KRIDL : ಹುದ್ದೆಗೆ ಅರ್ಜಿ ಆಹ್ವಾನ

Advertisements

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಬೆಂಗಳೂರಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣದ ಸಲುವಾಗಿ ತಾತ್ಕಾಲಿಕ ಹುದ್ದೆಗಳಿಗೆ ಗುತ್ತಿಗೆ / ಹೊರಗುತ್ತಿಗೆ ಆಧಾರದ ಮೇಲೆ ಹಿರಿಯ ಅಭಿಯಂತರರನ್ನು ನೇಮಿಸಿಕೊಳ್ಳಲು ಅರ್ಜಿ ಕರೆಯಲಾಗಿದೆ.

ಹುದ್ದೆ : ಸೀನಿಯರ್ ಎಂಜಿನಿಯರ್ ( ಸಿವಿಲ್) – 1 ಹುದ್ದೆ

ವಿದ್ಯಾರ್ಹತೆ : ಅಭ್ಯರ್ಥಿಗಳು ಸಿವಿಲ್ ಇಂಜಿನಿಯರಿಂಗ್ ನಲ್ಲಿ ಗ್ರಾಜ್ಯುಯೇಶನ್ ಮಾಡಿರಬೇಕು.

ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.40,000/- ಮಾಸಿಕ ವೇತನವಿರುತ್ತದೆ.

ವಯೋಮಾನ : ಪ್ರಕಟಣೆ ಹೊರಡಿಸಿದ ‌ದಿನಾಂಕಕ್ಕೆ 65 ವರ್ಷಗಳು ಮೀರಿರಬಾರದು.

ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ತುಂಬಿ, ಅರ್ಜಿ ಜೊತೆಗೆ ವಯಸ್ಸಿನ ದೃಢೀಕರಣ, ವಿದ್ಯಾರ್ಹತೆ, ಅನುಭವ, ಪ್ರಮುಖ ಸಾಮಾರ್ಥ್ಯಗಳು ಮತ್ತು ರೆಸ್ಯೂಮ್ ಅನ್ನು ಮುಖ್ಯ ಅಭಿಯಂತರರು ( ಬಿಬಿಎಂಪಿ), ಕೆಆರ್ ಐಡಿಎಲ್, 4&5 ನೇ ಮಹಡಿ, ಗ್ರಾಮೀಣಾಭಿವೃದ್ಧಿ ಭವನ, ಆನಂದರಾವ್ ವೃತ್ತ, ಬೆಂಗಳೂರು – 560009 ಈ ವಿಳಾಸಕ್ಕೆ ಅರ್ಜಿಯ ಹಾರ್ಡ್ ಪ್ರತಿಯನ್ನು ದಿನಾಂಕ: 05-07-2021 ರ ಸಂಜೆ 5.30 ಗಂಟೆಯೊಳಗೆ ಸಲ್ಲಿಸಬೇಕು.

ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave a Comment