ಎನ್ಐಟಿಕೆ ನಲ್ಲಿ ಉದ್ಯೋಗವಕಾಶ : ಕೂಡಲೇ ಅರ್ಜಿ ಸಲ್ಲಿಸಿ

Advertisements

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ ಸುರತ್ಕಲ್ (ಎನ್ಐಟಿಕೆ) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಹುದ್ದೆಗಳನ್ನು ಮೆಕ್ಯಾನಿಕಲ್ ಇಂಜಿನಿಯರಿಂಗ್ ಸೆಂಟರ್ ನಲ್ಲಿ ಭರ್ತಿ ಮಾಡಿಕೊಳ್ಳಲಿದ್ದು ಒಂದು ವರ್ಷ ಹುದ್ದೆಯ ಅವಧಿ ಇರುತ್ತದೆ.

ಹುದ್ದೆಗಳ ವಿವರ : ಸೈಂಟಿಫಿಕ್ ಸ್ಟಾಫ್, ಟೆಕ್ನಿಕಲ್ ಸ್ಟಾಫ್, ಪ್ರಾಜೆಕ್ಟ್ ಇಂಜಿನಿಯರ್, ಸೀನಿಯರ್ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.

ವಿದ್ಯಾರ್ಹತೆ : ಸೈಂಟಿಫಿಕ್ ಸ್ಟಾಫ್ ಹುದ್ದೆಗೆ ಬಿಸಿಎ, ಎಂಸಿಎ, ಎಂಎಸ್ಸಿ ತೇರ್ಗಡೆ ಹೊಂದಿರಬೇಕು. ಟೆಕ್ನಿಕಲ್ ಸ್ಟಾಫ್ ಐಟಿಐ ಪಾಸಾಗಿರಬೇಕು. ಟೆಕ್ನಿಕಲ್ ಸ್ಟಾಫ್ ಹುದ್ದೆಗೆ 3 ವರ್ಷ ಡಿಪ್ಲೋಮಾ ಇನ್ ಇಂಜಿನಿಯರಿಂಗ್ ತೇರ್ಗಡೆ ಹೊಂದಿರಬೇಕು. ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಬಿಟೆಕ್, ಎಂಟೆಕ್ ಪಾಸಾಗಿರಬೇಕು. ಸೀನಿಯರ್ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಪಿಎಚ್ಡಿ ಮಾಡಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-03-2021

ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಅರ್ಜಿ ಡೌನ್‌ಲೋಡ್ ಮಾಡಿ, ಭರ್ತಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.

ವಿಳಾಸ : ಎನ್ ಐಟಿಕೆ, ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ, ಕರ್ನಾಟಕ , ಸುರತ್ಕಲ್

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave a Comment