NIMHANS ಬೆಂಗಳೂರು : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ರಾಷ್ಟ್ರೀಯ ಪ್ರಾಮುಖ್ಯತೆ ಸಂಸ್ಥೆ) ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಎಪ್ರಿಲ್ 03,2021 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

ಹುದ್ದೆ: ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಸೈಕ್ರಿಯಾಟ್ರಿ (ಮನಃಶಾಸ್ತ್ರ ಸಹಾಯಕ ಪ್ರಾಧ್ಯಾಪಕರು ) 1 ಹುದ್ದೆ
ಸೈಕ್ರಿಯಾಟ್ರಿಕ್ ನರ್ಸಿಂಗ್ ಟ್ರೈನರ್ ( ಮನಃಶಾಸ್ತ್ರ ನರ್ಸಿಂಗ್ ತರಬೇತಿದಾರರು) 03 ಹುದ್ದೆ
ಸೈಕಾಲಜಿಕಲ್ ಕೇರ್ ಟ್ರೈನರ್/ ಫೀಲ್ಡ್ ವರ್ಕ್ ಕೋರ್ಡಿನೇಟರ್-02 ಹುದ್ದೆ
ಎಕ್ಸಿಕ್ಯುಟಿವ್ ಅಸಿಸ್ಟೆಂಟ್-01 ಹುದ್ದೆ

ವಿದ್ಯಾರ್ಹತೆ: 1.ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಸೈಕ್ರಿಯಾಟ್ರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು
ಎಂಡಿ ಸೈಕಿಯಾಟ್ರಿ/ಡಿಎನ್ ಬಿ ಸೈಕ್ರಿಯಾಟ್ರಿ ಮಾಡಿರಬೇಕು.
2.ಸೈಕ್ರಿಯಾಟ್ರಿಕ್ ನರ್ಸಿಂಗ್ ಟ್ರೈನರ್ ಹುದ್ದೆಗೆ ಎಂಎಸ್ಸಿ ಸೈಕ್ರಿಯಾಟ್ರಿಕ್ ನರ್ಸಿಂಗ್ ನ್ನು ಅಂಗೀಕೃತ ಯುನಿವರ್ಸಿಟಿಯಿಂದ ಪಡೆದಿರಬೇಕು.
3.ಸೈಕಾಲಜಿಕಲ್ ಕೇರ್ ಟ್ರೈನರ್/ ಫೀಲ್ಡ್ ವರ್ಕ್ ಕೋರ್ಡಿನೇಟರ್ ಹುದ್ದೆಗೆ ಎಂಎಸ್ಸಿ ಸೈಕಾಲಜಿ/ ಮಾಸ್ಟರ್ಸ್ ಇನ್ ಸೋಶಿಯಲ್ ವರ್ಕ್ ವಿದ್ಯಾರ್ಹತೆಯನ್ನು ಪಡೆದಿರಬೇಕು. 4.ಎಕ್ಸಿಕ್ಯುಟಿವ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12th ತೇರ್ಗಡೆ ಹೊಂದಿರಬೇಕು.

ವಯೋಮಿತಿ: ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಸೈಕ್ರಿಯಾಟ್ರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 50 ವರ್ಷ, ಸೈಕ್ರಿಯಾಟ್ರಿಕ್ ನರ್ಸಿಂಗ್ ಟ್ರೈನರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ,
ಸೈಕಾಲಜಿಕಲ್ ಕೇರ್ ಟ್ರೈನರ್/ ಫೀಲ್ಡ್ ವರ್ಕ್ ಕೋರ್ಡಿನೇಟರ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವವರಿಗೆ 40 ವರ್ಷ,
ಎಕ್ಸಿಕ್ಯುಟಿವ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ವಯೋಮಿತಿ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ : ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಸೈಕ್ರಿಯಾಟ್ರಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.1,40,000/-, ಸೈಕ್ರಿಯಾಟ್ರಿಕ್ ನರ್ಸಿಂಗ್ ಟ್ರೈನರ್ ಹುದ್ದೆಗೆ ಆಯ್ಕೆಯಾದವರಿಗೆ ತಿಂಗಳ ರೂ.40,000/-,
ಸೈಕಾಲಜಿಕಲ್ ಕೇರ್ ಟ್ರೈನರ್/ ಫೀಲ್ಡ್ ವರ್ಕ್ ಕೋರ್ಡಿನೇಟರ್ ಹುದ್ದೆಗೆ ಆಯ್ಕೆಯಾದವರಿಗೆ ರೂ. 40,000/-,
ಎಕ್ಸಿಕ್ಯುಟಿವ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ರೂ.15,000/- ವೇತನ ನಿಗದಿಪಡಿಸಲಾಗಿದೆ.

ಅಭ್ಯರ್ಥಿಗಳು ಅರ್ಜಿ ಜೊತೆಗೆ ದಾಖಲೆಗಳನ್ನು ಪಿಡಿಎಫ್ ಫಾರ್ಮಾಟ್ ನಲ್ಲಿ ಇ- ಮೈಲ್ ಮೂಲಕ ಸಲ್ಲಿಸಬೇಕು. ‌

ದಿನಾಂಕ 03-04-2021 ರ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಇ-ಮೈಲ್ ವಿಳಾಸ- [email protected]

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

Leave a Comment