KSRLPS Recruitment 2024: ಕರ್ನಾಟಕ ರಾಜ್ಯ ರೂರಲ್ ಲೈವ್ಲಿಹುಡ್ ಪ್ರಮೋಷನ್ ಸೊಸೈಟಿ (KSRLPS) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 34 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಜಿಲ್ಲಾ ಮ್ಯಾನೇಜರ್, ಬ್ಲಾಕ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಶಿವಮೊಗ್ಗ-ಚಿಕ್ಕಮಗಳೂರು ಸರ್ಕಾರದಲ್ಲಿ ಈ ಮೇಲೆ ತಿಳಿಸಿದ ಹುದ್ದೆಗೆ ಅಭ್ಯರ್ಥಿಗಳ ಪೋಸ್ಟಿಂಗ್ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು 10-Apr-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪ್ರಮುಖ ದಿನಾಂಕಗಳು
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 14-03-2024
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-04-2024
ಹುದ್ದೆಯ ಕುರಿತ ವಿವರ ಇಲ್ಲಿದೆ;
ಹುದ್ದೆಯ ಹೆಸರು ಹಾಗೂ ಸಂಖ್ಯೆ: ಜಿಲ್ಲಾ ವ್ಯವಸ್ಥಾಪಕರು 2 ಹುದ್ದೆಗಳು, ಕಛೇರಿ ಸಹಾಯಕ 1 ಹುದ್ದೆಗಳು, ಬ್ಲಾಕ್ ಮ್ಯಾನೇಜರ್ 20 ಹುದ್ದೆಗಳು, ಕ್ಲಸ್ಟರ್ ಮೇಲ್ವಿಚಾರಕರು 8 ಹುದ್ದೆಗಳು, DEO/MIS ಸಂಯೋಜಕರು 3 ಹುದ್ದೆಗಳು. ಒಟ್ಟು 34 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆಯ ವಿವರಗಳು: ಜಿಲ್ಲಾ ವ್ಯವಸ್ಥಾಪಕ ಬಿ.ಎಸ್ಸಿ, ಎಂಎಸ್ಸಿ ಮಾಡಿರಬೇಕು. ಕಚೇರಿ ಸಹಾಯಕ ಪದವಿ ಮಾಡಿರಬೇಕು. ಬ್ಲಾಕ್ ಮ್ಯಾನೇಜರ್ B.Sc, M.Sc, ಮಾಸ್ಟರ್ಸ್ ಪದವಿ, ಸ್ನಾತಕೋತ್ತರ ಪದವಿ ಮಾಡಿರಬೇಕು. ಕ್ಲಸ್ಟರ್ ಮೇಲ್ವಿಚಾರಕರು B.Sc, ಪದವಿ, M.Sc, ಸ್ನಾತಕೋತ್ತರ ಪದವಿ ಅರ್ಹತೆ ಹೊಂದಿರಬೇಕು. DEO/MIS ಸಂಯೋಜಕ ಪದವಿ, ಸ್ನಾತಕೋತ್ತರ ಪದವಿಯನ್ನು ಅಭ್ಯರ್ಥಿಗಳು ಹೊಂದಿರಬೇಕು.
ವಯೋಮಿತಿ: ಅಭ್ಯರ್ಥಿಗಳು KSRLPS ಮಾನದಂಡಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವಯೋಮಿತಿ ಸಡಿಲಿಕೆ: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸೊಸೈಟಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಅರ್ಜಿ ಶುಲ್ಕ: ಮೇಲ್ಕಂಡ ಹುದ್ದೆಗಳಿಗೆ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವಂತಿಲ್ಲ.
ಆಯ್ಕೆ ಪ್ರಕ್ರಿಯೆ: ಮೇಲೆ ತಿಳಿಸಿದ ಎಲ್ಲಾ ಹುದ್ದೆಗಳಿಗೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ksrlps.karnataka.gov.in ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು.