ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಿವಿಲ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಪಿಎಸ್ ಐ ಸಿವಿಲ್ ) ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
380 ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗಿಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ವಿದ್ಯಾರ್ಹತೆ ಏನು ?
ಸಬ್ ಇನ್ಸ್ ಪೆಕ್ಟರ್ (ಸಿವಿಲ್) ಹುದ್ದೆಗೆ ಅರ್ಜಿ ಸಲ್ಲಿಸಲು ಡಿಗ್ರಿ ಯನ್ನು ಅಂಗೀಕೃತ ಸಂಸ್ಥೆ/ಬೋರ್ಡ್ ನಿಂದ ಪಡೆದುಕೊಂಡಿರಬೇಕು.
ವಯೋಮಿತಿ : ಸಿವಿಲ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ಹಾಗೂ ಗರಿಷ್ಠ 30 ವಯೋಮಿತಿ ಹೊಂದಿರಬೇಕು.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ /ಒಬಿಸಿ ಅಭ್ಯರ್ಥಿಗಳಿಗೆ 02 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ( on duty) 05 ವರ್ಷ, ಉಳಿದ ಎಲ್ಲಾ ಅಭ್ಯರ್ಥಿಗಳಿಗೆ(on duty ) 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಅರ್ಜಿ ಶುಲ್ಕ : ಪೊಲೀಸ್ ಸಬ್ ಇನ್ಸಪೆಕ್ಟರ್ (ಸಿವಿಲ್ ) ಹುದ್ದೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ ಅಭ್ಯರ್ಥಿಗಳು ರೂ.500/-, ರಿಸವರ್ಡ್ ಅಭ್ಯರ್ಥಿಗಳಿಗೆ ರೂ. 250/- ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ.
ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಸಿವಿಲ್ ) ಹುದ್ದೆಯ 380 ಹುದ್ದೆಗಳ ಪೈಕಿ ಬೆಂಗಳೂರು ನಗರ 235 , ಮಂಗಳೂರು ನಗರ 21 , ಹುಬ್ಬಳ್ಳಿ ಧಾರವಾಡ ನಗರ 10,ಬೆಳಗಾವಿ ನಗರ 05, ಕೇಂದ್ರವಲಯ ಬೆಂಗಳೂರು 29, ಪೂರ್ವ ವಲಯ ದಾವಣಗೆರೆ 19, ಉತ್ತರ ವಲಯ ಬೆಳಗಾವಿ 20, ದಕ್ಷಿಣ ವಲಯ ಮೈಸೂರು 34, ರೈಲ್ವೇಸ್, ಬೆಂಗಳೂರು 07