Mangalore Jobs: ಮಂಗಳೂರು ವಿವಿಯಲ್ಲಿ ನೇಮಕಾತಿ; 6 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಮಾಸಿಕ ರೂ.61ಸಾವಿರ ವೇತನ

Written By sarkari

Lorem ipsum dolor sit amet consectetur pulvinar ligula augue quis venenatis. 

Advertisements

Mangalore University Recruitment 2024: ಮಂಗಳೂರು ವಿಶ್ವವಿದ್ಯಾನಿಲಯವು ಅಧಿಸೂಚನೆಯ ಮೂಲಕ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 6 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಸಂಶೋಧನಾ ಸಹಾಯಕ, JRF ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಮಂಗಳೂರು – ಕರ್ನಾಟಕ ಸರ್ಕಾರದಲ್ಲಿ ಪೋಸ್ಟಿಂಗ್‌ ನಡೆಯಲಿದ್ದು, ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 25-Apr-2024 ರಂದು ಅಥವಾ ಮೊದಲು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು;
ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕ; 23-04-2024
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 25-04-2024

ಹುದ್ದೆಯ ವಿವರ ಇಲ್ಲಿದೆ;
ಸಂಸ್ಥೆಯ ಹೆಸರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಒಟ್ಟು 6 ಹುದ್ದೆಗಳು ಖಾಲಿ ಇದ್ದು, ಮಂಗಳೂರು – ಕರ್ನಾಟಕದಲ್ಲಿ ಹುದ್ದೆ ಹುಡುಕುವವರು ಅರ್ಜಿ ಸಲ್ಲಿಸಬಹುದು. ಸಂಶೋಧನಾ ಸಹಾಯಕ, JRF ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.12000-61000/- ವೇತನ ಸಿಗಲಿದೆ.

ಹುದ್ದೆ ಹೆಸರು ಮತ್ತು ಸಂಖ್ಯೆ:
ಪೋಸ್ಟ್-ಡಾಕ್ಟರಲ್ ರಿಸರ್ಚ್ ಫೆಲೋ/ಪ್ರಾಜೆಕ್ಟ್ ಸೈಂಟಿಸ್ಟ್ – 1 ಹುದ್ದೆ
ಹಿರಿಯ ಸಂಶೋಧನಾ ಫೆಲೋ (SRF) – 1 ಹುದ್ದೆ
ಜೂನಿಯರ್ ರಿಸರ್ಚ್ ಫೆಲೋ (JRF) – 1 ಹುದ್ದೆ
ಸಂಶೋಧನಾ ಸಹಾಯಕ – 2 ಹುದ್ದೆಗಳು
ತಾಂತ್ರಿಕ ಸಹಾಯಕ – 1 ಹುದ್ದೆ

ವಿದ್ಯಾರ್ಹತೆ:
ಪೋಸ್ಟ್-ಡಾಕ್ಟರಲ್ ರಿಸರ್ಚ್ ಫೆಲೋ/ಪ್ರಾಜೆಕ್ಟ್ ಸೈಂಟಿಸ್ಟ್ ಹುದ್ದೆಗೆ ಪಿಎಚ್.ಡಿ ಮಾಡಿರುವವರು ಅರ್ಜಿ ಸಲ್ಲಿಸಬೇಕು.
ಹಿರಿಯ ಸಂಶೋಧನಾ ಫೆಲೋ (SRF) ಹುದ್ದೆಗೆ ಭೌತಶಾಸ್ತ್ರ/ವೈದ್ಯಕೀಯ ಭೌತಶಾಸ್ತ್ರದಲ್ಲಿ M.Sc ಮಾಡಿರುವವರು ಅರ್ಜಿ ಸಲ್ಲಿಸಬಹುದು.
ಜೂನಿಯರ್ ರಿಸರ್ಚ್ ಫೆಲೋ (JRF), ಸಂಶೋಧನಾ ಸಹಾಯಕ ಹುದ್ದೆಗೆ B.Sc, B.A, M.Sc, M.A ತೇರ್ಗಡೆ ಹೊಂದಿರಬೇಕು.
ತಾಂತ್ರಿಕ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಎಸ್ಸಿ ಮಾಡಿರಬೇಕು.

ವಯೋಮಿತಿ: ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಮಂಗಳೂರು ವಿಶ್ವವಿದ್ಯಾನಿಲಯದ ನಿಯಮಗಳ ಪ್ರಕಾರ ಅನ್ವಯವಾಗುತ್ತದೆ. ಮಂಗಳೂರು ವಿಶ್ವವಿದ್ಯಾನಿಲಯದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ವೇತನ: ಪೋಸ್ಟ್-ಡಾಕ್ಟರಲ್ ರಿಸರ್ಚ್ ಫೆಲೋ/ಪ್ರಾಜೆಕ್ಟ್ ಸೈಂಟಿಸ್ಟ್ – ರೂ.61000/-
ಹಿರಿಯ ಸಂಶೋಧನಾ ಫೆಲೋ (SRF) – ರೂ.42000/-
ಜೂನಿಯರ್ ರಿಸರ್ಚ್ ಫೆಲೋ (JRF) – ರೂ.37000/-
ಸಂಶೋಧನಾ ಸಹಾಯಕ – ರೂ.20000/-
ತಾಂತ್ರಿಕ ಸಹಾಯಕ – ರೂ.12000/- ಮಾಸಿಕ ವೇತನ ನೀಡಲಾಗುವುದು.

ಮಂಗಳೂರು ವಿಶ್ವವಿದ್ಯಾನಿಲಯ ನೇಮಕಾತಿ (ಸಂಶೋಧನಾ ಸಹಾಯಕ, ಜೆಆರ್ಎಫ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಗೆ ನೀಡಲಾದ ವಿಳಾಸಕ್ಕೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.
ವಿಳಾಸ: Prof. Karunakara N, Coordinator & Principal Investigator, NPCIL Consultancy Research Project, Center for Advanced Research in Environmental Radioactivity (CARER), Mangalore University, Mangalagangotri-574199 ಗೆ ಪೋಸ್ಟ್‌ ಮೂಲಕ ಅಥವಾ [email protected] ಗೆ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು.

ನೋಟಿಫಿಕೇಶನ್‌ ಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ