NIMHANS Recruitment 2024: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ, ಬೆಂಗಳೂರು (National Institute of Mental Health and Neuro Sciences) ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಿದ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಒಟ್ಟು 01 ಹುದ್ದೆ ಖಾಲಿ ಇದ್ದು, ಡೇಟಾ ಮೇಲ್ವಿಚಾರಕರು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ಈ ಹುದ್ದೆಗೆ ಪೋಸ್ಟಿಂಗ್ ನಡೆಯಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ನೇರ ಸಂದರ್ಶನ ನಡೆಯಲಿದ್ದು, ದಿನಾಂಕ 05-Jun-2024 ರಂದು 10:00 AM ರಂದು ವಾಕ್-ಇನ್-ಇಂಟರ್ವ್ಯೂ ನಡೆಯಲಿದೆ.
ಪ್ರಮುಖ ದಿನಾಂಕಗಳು:
ಅಧಿಸೂಚನೆಯನ್ನು ಬಿಡುಗಡೆಯಾದ ದಿನಾಂಕ: 18-05-2024
ನೇರ ಸಂದರ್ಶನದ ದಿನಾಂಕ: 05-ಜೂನ್-2024 10:00 AM ಗೆ.
ಹುದ್ದೆಯ ವಿವರ ಇಲ್ಲಿದೆ;
ಸಂಸ್ಥೆಯ ಹೆಸರು: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್) ಇಲ್ಲಿ ಡೇಟಾ ಮೇಲ್ಚಿಚಾರಕರು ಹುದ್ದೆ ಖಾಲಿ ಇದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.40000 ವೇತನ ಸಿಗಲಿದೆ.
ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಪದವಿ ಮಾಡಿರಬೇಕು.
ವಯೋಮಿತಿ: ಡೇಡಾ ಮೇಲ್ವಿಚಾರಕರು ಹುದ್ದೆಗೆ ಅಭ್ಯರ್ಥಿಯ ಗರಿಷ್ಠ ವಯಸ್ಸು 35 ವರ್ಷ ಆಗಿರಬೇಕು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ ನಾರ್ಮ್ಸ್ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ: ಲಿಖಿತ/ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಡೇಟಾ ಮೇಲ್ಚಿಚಾರಕರು ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ತಮ್ಮ ಅಗತ್ಯ ದಾಖಲೆಯೊಂದಿಗೆ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬೇಕು. ವಿಳಾಸ ಈ ಕೆಳಗೆ ನೀಡಲಾಗಿದೆ.
ನೇರ ಸಂದರ್ಶನದ ವಿಳಾಸ;
Lecture hall-1, 1st floor, Old Administrative Building, NIMHANS, Bengaluru-560029 ಇಲ್ಲಿಗೆ ದಿನಾಂಕ 05-Jun-2024 10:00 AM ರಂದು ಅಭ್ಯರ್ಥಿಗಳು ಹಾಜರಿರಬೇಕು.
ಅಧಿಕೃತ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ nimhans.ac.in
ನೋಟಿಫಿಕೇಶನ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ