KSEEB : ವಕೀಲ ಹುದ್ದೆ, ಈ ಕೂಡಲೇ ಅರ್ಜಿ ಸಲ್ಲಿಸಿ

Advertisements

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಮತ್ತು ಮೈಸೂರು ವಿಭಾಗ ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಸಂಬಂಧಪಟ್ಟ ರಾಜ್ಯದ ನ್ಯಾಯಾಲಯದ ವಿವಿಧ ಹಂತಗಳಲ್ಲಿರುವ ನ್ಯಾಯಾಲಯ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸರಕಾರಿ ವಕೀಲರಿಗೆ ಸಹಾಯಕರಾಗಿ ಮತ್ತು ಇಲಾಖೆಗೆ ಕಾನೂನು ಸಮಾಲೋಚಕರಾಗಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ಹಿರಿಯ ವಕೀಲರು ಮತ್ತು ಕಿರಿಯ ವಕೀಲರುಗಳ ಸೇವೆಗೆ ಅರ್ಜಿ ಆಹ್ವಾನಿಸಿದೆ.

ಹುದ್ದೆ : ವಕೀಲರು

ಹುದ್ದೆ ಸಂಖ್ಯೆ : ಹಿರಿಯ ವಕೀಲ 02, ಕಿರಿಯ ವಕೀಲ – 03

ವಕೀಲರ ನೇಮಕಾತಿ ಆಯ್ಕೆಯು ಸಂಪೂರ್ಣವಾಗಿ ಸಮಾಲೋಚನೆ ಹಾಗೂ ಸಂದರ್ಶನ ಆಧಾರಿತವಾಗಿದ್ದು, ಅರ್ಜಿ ಸಲ್ಲಿಸಲು ಅಂತಿಮ, ದಿನಾಂಕ : 30-10-2021 ಆಗಿರುತ್ತದೆ. ಆಸಕ್ತ ಅರ್ಹ ವಕೀಲರು ಸಂದರ್ಶನಕ್ಕೆ ಹಾಜರಾಗಲು ಮತ್ತು ವಕೀಲರ ಸಂಭಾವನೆ, ಅರ್ಹತೆ, ಅನುಭವ ಮತ್ತು ಇತರೆ ಮಾನದಂಡ ಹಾಗೂ ಷರತ್ತುಗಳು ಒಳಗೊಂಡಿರುವ ವಕೀಲರ ನೇಮಕಾತಿ ಅರ್ಜಿ ಆಹ್ವಾನ, ದಸ್ತಾವೇಜು ಮಂಡಳಿಯ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುತ್ತದೆ.

Leave a Comment