ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕ

Advertisements

ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅನುಷ್ಠಾನಕ್ಕಾಗಿ ಜಿಲ್ಲಾ ಕೇಂದ್ರಗಳಲ್ಲಿ ಖಾಲಿ ಇರುವ ತಾಂತ್ರಿಕ‌ ಸಹಾಯಕರು (ಅರಣ್ಯ,ಕೃಷಿ, ತೋಟಗಾರಿಕೆ) ಹುದ್ದೆಗಳ ನ್ನು ಹೊರಗುತ್ತಿಗೆ ಆಧಾರದಲ್ಲಿ ಸೇವೆಗೆ ಪಡೆಯಲು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅನುಮತಿ ನೀಡಿದೆ.

ತಾಂತ್ರಿಕ ಸಹಾಯಕರ ನೇಮಕ ಅತೀ ಶೀಘ್ರದಲ್ಲಿ

ಈ ಹುದ್ದೆಗಳಿಗೆ ಮಾರ್ಚ್ ತಿಂಗಳ ಕೊನೆ ವಾರದೊಳಗೆ ಅರ್ಜಿ ಸಲ್ಲಿಸಿ ಎಪ್ರಿಲ್ 6 ,2021 ರೊಳಗೆ ನೇಮಕ ಪ್ರಕ್ರಿಯೆ ಅಂತ್ಯಗೊಳಿಸಲಾಗುತ್ತದೆ.

ವಿದ್ಯಾರ್ಹತೆ : ತಾಂತ್ರಿಕ ಸಹಾಯಕ : (ಅರಣ್ಯ) ಈ ಹುದ್ದೆಗೆ ಕನಿಷ್ಠ ಬಿಎಸ್ಸಿ (ಫಾರೆಸ್ಟ್ರಿ) ಉತ್ತೀರ್ಣಗೊಂಡಿರಬೇಕು.ಎಂ.ಎಸ್ಸಿ ಫಾರೆಸ್ಟ್ರಿ ಅಪೇಕ್ಷಣೀಯ.

ತಾಂತ್ರಿಕ‌ ಸಹಾಯಕ: (ತೋಟಗಾರಿಕೆ,ಕೃಷಿ) ಬಿಎಸ್ಸಿ‌ ಅಗ್ರಿಕಲ್ಚರ್ ಅಥವಾ ಹಾರ್ಟಿಕಲ್ಚರ್ ಉತ್ತೀರ್ಣಗೊಂಡಿರಬೇಕು.ಎಂ.ಎಸ್ಸಿ ಇನ್ ಅಗ್ರಿಕಲ್ಚರ್ /ಹಾರ್ಟಿಕಲ್ಚರ್ ಅಪೇಕ್ಷಣೀಯ.

ವಯೋಮಿತಿ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21, ಹಾಗೂ ಗರಿಷ್ಠ 40 ವಯೋಮಿತಿ ಮೀರಿರಬಾರದು.

ವೇತನ : ಈ‌ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.24,000/- ತಿಂಗಳ ವೇತನ‌ ನೀಡಲಾಗುತ್ತದೆ.

ಖಾಲಿ ಇರುವ ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಜಿಲ್ಲಾ ಹಂತದಲ್ಲಿಯೇ ನೇಮಕಾತಿ‌ ಪ್ರಕ್ರಿಯೆ ನಡೆಯಲಿದೆ.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಿ,ನಂತರ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ. ನೇಮಕಾತಿಯಾದ ಅಭ್ಯರ್ಥಿಗಳು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ನೇಮಿಸಿದ ಸ್ಥಳದಲ್ಲಿ ಕಾರ್ಯ ನಿರ್ವಹಿಸಬೇಕು.

ಅಭ್ಯರ್ಥಿಗಳು ಕಡ್ಡಾಯವಾಗಿ ಕನ್ನಡ ಜ್ಞಾನ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು

Leave a Comment