.35,000/- ವೇತನ ನಿಗದಿಪಡಿಸಲಾಗಿದೆ.
ಯಂಗ್ ಪ್ರೊಫೆಷನಲ್ 11, ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.35,000/- ಹಾಗೂ ಯಂಗ್ ಪ್ರೊಫೆಷನಲ್ (1)ಹುದ್ದೆಗೆ ರೂ.25,000/- ವೇತನ ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ
ಆನ್ ಲೈನ್ ಅಪ್ಲಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ