NFSU Recruitment 2024: ನ್ಯಾಷನಲ್ ಫೋರೆನ್ಸಿಕ್ ಸೈನ್ಸಸ್ ವಿಶ್ವವಿದ್ಯಾಲಯವು (NFSU) ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 68 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಪ್ರೊಫೆಸರ್, ಜೂನಿಯರ್ ಸೈಂಟಿಫಿಕ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಗುವಾಹಟಿ – ಧಾರವಾಡ ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.ಆಸಕ್ತ ಅಭ್ಯರ್ಥಿಗಳು 14-Apr-2024 ರಂದು ಅಥವಾ ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 14-03-2024
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-ಏಪ್ರಿಲ್-2024
ಹುದ್ದೆಯ ವಿವರ ಇಲ್ಲಿದೆ;
ಸಂಸ್ಥೆಯ ಹೆಸರು: ನ್ಯಾಷನಲ್ ಫೋರೆನ್ಸಿಕ್ ಸೈನ್ಸಸ್ ವಿಶ್ವವಿದ್ಯಾಲಯ (NFSU) ಇಲ್ಲಿ 68 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಗಾಂಧಿನಗರ – ಭೋಪಾಲ್ – ಗುವಾಹಟಿ – ಧಾರವಾಡ ದಲ್ಲಿ ನೇಮಕಾತಿ ನಡೆಯಲಿದೆ. ಪ್ರೊಫೆಸರ್, ಜೂನಿಯರ್ ಸೈಂಟಿಫಿಕ್ ಆಫೀಸರ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ರೂ.35400-159100/- ಮಾಸಿಕ ವೇತನ ನೀಡಲಾಗುವುದು.
ಹುದ್ದೆಯ ಹೆಸರು ಮತ್ತು ಸಂಖ್ಯೆ;
ಪ್ರೊಫೆಸರ್ – 39 ಹುದ್ದೆಗಳು
ಸಹ ಪ್ರಾಧ್ಯಾಪಕರು – ನಿಗದಿಪಡಿಸಿಲ್ಲ
ಸಹಾಯಕ ಪ್ರಾಧ್ಯಾಪಕರು – 4 ಹುದ್ದೆಗಳು
ಉಪನಿರ್ದೇಶಕರು – 2 ಹುದ್ದೆಗಳು
ಹಿರಿಯ ವೈಜ್ಞಾನಿಕ ಅಧಿಕಾರಿ – 5 ಹುದ್ದೆಗಳು
ಜೂನಿಯರ್ ಸೈಂಟಿಫಿಕ್ ಆಫೀಸರ್- 10 ಹುದ್ದೆಗಳು
ಹಿರಿಯ ವೈಜ್ಞಾನಿಕ ಸಹಾಯಕ – 8 ಹುದ್ದೆಗಳು
ವಿದ್ಯಾರ್ಹತೆ:
ಪ್ರೊಫೆಸರ್ ಹುದ್ದೆಗೆ ಸ್ನಾತಕೋತ್ತರ ಪದವಿ, M.Phil, Ph.D ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಅಸೋಸಿಯೇಟ್ ಪ್ರೊಫೆಸರ್ಸ್, ಸಹಾಯಕ ಪ್ರಾಧ್ಯಾಪಕರು ಹುದ್ದೆಗೆ ಅರ್ಜಿ ಸಲ್ಲಿಸುವವರು ಸ್ನಾತಕೋತ್ತರ ಪದವಿ, ಪಿಎಚ್.ಡಿ ಮಾಡಿರಬೇಕು.
ಉಪನಿರ್ದೇಶಕ ಹುದ್ದೆಗೆ B.E ಅಥವಾ B.Tech, ಸ್ನಾತಕೋತ್ತರ ಪದವಿ, Ph.D ಮಾಡಿರಬೇಕು.
ಹಿರಿಯ ವೈಜ್ಞಾನಿಕ ಅಧಿಕಾರಿ ಹುದ್ದೆಗೆ B.E ಅಥವಾ B.Tech, Ph.D ಪಾಸ್ ಮಾಡಿರಬೇಕು.
ಜೂನಿಯರ್ ಸೈಂಟಿಫಿಕ್ ಆಫೀಸರ್, ಹಿರಿಯ ವೈಜ್ಞಾನಿಕ ಸಹಾಯಕ ಹುದ್ದೆಗೆ ಬಿ.ಇ ಅಥವಾ ಬಿ.ಟೆಕ್, ಸ್ನಾತಕೋತ್ತರ ಪದವಿ ಮಾಡಿರುವವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ:
ಪ್ರೊಫೆಸರ್ , ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಹುದ್ದೆಗೆ NFSU ನಿಯಮಗಳ ಪ್ರಕಾರ ನೀಡಲಾಗುವುದು.
ಉಪ ನಿರ್ದೇಶಕರು ಹುದ್ದೆಗೆ ಗರಿಷ್ಠ ಹುದ್ದೆಗೆ 50ವರ್ಷ ವಯೋಮಿತಿ ಮೀರಬಾರದು.
ಹಿರಿಯ ವೈಜ್ಞಾನಿಕ ಅಧಿಕಾರಿ ಗರಿಷ್ಠ ಹುದ್ದೆಗೆ 40 ವರ್ಷ ವಯೋಮಿತಿ ಮೀರಬಾರದು.
ಜೂನಿಯರ್ ಸೈಂಟಿಫಿಕ್ ಆಫೀಸರ್ ಹುದ್ದೆಗೆ 35 ವರ್ಷ ವಯೋಮಿತಿ ಮೀರಬಾರದು.
ಹಿರಿಯ ವೈಜ್ಞಾನಿಕ ಸಹಾಯಕ ಹುದ್ದೆಗೆ 30 ವರ್ಷ ಮೀರಿರಬಾರದು.
ನ್ಯಾಷನಲ್ ಫೊರೆನ್ಸಿಕ್ ಸೈನ್ಸಸ್ ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.
ಅರ್ಜಿ ಶುಲ್ಕ:
SC/ST/PwBD/ಮಹಿಳಾ ಅಭ್ಯರ್ಥಿಗಳು ಯಾವುದೇ ಶುಲ್ಕ ಇರುವುದಿಲ್ಲ. ಸಾಮಾನ್ಯ ಅಭ್ಯರ್ಥಿಗಳು ರೂ.1000/- ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿ ಮಾಡಬೇಕು.
ಆಯ್ಕೆ ಪ್ರಕ್ರಿಯೆ: ದಾಖಲೆ, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಹುದ್ದೆಗಳ ವಿವರ;
ಪ್ರಾಧ್ಯಾಪಕರು ಈ ಹುದ್ದೆಗೆ ರೂ.159100/- ಸಂಬಳವಿರುತ್ತದೆ.
ಸಹ ಪ್ರಾಧ್ಯಾಪಕರು ಈ ಹುದ್ದೆಗೆ ರೂ.139600/- ವೇತನವಿರುತ್ತದೆ.
ಸಹಾಯಕ ಪ್ರಾಧ್ಯಾಪಕರು ಈ ಹುದ್ದೆಗೆ ರೂ.70900/- ವೇತನವಿರುತ್ತದೆ.
ಉಪನಿರ್ದೇಶಕರು ಈ ಹುದ್ದೆಗೆ ರೂ.78800-209200/- ವೇತನ ಶ್ರೇಣಿ ಇರುತ್ತದೆ.
ಹಿರಿಯ ವೈಜ್ಞಾನಿಕ ಅಧಿಕಾರಿ ಹುದ್ದೆಗೆ ರೂ.56100-177500/- ಸಂಬಳವಿರುತ್ತದೆ.
ಕಿರಿಯ ವೈಜ್ಞಾನಿಕ ಅಧಿಕಾರಿ ಹುದ್ದೆಗೆ ರೂ.44900-142400/- ವೇತನವಿರುತ್ತದೆ.
ಹಿರಿಯ ವೈಜ್ಞಾನಿಕ ಸಹಾಯಕ ಹುದ್ದೆಗೆ ರೂ.35400-112400/- ಸಂಬಳ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.