Advertisements
ರಾಷ್ಟ್ರೀಯ ಪರೀಕ್ಷೆ ಏಜೆನ್ಸಿಯು ( ಎನ್‌ಟಿಎ) ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರ್ಯಾನ್ಸ್ ಟೆಸ್ಟ್ ( ನೀಟ್) 2021 ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ನೀಟ್ 2021(ಯುಜಿ) ಪರೀಕ್ಷೆಗೆ ಆನ್‌ಲೈನ್ ಮೂಲಕ ರಿಜಿಸ್ಟ್ರೇಶನ್ ಪಡೆಯಬಹುದಾಗಿದೆ. ನೀಟ್ ಯುಜಿ ಪರೀಕ್ಷೆ ವೇಳಾಪಟ್ಟಿತಯ ಆಗಸ್ಟ್ 01, 2021 ರಂದು 11 ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಬಾರಿ ನೀಟ್ 2021 ಪರೀಕ್ಷೆಯು ಒಂದೇ ಬಾರಿ ನಡೆಸಲಿದೆ. ಈ ಬಗ್ಗೆ ಎನ್‌ಟಿಎ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಇದಕ್ಕೂ ಮೊದಲು ನೀಟ್ ಪರೀಕ್ಷೆ ಎರಡು ಬಾರಿ ನಡೆಸಲಾಗುತ್ತದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಎನ್‌ಟಿಎ ಅಭ್ಯರ್ಥಿಗಳ ಸಂಶಯಕ್ಕೆ ಉತ್ತರ ನೀಡಿದೆ.
ನೀಟ್(ಯುಜಿ) ೨೦೨೧ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು https://nta.ac.in, https://ntaneet.nic.in ವೆಬ್‌ಸೈಟ್ ಭೇಟಿ ನೀಡಬಹುದು