NAL : 17 ಟೆಕ್ನಿಶಿಯನ್ ಹುದ್ದೆ

Advertisements

ನ್ಯಾಷನಲ್ ಏರೋ ಸ್ಪೇಸ್ ಲ್ಯಾಬೋರೇಟರಿ (ಎನ್ ಎಎಲ್)ಯು ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್(ಸಿಎಸ್‌ಐಆರ್‌) ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರೀಮಿಯರ್ ರಿಸರ್ಚ್ ಲ್ಯಾಬೋರೇಟರಿ ಆಗಿದ್ದು ಇಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ 20-04-2021 ರಂದು ಆರಂಭವಾಗಲಿದ್ದು, ಅರ್ಜಿ ಸಲ್ಲಿಸಲು 20-05-2021 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 21-04-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-05-2021

ಹುದ್ದೆ : ಟೆಕ್ನೀಷಿಯನ್

ಹುದ್ದೆಗಳ ಸಂಖ್ಯೆ : 17

ವಯೋಮಿತಿ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 28 ವರ್ಷ ಮೀರಿರಬಾರದು.

ಮೀಸಲಾತಿ : ಪರಿಶಿಷ್ಟ ಜಾತಿ -2, ಪರಿಶಿಷ್ಟ ಪಂಗಡ – 2, ಎಕ್ಸ್‌ ಸರ್ವಿಸ್‌ಮೆನ್‌- 2, ಒಬಿಸಿ – 2, ಸ್ಪೋಟ್ಸ್‌ – 2, ಪಿಡ್ಬ್ಲುಡಿ -3, ಇಡಬ್ಲುಎಸ್‌ – 2, ಯುಆರ್‌ – 2

ಆಯ್ಕೆ ಪ್ರಕ್ರಿಯೆ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅಂಕಗಳು, ಮೀಸಲಾತಿ ಹಾಗೂ ಇತರೆ ಮಾನದಂಡಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ವೇತನ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.31,000/- ವೇತನವಿರುತ್ತದೆ.

ವಿದ್ಯಾರ್ಹತೆ : ಎಸ್‌ಎಸ್‌ಎಲ್‌ಸಿ ಜೊತೆಗೆ, ಐಟಿಐ ಅನ್ನು ಫಿಟ್ಟರ್/ಟರ್ನರ್/ಇಲೆಕ್ಟ್ರಾನಿಕ್ ಮೆಕ್ಯಾನಿಕ್‌/ ಇಲೆಕ್ಟ್ರೀಷಿಯನ್/ ಡ್ರಾಫ್ಟ್‌ಮನ್ ( ಮೆಕ್ಯಾನಿಕ್‌)/ಇಲೆಕ್ಟ್ರೋಪ್ಲೇಟಿಂಗ್/ ಇಲೆಕ್ಟ್ರೋಪ್ಲೇಟರ್/ ಪೇಂಟರ್ ( ಜೆನೆರಲ್ ) ಟ್ರೇಡ್‌ ನಲ್ಲಿ ತೇರ್ಗಡೆ ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

Leave a Comment