NIMHANS : 275 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Advertisements

ನಿಮ್ಹಾನ್ಸ್ ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ‌ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು 28-06-2021 ರಂದು ಕೊನೆಯ ದಿನಾಂಕವಾಗಿರುತ್ತದೆ. ಹುದ್ದೆ, ಅರ್ಜಿ ಶುಲ್ಕ, ವಯೋಮಿತಿ, ವಿದ್ಯಾರ್ಹತೆ ಇವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೆಳಯ ನೀಡಲಾಗಿದೆ.

ಹುದ್ದೆ : ಸೀನಿಯರ್ ಸೈನ್ಟಿಫಿಕ್ ಆಫೀಸರ್ ( ನ್ಯೂರೋ ಮ್ಯೂಸ್ಕಲರ್) : 1 ಹುದ್ದೆ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿ.ಎಚ್.ಡಿ(Ph.D) ಮಾಡಿರಬೇಕು. ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 67,700/- ರಿಂದ ರೂ. 2,08,700/- ವೇತನ ನಿಗದಿ ಪಡಿಸಲಾಗಿದೆ.

ಕಂಪ್ಯೂಟರ್ ಪ್ರೊಗ್ರಾಮರ್ –1 ಹುದ್ದೆ : ಪೋಸ್ಟ್ ಗ್ರಾಜ್ಯುಯೇಶನ್ ಮಾಡಿರಬೇಕು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ಮೀರಿರಬಾರದು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 35,400/- ರಿಂದ ರೂ.1,12,400/- ರವರೆಗೆ ವೇತನವಿರುತ್ತದೆ.

ಜ್ಯೂನಿಯರ್ ಸೈಂಟಿಫಿಕ್ ಆಫೀಸರ್ ( ಸಬ್ ಸ್ಪೆಷಾಲಿಟಿ ಬ್ಲಾಕ್) : 1 ಹುದ್ದೆ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು M.D, M.B.B.S ಮಾಡಿರಬೇಕು. ಹಾಗೂ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 44,900/- ರಿಂದ ರೂ. 1,42,400/-ವೇತನವಿರುತ್ತದೆ. ಈ ಹುದ್ದೆಗೆ ಗರಿಷ್ಠ 35 ವಯೋ ಉಳ್ಳವರು ಅರ್ಜಿ ಸಲ್ಲಿಸಬಹುದು.

ನರ್ಸಿಂಗ್ ಆಫೀಸರ್ : 266 ಹುದ್ದೆ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಎಸ್ಸಿ ಮಾಡಿರಬೇಕು. ಹಾಗೂ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 44,900/- ರಿಂದ ರೂ. 1,42,400/-ವೇತನವಿರುತ್ತದೆ. ಈ ಹುದ್ದೆಗೆ ಗರಿಷ್ಠ 35 ವಯೋ ಉಳ್ಳವರು ಅರ್ಜಿ ಸಲ್ಲಿಸಬಹುದು.

ಸ್ಪೀಚ್ ಥೆರಪಿಸ್ಟ್ ಆಂಡ್ ಆಡಿಯೋಲಾಜಿಸ್ಟ್ ( ಹ್ಯೂಮನ್ ಜೆನೆಟಿಕ್ಸ್ ) : 3 ಹುದ್ದೆ: ಈ ಹುದ್ದೆಗೆ ಮಾಸ್ಟರ್ಸ್ ಡಿಗ್ರಿ ಮಾಡಿರಬೇಕು. ಈ ಹುದ್ದೆಗೆ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ವಯೋಮಿತಿ ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.35,400/- ರೂ. ಯಿಂದ ರೂ.1,12,400/- ಗಳವರೆಗೆ ವೇತನವಿರುತ್ತದೆ.

ಸೀನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ : 1 ಹುದ್ದೆ : ಈ ಹುದ್ದೆಗೆ ಮಾಸ್ಟರ್ಸ್ ಡಿಗ್ರಿ ಮಾಡಿರಬೇಕು. ಈ ಹುದ್ದೆಗೆ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯೋಮಿತಿ ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.35,400/- ರೂ. ಯಿಂದ ರೂ.1,12,400/- ಗಳವರೆಗೆ ವೇತನವಿರುತ್ತದೆ.

ಟೀಚರ್ ಫಾರ್ ಎಂ.ಆರ್ ಚಿಲ್ಡ್ರನ್ ( ಕ್ಲಿನಿಕಲ್ ಸೈಕಾಲಜಿ) : 1 ಹುದ್ದೆ : ಈ ಹುದ್ದೆಗೆ ಡಿಪ್ಲೋಮಾ,ಬಿಎ, ಬಿಎಸ್ಸಿ, ಬಿಎಡ್ ಮಾಡಿರಬೇಕು. ಈ ಹುದ್ದೆಗೆ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ವಯೋಮಿತಿ ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.35,400/- ರೂ. ಯಿಂದ ರೂ.1,12,400/- ಗಳವರೆಗೆ ವೇತನವಿರುತ್ತದೆ.

ಅಸಿಸ್ಟೆಂಟ್ ಡಯೆಟಿಷಿಯನ್ : 1 ಹುದ್ದೆ : ಈ ಹುದ್ದೆಗೆ ಡಿಪ್ಲೋಮಾ, ಬಿಎಸ್ಸಿ, ಎಂ.ಎಸ್ಸಿ ಮಾಡಿರಬೇಕು. ಈ ಹುದ್ದೆಗೆ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ವಯೋಮಿತಿ ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.35,400/- ರೂ. ಯಿಂದ ರೂ.1,12,400/- ಗಳವರೆಗೆ ವೇತನವಿರುತ್ತದೆ.

ಅರ್ಜಿ ಶುಲ್ಕ : ಪಿಡ್ಬ್ಯುಬಿಡಿ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಗ್ರೂಪ್ ‘ಎ’ ಪೋಸ್ಟ್:
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ‌.1180/-, ಉಳಿದ ಅಭ್ಯರ್ಥಿಗಳಿಗೆ ರೂ. 2,360/- ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಗ್ರೂಪ್ ಬಿ ಪೋಸ್ಟ್ : ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ.885/-, ಉಳಿದ ಅಭ್ಯರ್ಥಿಗಳಿಗೆ ರೂ.1,180/- ಶುಲ್ಕವನ್ನು ಪಾವತಿಸಬೇಕು.

ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು.

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ದಿನಾಂಕ 28-06-2021 ರೊಳಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.

The Director, NIMHANS, P.B.No.2900, Hosur Road, Bengaluru – 560029, India

NIMHANS : 275 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 2

Leave a Comment