NIMHANS Jobs 2024: ಬೆಂಗಳೂರಿನಲ್ಲಿ ಉದ್ಯೋಗ; ಒಟ್ಟು 84 ಹುದ್ದೆಗಳು ಖಾಲಿ ಇದೆ; ವೇತನ 20000-150000/-; ಈ ಕೂಡಲೇ ಅರ್ಜಿ ಹಾಕಿ

ಉದ್ಯೋಗ ವಿವರ- ಕ್ವಿಕ್‌ ಲುಕ್

  • ಎಲ್ಲಿ ಉದ್ಯೋಗ?: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್
  • ಹುದ್ದೆಯ ಹೆಸರು: ನರ್ಸ್ , ಕ್ಲಿನಿಕಲ್ ಸೈಕಾಲಜಿಸ್ಟ್ / ಸೈಕಾಲಜಿಸ್ಟ್, ಐಟಿ ಸಂಯೋಜಕರು, ನ್ಯೂರೋ ನರ್ಸ್ , ಭೌತಚಿಕಿತ್ಸಕ, ಸ್ಪೀಚ್ ಥೆರಪಿಸ್ಟ್, ಜಿಲ್ಲಾ ಸಂಯೋಜಕರು, ವೈದ್ಯಕೀಯ ಸಮಾಜ ಸೇವಕ, ಸೀನಿಯರ್‌ ರೆಸಿಡೆಂಟ್‌ (ನರವಿಜ್ಞಾನ/ನರಶಸ್ತ್ರಚಿಕಿತ್ಸೆ)/ಸೀನಿಯರ್‌ ರೆಸಿಡೆಂಟ್‌ (ವೈದ್ಯಕೀಯ)/ವೈದ್ಯಕೀಯ ಅಧಿಕಾರಿ
  • ಹುದ್ದೆಗಳ ಸಂಖ್ಯೆ: 84
  • ಅರ್ಜಿ ಸಲ್ಲಿಸುವುದು ಹೇಗೆ?: ನೇರ ಸಂದರ್ಶನ
  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: June 4, 2024
  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: June 24, 2024
  • ವೆಬ್‌ ವಿಳಾಸ: https://nimhans.ac.in/
Advertisements

NIMHANS Recruitment 2024: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಿದ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಒಟ್ಟು 84 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ವೈದ್ಯಕೀಯ ಅಧಿಕಾರಿ, ಸೀನಿಯರ್‌ ರೆಸಿಡೆಂಟ್‌ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗೆ ಕರ್ನಾಟಕ ಸರ್ಕಾರದಲ್ಲಿ ಪೋಸ್ಟಿಂಗ್‌ ನಡೆಯಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 24-Jun-2024 ನೇರ ಸಂದರ್ಶನವಿರುತ್ತದೆ.

ಸಂಸ್ಥೆಯ ಹೆಸರು: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್) ಇಲ್ಲಿ ಖಾಲಿ ಇರುವ 84 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಅಧಿಕಾರಿ, ಸೀನಿಯರ್‌ ರೆಸಿಡೆಂಟ್‌ ಹುದ್ದೆಗೆ ಮಾಸಿಕ ರೂ. 20000-150000/- ವೇತನ ದೊರಕಲಿದೆ.

ಹುದ್ದೆ ಹೆಸರು ಮತ್ತು ಸಂಖ್ಯೆ ಮತ್ತು ವಿದ್ಯಾರ್ಹತೆ
ನರ್ಸ್ – 10 ಹುದ್ದೆಗಳು- GNM, B.Sc ತೇರ್ಗಡೆ ಹೊಂದಿರಬೇಕು.
ಕ್ಲಿನಿಕಲ್ ಸೈಕಾಲಜಿಸ್ಟ್/ಮನಶ್ಶಾಸ್ತ್ರಜ್ಞ – 11 ಹುದ್ದೆಗಳು – ಪೋಸ್ಟ್ ಗ್ರಾಜುಯೇಷನ್, M.Phil ತೇರ್ಗಡೆ ಹೊಂದಿರಬೇಕು.
ಐಟಿ ಸಂಯೋಜಕರು – 1 ಹುದ್ದೆ- B.Sc, BCA, B.E ಅಥವಾ B.Tech, MCA ತೇರ್ಗಡೆ ಹೊಂದಿರಬೇಕು.
ನ್ಯೂರೋ ನರ್ಸ್ – 1 ಹುದ್ದೆ- M.Sc ತೇರ್ಗಡೆ ಹೊಂದಿರಬೇಕು.
ಭೌತಚಿಕಿತ್ಸಕ – 2 ಹುದ್ದೆಗಳು – ಪದವಿ ತೇರ್ಗಡೆ ಹೊಂದಿರಬೇಕು.
ಸ್ಪೀಚ್ ಥೆರಪಿಸ್ಟ್ – 24 ಹುದ್ದೆಗಳು – ಬ್ಯಾಚುಲರ್ ಇನ್ ಆಡಿಯಾಲಜಿ ಮತ್ತು ಸ್ಪೀಚ್-ಲ್ಯಾಂಗ್ವೇಜ್ ಪ್ಯಾಥಾಲಜಿ ತೇರ್ಗಡೆ ಹೊಂದಿರಬೇಕು.
ಜಿಲ್ಲಾ ಸಂಯೋಜಕರು – 1 ಹುದ್ದೆ – ಸ್ನಾತಕೋತ್ತರ ಪದವಿ ತೇರ್ಗಡೆ ಹೊಂದಿರಬೇಕು.
ವೈದ್ಯಕೀಯ ಸಮಾಜ ಸೇವಕ -1 ಹುದ್ದೆಗಳು- MSW ತೇರ್ಗಡೆ ಹೊಂದಿರಬೇಕು.
ಸೀನಿಯರ್‌ ರೆಸಿಡೆಂಟ್‌ (ನರವಿಜ್ಞಾನ/ನರಶಸ್ತ್ರಚಿಕಿತ್ಸೆ)/ಸೀನಿಯರ್‌ ರೆಸಿಡೆಂಟ್‌ (ವೈದ್ಯಕೀಯ)/ವೈದ್ಯಕೀಯ ಅಧಿಕಾರಿ- 33 ಹುದ್ದೆಗಳು- MBBS, M.D, DM,DNB ತೇರ್ಗಡೆ ಹೊಂದಿರಬೇಕು.

ವಯೋಮಿತಿ: ನರ್ಸ್ , ಕ್ಲಿನಿಕಲ್ ಸೈಕಾಲಜಿಸ್ಟ್ / ಸೈಕಾಲಜಿಸ್ಟ್, ಐಟಿ ಸಂಯೋಜಕರು, ನ್ಯೂರೋ ನರ್ಸ್ , ಭೌತಚಿಕಿತ್ಸಕ, ಸ್ಪೀಚ್ ಥೆರಪಿಸ್ಟ್, ಜಿಲ್ಲಾ ಸಂಯೋಜಕರು, ವೈದ್ಯಕೀಯ ಸಮಾಜ ಸೇವಕ ಈ ಹುದ್ದೆಗೆ ವಯಸ್ಸಿನ ಗರಿಷ್ಠ ಮಿತಿ 45 ವರ್ಷ, ಸೀನಿಯರ್‌ ರೆಸಿಡೆಂಟ್‌ (ನರವಿಜ್ಞಾನ/ನರಶಸ್ತ್ರಚಿಕಿತ್ಸೆ)/ಸೀನಿಯರ್‌ ರೆಸಿಡೆಂಟ್‌ (ವೈದ್ಯಕೀಯ)/ವೈದ್ಯಕೀಯ ಅಧಿಕಾರಿ 60 ವರ್ಷ ಗರಿಷ್ಠ ಮಿತಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ: ಮೇಲ್ಕಂಡ ಹುದ್ದೆಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ವೇತನ:
ನರ್ಸ್ ಹುದ್ದೆಗೆ ಆಯ್ಕೆಯಾದವರಿಗೆ ರೂ.20000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.
ಕ್ಲಿನಿಕಲ್ ಸೈಕಾಲಜಿಸ್ಟ್/ಮನಶ್ಶಾಸ್ತ್ರಜ್ಞ ಹುದ್ದೆಗೆ ಆಯ್ಕೆಯಾದವರಿಗೆ ರೂ.25000-40000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.
ಐಟಿ ಸಂಯೋಜಕರು ಹುದ್ದೆಗೆ ಆಯ್ಕೆಯಾದವರಿಗೆ ರೂ.55000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.
ನ್ಯೂರೋ ನರ್ಸ್ ಹುದ್ದೆಗೆ ಆಯ್ಕೆಯಾದವರಿಗೆ ರೂ.40000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.
ಭೌತಚಿಕಿತ್ಸಕ, ಸ್ಪೀಚ್ ಥೆರಪಿಸ್ಟ್, ಜಿಲ್ಲಾ ಸಂಯೋಜಕರು ಹುದ್ದೆಗೆ ಆಯ್ಕೆಯಾದವರಿಗೆ ರೂ.35000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.
ವೈದ್ಯಕೀಯ ಸಮಾಜ ಸೇವಕ ಹುದ್ದೆಗೆ ಆಯ್ಕೆಯಾದವರಿಗೆ ರೂ.40000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.
ಸೀನಿಯರ್‌ ರೆಸಿಡೆಂಟ್‌ (ನರವಿಜ್ಞಾನ/ನರಶಸ್ತ್ರಚಿಕಿತ್ಸೆ)/ಸೀನಿಯರ್‌ ರೆಸಿಡೆಂಟ್‌ (ವೈದ್ಯಕೀಯ)/ವೈದ್ಯಕೀಯ ಅಧಿಕಾರಿ ಹುದ್ದೆಗೆ ಆಯ್ಕೆಯಾದವರಿಗೆ ರೂ.75000-150000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ತಮ್ಮ ಸೂಕ್ತ ದಾಖಲೆಗಳೊಂದಿಗೆ 24-ಜೂನ್-2024 ಈ ಕೆಳಗೆ ನೀಡಿದ ಸ್ಥಳದಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬೇಕು.

ವಾಕ್-ಇನ್ ಸಂದರ್ಶನ ಸ್ಥಳದ ವಿವರಗಳು
ಸೀನಿಯರ್‌ ರೆಸಿಡೆಂಟ್‌ ಮತ್ತು ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ: Executive Chamber, 2nd Floor, Directors’ Office, Bengaluru, Karnataka
ಉಳಿದ ಹುದ್ದೆಗಳಿಗೆ: Board Room, 4th Floor, NBRC Building, NIMHANS, Bengaluru, Karnataka
ನರ್ಸ್, ಕ್ಲಿನಿಕಲ್ ಸೈಕಾಲಜಿಸ್ಟ್- 18-ಜೂನ್-2024
IT ಸಂಯೋಜಕರು 19-ಜೂನ್-2024
ನ್ಯೂರೋ ನರ್ಸ್, ಫಿಸಿಯೋಥೆರಪಿಸ್ಟ್ – 21-ಜೂನ್-2024
ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್ ಮತ್ತು ಆಡಿಯಾಲಜಿಸ್ಟ್/ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್, ಜಿಲ್ಲಾ ಸಂಯೋಜಕರು, ವೈದ್ಯಕೀಯ ಸಮಾಜ ಸೇವಕ, ಹಿರಿಯ ನಿವಾಸಿ (ನರವಿಜ್ಞಾನ/ನರಶಸ್ತ್ರಚಿಕಿತ್ಸೆ)/ಹಿರಿಯ ನಿವಾಸಿ (ವೈದ್ಯಕೀಯ)/ವೈದ್ಯಕೀಯ ಅಧಿಕಾರಿ – 24-ಜೂನ್-2024