Railway Jobs: ರೈಲ್ವೆ ಇಲಾಖೆಯಲ್ಲಿ ಬಂಪರ್‌ ಉದ್ಯೋಗಾವಕಾಶ; ನೇರ ಸಂದರ್ಶನ, ಭರ್ಜರಿ ವೇತನ

Advertisements

KRCL Recruitment 2024: ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪ್ರಾಜೆಕ್ಟ್ ಇಂಜಿನಿಯರ್, ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಒಟ್ಟು 11 ಹುದ್ದೆಗಳು ಖಾಲಿ ಇದ್ದು, ಆಸಕ್ತರು 27-ಜೂನ್-2024 ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಿ ತಮ್ಮ ಅದೃಷ್ಟ ಪರಿಶೀಲಿಸಬಹುದು.

ಪ್ರಮುಖ ದಿನಾಂಕಗಳು:
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 31-05-2024
ನೇರ ಸಂದರ್ಶನದ ದಿನಾಂಕ: 27-ಜೂನ್-2024

ಹುದ್ದೆಯ ಕುರಿತ ವಿವರ ಇಲ್ಲಿದೆ;
ಸಂಸ್ಥೆಯ ಹೆಸರು: ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ (KRCL) ಇಲ್ಲಿ ಖಾಲಿ ಇರುವ 11 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಪ್ರಾಜೆಕ್ಟ್ ಇಂಜಿನಿಯರ್, ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದ್ದು, ಮಾಸಿಕ ರೂ. ರೂ.35400-56100/- ವೇತನ ದೊರಕಲಿದೆ.

ಹುದ್ದೆಯ ವಿವರ ಇಲ್ಲಿದೆ;
ಹಿರಿಯ ತಾಂತ್ರಿಕ ಸಹಾಯಕ- 1 ಹುದ್ದೆ
ಪ್ರಾಜೆಕ್ಟ್ ಇಂಜಿನಿಯರ್- 7 ಹುದ್ದೆಗಳು
ಪ್ರಾಜೆಕ್ಟ್ ಎಂಜಿನಿಯರ್ (ಟೆಂಡರ್‌ಗಳು ಮತ್ತು ಪ್ರಸ್ತಾವನೆ) 1 ಹುದ್ದೆ
CAD/ಡ್ರಾಫ್ಟ್ಸ್‌ಮನ್ 1 ಹುದ್ದೆ
ಸಹಾಯಕ ಇಂಜಿನಿಯರ್ 1 ಹುದ್ದೆ
ಒಟ್ಟು ಹುದ್ದೆ 11 ಹುದ್ದೆಗಳು

ವಿದ್ಯಾರ್ಹತೆ: ಹಿರಿಯ ತಾಂತ್ರಿಕ ಸಹಾಯಕ, ಪ್ರಾಜೆಕ್ಟ್ ಇಂಜಿನಿಯರ್ , ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಸಿವಿಲ್‌ ಇಂಜಿನಿಯರಿಂಗ್‌ನಲ್ಲಿ ಪದವಿ ಮಾಡಿರಬೇಕು.
CAD/Draftsman ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ITI, ಡಿಪ್ಲೊಮಾ ಇನ್ ಸಿವಿಲ್ ಇಂಜಿನಿಯರಿಂಗ್ ಮಾಡಿರಬೇಕು.
ಸಹಾಯಕ ಎಂಜಿನಿಯರ್ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.

ವಯೋಮಿತಿ: ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗೆ 35 ವರ್ಷ ಮೀರಿರಬಾರದು.
ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ 40 ವರ್ಷ ಮೀರಿರಬಾರದು.
ಪ್ರಾಜೆಕ್ಟ್ ಎಂಜಿನಿಯರ್ (ಟೆಂಡರ್) , CAD/ಡ್ರಾಫ್ಟ್ಸ್‌ಮನ್, ಸಹಾಯಕ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿಯು 45 ವರ್ಷ ಮೀರಿರಬಾರದು. ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಮೇಲ್ಕಂಡ ಹುದ್ದೆಗೆ ಗುಂಪು ಚರ್ಚೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಸಂಬಳ: ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗೆ ರೂ.44900/- ಸಂಬಳವಿರಲಿದೆ.
ಪ್ರಾಜೆಕ್ಟ್ ಇಂಜಿನಿಯರ್, ಪ್ರಾಜೆಕ್ಟ್ ಎಂಜಿನಿಯರ್ (ಟೆಂಡರ್‌), CAD/ಡ್ರಾಫ್ಟ್‌ಮನ್ ರೂ.35400/- ಸಂಬಳವಿರಲಿದೆ.
ಸಹಾಯಕ ಇಂಜಿನಿಯರ್ ರೂ.56100/- ಸಂಬಳ ನೀಡಲಾಗುವುದು.

ನೇರ ಸಂದರ್ಶನದ ದಿನಾಂಕ ಹುದ್ದೆಗನುಸಾರವಾಗಿ ಇಲ್ಲಿ ನೀಡಲಾಗಿದೆ;
ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗೆ 25-ಜೂನ್-2024
ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ 27-ಜೂನ್-2024
ಪ್ರಾಜೆಕ್ಟ್ ಎಂಜಿನಿಯರ್ (ಟೆಂಡರ್‌ಗಳು ಮತ್ತು ಪ್ರಸ್ತಾವನೆ) ಹುದ್ದೆಗೆ 20-ಜೂನ್-2024
CAD/ ಡ್ರಾಫ್ಟ್ಸ್‌ಮನ್ ಹುದ್ದೆಎ 15-ಜೂನ್-2024
ಸಹಾಯಕ ಇಂಜಿನಿಯರ್ ಹುದ್ದೆಗೆ 24-ಜೂನ್-2024 ರಂದು ನೇರ ಸಂದರ್ಶನವಿರಲಿದೆ

ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಿದ ದಾಖಲೆಗಳೊಂದಿಗೆ ಈ ಕೆಳಗೆ ನೀಡಲಾದ ವಿಳಾಸಕ್ಕೆ ನೇರ ಸಂದರ್ಶನದ ಮೂಲಕ ಹಾಜರಾಗಬೇಕು.

ವಿಳಾಸ ಇಲ್ಲಿದೆ; Executive Club, Konkan Rail Vihar, Konkan Railway Corporation Ltd., Near Seawoods Railway Station, Sector-40, Seawoods (West), Navi Mumbai
ಇಲ್ಲಿಗೆ ದಿನಾಂಕ 7-ಜೂನ್-2024 ರಂದು ನೇರ ಸಂದರ್ಶನಕ್ಕೆ ಹಾಜರಾಗಬೇಕು.