KSP : 84 ಹುದ್ದೆಗಳು

Advertisements

ವೈಜ್ಞಾನಿಕ ಅಧಿಕಾರಿಗಳ ಆಯ್ಕೆ ಸಮಿತಿಯ ಅಧ್ಯಕ್ಷರು ಮತ್ತು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ರವರು, ಕರ್ನಾಟಕ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯ ಮಡಿವಾಳ, ಬೆಂಗಳೂರು ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯಗಳಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದದ ವೈಜ್ಞಾನಿಕ ಅಧಿಕಾರಿ ಹುದ್ದೆಗಳಿಗೆ ನೇಮಕ‌ ಮಾಡಲು ಕರ್ನಾಟಕ ರಾಜ್ಯ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಅರ್ಜಿ ಸಲ್ಲಿಸಲು ಆರಂಭಿಕ‌ ದಿನಾಂಕ : 07-06-2021 ಬೆಳಿಗ್ಗೆ ‌10.00 ಗಂಟೆಗೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-07-2021 ಸಂಜೆ 06.00 ಗಂಟೆಗೆ

ಹುದ್ದೆಗಳ ವಿವರ : ಜೀವ ಶಾಸ್ತ್ರ ವಿಭಾಗ – 12
ರಸಾಯನ ಶಾಸ್ತ್ರ ವಿಭಾಗ – 8
ನಾರ್ ಕೋಟಿಕ್ಸ್ ವಿಭಾಗ – 2
ಭೌತಶಾಸ್ತ್ರ ವಿಭಾಗ -5
ಡಿ.ಎನ್.ಎ ವಿಭಾಗ -2
ಪ್ರಶ್ನಿತ ದಸ್ತಾವೇಜು ವಿಭಾಗ ;10
ಅಗ್ನಿ ಅಸ್ತ್ರ ವಿಭಾಗ – 6
ಫೊರೊನ್ಸಿಕ್ ಮನೋ ವಿಜ್ಞಾನ – 1
ಕಂಪ್ಯೂಟರ್ ಫೊರೆನ್ಸಿಕ್ ವಿಭಾಗ – 5
ಮೊಬೈಲ್ ಫೊರೆನ್ಸಿಕ್ ವಿಭಾಗ -5
ಆಡಿಯೋ ವಿಡಿಯೋ ವಿಭಾಗ- 5
ವಿಷ ವಿಜ್ಞಾನ ವಿಭಾಗ -21
ಫೊಟೋಗ್ರಪಿ‌ ವಿಭಾಗ -2

ವಯೋಮಿತಿ : ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಹಾಗೂ ಈ ಕೆಳಕಂಡಂತೆ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.

ಸಾಮಾನ್ಯ ವರ್ಷ 35, 2ಎ, 2 ಬಿ, 3 ಎ, 3 ಬಿ ಅಭ್ಯರ್ಥಿಗಳಿಗೆ 38 ವರ್ಷ, ಪ.ಜಾತಿ/ ಪ.ಪಂಗಡ/ ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ಹೊಂದಿರಬೇಕು.

ಅರ್ಜಿ ಶುಲ್ಕ : ಸಾಮಾನ್ಯ ವರ್ಗ, ಪ್ರವರ್ಗ 2 ಎ, 2 ಬಿ, 3 ಎ,‌ 3 ಬಿ ಅಭ್ಯರ್ಥಿಗಳಿಗೆ ರೂ. 250/- ( ಪ್ರತಿ ವಿಭಾಗಕ್ಕೆ)
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ , ಪ್ರವರ್ಗ 1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.100/- ( ಪ್ರತಿ ವಿಭಾಗಕ್ಕೆ)

ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ https://recruitment.ksp.gov.in ಆನ್ಲೈನ್ ಮುಖಾಂತರ ಮಾತ್ರ ಸಲ್ಲಿಸಬೇಕು.

ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಲು ಅವಕಾಶವಿರುವುದಿಲ್ಲ.

ನೋಟಿಫಿಕೇಶನ್

Leave a Comment