Advertisements
ಮೈಸೂರು ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ.ಎಸ್.ಇ.ಟಿ) -2021 ನ್ನು ದಿನಾಂಕ 25-04-2021 (ಭಾನುವಾರ )ರಂದು ನಡೆಸಲು ನಿರ್ಧರಿಸಿತ್ತು. ಆದರೆ ಕೋವಿಡ್ -19 ಕೊರೊನಾ ವೈರಸ್ ಹರಡುತ್ತಿರುವ ಕಾರಣ ಕರ್ನಾಟಕ ಸರಕಾರ ವಾರಾಂತ್ಯದಲ್ಲಿ ಕರ್ಫ್ಯೂ ಘೋಷಿಸಿರುವ ಹಿನ್ನೆಲೆಯಲ್ಲಿ ಕೆಸೆಟ್ ಪರೀಕ್ಷೆಯನ್ನು ಮುಂದೂಡಲು ನಿರ್ಧರಿಸಲಾಗಿದೆ.
ಎಲ್ಲಾ ನೊಂದಾಯಿತ ಅಭ್ಯರ್ಥಿಗಳು ಕೆಸೆಟ್ 2021 ಪರೀಕ್ಷೆಗೆ ಸಂಬಂಧಿಸಿದಂತೆ ಕೆಸೆಟ್ ವೆಬ್‌ಸೈಟ್‌ನಲ್ಲಿ https://kset.uni-mysore.ac.in/ ಆಗ್ಗಿಂದಾಗ್ಗೆ ಹೊರಡಿಸುವ ವಿಷಯಗಳನ್ನು ನೋಡಬಹುದಾಗಿ ತಿಳಿಸಲಾಗಿದೆ.