ನಿಮ್ಹಾನ್ಸ್ (NIMHANS) ನಲ್ಲಿ ಖಾಲಿ‌ ಇರುವ ಹುದ್ದೆಗೆ ಅರ್ಜಿ ಆಹ್ವಾನ: ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

Advertisements

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋಸೈನ್ಸಸ್ (NIMHANS)ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿದ್ದಾರೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ವಿವರಗಳು ಈ ಕೆಳಗೆ :

ಹುದ್ದೆ: ಜ್ಯೂನಿಯರ್ ಪ್ರಾಜೆಕ್ಟ್ ಕೊರ್ಡಿನೇಟರ್

ಹುದ್ದೆ ಸ್ಥಳ : ಕರ್ನಾಟಕ

ವೇತನ : ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 25,000/- ವೇತನ ನಿಗದಿಯಾಗಿರುತ್ತದೆ.

ವಿದ್ಯಾಭ್ಯಾಸ : ಅಂಗೀಕೃತ ಬೋರ್ಡ್/ಸಂಸ್ಥೆ ಯಿಂದ ಬ್ಯಾಚುಲರ್ ಡಿಗ್ರಿ ಯನ್ನು ಅಭ್ಯರ್ಥಿಗಳು ಪಡೆದುಕೊಂಡಿರಬೇಕು.

ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ವಯೋಮಿತಿ : ಅಭ್ಯರ್ಥಿಗಳ ವಯೋಮಿತಿಯು 30ವರ್ಷಕ್ಕಿಂತ ಮೇಲ್ಪಟ್ಟಿರಬಾರದು.

ಆಯ್ಕೆ ಪ್ರಕ್ರಿಯೆ : ಸ್ಕಿಲ್ ಟೆಸ್ಟ್, ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ‌.

ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್‌ ಗೆ ಭೇಟಿ ನೀಡಿ ಅರ್ಜಿಯನ್ನು ಡೌನ್‌ಲೋಡ್ ಮಾಡಿ, ಭರ್ತಿ ಮಾಡಿಕೊಂಡು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ 19, ಫೆಬ್ರವರಿ 2021 (10.30 ಬೆಳ್ಳಗೆ) ರಂದು ತಲುಪಿಸಬೇಕು.

ಕಚೇರಿಯ ವಿಳಾಸ :
Committee Room,
Adjacent to Academic & Evaluation,4 the floor,NBRC Building,
Admin Block,NIMHANS, Bengaluru-560029

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ.

ನೋಟಿಫಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave a Comment