ಮೈಸೂರು ಜಿಲ್ಲಾ ಪಂಚಾಯತಿನಲ್ಲಿ 14 ಹುದ್ದೆಗಳು: ವಿವರ ಇಲ್ಲಿದೆ

Advertisements

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಖಾಲಿಯಿರುವ ಎಡಿಪಿಸಿ ಮತ್ತು ತಾಂತ್ರಿಕ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ NIC ಯ ಜಿಲ್ಲಾ ವೆಬ್‌ಸೈಟ್‌ ನಲ್ಲಿ ನಿಗದಿತ ನಮೂನೆಯು ಲಭ್ಯವಿದ್ದು ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ವೆಬ್‌ಸೈಟ್‌ mysore.nic.in ಆಗಿರುತ್ತದೆ. ಸದರಿ ಹುದ್ದೆಗಳು ತಾತ್ಕಾಲಿಕವಾಗಿರುತ್ತದೆ.

ಹುದ್ದೆ : ಸಹಾಯಕ ಜಿಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕಾರಿ ( ಎಡಿಪಿಸಿ ) 01ಹುದ್ದೆ: ಅಭ್ಯರ್ಥಿಗಳು ಈ ಹುದ್ದೆಗೆ ಬಿ.ಇ/ಬಿಟೆಕ್ ಅಥವಾ ಎಂಬಿಎ ವಿದ್ಯಾರ್ಹತೆಯನ್ನು ಹೊಂದಿರಬೇಕು. ವಯೋಮಿತಿ ಗರಿಷ್ಠ 35 ವರ್ಷ. ಅಭ್ಯರ್ಥಿಗಳು ಸಂಬಂಧಪಟ್ಟ ಕ್ಷೇತ್ರದಲ್ಲಿ ಕನಿಷ್ಠ 36 ತಿಂಗಳ ಅನುಭವ ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.38,000/- ವೇತನವಿರುತ್ತದೆ.

ತಾಂತ್ರಿಕ ಸಹಾಯಯ ಇಂಜಿನಿಯರ್ – 13 ಹುದ್ದೆಗಳು. ಇಂಜಿನಿಯರಿಂಗ್ ಪದವೀಧರರು (ಸಿವಿಲ್) ಗಣಕಯಂತ್ರ ಜ್ಞಾನ ಕಡ್ಡಾಯ. ಈ ಹುದ್ದೆಗೆ ಮಾಸಿಕ ರೂ.24,000/- ವೇತನವಿರುತ್ತದೆ. ವಯೋಮಿತಿ ಗರಿಷ್ಠ 35 ಹೊಂದಿರಬೇಕು. ಸಂಬಂಧಪಟ್ಟ ಕ್ಷೇತ್ರದಲ್ಲಿ ಕನಿಷ್ಠ 2,3 ವರ್ಷ ಅನುಭವ ಇರಬೇಕು. ಡಿಪ್ಲೋಮಾ ಇನ್ ಸಿವಿಲ್ ( ಗಣಕಯಂತ್ರ ಜ್ಞಾನ ಕಡ್ಡಾಯ) ಪಡೆದಿರಬೇಕು. ವಯೋಮಿತಿ ಗರಿಷ್ಠ 35 ಹೊಂದಿರಬೇಕು. ಸಂಬಂಧಪಟ್ಟ ಕ್ಷೇತ್ರದಲ್ಲಿ ಕನಿಷ್ಠ 2,3 ವರ್ಷ ಅನುಭವ ಇರಬೇಕು. ಈ ಹುದ್ದೆಗೆ ಮಾಸಿಕ ರೂ. 19,000/- ವೇತನವಿರುತ್ತದೆ.

ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08-07-2021
ದಾಖಲಾತಿ ಪರಿಶೀಲನೆ: 13-07-2021

ಮೈಸೂರು ಜಿಲ್ಲಾ ಪಂಚಾಯತಿನಲ್ಲಿ 14 ಹುದ್ದೆಗಳು: ವಿವರ ಇಲ್ಲಿದೆ 1

Leave a Comment