ಪೊಲೀಸ್ ಇಲಾಖೆಯಲ್ಲಿ 250 ಅನುಯಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಎಸ್ ಎಸ್ ಎಲ್ ಸಿ ಪಾಸಾದವರಿಗೆ ಮೊದಲ ಆದ್ಯತೆ

Advertisements

ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆಗಳಲ್ಲಿ ಖಾಲಿಯಿರುವ ಅನುಯಾಯಿ (ಪುರುಷ) ( ಮಿಕ್ಕುಳಿದ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಹುದ್ದೆಗಳನ್ನು ಒಳಗೊಂಡಂತೆ ಖಾಲಿ ಹುದ್ದೆಗಳ ನೇರ ನೇಮಕಾತಿ ಕುರಿತು ಅಧಿಸೂಚನೆಯನ್ನು ಪ್ರಕಟಿಸಿದೆ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 30-07-2021 ಬೆಳಿಗ್ಗೆ 10.00 ಗಂಟೆಯಿಂದ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-08-2021 ಸಂಜೆ 06.00 ಗಂಟೆಯವರೆಗೆ
ಅಧಿಕೃತ ಬ್ಯಾಂಕ್ ಶಾಖೆಗಳ/ ಅಂಚೆ ಕಚೇರಿ ವೇಳೆಯಲ್ಲಿ ಶು ಪಾವತಿಸಲು ಕೊನೆಯ ದಿನಾಂಕ : 01-09-2021

ಹುದ್ದೆಗಳ ವಿವರ : ಕರ್ನಾಟಕ ರಾಜ್ಯ ಪೊಲೀಸ್ ಪಡೆಗಳಲ್ಲಿ ನೇರ ನೇಮಕಾತಿಯಡಿ ಖಾಲಿಯಿರುವ ಅನುಯಾಯಿ( ಪುರುಷ) ಹುದ್ದೆಗಳ ವಿವರ :

ಅಡುಗೆಯವರು – 81 ಹುದ್ದೆಗಳು
ಕ್ಷೌರಿಕ – 45 ಹುದ್ದೆಗಳು
ಧೋಭಿ – 53 ಹುದ್ದೆಗಳು
ಕಸ ಗುಡಿಸುವವರು- 58 ಹುದ್ದೆಗಳು
ನೀರು ತರುವವರು- 13 ಹುದ್ದೆಗಳು

ಒಟ್ಟು ಹುದ್ದೆ ಸಂಖ್ಯೆ- 250

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕದಂದು ಅಂದರೆ 30-08-2021 ರಂದು ಅಭ್ಯರ್ಥಿಗೆ ಕನಿಷ್ಠ 18 ವಯಸ್ಸಾಗಿರಬೇಕು. ಹಾಗೂ ಈ ಕೆಳಕಂಡ ವಯಸ್ಸು ಮೀರಿರಬಾರದು.

ಸಾಮಾನ್ಯ ಪುರುಷ ಅಭ್ಯರ್ಥಿಗಳಿಗೆ – ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 35 ವರ್ಷ, ಇತರೆ ಅಭ್ಯರ್ಥಿಗಳಿಗೆ 30 ವರ್ಷ.

ವಿದ್ಯಾರ್ಹತೆ : ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ( ವೃಂದ ಮತ್ತು ನೇಮಕಾತಿ) ನಿಯಮ 2020 ರ ಪ್ರಕಾರ ಅನುಯಾಯಿ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 30-08-2021ಕ್ಕೆ ಹೊಂದಿರಬೇಕು.

ಅರ್ಜಿ ಶುಲ್ಕ : ಸಾಮಾನ್ಯ ಅರ್ಹತೆ, ಪ್ರವರ್ಗ 2 ( ಎ), 2 (ಬಿ), 3 (ಎ), 3( ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ.250/-, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ 1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.100/-

ನಿಗದಿತ ಶುಲ್ಕವನ್ನು ನಗದು/ ಆನ್ಲೈನ್ ರೂಪದಲ್ಲಿ ಸ್ಥಳೀಯ ಅಂಚೆ ಕಚೇರಿಯಲ್ಲಿ ಅಥವಾ ಹೆಚ್.ಡಿ.ಎಫ್.ಸಿ ಬ್ಯಾಂಕ್ ನ ಶಾಖೆಯಲ್ಲಿ ಪಾವತಿಸಿ ನಂತರ ಚಲನ್ ನ ಅಭ್ಯರ್ಥಿ ಪ್ರತಿಯನ್ನು ಇಟ್ಟುಕೊಂಡಿರತಕ್ಕದ್ದು.

ಅರ್ಜಿಗಳನ್ನು ಸಲ್ಲಿಸಲು ಇಲಾಖೆಯ ಅಧಿಕೃತ ವೆಬ್‌ಸೈಟ್‌ https://recruitment.ksp.gov.in ನಲ್ಲಿ ಆನ್ಲೈನ್ ಮೂಲಕ ಮಾತ್ರ ಸಲ್ಲಿಸತಕ್ಕದ್ದು.

ನೋಟಿಫಿಕೇಶನ್

Leave a Comment