ಸ್ಟೆನೋಗ್ರಾಫರ್ ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Advertisements

ಮಂಡ್ಯ ಡಿಸ್ಟ್ರಿಕ್ಟ್‌ ಕೋರ್ಟ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಗಳ‌ ವಿವರ, ಅರ್ಜಿ ಶುಲ್ಕ, ವಿದ್ಯಾರ್ಹತೆ, ವಯೋಮಿತಿ ವಿವರಗಳಿಗಾಗಿ ಮುಂದೆ ಓದಿ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 03-03-2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-04-2021 (4pm)

ಮಂಡ್ಯ ಡಿಸ್ಟ್ರಿಕ್ಟ್‌ ಕೋರ್ಟ್‌ ನಲ್ಲಿ ಟೈಪಿಸ್ಟ್ ಹಾಗೂ ಸ್ಟೆನೋಗ್ರಾಫರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ: ಸ್ಟೆನೋಗ್ರಾಫರ್-10, ಟೈಪಿಸ್ಟ್ ಕಾಪಿಸ್ಟ್ -4, ಟೈಪಿಸ್ಟ್ -8

ವಿದ್ಯಾರ್ಹತೆ : ಅಭ್ಯರ್ಥಿಗಳು ಅಂಗೀಕೃತ ಯುನಿವರ್ಸಿಟಿಯಿಂದ ಎಸ್ ಎಸ್ ಎಲ್ ಸಿ ತೇರ್ಗಡೆ ಹೊಂದಿರಬೇಕು.

ವಯೋಮಿತಿ : ಅಭ್ಯರ್ಥಿಗಳು ಕನಿಷ್ಠ 18 ಹಾಗೂ ಗರಿಷ್ಠ 35 ವಯೋಮಿತಿ ಹೊಂದಿರಬೇಕು.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಸಿಎಟಿ-1 ಅಭ್ಯರ್ಥಿಗಳಿಗೆ 5 ವರ್ಷ, ಸಿಎಟಿ-2A/2B/3A/3B ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ : ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಡಿಮಾಂಡ್ ಡ್ರಾಫ್ಟ್ ಮೂಲಕ ಸಲ್ಲಿಸಬೇಕು.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಸಿಎಟಿ-1 ಮತ್ತು ಅಂಗವಿಕಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಸಿಎಟಿ-2A/2B/3A/3B ಅಭ್ಯರ್ಥಿಗಳಿಗೆ ರೂ.100/- , ಜನರಲ್ ಅಭ್ಯರ್ಥಿಗಳಿಗೆ ರೂ.200/- ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಟೈಪಿಂಗ್ ಟೆಸ್ಟ್, ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ: ಸ್ಟೆನೋಗ್ರಾಫರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 27,650/- ರಿಂದ ರೂ.52,650/- ತಿಂಗಳ ವೇತನ ನಿಗದಿಯಾಗಿರುತ್ತದೆ.

ಟೈಪಿಸ್ಟ್-ಕಾಪಿಸ್ಟ್, ಟೈಪಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 21,000/- ರಿಂದ ರೂ. 42,000/- ವೇತನವಿರುತ್ತದೆ.

ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಅರ್ಜಿ ಡೌನ್‌ಲೋಡ್ ಮಾಡಿ, ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ 03-04-2021(4pm) ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟರ್ ಪೋಸ್ಟ್ ಮೂಲಕ ಸಲ್ಲಿಸಬೇಕು.

Principal District Judges, District Court, Mandya District, Mandya, Karnataka

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ : https://districts.ecourts.gov.in/mandya

Leave a Comment