ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳಿಗದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ : ಪ್ರಾಜೆಕ್ಟ್ ಕನ್ಸಲ್‌ಟಂಟ್,ಪ್ರಾಜೆಕ್ಟ್ ಕೋರ್ಡಿನೇಟರ್, ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ.
ಒಟ್ಟು ಹುದ್ದೆ : ಪ್ರಾಜೆಕ್ಟ್ ಕನ್ಸಲ್ಟೆಂಟ್ -1
ಪ್ರಾಜೆಕ್ಟ್ ಕೋರ್ಡಿನೇಟರ್-2
ಪ್ರಾಜೆಕ್ಟ್ ಅಸಿಸ್ಟಂಟ್ -2
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-03-2021
ವಿದ್ಯಾರ್ಹತೆ : ಪ್ರಾಜೆಕ್ಟ್ ಕನ್ಸಲ್‌ಟೆಂಟ್ ಮತ್ತು ಪ್ರಾಜೆಕ್ಟ್ ಕೋರ್ಡಿನೇಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಜಿ ಇನ್ ಮ್ಯಾನೇಜ್ಮೆಂಟ್/ಎಂಬಿಎ/ಸೋಷಿಯಲ್ ವರ್ಕ್/ಪಬ್ಲಿಕ್ ಅಡ್ಮಿನಿಸ್ಟ್ರೇಷನ್/ಅರ್ಥಶಾಸ್ತ್ರ/ಪೊಲಿಟಿಕಲ್ ಸೈನ್ಸ್/ಸಮಾಜ ಶಾಸ್ತ್ರ ಪಡೆದಿರಬೇಕು. ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ ಅಭ್ಯರ್ಥಿಗಳು ಯಾವುದೇ ಪದವಿಯಲ್ಲಿ ಉತ್ತೀರ್ಣರಾಗಿದ್ದರೆ ಸಾಕು.
ವೇತನ : ಹುದ್ದೆಗಳಿಗನುಸಾರವಾಗಿ ಅಭ್ಯರ್ಥಿಗಳಿಗೆ ರೂ.60,000/-, 45,000/-, 30,000/- ತಿಂಗಳ ವೇತನ ನಿಗದಿಪಡಿಸಲಾಗಿದೆ.
ಹುದ್ದೆಯ ಅವಧಿ : ಪ್ರಾಥಮಿಕವಾಗಿ 6 ತಿಂಗಳು ಹುದ್ದೆಯ ಅವಧಿ ಇರುತ್ತದೆ. ನಂತರ ಎರಡು ವರ್ಷಗಳವರೆಗೂ ಕರ್ತವ್ಯ ವಿಸ್ತರಣೆ ಮಾಡಲಾಗುತ್ತದೆ.
ವಯೋಮಿತಿ : ಹುದ್ದೆಗಳಿಗನುಸಾರವಾಗಿ 35/30/27 ವರ್ಷ ಗರಿಷ್ಠ ವಯೋಮಿತಿ ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ