MSIL ನಲ್ಲಿ ಟ್ಯಾಕ್ಸ್ ಕನ್ಸಲ್ಟೆಂಟ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Advertisements

ಕರ್ನಾಟಕ ಸರಕಾರದ ಉದ್ಯಮವಾದ ಮೈಸೂರು ಸೇಲ್ಸ್ ಇಂಟರ್ ನ್ಯಾಶನಲ್ ಲಿಮಿಟೆಡ್ ( ಎಂಎಸ್ ಐಎಲ್) ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹುದ್ದೆ : ಟ್ಯಾಕ್ಸ್ ಕನ್ಸಲ್ಟೆಂಟ್ ರನ್ನು ನಿಯೋಜನೆ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

ಟ್ಯಾಕ್ಸ್ ಅಕೌಂಟೆಂಟ್ ಅಥವಾ ಟ್ಯಾಕ್ಸ್ ಅನಾಲಿಸ್ಟ್ ಆಗಿ ಕನಿಷ್ಠ 5 ವರ್ಷಗಳ ಅನುಭವ ಹೊಂದಿರುವ ಮತ್ತು ಕೇಂದ್ರ ಮತ್ತು ರಾಜ್ಯ ತೆರಿಗೆ ಕಾನೂನುಗಳು, ನೇರ ಮತ್ತು ಪರೋಕ್ಷ ತೆರಿಗೆ ನಿಯಮಗಳು ಮತ್ತು ನಿಬಂಧನೆಗಳ ವಿಚಾರದಲ್ಲಿ ನಿಷ್ಣಾತರಾಗಿರುವ ಹಾಗೂ ವಿವಿಧ ತೆರಿಗೆಗೆ ಸಂಬಂಧಿಸಿದ ವಿಚಾರಗಳಲ್ಲಿ ಅನುಭವ ಹೊಂದಿರುವ, ಲೆಕ್ಕ ನಿರ್ವಹಣೆ ಮತ್ತು ಬುಕ್ ಕೀಪಿಂಗ್ ಕ್ರಮಾವಳಿಗಳ ಪರಿಜ್ಞಾನ ಹೊಂದಿರುವ ಚಾರ್ಟರ್ಡ್ ಅಕೌಂಟೆಂಟ್ ರನ್ನು ಎಂಎಸ್ ಐಎಕ್ 1 ವರ್ಷ ಅವಧಿಯವರೆಗೆ ಗುತ್ತಿಗೆ ಆಧಾರದ ಮೇಲೆ ಟ್ಯಾಕ್ಸ್ ಕನ್ಸಲ್ಟೆಂಟ್ ಆಗಿ ನಿಯೋಜನೆ ಮಾಡಿಕೊಳ್ಳುವುದು.

ವಿವರಗಳು ಮತ್ತು ಇತರೆ ನಿಯಮಗಳು ಮತ್ತು ನಿಬಂಧನೆಗಳನ್ನು ಇ- ಪ್ರೊಕ್ಯುರ್ಮೆಂಟ್ ಪೋರ್ಟಲ್ https://eproc.karnataka.gov.in ಇಲ್ಲಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ನಿಗದಿತ ದಿನಾಂಕ ಮತ್ತು ಸಮಯದ ಒಳಗೆ ಸಂಬಂಧಪಟ್ಟ ದಾಖಲೆಗಳನ್ನು‌ ಅಪ್ಲೋಡ್ ಮಾಡತಕ್ಕದ್ದು.

ಅಪ್ಲೋಡ್ ಮಾಡುವ ಕಡೆಯ ದಿನಾಂಕ ಮತ್ತು ಸಮಯ : 28-07-2021 ( ಮಧ್ಯಾಹ್ನ 3 ಗಂಟೆಗೆ)
ಅರ್ಜಿ ತೆರೆಯುವ ದಿನಾಂಕ 30-07-2021 ( ಸಂಜೆ 4 ಗಂಟೆಗೆ)

Leave a Comment