ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ನೇಮಕ: ಮಾರ್ಚ್ 30 ಕೊನೇ ದಿನ

Advertisements

ಮಡಿಕೇರಿ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ‌.

ಕೊಡಗು ಜಿಲ್ಲಾ ಕೇಂದ್ರ ಗ್ರಂಥಾಲಯ ಮಡಿಕೇರಿ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯತಿ ಗ್ರಂಥಾಲಯದಲ್ಲಿ ಖಾಲಿ ಇರುವ ಮೇಲ್ವಿಚಾರಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 30,2021

ವೇತನ : ರೂ.7000/-

ಈ ಹುದ್ದೆಗಳಿಗೆ ಸಂಬಂಧ ಪಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

ವಿರಾಜಪೇಟೆ ತಾಲೂಕಿನ ಹೊಸೂರು ಅಮ್ಮತ್ತಿ ಗ್ರಾ.ಪಂ.ಗ್ರಂಥಾಲಯ ಸಾಮಾನ್ಯ ಅಭ್ಯರ್ಥಿ(ಮಾ.ಸೈ) ಮತ್ತು ಆಲೂರು ಸಿದ್ಧಾಪುರ ಗ್ರಾ.ಪಂಚಾಯತ್ ಗ್ರಂಥಾಲಯ 2ಎ(ಸಾ.ಅ)ಸೋಮವಾರಪೇಟೆ ತಾಲೂಕು ಶಿರಂಗಾಲ ಗ್ರಾ.ಪಂ. ಗ್ರಂಥಾಲಯ (ಸಾ‌.ಅ) ಮತ್ತು ಚೆಂಬೆ ಬೆಳ್ಳೂರು ಗ್ರಾ‌ಪಂ ಗ್ರಂಥಾಲಯ ಪ್ರ.ವರ್ಗ-1 ( ಮಹಿಳಾ ಅಭ್ಯರ್ಥಿ)

ಅರ್ಜಿಯ ಜೊತೆಗೆ ಇತರೆ ದಾಖಲೆಗಳನ್ನು ದೃಢೀಕರಿಸಿದ ಪ್ರತಿಯನ್ನು ಸಂಬಂಧ ಪಟ್ಟ ಗ್ರಾಮಪಂಚಾಯತ್ ಕಚೇರಿಗೆ ತಲುಪಿಸುವುದು.

ಹೆಚ್ಚಿನ ವಿವರಗಳಿಗಾಗಿ
ಮುಖ್ಯ ಗ್ರಂಥಾಲಯಾಧಿಕಾರಿಯವರ ಕಚೇರಿ,ಜಿಲ್ಲಾ ಕೇಂದ್ರ ಗ್ರಂಥಾಲಯ,ಮಡಿಕೇರಿ ಇವರನ್ನು ಸಂಪರ್ಕಿಸುವುದು.

ದೂರವಾಣಿ ಸಂಖ್ಯೆ : 08272 225463

Leave a Comment