Advertisements
ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ, ಬೆಂಗಳೂರು, ಕರ್ನಾಟಕ ರಾಜ್ಯ ದಲ್ಲಿ ಮದ್ಯ/ಮದ್ಯಸಾರ ಪ್ರವಹನ ಚಟುವಟಿಕೆಗಳಲ್ಲಿ ತೊಡಗಿರುವ ರಾಜ್ಯದ ಪ್ರತಿಷ್ಠಿತ ನಿಗಮಗಳಲ್ಲಿ ಕರ್ನಾಟಕ ರಾಜ್ಯ ಪಾನೀಯ ನಿಗಮವು ಒಂದಾಗಿರುತ್ತದೆ.
ನಿಗಮದಲ್ಲಿ ಉಪ ಪ್ರಧಾನ ವ್ಯವಸ್ಥಾಪಕರು ( ಅಡಿಟ್) ಹುದ್ದೆಗೆ, ನೇರ ಗುತ್ತಿಗೆ ಆಧಾರದ ಮೇಲೆ 02 ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಿಗಮಕ್ಕೆ ಅವಶ್ಯಕತೆ ಇದ್ದಲ್ಲಿ ಮತ್ತು ಅಭ್ಯರ್ಥಿಯ ಕೆಲಸ ನಿರ್ವಹಣೆಯನ್ನನುಸರಿಸಿ ಗುತ್ತಿಗೆ ಅವಧಿಯನ್ನು ಮತ್ತೊಂದು ಅವಧಿಗೆ ಮುಂದುವರೆಸಲಾಗುವುದು. ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ದಿನಾಂಕ 28-10-2021 ರ ಸಂಜೆ 5.00 ಗಂಟೆಯೊಳಗೆ ಮೇಲಿನ ವಿಳಾಸಕ್ಕೆ ಕಳುಹಿಸತಕ್ಕದ್ದು ಅಭ್ಯರ್ಥಿಗಳು ಹುದ್ದೆ, ಅಗತ್ಯ ವಿದ್ಯಾಭ್ಯಾಸ, ವಯಸ್ಸು, ವೇತನ ಮುಂತಾದ ವಿವರಗಳನ್ನು ನಿಗಮದ ಅಂತರ್ಜಾಲ www.ksbcl.com ಗೆ ಭೇಟಿ ನೀಡಬಹುದು.